ಧಾರ್ಮಿಕ, ಸಾಮಾಜಿಕ ಮುಖಂಡ ತಾರಾನಾಥ್ ರೈ ಬದಿಯಡ್ಕ ರೀಗೆ “ನಾಡೋಜ ಡಾ. ಕಯ್ಯಾರ ಸದ್ಭಾವನಾ ಪ್ರಶಸ್ತಿ -2026

ಕಾಸರಗೋಡು : ಅಕ್ಟೋಬರ್ ತಿಂಗಳು ದಿನಾಂಕ 11.10.2026ರಿಂದ 20.10.2026.ರ ವರೆಗೆ ಕನ್ನಡ ಭವನದ ಡಾ. ವಾಮನ್ ರಾವ್ ಬೇಕಲ್ ಪ್ರಾಯೋಜಕತ್ವದಲ್ಲಿ ಕಾಸರಗೋಡು, ಪಾಂಗೋಡು ಶ್ರೀ ದುರ್ಗಾಪರಮೇಶ್ವರಿ ಶ್ರೀ ಸುಬ್ರಮಣ್ಯ ದೇವಸ್ಥಾನ ದಸರಾ ವೇದಿಕೆಯಲ್ಲಿ ನಡೆಯಲಿರುವ “ಕಾಸರಗೋಡು ದಸರಾ ಸಾಂಸ್ಕೃತಿಕೋತ್ಸವ -2026.ರ ಅಂಗವಾಗಿ ದಿನಾಂಕ 18.10.2026.ಭಾನುವಾರ ಬೆಳಿಗ್ಗೆ 11ಗಂಟೆಗೆ ಶ್ರೀ ಶ್ರೀನಿವಾಸ್ ಬಹದ್ದೋರ್ ಸರ್ವಾಧ್ಯಕ್ಷತೆಯಲ್ಲಿ, ಚುಟುಕು ಸಾಹಿತ್ಯ ಪರಿಷತ್ ಸಂಸ್ಥಾಪಕ ಚುಟುಕು ಯುಗಾಚಾರ್ಯ ಡಾ. ಎಮ್. ಜಿ. ಆರ್ ಅರಸ್ ಉದ್ಘಾಟಿಸಲಿರುವ “ಕಾಸರಗೋಡು ದಸರಾ ರಾಷ್ಟ್ರೀಯ ಕವಿ ಸಮ್ಮೇಳನ -ಮೇರು ಕವಿ ಸಾಹಿತಿ ಸಂಘಟಕ ಡಾ. ಜಯಪ್ಪ ಹೊನ್ನಾಳಿ ಮೈಸೂರು ಇವರ ಘನ ಅದ್ಯಕ್ಷತೆಯಲ್ಲಿ ನಡೆಯಲಿರುವ “ಕಾಸರಗೋಡು ದಸರಾ ಕವಿಗೋಷ್ಠಿ “ಸಮಾರಂಭದಲ್ಲಿ ಗಣ್ಯಾತಿ ಗಣ್ಯರ ಸಮ್ಮುಖದಲ್ಲಿ “ನಾಡೋಜ ಡಾ ಕಯ್ಯಾರ ಸದ್ಭಾವನಾ ರಾಷ್ಟ್ರೀಯ ಪ್ರಶಸ್ತಿ ನೀಡಿ ಗೌರವಿಸಲಿದ್ದೇವೆ ಎಂದು ಕಾಸರಗೋಡು ದಸರಾ ಪ್ರದಾನ ಸಂಚಾಲಕರಾದ ಕನ್ನಡ ಭವನದ ಡಾ. ವಾಮನ್ ರಾವ್ ಬೇಕಲ್ ಹಾಗೂ ಪಾಂಗೋಡು ಕ್ಷೇತ್ರ ಸಾಂಸ್ಕೃತಿಕ ಘಟಕ ಅಧ್ಯಕ್ಷರಾದ ಪಾಂಗೋಡು ಪ್ರವೀಣ್ ನಾಯಕ್ ಜಂಟಿಯಾಗಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!