ಸಂಭ್ರಮದಿಂದ ನಡೆದ ‘ಕೇಸರ್‌ಡ್ ಒಂಜಿ ದಿನ 2026’: ಮಂಡೆಕಾಪಿನಲ್ಲಿ ಕ್ರೀಡೆ, ಸಂಸ್ಕೃತಿ ಮತ್ತು ಸಾಧಕರಿಗೆ ಸನ್ಮಾನ

ಉಪ್ಪಳ : ಯುವಕ ವೃಂದ ಮಂಡೆಕಾಪು ಇದರ ವತಿಯಿಂದ ಕೇಸರ್ ಡ್ ಒಂಜಿ ದಿನ 2026 ಕಾರ್ಯಕ್ರಮವು ಮಂಡೆಕಾಪು ಸಂಜೀವ ಮೂಲ್ಯರ ಗದ್ದೆಯಲ್ಲಿ ನಡೆಯಿತು ಬೆಳಿಗ್ಗೆ ನಡೆದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಯುವಕ ವೃಂದದ ಅಧ್ಯಕ್ಷ ದಿಲೀಪು ಮಂಡೆಕಾಪು ವಹಿಸಿದರು ,ಡಾ! ಹರೀಶ್ ಬೊಟ್ಟಾರಿ ಕೊಡುಗೈ ದಾನಿ ,ಉದ್ಯಮಿ ಇವರು ಸಭೆಯನ್ನು ಉದ್ಘಾಟಿಸಿದರು. ಓಡುವಾರು ಬಂಜನ್ ತರವಾಡಿನ ಪೂಜಾರಿ ಶ್ರೀ ರಾಮ ತೋಡರ್, ಸಂಜೀವ ಮೂಲ್ಯ ಮಂಡೆಕಾಪು, ಜಯಂತಿ ಮಂಡೆಕಾಪು ಉಪಸ್ಥಿತಿ ಇದ್ದರು ತದನಂತರ ದುರ್ಗಾ ಶಕ್ತಿ ಕುಣಿತ ಭಜನಾ ತಂಡ ಪರಂಬಳ ಕಯ್ಯಾರು ಇದರ ಭಜನಾ ವಿದ್ಯಾರ್ಥಿ ಗಳಿಂದ ಕುಣಿತ ಭಜನೆ ನಡೆಯಿತು ನಂತರ ಮಕ್ಕಳು ಮಹಿಳೆಯರು ಪುರುಷರು ಸೇರಿದಂತೆ ಹಲವಾರು ಸ್ಪರ್ಧೆಯನ್ನು ನಡೆಸಲಾಯಿತು. ಸಂಜೆ ನಡೆದ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಯುವಕ ವೃಂದ ಮಂಡೆಕಾಪು ಇದರ ಅಧ್ಯಕ್ಷ ದಿಲೀಪು ಮಂಡೆಕಾಪು ವಹಿಸಿದರು.

ಮುಖ್ಯ ಅತಿಥಿಗಳಾಗಿ ಜೆ ಎಸ್ ಸೋಮಶೇಖರ್ ಜಿಲ್ಲಾ ಪಂಚಾಯತ್ ಸದಸ್ಯ ಕಾಸರಗೋಡು, ಡಾ! ಶ್ರೀ ಹರೀಶ್ ಬೊಟ್ಟಾರಿ ಕೊಡುಗೈದಾನಿ ಉದ್ಯಮಿ, ಶ್ರೀ ನವೀನ ಕಾಶಿ ಧಾರ್ಮಿಕ ಮುಖಂಡ, ಶ್ರೀ ಲೋಕೇಶ್ ನೊಂಡ ಜೋಡುಕಲ್ಲು,ಸಾಮಾಜಿಕ ಕಾರ್ಯಕರ್ತರು, ರಮೇಶ್ ಮೇರ್ಕಳ ಯುವ ಉದ್ಯಮಿ, ಹನೀಫ್ ಮೇರ್ಕಳ ಸಾಮಾಜಿಕ ಕಾರ್ಯಕರ್ತ, ಸಂಜೀವ ಮೂಲ್ಯ ಮೇರ್ಕಳ ಕೆಸರು ಗದ್ದೆಯ ಸ್ಥಳ ದಾನಿ,ಉಪಸ್ಥಿತರಿದ್ದರು ಕಾರ್ಯಕ್ರಮದಲ್ಲಿ ಸಾಧನೆ ಮಾಡಿದ ಪ್ರತಿಭಾವಂತರನ್ನು ಗೌರವಿಸಲಾಯಿತು ಲೋಕ ಸೇವಾ ಆಯೋಗದಲ್ಲಿ ಪರೀಕ್ಷೆ ಬರೆದು ದ್ವಿತೀಯ ಅಂಕದಲ್ಲಿ ಉತ್ತೀರ್ಣರಾಗಿ ಸರಕಾರಿ ಉದ್ಯೋಗ ಕ್ಕೆ ಆಯ್ಕೆ ಅದ ಶ್ರೀಮತಿ ಶಶಿಪ್ರಭಾ ಗಣೇಶ್ ಬಾಯಾಡಿ ಮತ್ತು 2025-2026 ಶೈಕ್ಷಣಿಕ ವರ್ಷದಲ್ಲಿ S S L C ಅತ್ಯಧಿಕ ಅಂಕ ಪಡೆದ ಸಮೀಕ್ಷ ಳನ್ನು ಗೌರವಿಸಲಾಯಿತು ವಿಜೇತರಾದ ಸ್ಪರ್ದಿಗಳಿಗೆ ಬಹುಮಾನ ವಿತರಿಸಲಾಯಿತು ಯುವಕ ವೃಂದ ಮಂಡೆಕಾಪು ಇದರ ಸದಸ್ಯ ಚರಣ್ ಮಂಡೆಕಾಪು ಸ್ವಾಗತಿಸಿದ ಕಾರ್ಯಕ್ರಮವನ್ನು ಯುವಕ ವೃಂದ ಮಂಡೆಕಾಪು ಇದರ ಪ್ರಧಾನ ಕಾರ್ಯದರ್ಶಿ ವರದರಾಜ್ ಮಂಡೆಕಾಪು ಧನ್ಯವಾದವಿತ್ತರು ಸತೀಶ್ ಕುಮಾರ್ ಕಾಪು ಕಾರ್ಯಕ್ರಮ ನಿರೂಪಿಸಿದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!