ಮಂಜೇಶ್ವರ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲೇ ಮೊದಲ ಬಾರಿಗೆ: ಜಿ.ಎಲ್.ಪಿ.ಎಸ್. ಕುಂಜತ್ತೂರು ಶಾಲೆಯಲ್ಲಿ ಸಿಸಿಟಿವಿ ಕ್ಯಾಮೆರಾ ವ್ಯವಸ್ಥೆ ಲೋಕಾರ್ಪಣೆ

​ ಮಂಜೇಶ್ವರ: ಮಾಂಜೇಶ್ವರ ಗ್ರಾಮ ಪಂಚಾಯತ್ ವ್ಯಾಪ್ತಿಯ ಜಿ.ಎಲ್.ಪಿ.ಎಸ್. ಕುಂಜತ್ತೂರು ಶಾಲೆಯಲ್ಲಿ ವಿದ್ಯಾರ್ಥಿಗಳ ಹಾಗೂ ಶಾಲಾ ಆವರಣದ ಸುರಕ್ಷತೆ ಮತ್ತು ಭದ್ರತೆಯನ್ನು ಹೆಚ್ಚಿಸುವ ಉದ್ದೇಶದಿಂದ ನೂತನವಾಗಿ ಅಳವಡಿಸಲಾದ ಸಿಸಿಟಿವಿ ಕ್ಯಾಮೆರಾ ವ್ಯವಸ್ಥೆಯನ್ನು ಯಶಸ್ವಿಯಾಗಿಲೋಕಾರ್ಪಣೆಗೊಳಿಸಲಾಯಿತು.

​ಈ ಸತ್ಕಾರ್ಯವನ್ನು ದಿವಂಗತ ಮಾಜಿ ಪಂಚಾಯತ್ ಸದಸ್ಯ ಅಬ್ದುಲ್ ರಹೀಂ ರವರ ಸ್ಮರಣಾರ್ಥವಾಗಿ ಕೈಗೊಳ್ಳಲಾಗಿದ್ದು, ಇದು ಶಾಲೆಯ ಇತಿಹಾಸದಲ್ಲೇ ಅತ್ಯಂತ ಹೆಮ್ಮೆ ಮತ್ತು ಸ್ಮರಣೀಯ ಕ್ಷಣಕ್ಕೆ ಸಾಕ್ಷಿಯಾಯಿತು. ಈ ಮೂಲಕ ಮಂಜೇಶ್ವರ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲೇ ಸಿಸಿಟಿವಿ ಕ್ಯಾಮೆರಾ ವ್ಯವಸ್ಥೆಯನ್ನು ಹೊಂದಿದ ಮೊದಲ ಸರ್ಕಾರಿ ಶಾಲೆ ಎಂಬ ಹೆಗ್ಗಳಿಕೆಗೆ ಜಿ.ಎಲ್.ಪಿ.ಎಸ್. ಕುಂಜತ್ತೂರು ಪಾತ್ರವಾಗಿದೆ.

​ಈ ಉದಾತ್ತ ಕಾರ್ಯಕ್ರಮಕ್ಕೆ ವಾರ್ಡ್ ಸದಸ್ಯರು, ಗ್ರಾಮಸ್ಥರ ಬೆಂಬಲ, ಐ.ಬಿ. ಗ್ರೂಪ್, ಶಿಕ್ಷಣ ತಜ್ಞರು, ಶಾಲಾ ಶಿಕ್ಷಕ ವೃಂದ ಹಾಗೂ ಪಿ.ಟಿ.ಎ ಸಮಿತಿಯು ಪೂರ್ಣ ಸಹಕಾರ ನೀಡಿದೆ.

ಕಾರ್ಯಕ್ರಮದಲ್ಲಿ ದಿವಂಗತ ಅಬ್ದುಲ್ ರಹೀಂ ರವರ ಧರ್ಮಪತ್ನಿ ಹಾಗೂ ಹಾಲಿ ವಾರ್ಡ್ ಸದಸ್ಯೆ ಫಾತಿಮತ್ ಸಬೀನಾ, ಪಂಚಾಯತ್ ಸದಸ್ಯ ಮುಕ್ತಾರ್, ಶಾಲೆಯ ಮುಖ್ಯೋಪಾಧ್ಯಾಯರು, ಅಧ್ಯಾಪಕ ವೃಂದ, ಪಿ.ಟಿ.ಎ ಪದಾಧಿಕಾರಿಗಳು ಹಾಗೂ ಊರಿನ ಪ್ರಮುಖರು ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

​ಸಹಾಯ ಮಾಡುವ ಕೈಗಳಿಗೆ ಸದಾ ದೇವರ ಆಶೀರ್ವಾದವಿರುತ್ತದೆ ಎಂಬಂತೆ, ದಿವಂಗತ ಅಬ್ದುಲ್ ರಹೀಂ ರವರ ದಯೆ ಮತ್ತು ಕಾಳಜಿಯ ಸ್ಮರಣಾರ್ಥವಾಗಿ ಕೈಗೊಂಡ ಈ ಯೋಜನೆ ಶಾಲಾ ಮಕ್ಕಳ ರಕ್ಷಣೆಗೆ ನಿರಂತರವಾಗಿ ನೆರವಾಗಲಿದೆ ಎಂದು ಶಾಲಾ ಆಡಳಿತ ಮಂಡಳಿ ಧನ್ಯವಾದ ಸಲ್ಲಿಸಿದೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!