ಕಾಸರಗೋಡು: ಕೂಡ್ಲು ಮೀಪುಗುರಿ ಕಾಳ್ಯಂಗಾಡಿನಲ್ಲಿ ದೀರ್ಘಕಾಲದ ಕಾಲುನೋವಿನಿಂದ ಬಳಲುತ್ತಿದ್ದ ಮಹಿಳೆಯೊಬ್ಬರು ಮನನೊಂದು ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾರೆ.

ಕೂಡ್ಲು ದೇವಿಕೃಪ ನಿವಾಸಿ ಸೂರ್ಯ ಅವರ ಪತ್ನಿ ಶ್ಯಾಮಲ (50) ಸಾವನ್ನಪ್ಪಿದ ದುರ್ದೈವಿ.
ಖಾಸಗಿ ಆಸ್ಪತ್ರೆಯ ನೌಕರರಾಗಿದ್ದ ಶ್ಯಾಮಲ ಯಾರೂ ಇಲ್ಲದ ಸಮಯವನ್ನು ನೋಡಿ ಕೊಠಡಿಯಲ್ಲಿ ಫ್ಯಾನಿಗೆ ನೇಣು ಬಿಗಿದುಕೊಂಡಿದ್ದಾರೆ. ಬಹಳ ದಿನಗಳಿಂದ ಕಾಲುನೋವಿನ ಬಾಧೆಯಿಂದ ತೀವ್ರ ಮಾನಸಿಕ ವೇದನೆ ಅನುಭವಿಸುತ್ತಿದ್ದರೇ, ಅದೇ ಕಾರಣದಿಂದ ಈ ಅತಿಯಾದ ನಿರ್ಧಾರಕ್ಕೆ ಬಂದಿರಬಹುದು ಎಂದು ಸಂಬಂಧಿಕರು ತಿಳಿಸಿದ್ದಾರೆ.

ಕಾಸರಗೋಡು ನಗರ ಠಾಣಾ ಪೊಲೀಸರು ಸ್ಥಳಕ್ಕಾಗಮಿಸಿ ಮಹಜರು ನಡೆಸಿದ್ದು, ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮೃತದೇಹವನ್ನು ಕಾಸರಗೋಡು ಜನರಲ್ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ.


