ಪಂಚಾಯತ್ ಬಾವಿಗೆ ಹಾರಿ ಮಧ್ಯವಯಸ್ಕ ಆತ್ಮಹತ್ಯೆ

​ಮಂಜೇಶ್ವರ: ಉಪ್ಪಳ ಸಮೀಪದ ಕೋಡಿಬಯಲ್, ಯಶೋನಂದನ ನಗರದ ನಿವಾಸಿ ಮಂಜುನಾಥ (53) ಎಂಬುವರು ಪಂಚಾಯತ್ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬುಧವಾರ ಮಧ್ಯಾಹ್ನ ನಡೆದಿದೆ.ಮೃತರು ದಿವಂಗತ ವಾಸು ಎಂಬುವರ ಪುತ್ರನಾಗಿದ್ದು, ಕೂಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು.

ಇತ್ತೀಚೆಗಷ್ಟೇ ದುರಸ್ತಿಗೊಳಿಸಲಾಗಿದ್ದ ಈ ಬಾವಿಯ ನೀರನ್ನು ಹಲವು ಕುಟುಂಬಗಳು ಕುಡಿಯಲು ಬಳಸುತ್ತಿದ್ದವು.
​ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಆಗಮಿಸಿದ ಉಪ್ಪಳ ಅಗ್ನಿಶಾಮಕ ದಳ ಮತ್ತು ಮಂಜೇಶ್ವರ ಪೊಲೀಸರು ಮಂಜುನಾಥ ಅವರನ್ನು ಬಾವಿಯಿಂದ ಹೊರತೆಗೆದರಾದರೂ, ಅಷ್ಟರಲ್ಲಾಗಲೇ ಅವರು ಕೊನೆಯುಸಿರೆಳೆದಿದ್ದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!