ಮಂಜೇಶ್ವರ: ಕೇರಳ–ಕರ್ನಾಟಕ ಗಡಿ ಪ್ರದೇಶದ ಕ್ಷಮಾ ರವೀಂದ್ರ ಅವರು ದಕ್ಷಿಣ ಕೊರಿಯಾದ ಸಿಯೋಲ್‌ನಲ್ಲಿ ನಡೆಯುತ್ತಿರುವ ‘ವುಮೆನ್ ಆಫ್ ಯೂನಿವರ್ಸ್–2026’ ಅಂತಾರಾಷ್ಟ್ರೀಯ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಿ, ಪ್ರತಿಷ್ಠಿತ ‘ಸೋಶಿಯಲ್ ಆ್ಯಕ್ಟಿವಿಟಿ’ ಪ್ರಶಸ್ತಿಗೆ ಭಾಜನರಾಗಿದ್ದಾರೆ.


ಮಂಜೇಶ್ವರದ ಉದ್ಯಾವರ ನಿವಾಸಿಗಳಾದ ರವೀಂದ್ರ ಕೆ.ಎಚ್. ಮತ್ತು ಕುಶಾಲ ಆರ್. ದಂಪತಿಯ ಪುತ್ರಿಯಾಗಿರುವ ಕ್ಷಮಾ ಅವರು ಬಿಎಸ್ಸಿ ಪದವೀಧರೆಯಾಗಿದ್ದು, ಸುಮಾರು 12 ವರ್ಷಗಳ ಕಾಲ ಜಿಸಿಸಿ ರಾಷ್ಟ್ರಗಳಲ್ಲಿ ವಾಸವಿದ್ದರು. ಪ್ರಸ್ತುತ ಮಂಗಳೂರಿನ ಎಂಪೈರ್ ಮಾಲ್‌ನಲ್ಲಿ ‘ಸೋಲೋ ಹೀಲಿಂಗ್ ಸೆಂಟರ್’ ನಡೆಸುತ್ತಿರುವ ಅವರು, ಹೋಲಿಸ್ಟಿಕ್ ಹೀಲರ್, ಮಾಡೆಲ್ ಹಾಗೂ ಅಕಾನ್ಸಿಯಾ ಫೌಂಡೇಶನ್‌ನ ಸಂಸ್ಥಾಪಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಈ ಹಿಂದೆ ‘ಮಿಸೆಸ್ ಇಂಡಿಯಾ ಕ್ಲೀನ್ ಆಫ್ ಸಬ್‌ಸೈನ್ಸ್’ ಸ್ಪರ್ಧೆಯಲ್ಲಿ ಫಸ್ಟ್ ರನ್ನರ್ ಅಪ್ ಸ್ಥಾನ ಗಳಿಸಿದ್ದ ಅವರು, ‘ಬ್ಯೂಟಿ ವಿದ್ ಪರ್ಪಸ್’ ಪ್ರಶಸ್ತಿಯನ್ನೂ ಪಡೆದಿದ್ದರು. ಸಾಮಾಜಿಕ ಬದ್ಧತೆ, ಮಾನವೀಯ ಮೌಲ್ಯಗಳು ಹಾಗೂ ಸಮಾಜಮುಖಿ ಸೇವೆಯನ್ನು ಗುರುತಿಸಿ ಇದೀಗ ಅವರಿಗೆ ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಗೌರವ ಲಭಿಸಿದೆ. ಅವರ ಸಾಧನೆ ಕರಾವಳಿ ಭಾಗಕ್ಕೆ ಹೆಮ್ಮೆ ತಂದಿದೆ.


I’ve been looking for a reliable site for a while and this one really delivers. The interface is smooth and the payouts are fast. Definitely my new go-to spot! Check out jilibetwinlogin
Top notch service and very responsive support team. It’s rare to find a site this reliable these days. Give idug234 a try!