ಹೊಸಂಗಡಿಯಲ್ಲಿ ಭಕ್ತಿಭಾವದಿಂದ ಗಣೇಶೋತ್ಸವ ವಿಗ್ರಹ ಮುಹೂರ್ತ

46ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವದ ವಿಗ್ರಹ ಮುಹೂರ್ತವು ಇಂದು ಬೆಳಿಗ್ಗೆ 8 ಗಂಟೆಗೆ ಹೊಸಂಗಡಿ ಶ್ರೀ ಅಯ್ಯಪ್ಪ ಕ್ಷೇತ್ರದಲ್ಲಿ ವೈದಿಕ ವಿಧಿವಿಧಾನಗಳೊಂದಿಗೆ ನೆರವೇರಿತು.

ಕ್ಷೇತ್ರದ ಅರ್ಚಕರಾದ ಶ್ರೀ ತಿರುಮಲೇಶ್ ಆಚಾರ್ಯ ಪೂಜಾ ವಿಧಿವಿಧಾನಗಳನ್ನು ನೆರವೇರಿಸಿದರೆ, ಶಿಲ್ಪಿ ಶ್ರೀ ಮಹೇಶ್ ಆಚಾರ್ಯ ಬಾಯಾರು ವಿಗ್ರಹ ಮುಹೂರ್ತ ನೆರವೇರಿಸಿದರು.ವಿಗ್ರಹ ಮುಹೂರ್ತವನ್ನು ಶಿಲ್ಪಿ ಶ್ರೀ ಮಹೇಶ್ ಆಚಾರ್ಯ ಬಾಯಾರು ನೆರವೇರಿಸಿದರು.

ಕಾರ್ಯಕ್ರಮದಲ್ಲಿ ಕ್ಷೇತ್ರದ ಗುರುಸ್ವಾಮಿ ಶ್ರೀ ಉದಯ ಪಾವಳ ಹಾಗೂ ಸಮಿತಿಯ ಅಧ್ಯಕ್ಷರಾದ ಶ್ರೀ ಯಾದವ ಬಡಾಜೆ, ಪ್ರ. ಕಾರ್ಯದರ್ಶಿ ಕಮಲಾಕ್ಷ ತೂಮಿನಾಡು, ಕೋಶಾಧಿಕಾರಿ ಅಶೋಕ್ ದೇವಾಡಿಗ, ಹಾಗೂ ಅಯ್ಯಪ್ಪ ಕ್ಷೇತ್ರದ ಅಧ್ಯಕ್ಷರಾದ ನವೀನ್ ರಾಜ್,ಗಣೇಶೋತ್ಸವ ಸಮಿತಿಯ ಪ್ರಧಾನ ಸಂಚಾಲಕರಾದ ಶ್ರೀ ಪದ್ಮನಾಭ ಕಡಪ್ಪರ, ಸಂಘಟನಾ ಕಾರ್ಯದರ್ಶಿಗಳಾದ ಶ್ರೀ ಹರೀಶ್ ಶೆಟ್ಟಿ ಮಾಡ, ಶ್ರೀ ಅವಿನಾಶ್ ಹೆಗ್ಡೆ ಮಂಜೇಶ್ವರ,ಗೌರವ ಸಲಹೆಗಾರರಾದ ಶ್ರೀ ದಿನಕರ ಬಿ.ಎಂ,ದೇವರಾಜ್ ಎಂ. ಎಸ್,ಉಪಾಧ್ಯಕ್ಷರಾದ ಶ್ರೀ ನವೀನ್ ಅಡಪ್ಪ, ಶ್ರೀ ಶಿವಪ್ರಸಾದ್ ಪೆಲಪ್ಪಾಡಿ, ಸುನಿಲ್ ಕುಮಾರ್ ಹೊಸಂಗಡಿ,ಚಂದ್ರಹಾಸ ಪೆಲಪ್ಪಾಡಿ,ಜೊತೆ ಕಾರ್ಯದರ್ಶಿಗಳಾದ ಅಖಿಲೇಶ್ ಹೊಸಂಗಡಿ, ಶಿವಪ್ರಸಾದ್ ರಾವ್ ಕಟ್ಟೆಬಜಾರ್, ರಮೇಶ್ ಬಿ. ಎಂ,ಮೋಹನ್ ದಾಸ್ ಸುಂಕದಕಟ್ಟೆ,ಹರಿಶ್ಚಂದ್ರ ಮಂಜೇಶ್ವರ ಜೊತೆಗಿದ್ದರು.ಈ ವರ್ಷದ ಶ್ರೀ ಗಣೇಶೋತ್ಸವದ ವಿಗ್ರಹ ಸೇವೆಯನ್ನು ಶ್ರೀ ಕಿರಣ್ ಶೆಟ್ಟಿ ಮಾಡ ಅವರು ಸೇವಾ ರೂಪದಲ್ಲಿ ನೀಡಲಿದ್ದು, ಕಾರ್ಯಕ್ರಮವು ಭಕ್ತಿಭಾವದ ವಾತಾವರಣದಲ್ಲಿ ಯಶಸ್ವಿಯಾಗಿ ನೆರವೇರಿತು.

SHARE
Loading spinner

Leave a Reply

Your email address will not be published. Required fields are marked *

error: Content is protected !!