ಕೊಪ್ಪಳ ಜಿಲ್ಲೆಯ ದೂರದರ್ಶನ, ಆಕಾಶವಾಣಿ ಸಾಹಿತ್ಯ, ನ್ರಿತ್ಯ, ಸಂಗೀತ ಕಲಾವಿದರಾದ ಶ್ರೀಮತಿ ಅನ್ನಪೂರ್ಣ ಮಹೇಶ ಮನ್ನಾಪುರ ರೀಗೆ ಅಂತರ್ ರಾಜ್ಯ “ಕನ್ನಡ ಪಯಸ್ವಿನಿ ಅಚೀವ್ಮೆಂಟ್ ಅವಾರ್ಡ್ 2026.ಗೆ ಆಯ್ಕೆಯಾಗಿದ್ದಾರೆ

ಶ್ರೀಮತಿ ಅನ್ನಪೂರ್ಣ ಮಹೇಶ ಮನ್ನಾಪೂರ ಸಂಗೀತಗಾರರು ಸಾಹಿತ್ಯ ನೃತ್ಯ ನಿರ್ದೇಶನ, ವೀರರಾಣಿ ಕಿತ್ತೂರು ಚೆನ್ನಮ್ಮ ರಾಜ್ಯ ಪ್ರಶಸ್ತಿ ಪುರಸ್ಕೃತರು ,ಆಕಾಶವಾಣಿ ದೂರದರ್ಶನ ಕಲಾವಿದರು ,18 ಕೃತಿಗಳು ಬಿಡುಗಡೆಗೊಂಡಿವೆ ,40 ಧ್ವನಿ ಸುರಳಿಗೆ ಹಾಡಿದ್ದಾರೆ, ಅಂತರ್ರಾಜ್ಯ ರಾಷ್ಟ್ರಮಟ್ಟದಲ್ಲಿ ಕಾರ್ಯಕ್ರಮಗಳನ್ನು ನೀಡಿದ್ದಾರೆ.

ಜೂಲೈ 26ರ ಕನ್ನಡ ಭವನದ “ರಜತ ಸಂಭ್ರಮ ಸಮಾರೋಪ ಕಾರ್ಯಕ್ರಮ ಪ್ರಯುಕ್ತ ನಡೆಯಲಿರುವ “ಕರ್ನಾಟಕ ಗಡಿನಾಡು ಕನ್ನಡ ಸಮ್ಮೇಳನ ದಲ್ಲಿ ಈ ಮೇಲಿನ ಪ್ರಶಸ್ತಿ ನೀಡಲಿದ್ದೆವೆಂದು ಸಮ್ಮೇಳನ ಸಮಿತಿ ಅಧ್ಯಕ್ಷರಾದ ಡಾ. ಕೆ. ಏನ್ ವೆಂಕಟ್ರಮಣ ಹೊಳ್ಳ ಹಾಗೂ ಕನ್ನಡ ಭವನ ಸ್ಥಾಪಕ ಅಧ್ಯಕ್ಷರಾದ ಡಾ. ಕೆ ವಾಮನ್ ರಾವ್ ಬೇಕಲ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


