ಕಾಸರಗೋಡು: ಕಾರೊಂದು ಸ್ಕೂಟರ್‌ಗೆ ಡಿಕ್ಕಿ ಹೊಡೆದ ಪರಿಣಾಮ ವ್ಯಾಪಾರಿ ಯುವತಿಯೊಬ್ಬರು ದಾರುಣವಾಗಿ ಸಾವನ್ನಪ್ಪಿದ್ದಾರೆ.ಮಾಥಿಲ್ ವಡಶ್ಶೇರಿ ಮೂಕಿನ ನಿವಾಸಿ ಟಿ.ವಿ. ಶೀನಾ (37) ಸಾವನ್ನಪ್ಪಿದ ದುರ್ದೈವಿ.ಕಿಣರ್ ಮೂಕು ಎಂಬಲ್ಲಿ ಅಪಘಾತ ಸಂಭವಿಸಿದೆ. ಅತಿವೇಗವಾಗಿ ಬಂದ ಕಾರು ಸ್ಕೂಟರ್‌ಗೆ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ.

ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡ ಶೀನಾರನ್ನು ಆಸ್ಪತ್ರೆಗೆ ದಾಖಲಿಸಿದರೂ, ಅದಾಗಲೇ ಸಾವು ಸಂಭವಿಸಿತು.
ಮೃತದೇಹವನ್ನು ಪರಿಯಾರಂ ಕಣ್ಣೂರು ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಯ ಶವಾಗಾರಕ್ಕೆ ಸ್ಥಳಾಂತರಿಸಲಾಗಿದೆ.ಚೀಮೇನಿಯಲ್ಲಿರುವ ನ್ಯೂಟ್ರಿಷನ್ ಸಂಸ್ಥೆಯ ಮಾಲೀಕರಾಗಿದ್ದರು ಟಿ.ವಿ. ಶೀನಾ.

ಮೃತರು ಕೆ.ಎ. ಬಿಜು (ಕೆಎಸ್‌ಆರ್‌ಟಿಸಿ ಪಯ್ಯನ್ನೂರು ಡಿಪೋ) ಅವರ ಪತ್ನಿ. ಎ.ವಿ. ರವೀಂದ್ರ ಮತ್ತು ಲಲಿತಾ ದಂಪತಿಯ ಪುತ್ರಿ. ಮಕ್ಕಳಾದ ಟಿ.ವಿ. ಆರ್ದ್ರ ಮತ್ತು ಲಕ್ಷ್ಮಿ. ಸಹೋದರರಾದ ವಿನೀತ್, ಪ್ರಸೂನ ಹಾಗೂ ದೇವಾಂಜನ. ಎಂಬಿವರನ್ನು ಅಗಲಿದ್ದಾರೆ.


