ಉಪ್ಪಳದಲ್ಲಿ ಎಲೆಕ್ಟ್ರೀಷಿಯನ್ ಮೇಲೆ ಮನೆ ಮಾಲೀಕನ ಹಲ್ಲೆ: ಆಸ್ಪತ್ರೆಗೆ ದಾಖಲಾದ ಯುವಕ

ಕುಂಬಳೆ : ಉಪ್ಪಳ ಪತ್ವಾಡಿಯಲ್ಲಿ ಕೆಲಸದ ಸ್ಥಳದಲ್ಲಿ ಕ್ಷುಲ್ಲಕ ಕಾರಣಕ್ಕೆ ಎಲೆಕ್ಟ್ರೀಷಿಯನ್‌ ಒಬ್ಬರ ಮೇಲೆ ಮನೆ ಮಾಲೀಕ ತೀವ್ರ ಹಲ್ಲೆ ನಡೆಸಿರುವುದಾಗಿ ದೂರಲಾಗಿದೆ.

​ಬಂಬ್ರಾಣ ಮೂವಂ ನಿವಾಸಿ ಮುಹಮ್ಮದ್ ಅಸಾಫ್ (23) ಗಾಯಗೊಂಡ ಯುವಕನಾಗಿದ್ದು, ಅವರನ್ನು ಕುಂಬಳೆ ಜಿಲ್ಲಾ ಸಹಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಉಪ್ಪಳದ ಮನೆಯೊಂದರಲ್ಲಿ ಏಣಿ ಮೇಲೆ ನಿಂತು ಎತ್ತರದಲ್ಲಿ ಕೆಲಸ ಮಾಡುತ್ತಿದ್ದಾಗ, ಮನೆ ಮಾಲೀಕ ತಕ್ಷಣ ಕೆಳಗಿಳಿಯುವಂತೆ ಸೂಚಿಸಿದ್ದಾನೆ. ಕೆಲಸ ಮುಗಿಸಿ ಬರುವುದಾಗಿ ತಿಳಿಸಿದ್ದಕ್ಕೆ ಕೋಪಗೊಂಡ ಮಾಲೀಕ, ಅಸಾಫ್ ಕೆಳಗಿಳಿಯುತ್ತಿದ್ದಂತೆ ಅವರ ಮೇಲೆ ಎರಗಿ ಗುಪ್ತಾಂಗಕ್ಕೆ ಬಲವಾಗಿ ತುಳಿದು ಗಾಯಗೊಳಿಸಿದ್ದಾನೆ ಎಂದು ಆರೋಪಿಸಲಾಗಿದೆ.

ಈ ಕುರಿತು ಕುಂಬಳೆ ಪೊಲೀಸರು ದೂರು ಸ್ವೀಕರಿಸಿ ಪರಿಶೀಲಿಸುತ್ತಿದ್ದಾರೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!