ಕಾಸರಗೋಡು : ಚೆಮ್ನಾಡ್ ಅಣಿಯದಲ್ಲಿ ಬಾವಿಗೆ ಬಿದ್ದಿದ್ದ 65 ವರ್ಷದ ರಾಜ್ಮೋಹನ್ ಅವರನ್ನು ಅಗ್ನಿಶಾಮಕ ದಳ ಮತ್ತು ಸ್ಥಳೀಯರು ಪ್ರಾಣಾಪಾಯದಿಂದ ಪಾರು ಮಾಡಿದ್ದಾರೆ.
ಇವರು 25 ಅಡಿ ಆಳವಿದ್ದ ಬಾವಿಗೆ ಆಕಸ್ಮಿಕವಾಗಿ ಅವರು ಬಿದ್ದಿದ್ದರು. ಸ್ಥಳೀಯರು ತಕ್ಷಣ ರಕ್ಷಣೆಗೆ ಧಾವಿಸಿದರೂ ಸಫಲವಾಗಲಿಲ್ಲ. ಬಳಿಕ ಹಿರಿಯ ಅಗ್ನಿಶಾಮಕ ಅಧಿಕಾರಿ ವಿ.ಎಂ. ಸತೀಶನ್ ನೇತೃತ್ವದ ತಂಡ ಸ್ಥಳಕ್ಕೆ ಆಗಮಿಸಿ, ಸಾಹಸಮಯ ಕಾರ್ಯಾಚರಣೆ ನಡೆಸಿ ರಾಜ್ಮೋಹನ್ ಅವರನ್ನು ಸುರಕ್ಷಿತವಾಗಿ ಮೇಲಕ್ಕೆತ್ತಿದೆ.
ಬಾವಿಯಲ್ಲಿ 8 ಅಡಿ ನೀರಿದ್ದರೂ, ಸಮಯೋಚಿತ ಕಾರ್ಯಾಚರಣೆಯಿಂದ ದೊಡ್ಡ ಅನಾಹುತ ತಪ್ಪಿದಂತಾಗಿದೆ


