ಜೋಡುಕಲ್ಲು ಗದ್ದೆಯಲ್ಲಿ ‘ಕೆಸರ್‌ಡ್ ಒಂಜಿ ದಿನ’ ಕಾರ್ಯಕ್ರಮ

ಜೋಡುಕಲ್ಲು ಗದ್ದೆಯಲ್ಲಿ ಫ್ರೆಂಡ್ಸ್ ಕ್ಲಬ್ (ರಿ.) ಜೋಡುಕಲ್ಲು ವತಿಯಿಂದ ‘ಕೆಸರ್‌ಡ್ ಒಂಜಿ ದಿನ’ ಎಂಬ ವಿಶಿಷ್ಟ ಗ್ರಾಮೀಣ ಕ್ರೀಡಾ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮವನ್ನು ಅದ್ಧೂರಿಯಾಗಿ ಆಯೋಜಿಸಲಾಯಿತು. ಬೆಳಗ್ಗೆ 9 ಗಂಟೆಗೆ ನಡೆದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಸೇವಾಭಾರತಿ ಜೋಡುಕಲ್ಲಿನ ಅಧ್ಯಕ್ಷರಾದ ಶ್ರೀ ಧಾಮೋದರ ಉಬರಲೆ ವಹಿಸಿದ್ದರು.

ಉದ್ಘಾಟನಾ ಸಮಾರಂಭಕ್ಕೆ ಅತಿಥಿ ಗಣ್ಯರಾಗಿ ಶ್ರೀ ಅಶ್ವಿನ್ ಭಟ್ ಆಟಿಕುಕ್ಕೆ (ಪ್ರಧಾನ ಅರ್ಚಕರು, ಕಜೆ ಶ್ರೀ ಜನಾರ್ಧನ ದೇವಸ್ಥಾನ), ಶ್ರೀ ದೇವಪ್ಪ ಶೆಟ್ಟಿ ಚಾವಡಿಬೈಲ್ ಗುತ್ತು (ಮಾಜಿ ಅಧ್ಯಕ್ಷರು, ವರ್ಕಾಡಿ ಗ್ರಾಮ ಪಂಚಾಯತ್), ಶ್ರೀ ಭರತ್ ರಾಜ್ ಎ.ಕೆ., ಅಡ್ವಕೇಟ್ (ಕಾಸರಗೋಡು ಬಾರ್ ಅಸೋಸಿಯೇಷನ್), ಶ್ರೀ ಕೊಳಂಜ ಮುಹಮ್ಮದ್ (ಗದ್ದೆಯ ಮಾಲೀಕರು), ಶ್ರೀ ಕೆ.ಪಿ. ನಾರಾಯಣ ಪಟ್ಲ (ಹಿರಿಯ ಸಾಮಾಜಿಕ ಕಾರ್ಯಕರ್ತರು), ಶ್ರೀಮತಿ ವಿಲ್ಮಾಡಿ ಸೋಜಾ ಕಯ್ಯಾರು (ಆಶಾ ಕಾರ್ಯಕರ್ತೆ), ಶ್ರೀ ಶಿವರಾಮ ಶೆಟ್ಟಿ ಕೊಜಪ್ಪೆ (ಸಾಮಾಜಿಕ ಕಾರ್ಯಕರ್ತರು), ಶ್ರೀ ಅಶೋಕ್ ಶೆಟ್ಟಿ ಪಿಲಿಯಂದೂರು (ಉದ್ಯಮಿ ಹಾಗೂ ಪ್ರಗತಿಪರ ಕೃಷಿಕರು), ಶ್ರೀ ಸನತ್ ಕುಮಾರ್ ರೈ ಕಳ್ಳಿಗೆ (ಅಧ್ಯಕ್ಷರು, ವಿಷ್ಣುಮೂರ್ತಿ ಸೇವಾ ಸಮಿತಿ ಅಟ್ಟೆಗೋಳಿ), ಶ್ರೀಮತಿ ಮಾಲತಿ ಕೃಷ್ಣ ಅಟ್ಟೆಗೋಳಿ (ಅಧ್ಯಾಪಿಕೆ, GLPS ಕಾಯರ್ ಕಟ್ಟೆ), ಶ್ರೀ ದಾಮೋದರ ಶೆಟ್ಟಿ ಮಡಂದೂರು (ಉಪಾಧ್ಯಕ್ಷರು, ರೈತ ಸಂಘ ಉಪ್ಪಳ ಸಮಿತಿ), ಶ್ರೀ ಶ್ರೀಧರ ಪುರುಷ ಜೋಡುಕಲ್ಲು, ಶ್ರೀ ಸತೀಶನ್ ಜೋಡುಕಲ್ಲು ಪೆರ್ಮುದೆ, ಶ್ರೀ ರಾಮಚಂದ್ರ ಪೂಜಾರಿ ಅರಿಯಾಳ ಹಾಗೂ ಶ್ರೀ ವಿಶ್ವನಾಥ ಶೆಟ್ಟಿ ಬಾಳೆಹಿತ್ತಿಲು ಉಪಸ್ಥಿತರಿದ್ದರು.

ಗ್ರಾಮೀಣ ಕ್ರೀಡೆಗಳ ಸೊಗಡನ್ನು ಉಳಿಸಿ ಬೆಳೆಸುವ ಉದ್ದೇಶದಿಂದ ನಡೆದ ಕಾರ್ಯಕ್ರಮದಲ್ಲಿ ಹಾಳೆಯಲಿ ಕುಳಿಯು ಎಳೆಯುವುದು, ಮೂರು ಕಾಲಿನ ಓಟ, ನೀರು ತುಂಬಿಸುವುದು, ಪಿರಮಿಡ್, ರಿವರ್ಸ್ ವಾಕಿಂಗ್, ತ್ರೋಬಾಲ್, ಲಿಂಬೆ ಚಮಚ, ಮಡಕೆ ಒಡೆಯುವುದು, ವಿಕೆಟ್ ಓಟ, 100 ಮೀಟರ್ ಓಟ, ಹಗ್ಗಜಗ್ಗಾಟ ಹಾಗೂ ವಾಲಿಬಾಲ್ ಸೇರಿದಂತೆ ಹಲವು ಸ್ಪರ್ಧೆಗಳು ನಡೆದವು. ಕೆಸರು ಗದ್ದೆಯಲ್ಲಿ ನಡೆದ ‘ನಿಧಿ ಶೋಧ’ ಸ್ಪರ್ಧೆ ವಿಶೇಷ ಆಕರ್ಷಣೆಯಾಗಿದ್ದು, 35 ಮಹಿಳೆಯರು ಭಾಗವಹಿಸಿದ ಸಮೂಹ ನೃತ್ಯ ಕೂಡ ಕಾರ್ಯಕ್ರಮಕ್ಕೆ ಮತ್ತಷ್ಟು ಮೆರುಗು ನೀಡಿತು.

ಸಂಜೆ 5 ಗಂಟೆಗೆ ನಡೆದ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಮಂಗಲ್ಪಾಡಿ ಬಂಟರ ಸಂಘದ ಅಧ್ಯಕ್ಷರಾದ ಶ್ರೀಧರ ಶೆಟ್ಟಿ ಮುಟ್ಟಂ ವಹಿಸಿದ್ದರು. ಸಮಾರೋಪ ಸಮಾರಂಭಕ್ಕೆ ಶ್ರೀ ಚರಣ್ ಆಳ್ವ ಚಿಪ್ಪರು ಗುತ್ತು (District Leo Chairperson, Lions District 317D), ಶ್ರೀ ಮಹೇಶ್ ಜೋಗಿ (ಅಡ್ವಕೇಟ್ ಹಾಗೂ ಅಧ್ಯಕ್ಷರು, OBC ಮೋರ್ಚಾ, ಬಿಜೆಪಿ ದಕ್ಷಿಣ ಕನ್ನಡ), ಶ್ರೀ ಕಿರಣ್ ಶಂಕರ್ ರೈ ಬಾಯಾರ್ (ಉಪಾಧ್ಯಕ್ಷರು, ಪೈವಳಿಕೆ ಬಂಟರ ಸಂಘ), ಶ್ರೀಮತಿ ಅನ್ನಪೂರ್ಣ ರೈ ಕಿದೂರು (ಮಹಿಳಾ ಘಟಕದ ಅಧ್ಯಕ್ಷೆ, ಕಿದೂರು ಮಹಾಲಿಂಗೇಶ್ವರ ದೇವಸ್ಥಾನ ಹಾಗೂ ಯುವ ಉದ್ಯಮಿ), ಶ್ರೀ ಶಿವಾನಂದ ಶೆಟ್ಟಿ ಮಂಗಲ್ಪಾಡಿ (ವ್ಯವಸ್ಥಾಪಕರು, ಅಮ್ಮ ಕಲಾವಿದೆರ್ ಕುಡ್ಡ), ಶ್ರೀ ನವೀನ್ ರಾಜ್ ಕೆ.ಜೆ. (ವಕೀಲರು, ನೋಟರಿ ಹಾಗೂ ಅಧ್ಯಕ್ಷರು, ಅಯ್ಯಪ್ಪ ಕ್ಷೇತ್ರ ಹೊಸಂಗಡಿ), ಶ್ರೀ ನವೀನ್ ಶೆಟ್ಟಿ ಚೆರುಗೋಳಿ (ಮಾಲಕರು, ಜನಸೇವಾ ಕೇಂದ್ರ ನಯಾಬಜಾರ್), ಶ್ರೀ ಸಾಯಿತ್ ಶೆಟ್ಟಿ ಕೆ.ಎಸ್. ಕೂಳೂರು (ಶಾಸ್ತ ಕನ್ಸ್ಟ್ರಕ್ಷನ್, PWD ಕಾಂಟ್ರಾಕ್ಟರ್), ಶ್ರೀ ಹರೀಶ್ ಶೆಟ್ಟಿ ಕಡಂಬಾರ್ (ಕಾರ್ಯದರ್ಶಿ, ಮಹಾ ವಿಷ್ಣುಮೂರ್ತಿ ದೇವಸ್ಥಾನ ಕಡಂಬಾರ್), ಶ್ರೀ ಮೋಹನ ದಾಸ ಐಲ (ಕಾರ್ಯದರ್ಶಿ, ಸೇವಾಭಾರತಿ ಮಂಗಲ್ಪಾಡಿ), ಶ್ರೀ ಗಣೇಶನ್ ಕೆ.ಎನ್. ಪ್ರತಾಪನಗರ (ಉಪಾಧ್ಯಕ್ಷರು, ಮೂಕಾಂಬಿಕಾ ದೇವಸ್ಥಾನ ಶಾಂತಿಗುರಿ ಹಾಗೂ ಸಾಮಾಜಿಕ ಕಾರ್ಯಕರ್ತರು), ಶ್ರೀ ಡಿ.ಎಂ.ಕೆ. ಮೊಹಮ್ಮದ್ (ಪ್ರಧಾನ ಕಾರ್ಯದರ್ಶಿ, ಡಿಸಿಸಿ ಕಾಸರಗೋಡು ಹಾಗೂ ರಂಗ ಕಲಾವಿದರು), ಶ್ರೀ ವೆಂಕಪ್ಪ ಶೆಟ್ಟಿ ಕಯ್ಯಾರು (ನಿವೃತ್ತ ಮುಖ್ಯೋಪಾಧ್ಯಾಯರು), ಶ್ರೀ ಖಾಲಿದ್ ಅಟ್ಟಿಗೋಳಿ (ಯುವ ಉದ್ಯಮಿ) ಹಾಗೂ ಶ್ರೀ ಪ್ರಸಾದ್ ರೈ ಕಯ್ಯಾರು (ಸಾಮಾಜಿಕ ಕಾರ್ಯಕರ್ತರು ಹಾಗೂ ರಾಜಕೀಯ ನೇತಾರರು) ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

ಸಮಾರಂಭದಲ್ಲಿ ಅತ್ಯಧಿಕ ಅಂಕ ಪಡೆದ ವಿದ್ಯಾರ್ಥಿನಿ ಮಾನ್ವಿಕ, ನವೋದಯನಗರದ ಪ್ರಸೂತಿಶಾಸ್ತ್ರ ತಜ್ಞೆ ಡಾ. ಸುಂದರಿ ಹಾಗೂ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಚಲನಚಿತ್ರ ನಟಿ ರೂಪಶ್ರೀ ವರ್ಕಾಡಿ ಅವರನ್ನು ಸನ್ಮಾನಿಸಲಾಯಿತು. ಗ್ರಾಮೀಣ ಕ್ರೀಡೆ, ಕಲೆ, ಸಂಸ್ಕೃತಿ ಹಾಗೂ ಸಾಧಕರಿಗೆ ಗೌರವ ನೀಡುವ ಮೂಲಕ ‘ಕೆಸರ್‌ಡ್ ಒಂಜಿ ದಿನ’ ಕಾರ್ಯಕ್ರಮವು ಜನಮನ ಸೆಳೆಯಿತು.

SHARE
Loading spinner

One thought on “ಜೋಡುಕಲ್ಲು ಗದ್ದೆಯಲ್ಲಿ ‘ಕೆಸರ್‌ಡ್ ಒಂಜಿ ದಿನ’ ಕಾರ್ಯಕ್ರಮ

  1. Win23bet… alright, alright, alright. Gave it a spin last week and walked away with a decent win. Not gonna lie, it was exciting. The interface is intuitive and the games are pumping. Check out the action yourself: win23bet

    Loading spinner

Leave a Reply

Your email address will not be published. Required fields are marked *

error: Content is protected !!