ಕೆರೆಯಲ್ಲಿ ಗೃಹಿಣಿಯ ಶವ ಪತ್ತೆ: ಸಾವಿನಲ್ಲಿ ನಿಗೂಢತೆ : ತೀವ್ರಗೊಂಡ ತನಿಖೆ

​ ಕುಂಬಳೆ : ಸೀತಾಂಗೋಳಿ ಎಡನಾಡು ನಿವಾಸಿ ಸುನಿತ (48) ಎಂಬವರು ಮುಜುಂಗಾವು ಶ್ರೀ ಪಾರ್ಥಸಾರಥಿ ಕ್ಷೇತ್ರದ ಕೆರೆಯಲ್ಲಿ ಶವವಾಗಿ ಪತ್ತೆಯಾದ ಘಟನೆಗೆ ಸಂಬಂಧಿಸಿದಂತೆ ಕುಂಬಳೆ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದಾರೆ.

​ಮೃತರು ರಾಮಕೃಷ್ಣ ಎಂಬವರ ಪತ್ನಿಯಾಗಿದ್ದು, ಎರಡು ದಿವಸಕ್ಕೆ ಮೊದಲು ರಾತ್ರಿ ಮನೆಯಲ್ಲೇ ಇದ್ದವರು ಮರುದಿನ ಬೆಳಿಗ್ಗೆ ನಾಪತ್ತೆಯಾಗಿದ್ದರು. ಪತಿ ನೀಡಿದ ದೂರಿನ ಮೇರೆಗೆ ಪೊಲೀಸರು ಶೋಧ ನಡೆಸುತ್ತಿದ್ದಾಗ, ಇದೀಗ ಸಂಜೆ ಕೆರೆಯಲ್ಲಿ ಶವ ಪತ್ತೆಯಾಗಿದೆ.

ಕುಂಬಳೆ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಶವವನ್ನು ಮೇಲಕ್ಕೆತ್ತಿ, ಮರಣೋತ್ತರ ಪರೀಕ್ಷೆಗಾಗಿ ಕಾಸರಗೋಡು ಜನರಲ್ ಆಸ್ಪತ್ರೆಗೆ ಸಾಗಿಸಿದ್ದಾರೆ.
ಅನಿರೀಕ್ಷಿತ ಸಾವು ಸ್ಥಳೀಯವಾಗಿ ಆತಂಕ ಮೂಡಿಸಿದ್ದು, ಮರಣೋತ್ತರ ಪರೀಕ್ಷೆಯ ವರದಿಯ ಬಳಿಕವಷ್ಟೇ ಸಾವಿನ ನಿಖರ ಕಾರಣ ತಿಳಿದುಬರಬೇಕಿದೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!