
ಕಾಸರಗೋಡು : ಕೃಷಿ ನಾಶ ಹಾಗೂ ದ್ವಿಚಕ್ರ ವಾಹನ ಸವಾರರಿಗೆ ನಿರಂತರ ಭೀತಿ ಹುಟ್ಟಿಸುತ್ತಿದ್ದ ಆಕ್ರಮಣಕಾರಿ ಕಾಡುಹಂದಿಯೊಂದನ್ನು ಮುಳಿಯಾರು ಪನ್ನಡ್ಕದ ನೀರಳತ್ತಿಂಡಡಿಯಲ್ಲಿ ಗುಂಡಿಕ್ಕಿ ಕೊಲ್ಲಲಾಗಿದೆ.

ಪ್ರದೇಶದಲ್ಲಿ ಕಾಡುಹಂದಿಗಳ ಹಾವಳಿ ಹೆಚ್ಚಾಗಿದ್ದರಿಂದ ಸಾರ್ವಜನಿಕ ದೂರಿನ ಮೇರೆಗೆ ಆನರರಿ ವೈಲ್ಡ್ಲೈಫ್ ವಾರ್ಡನ್ ಹಾಗೂ ಪಂಚಾಯತ್ ಅಧ್ಯಕ್ಷ ಕೆ.ಬಿ. ಮೊಹಮ್ಮದ್ ಕುಂಞಿ ನಿರ್ದೇಶನದಂತೆ ‘ಮಿಷನ್ ವೈಲ್ಡ್ ಪಿಗ್’ ಕಾರ್ಯಾಚರಣೆ ನಡೆಸಲಾಗಿತ್ತು.

ಶುಕ್ರವಾರ ಮುಂಜಾನೆ ಹಂದಿ ಪತ್ತೆಯಾಗುತ್ತಿದ್ದಂತೆ ಶೂಟರ್ ಬಿ. ಅಬ್ದುಲ್ ಗಫೂರ್ ನೇತೃತ್ವದ ವಿಶೇಷ ತಂಡ ಅದನ್ನು ಹೊಡೆದುರುಳಿಸಿದೆ.

ಬಳಿಕ ರೇಂಜ್ ಫಾರೆಸ್ಟ್ ಆಫೀಸರ್ ಸಿ.ವಿ. ವಿನೋದ್ ಕುಮಾರ್ ಹಾಗೂ ಅರಣ್ಯ ಸಿಬ್ಬಂದಿ ಭೇಟಿ ನೀಡಿ, ಕಳೇಬರವನ್ನು ವೈಜ್ಞಾನಿಕವಾಗಿ ಸಂಸ್ಕರಿಸುವ ಪ್ರಕ್ರಿಯೆ ಪೂರ್ಣಗೊಳಿಸಿದರು.

