ಮಕ್ಕಳ ಜೀವದೊಂದಿಗೆ ಆಟ: ಮಗುಚಿಬಿದ್ದ ಶಾಲಾ ಆಟೋ: ಏಳು ವಿದ್ಯಾರ್ಥಿಗಳು ಗಾಯ

ಮಂಜೇಶ್ವರ /​ಕಾಸರಗೋಡು : ಶಾಲಾ ಮಕ್ಕಳ ರಕ್ಷಣೆಯನ್ನು ಗಾಳಿಗೆ ತೂರಿ, ಮಿತಿಗಿಂತ ಅಧಿಕ ಮಕ್ಕಳನ್ನು ತುಂಬಿಕೊಂಡು ತೆರಳುತ್ತಿದ್ದ ಆಟೋರಿಕ್ಷಾವೊಂದು ಪಲ್ಟಿಯಾಗಿ ಏಳು ವಿದ್ಯಾರ್ಥಿಗಳು ಹಾಗೂ ಚಾಲಕ ಗಾಯಗೊಂಡಿರುವ ಭೀಕರ ಘಟನೆ ನಗರದ ಎಂ.ಜಿ. ರಸ್ತೆಯ ಫೋರ್ಟ್ ರಸ್ತೆಯಲ್ಲಿ ಬೆಳಿಗ್ಗೆ ನಡೆದಿದೆ.ಅಪರಿಮಿತ ವೇಗ ಹಾಗೂ ಮಿತಿಮೀರಿದ ಮಕ್ಕಳ ಭಾರವೇ ಈ ದುರ್ಘಟನೆಗೆ ಕಾರಣವೆಂದು ಸಿಸಿಟಿವಿ ದೃಶ್ಯಗಳಿಂದ ತಿಳಿದುಬಂದಿದೆ.

ಮೆಡೋನಾ ಮತ್ತು ಟೌನ್ ಮುನ್ಸಿಪಲ್ ಶಾಲೆಯ ಮುದ್ದು ಮಕ್ಕಳು ಗಾಯಾಳುಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಆಟೋಗಳಲ್ಲಿ ಮಕ್ಕಳ ಜೀವದೊಂದಿಗೆ ಆಟವಾಡುವ ಚಾಲಕರ ಮತ್ತು ಶಾಲೆಗಳ ಬೇಜವಾಬ್ದಾರಿಗೆ ಇದು ಕನ್ನಡಿಯಾಗಿದೆ. ಇಂತಹ ಕಿರಾತಕರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂಬ ಆಕ್ರೋಶ ಸಾರ್ವಜನಿಕ ವಲಯದಿಂದ ವ್ಯಕ್ತವಾಗಿದೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!