ಕಾಸರಗೋಡು: ಶಿರಿಯಾ ಹೊಳೆಯಲ್ಲಿ ಪೊಲೀಸರನ್ನು ಕಂಡು ಈಜಲು ಹೋಗಿ ನಾಪತ್ತೆಯಾಗಿರುವ ಆರಿಕ್ಕಾಡಿ ಮೂಲದ ಇಬ್ರಾಹಿಂ (35) ಹುಡುಕಾಟ ಮೂರನೇ ದಿನಕ್ಕೂ ಮುಂದುವರಿದಿದೆ.ಕುಂಬಳೆ ಪೊಲೀಸ್, ಕರಾವಳಿ ಪೊಲೀಸ್, ಮೀನುಗಾರರಲ್ಲದೆ ಫಿಶರೀಸ್‌ನ ಎರಡು ಬೋಟ್‌ಗಳು ಹಾಗೂ ಸ್ಕೂಬಾ ತಂಡ ಸಮುದ್ರ ಭಾಗದಲ್ಲೂ ಶೋಧ ನಡೆಸುತ್ತಿವೆ.

ಸೋಮವಾರ ರಾತ್ರಿ ಅಕ್ರಮ ಮರಳು ಸಾಗಾಣಿಕೆ ತಡೆಯಲು ಬಂದ ಪೊಲೀಸರನ್ನು ಕಂಡು ದೋಣಿಯಿಂದ ಹೊಳೆಗೆ ಹಾರಿದ ಮೂವರಲ್ಲಿ ಇಬ್ಬರು ಈಜಿ ದಡ ಸೇರಿದ್ದು, ಇಬ್ರಾಹಿಂ ನೀರಿನ ಹರಿವಿಗೆ ಸಿಲುಕಿ ನಾಪತ್ತೆಯಾಗಿದ್ದರು.
ಈ ನಡುವೆ, ಮೀನುಗಾರಿಕೆ ಸಚಿವ ವಿ.ಇ. ಅಬ್ದುಲ್ ಗಫೂರ್ ಸಂತ್ರಸ್ತ ಕುಟುಂಬಕ್ಕೆ ಭೇಟಿ ನೀಡಿ ಸಾಂತ್ವನ ಹೇಳಿದರು. ರಕ್ಷಣಾ ಕಾರ್ಯಾಚರಣೆಯನ್ನು ಮತ್ತಷ್ಟು ತೀವ್ರಗೊಳಿಸುವಂತೆ ಸಚಿವರು ಅಧಿಕಾರಿಗಳಿಗೆ ಸ್ಪಷ್ಟ ನಿರ್ದೇಶನ ನೀಡಿದ್ದಾರೆ.


