ಕ.ಸಾ.ಪದಿಂದ ಸರ್ ಎಂ ವಿಶ್ವೇಶ್ವರಯ್ಯನವರ ಜನ್ಮ ದಿನಾಚರಣೆ ಮತ್ತು ಕನ್ನಡ ಪತ್ರಕರ್ತರೊಂದಿಗೆ ಸೌಹಾರ್ದ ಸಂವಾದ

ಕಾಸರಗೋಡು: ಕನ್ನಡ ಸಾಹಿತ್ಯ ಪರಿಷತ್ತಿನ ಸಂಸ್ಥಾಪಕರಲ್ಲೊಬ್ಬರಾದ ಸರ್ ಎಂ .ವಿಶ್ವೇಶ್ವರಯ್ಯನವರ ಜನ್ಮ ದಿನಾಚರಣೆ ಮತ್ತು ಕನ್ನಡ ಪತ್ರಕರ್ತರೊಂದಿಗೆ ಸೌಹಾರ್ದ ಸಂವಾದ ಕಾರ್ಯಕ್ರಮವು ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕದ ಆಶ್ರಯದಲ್ಲಿ ಕಾಸರಗೋಡು ಅಡ್ಕತ್ತಬೈಲಿನಲ್ಲಿರುವ ಹೋಟೆಲ್ ಉಡುಪಿ ಗಾರ್ಡನ್ ನ ಮಥುರಾ ಸಭಾಂಗಣದಲ್ಲಿ ನಡೆಯಿತು.


ಗಡಿನಾಡ ಚೇತನ ಪ್ರಶಸ್ತಿ ಪುರಸ್ಕೃತ ಹಿರಿಯ ಸಾಹಿತಿ ರಾಧಾಕೃಷ್ಣ ಕೆ .ಉಳಿಯುತ್ತಡ್ಕ ಅವರು ಮುಖ್ಯ ಅತಿಥಿಯಾಗಿ ಸರ್ ಎಂ. ವಿಶ್ವೇಶ್ವರಯ್ಯನವರ ಬದುಕು, ವ್ಯಕ್ತಿತ್ವ ,ಸಾಧನೆಗಳ ಕುರಿತು ಮಾತನಾಡಿದರು. ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕದ ಅಧ್ಯಕ್ಷ ಡಾ. ಜಯಪ್ರಕಾಶ ನಾರಾಯಣ ತೊಟ್ಟೆತ್ತೋಡಿ ಅಧ್ಯಕ್ಷತೆ ವಹಿಸಿದ್ಧರು. ಹಿರಿಯ ಪತ್ರಕರ್ತ ಮಲಾರ್ ಜಯರಾಮ ರೈ ಉಪಸ್ಥಿತರಿದ್ದರು.


ಕ.ಸಾ.ಪ ಕೇರಳ ಗಡಿನಾಡ ಘಟಕದ ಸಂಘಟನಾ ಕಾರ್ಯದರ್ಶಿ ವಿಶಾಲಾಕ್ಷ ಪುತ್ರಕಳ ಸ್ವಾಗತಿಸಿ ಗೌರವ ಕಾರ್ಯದರ್ಶಿ ಪ್ರದೀಪ್ ಕುಮಾರ್ ಶೆಟ್ಟಿ ಬೇಳ ವಂದಿಸಿದರು. ಪತ್ರಕರ್ತ, ಯಕ್ಷಗಾನ ಕಲಾವಿದ ವಿ.ಜಿ ಕಾಸರಗೋಡು ಕಾರ್ಯಕ್ರಮ ನಿರೂಪಿಸಿದರು.


ಬಳಿಕ ಕಾಸರಗೋಡಿನ ಕನ್ನಡ ಪತ್ರಕರ್ತರೊಂದಿಗೆ ಸೌಹಾರ್ದ ಸಂವಾದ ಕಾರ್ಯಕ್ರಮ ನಡೆಯಿತು. ಮಲಾರ್ ಜಯರಾಮ ರೈ ಸಂವಾದಕ್ಕೆ ಚಾಲನೆ ನೀಡಿದರು.ಪ್ರದೀಪ್ ಬೇಕಲ್, ಅಚ್ಯುತ ಚೇವಾರು,ಕೆ.ಎಂ ಸುಬ್ರಹ್ಮಣ್ಯ ಭಟ್ ,ದೇವದಾಸ್ ಪಾರೆಕಟ್ಟೆ, ಜಗನ್ನಾಥ ಶೆಟ್ಟಿ ಪಿ.,ಕೆ, ಪುರುಷೋತ್ತಮ ಪೆರ್ಲ, ಪುರುಷೋತ್ತಮ ಭಟ್ ,ಪ್ರಕಾಶ್ ಮಂಜೇಶ್ವರ, ಗಣೇಶ್ ಪೈಕ, ಜೋನ್ ಡಿ’ಸೋಜ, ಸಂಜೀವ. ಬಿ , ಭಾಗ್ಯಶ್ರೀ .ಸಿ , ಯೋಗೀಶ್ ರಾವ್ ಚಿಗುರುಪಾದೆ ,ತೆಕ್ಕೆಕೆರೆ ಶಂಕರನಾರಾಯಣ ಭಟ್, ಸುಕೇಶ.ಎ, ವಾಮನ ರಾವ್ ಬೇಕಲ್, ಸಿರಿಬಾಗಿಲು ರಾಮಕೃಷ್ಣ ಮಯ್ಯ ,ಶಿವರಾಮ ಕಾಸರಗೋಡು, ಪೆರ್ಮುಖ ಈಶ್ವರ ಭಟ್ ,ರಾಜಾರಾಮ ರಾವ್ ಟಿ ಮೀಯಪದವು ,ಬಿ.ರಾಮಮೂರ್ತಿ, ಜಗದೀಶ ಕೂಡ್ಲು, ಗುರುರಾಜ್ ಎಂ. ಆರ್, ಉಷಾಲಕ್ಷ್ಮಿ .ಪಿ,, ರಮೇಶ ಕೆ ಎನ್ ಮೊದಲಾದವರು ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.

SHARE
Loading spinner

One thought on “ಕ.ಸಾ.ಪದಿಂದ ಸರ್ ಎಂ ವಿಶ್ವೇಶ್ವರಯ್ಯನವರ ಜನ್ಮ ದಿನಾಚರಣೆ ಮತ್ತು ಕನ್ನಡ ಪತ್ರಕರ್ತರೊಂದಿಗೆ ಸೌಹಾರ್ದ ಸಂವಾದ

  1. I have been playing online slots for a long time and finally found a spot that actually pays out fast. The support team here is super friendly and always helps me sort out my bonus codes. If you want a trusted place to bet give this site a try. Trust me you will enjoy it as much as I do. trvitrinbet

    Loading spinner

Leave a Reply

Your email address will not be published. Required fields are marked *

error: Content is protected !!