ಉಪ್ಪಳ ಮಣ್ಣಂಗುಳಿ ಮೈದಾನದಲ್ಲಿ ನಡೆದ ಅಖಿಲ ಭಾರತ ಫುಟ್ಬಾಲ್ ಪಂದ್ಯಾಟಕ್ಕೆ ಅದ್ದೂರಿ ಯ ತೆರೆ

ಡಿವೈಎಫ್ಐ ಮಂಜೇಶ್ವರ ಬ್ಲೋಕ್ ಸಮಿತಿ ವತಿಯಿಂದ ಮೇ 04 ರಿಂದ 11 ವರೆಗೆ ನಡೆದ ಅಖಿಲ ಭಾರತ ಫುಟ್ಬಾಲ್ ಪಂದ್ಯಾಟದ ಸಮಾರೋಪ ಇತ್ತೀಚೆಗೆ ಅದ್ದೂರಿಯಾಗಿ ನಡೆಯಿತು. ಸಮಾರೋಪ ಸಮಾರಂಭದ ಕಾರ್ಯಕ್ರಮವನ್ನು ಡಿವೈಎಫ್ಐ ರಾಜ್ಯ ಕಾರ್ಯದರ್ಶಿ ವಿ.ಕೆ ಸನೋಜ್ ಉದ್ಘಾಟಿಸಿದರು.

ಸ್ವಾಗತ ಸಮಿತಿ ಚೆಯರ್ಮನ್ ವಿ.ವಿ ರಮೇಶನ್ ಅಧ್ಯಕ್ಷತೆ ವಹಿಸಿದ್ದರು. ಪ್ರಮುಖ ಉದ್ಯಮಿಗಳಾದ ಸದಾಶಿವ ಶೆಟ್ಟಿ ಕೂಳೂರು ಕನ್ಯಾನ,ಅಬ್ದುಲ್ ವಹಾಬ್,ಮುಹಮ್ಮದ್ ಇಬ್ರಾಹಿಂ,ಯು.ಕೆ ಯೂಸುಫ್, ಡಿವೈಎಫ್ಐ ಜಿಲ್ಲಾ ಅಧ್ಯಕ್ಷ ಶಾಲು ಮ್ಯಾಥ್ಯೂ,ರಾಜ್ಯ ಸಮಿತಿ ಸದಸ್ಯ ಕೆ. ಸಬೀಶ್, ಜಿಲ್ಲಾ ಜತೆ ಕಾರ್ಯದರ್ಶಿ ಸಾದಿಕ್ ಚೇರುಗೋಳಿ, ಸಿ. ಎ ಜುಬೈರ್ ಮೊದಲಾದವರು ಮಾತನಾಡಿದರು ವಿನಯ್ ಕುಮಾರ್ ಸ್ವಾಗತಿಸಿ. ಆಕಾಶ್ ಪೈವಳಿಕೆ ವಂದಿಸಿದರು.
ಸಿಟಿಝನ್ ಉಪ್ಪಳ ಪ್ರಥಮ ಸ್ಥಾನ ಹಾಗೂ
ಶೋಟರ್ಸ್ ಪಡನ ನೇತೃತ್ವ ನೀಡುವ ಫ್ರೆಂಡ್ಸ್ ಪಾರೆಕಟ್ಟೆ ದ್ವಿತೀಯ ಸ್ಥಾನ ಪಡೆಯಿತು.

ಈ ಸಂದರ್ಭದಲ್ಲಿ ಡಿವೈಎಫ್ಐ ಮಂಜೇಶ್ವರ ಬ್ಲೋಕ್ ಸಮಿತಿಗೆ ಸಾರ್ವಜನಿಕ ಸೇವೆಗಾಗಿ ತನ್ನದೇ ಆದ ಆಂಬುಲೆನ್ಸ್ ನ್ನು ಪಡೆಯಿತು. ಡಿವೈಎಫ್ಐ ರಾಜ್ಯ ಸಮಿತಿ ಸದಸ್ಯ ಕೆ.ಸಬೀಶ್ ಫ್ಲ್ಯಾಗ್ ಆಫ್ ಮಾಡಿ ಬಿಡುಗಡೆ ಮಾಡಿದರು.ವಿ.ವಿ ರಮೇಶನ್,ವಿಜಯ್ ಕುಮಾರ್, ಸಾದಿಕ್ ಚೇರುಗೋಳಿ, ಆಕಾಶ್ ಪೈವಳಿಕೆ,ಶಬೀರ್ ಉಪ್ಪಳ,ಹಾರಿಸ್ ಪೈವಳಿಕೆ ದೀಕ್ಷಿತ್ ಉಪ್ಪಳ ಉಪಸ್ಥಿತರಿದ್ದರು..

SHARE
Loading spinner

Leave a Reply

Your email address will not be published. Required fields are marked *

error: Content is protected !!