ಖಂಬದಕೋಣೆ; ಸೇತುವೆಗೆ ಡಿಕ್ಕಿ ಹೊಡೆದ ಕಂಟೈನ‌ರ್; ತಪ್ಪಿದ ಬಾರಿ ಅನಾಹುತ

ಉಡುಪಿ: ರಾಷ್ಟ್ರೀಯ ಹೆದ್ದಾರಿ 66ರ ಖಂಬದಕೋಣೆ ಸೇತುವೆಗೆ ಕಂಟೈನರ್‌ವೊಂದು ಡಿಕ್ಕಿ ಹೊಡೆದಿದ್ದು, ಭಾರೀ ಅನಾಹುತವೊಂದು ಕೂದಲೆಳೆಯ ಅಂತರದಲ್ಲಿ ತಪ್ಪಿದಂತಾಗಿದೆ.ಕಂಟೈನರ್ ಡಿಕ್ಕಿ ಹೊಡೆದ ರಭಸಕ್ಕೆ ನದಿಗೆ ಉರುಳುವ ಸಾಧ್ಯತೆ ಇದ್ದು, ಅದೃಷ್ಟವಶಾತ್ ಪಾರಾಗಿದೆ.ಕಂಟೈನರ್ ಮಂಗಳೂರಿನಿಂದ ಗೋವಾ ಕಡೆಗೆ ಸಾಗುತ್ತಿದ್ದು, ಕಂಟೈನರ್‌ನಲ್ಲಿದ್ದ ಚಾಲಕ ಹಾಗೂ ಕೀನ‌ರ್ ಅಪಾಯದಿಂದ ಪಾರಾಗಿದ್ದಾರೆ.

Read More

ದಸರಾ ಹಬ್ಬದ ಸಂಭ್ರಮವನ್ನು ಸಿದ್ದರಾಮಯ್ಯ ನೇತೃತ್ವದ ಸರಕಾರ ಸಮೀಕ್ಷೆಯಿಂದ ನುಂಗಿ ನೀರು ಕುಡಿದಿದೆ ; ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ

ಮಂಗಳೂರು: ದಸರಾ ಹಬ್ಬದ ಸಂಭ್ರಮವನ್ನು ಸಿದ್ದರಾಮಯ್ಯ ನೇತೃತ್ವದ ಸರಕಾರ ಸಮೀಕ್ಷೆಯಿಂದ ನುಂಗಿ ನೀರು ಕುಡಿದಿದೆ ; ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲರಾಜ್ಯದಲ್ಲಿ ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷೆಯನ್ನು ಈ ದಸರಾ ಸಂಭ್ರಮದ ಸಮಯದಲ್ಲಿ ಆರಂಭಿಸಿದ್ದು ಹಿಂದೂ ಭಾವನೆಗೆ ಧಕ್ಕೆ ತಂದಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಗುಡುಗಿದರು.ಅವರು ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಹಿಂದೂ ಹಬ್ಬದ ಹಿಂದೆ ಈ ಸಮೀಕ್ಷೆಯನ್ನು ನಡೆಸುವುದರ ಹಿಂದೆ ದೊಡ್ಡ ಷಡ್ಯಂತರ ಇದೆ ಎಂದರು. ಹಬ್ಬದ ಹಿನ್ನಲೆಯಲ್ಲಿ ಶಿಕ್ಷಕರಿಗೆ…

Read More

ವರ್ಕಾಡಿ ಮಂಡಲ ಕಾಂಗ್ರೆಸ್ ವತಿಯಿಂದ 158ನೇ ಗಾಂಧೀಜಿ ಜಯಂತಿ ಆಚರಣೆ

ಮಂಜೇಶ್ವರ :ವರ್ಕಾಡಿ ಮಂಡಲ ಕಾಂಗ್ರೆಸ್ ವತಿಯಿಂದ 158ನೇ ಗಾಂಧಿಜಿ ಜಯಂತಿಯನ್ನು ಆಚರಿಸಲಾಯಿತು ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಂಡಲ ಗಾಂಧೀ ಅಧ್ಯಕ್ಷರಾದ ಪುರುಷೋತ್ತಮ ಅರಿಬೈಲ್ ವಹಿಸಿದ್ದರು ಮಂಜೇಶ್ವರ ಬ್ಲಾಕ್ ಕಾಂಗ್ರೆಸ್ ಪ್ರದಾನ ಕಾರ್ಯದರ್ಶಿ ಗಣೇಶ್ ಪಾವೂರು ಗಾಂಧೀಜಿ ಭಾವಚಿತ್ರಕ್ಕೆ ಪುಷ್ಪರ್ಚನೆ ಮಾಡುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿದರು ಉಮ್ಮರ್ ಕುಂಹಿ ಗಾಂಧೀಜಿ ಬಗ್ಗೆ ವಿವರಣೆ ನೀಡಿದರು. S. J. ದಿವಾಕರ.ಮಹಮ್ಮದ್ ಮಜಲ್.ಸಾಂತ ರ್ ನಾಯ್ಕ್ ಕುಂಹಿ ಮೋನು. ಶಾಫಿಯ.ಜಮೀಳಾ.ವಿಕ್ಟರ್ ವೇಗಸ್.ಅಫ್ರೋಸ್ ಗಾಂಧಿ ನಗರ. ಪ್ರಾಂನ್ಸಿಸ್ ಡಿ ಸೋಜ. ಉಮ್ಮರ್ ಪಾಳಂಗಿರಿ.ಮಹ್ಮದ್…

Read More

ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರಕ್ಕೆ ಕರ್ನಾಟಕ ಉಪಮುಖ್ಯಮಂತ್ರಿ ಭೇಟಿ-ಮಂಗಳೂರು ದಸರಾ ವೈಭವಕ್ಕೆ ಮೆಚ್ಚುಗೆ.

ಮಂಗಳೂರು: ವಿಶ್ವವಿಖ್ಯಾತ ಮಂಗಳೂರು ದಸರಾ ಸಂಭ್ರಮದಲ್ಲಿ ಜನರು ಭಕ್ತಿಭಾವದಿಂದ ತಲ್ಲೀನರಾಗಿರುವಾಗ ಕರ್ನಾಟಕ ರಾಜ್ಯದ ಉಪಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರಕ್ಕೆ ಭೇಟಿ ನೀಡಿದರು. ದೇವರ ಬಲಿ ಉತ್ಸವದ ಶುಭ ಸಂಧರ್ಭದಲ್ಲಿ ದೇವಸ್ಥಾನ ಪ್ರವೇಶಿಸಿದ ಉಪಮುಖ್ಯಮಂತ್ರಿಗಳು, ಸಂಪ್ರದಾಯದಂತೆ ದೇವರ ರಥಾರೋಹಣ ನಂತರ ರಥದ ಚಕ್ರಕ್ಕೆ ತೆಂಗಿನಕಾಯಿ ಒಡೆದು, ಭಕ್ತರೊಂದಿಗೆ ರಥೋತ್ಸವದಲ್ಲಿ ಭಾಗಿಯಾದರು. ದೇವಳ ಸ್ಥಾಪಿಸಿದ ಸಂತ ಬ್ರಹ್ಮಶ್ರೀ ನಾರಾಯಣ ಗುರುಗಳ ಸನ್ನಿಧಿಗೆ ನಮಿಸಿ, ಸರ್ವ ದೇವರ ದರ್ಶನ ಪಡೆದು, ದರ್ಬಾರ್ ಮಂಟಪದಲ್ಲಿ ಶಾರದೆ ಮತ್ತು…

Read More

ಗಾಂಧೀಜಿಯವರ ತತ್ವ, ಆದರ್ಶ ಮನುಷ್ಯನಲ್ಲಿ ಮುಖ್ಯವಾಗಿ ಬೇಕು ; ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾಡಳಿತ , ಜಿಲ್ಲಾ ಪಂಚಾಯತ್ , ಮಂಗಳೂರು ಮಹಾನಗರ ಪಾಲಿಕೆ , ವಾರ್ತ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ , ಸಾರ್ವಜನಿಕ ಶಿಕ್ಷಣ ಇಲಾಖೆ , ಭಾರತ ಸೇವಾದಳದ ನೇತ್ರಿತ್ವದಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಹುಟ್ಟುಹಬ್ಬ ಗಾಂಧಿ ಜಯಂತಿಯನ್ನು ನಗರದ ರಾಜಾಜಿ ಪಾರ್ಕ್ನನಲ್ಲಿ ಗಣ್ಯರ ಸಮ್ಮುಖದಲ್ಲಿ ಆಚರಿಸಲಾಯಿತು . ಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಮತ್ತು ಪುಷ್ಪಾರ್ಚನೆಯನ್ನು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾದ ದಿನೇಶ್ ಗುಂಡೂರಾವ್ ನೆರವೇರಿಸಿ ಮಾತನಾಡಿ, ಗಾಂಧೀಜಿಯವರ ತತ್ವ, ಆದರ್ಶ…

Read More

ರಾಷ್ಟ್ರೀಯ ಹೆದ್ದಾರಿಯಲ್ಲಿರುವ ನಯಾ ಬಜಾರ್ ಬಸ್ ನಿಲ್ದಾಣದ ಹೆಸರಿನಲ್ಲಿ ಬದಲಾವಣೆ .ಪ್ರಯಾಣಿಕರಲ್ಲಿ ಗೊಂದಲ.

ಮಂಜೇಶ್ವರ: ರಾಷ್ಟ್ರೀಯ ಹೆದ್ದಾರಿಯಲ್ಲಿರುವ ನಯಾ ಬಜಾರ್ ಬಸ್ ನಿಲ್ದಾಣದ ಹೆಸರಿನಲ್ಲಿ ಬದಲಾವಣೆ ಮಾಡಿರುವುದು ಪ್ರಯಾಣಿಕರಲ್ಲಿ ಗೊಂದಲವನ್ನು ಸೃಷ್ಟಿಸಿದೆ. ನಯಾ ಬಜಾರಿನ ಮಂಗಳೂರು ಕಡೆಗೆ ಸಂಚರಿಸುವ ರಸ್ತೆಯಲ್ಲಿರುವ ಬಸ್ ನಿಲ್ದಾಣಕ್ಕೆ ಮಂಗಲ್ಪಾಡಿ ಎಂಬ ಹೆಸರಿನಲ್ಲಿ ಫಲಕವನ್ನು ಸ್ಥಾಪಿಸಿರುವುದು ಪ್ರಯಾಣಿಕರ ಗೊಂದಲಕ್ಕೆ ಕಾರಣವಾಗಿದೆ. ನಯಾಬಜಾರಿಗೆ ಹೊರಗಿನಿಂದ ಆಗಮಿಸುವ ಪ್ರಯಾಣಿಕರೂ, ಹೊಸದಾಗಿ ಬರುವ ಬಸ್ ಚಾಲಕರೂ ಈ ಸ್ಥಳವನ್ನು ಅರ್ಥಮಾಡಿಕೊಳ್ಳದೇ ಗೊಂದಲಕ್ಕೆ ಒಳಗಾಗುತ್ತಿದ್ದಾರೆ. ಹತ್ತಿರದಲ್ಲಿರುವ ಕೈಕಂಬ ಬಸ್ ನಿಲ್ದಾಣಕ್ಕೆ ತಲುಪಿದಾಗ ಮಾತ್ರವೇ ಅರ್ಥವಾಗುತ್ತಿದೆ. ನಯಾ ಬಜಾರ್ ಬಸ್ ನಿಲ್ದಾಣವನ್ನು ದಾಟಿ ಹೋಗಿರುವುದು….

Read More

“ಪೀಸ್ ಟ್ಯಾಲೆಂಟ್ ಹಂಟ್” ಸಾಂಸ್ಕೃತಿಕ ಕಾರ್ಯಕ್ರಮ.

ಮಂಜೇಶ್ವರ : ಕಳೆದ ಸುಮಾರು 17 ವರ್ಷಗಳಿಂದ ವಿದ್ಯಾಭ್ಯಾಸ ಕ್ಷೇತ್ರದಲ್ಲಿ ವಿಶೇಷ ಗಮನ ಸೆಳೆಯಿತ್ತಿರುವ ಹೊಸಂಗಡಿ ಪೀಸ್ ಕ್ರಿಯೇಟಿವ್ ಆಂಗ್ಲ ಮಾಧ್ಯಮ ಕೇಂದ್ರೀಯ ಶಾಲಾ ವಿದ್ಯಾರ್ಥಿಗಳು ತಮ್ಮ ಅನೇಕ ಪ್ರತಿಭೆಗಳ ಮೂಲಕ ಶಿಕ್ಷಣ ಕ್ಷೇತ್ರದಲ್ಲಿ ನೂತನ ಮೈಲಿಗಲ್ಲುಗಳನ್ನು ಸೃಷ್ಟಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಮಂಗಳವಾರ ನಡೆದ “ಪೀಸ್ ಟ್ಯಾಲೆಂಟ್ ಹಂಟ್” ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ವಿವಿಧ ಕಲೆಗಳನ್ನು ಪ್ರದರ್ಶಿಸಿ ಪ್ರೇಕ್ಷಕರ ಪ್ರಶಂಶೆಗೆ ಪಾತ್ರರಾದರು. ಸಕಲ ಸಿದ್ಧತೆಗಳೊಂದಿಗೆ ಅದ್ದೂರಿಯಾಗಿ ನಡೆದ ಕಾರ್ಯಕ್ರಮಕ್ಕೆ ಶೈಕ್ಷಣಿಕ ಕ್ಷೇತ್ರದ ಶಿಸ್ತು ಪಾಲನೆಯಲ್ಲಿ ಗಿನ್ನೆಸ್ ವರ್ಲ್ಡ್…

Read More

ಡಾ. ಕೆರೆಮನೆ ಮಹಾಬಲ ಹೆಗಡೆ ಸ್ಮಾರಕ ರಂಗ ಪ್ರತಿಷ್ಠಾನ(ರಿ)ದಿಂದ ಎಲ್. ಎಸ್. ಶಾಸ್ತ್ರಿ ಅವರಿಗೆ “ಮಹಾಬಲ ಪ್ರಶಸ್ತಿ”

ಪ್ರಸಿದ್ಧ ಯಕ್ಷಗಾನ ಕಲಾವಿದ ಡಾ. ಕೆರೆಮನೆ ಮಹಾಬಲ ಹೆಗಡೆಯವರ 16ನೆಯ ಸಂಸ್ಮರಣಾ ದಿನ ಮತ್ತು ಕೆರೆಮನೆ ರಾಮ ಹೆಗಡೆಯವರ 6 ನೆಯ ಸಂಸ್ಮರಣಾ ದಿನಗಳ ಅಂಗವಾಗಿ ಇದೇ ಒ.18 ರಂದು ರಂದು ಸಂಜೆ 4 ಗಂಟೆಗೆ ಹೊನ್ನಾವರ ತಾಲೂಕು ಗುಣವಂತೆಯ ಕೆರೆಮನೆ ಶಿವರಾಮ ಹೆಗಡೆ ರಂಗಮಂದಿರದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತ ಸಾಹಿತಿ, ರಂಗಚಿಂತಕ ಶ್ರೀ ಲಕ್ಷ್ಮೀನಾರಾಯಣ ಶಾಸ್ತ್ರಿ , ನಾಜಗಾರ ( ಬೆಳಗಾವಿ) ಇವರಿಗೆ ಈ ವರ್ಷದ ” ಮಹಾಬಲ ಪ್ರಶಸ್ತಿ ” ನೀಡಿ ಗೌರವಿಸಲಾಗುವುದು….

Read More

ತುಂಬೆ: ಶ್ರೀ ಶಾರದಾ ಸಮುದಾಯ ಭವನ ಲೋಕಾರ್ಪಣಾ ಕಾರ್ಯಕ್ರಮ.

ಬಂಟ್ವಾಳ: ತುಂಬೆ ರಾಮಲ್ ಕಟ್ಟೆ ಶ್ರೀ ಶಾರದಾ ಸೇವಾ ಪ್ರತಿಷ್ಠಾನ (ರಿ.) ಶ್ರೀ ಶಾರದಾ ರಜತ ಮಹೋತ್ಸವ ಸಮಿತಿ ಇದರ ವತಿಯಿಂದ ತುಂಬೆ ಶ್ರೀರಾಮ ನಗರ ರಾಮಲ್ ಕಟ್ಟೆಯಲ್ಲಿ ಸುಮಾರು 1.5ಕೋಟಿ ವೆಚ್ಚದಲ್ಲಿ ನೂತನವಾಗಿ ನಿರ್ಮಾಣಗೊಂಡ ಶ್ರೀ ಶಾರದಾ ಸಮುದಾಯ ಭವನವನ್ನು ಸೆ 28ರಂದು ಆದಿತ್ಯವಾರ ಮಂಗಳೂರು ಎಸ್ ಸಿ ಡಿ ಸಿ ಸಿ ಬ್ಯಾಂಕ್ ಅಧ್ಯಕ್ಷರಾದ ಡಾ ಎಂ ಎನ್ ರಾಜೇಂದ್ರ ಕುಮಾರ್ ಉದ್ಘಾಟಿಸಿ ಲೋಕಾರ್ಪಣೆಗೊಳಿಸಿದರು. ಬಳಿಕ ಮಾತನಾಡಿದ ಅವರು, ಶಾಂತಿ ಪ್ರಿಯರಾದ ನಾವು ಎಲ್ಲರನ್ನು…

Read More

ಕನ್ನಡ ಭವನ ಪ್ರಕಾಶನದ “ಮರೆಯಲಾಗದವರು “9ನೇ ಕೃತಿ ಬಿಡುಗಡೆ.

ಕಾಸರಗೋಡು : ಪಾಂಗೋಡು ಶ್ರೀ ದುರ್ಗಾಪರಮೇಶ್ವರಿ ಶ್ರೀ ಸುಬ್ರಮಣ್ಯ ದೇವಸ್ಥಾನದಲ್ಲಿ ಶರನ್ನವರಾತ್ರಿ ಪ್ರಯುಕ್ತ ನಡೆಯುತ್ತಿರುವ “ಕಾಸರಗೋಡು ದಸರಾ ಸಾಂಸ್ಕೃತಿಕೋತ್ಸವ 2025.ವೇದಿಕೆಯಲ್ಲಿ ಆದರ್ಶ ಮಹಿಳೆ, ಮೇರು ಯಕ್ಷಗಾನ ಕಲಾವಿದೆ, ಉದ್ಯಮಿ, ಸಾಮಾಜಿಕ ಕಾರ್ಯಕರ್ತೆ ದಿ. ಶ್ರೀಮತಿ ಗಾಯತ್ರಿ ನಾಗೇಶ್ ಇವರ ಸಂಸ್ಮರಣೆ -ನುಡಿನಮನ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮ ದಲ್ಲಿ ಗಾಯತ್ರಿ ನಾಗೇಶ್ ಇವರ ಬಗ್ಗೆ ಕಾಸರಗೋಡು ಕನ್ನಡ ಭವನ ಪ್ರಕಾಶನದ ಪ್ರಕಾಶಕಿ ಸಂಧ್ಯಾರಾಣಿ ಟೀಚರ್ ರಚಿಸಿದ “ಮರೆಯಲಾಗದವರು “ಎಂಬ ವ್ಯಕ್ತಿ ಚಿತ್ರಣ ಕೃತಿ ಬಿಡುಗಡೆ ಗೊಳಿಸಲಾಯಿತು. ರಾಮರಾಜ…

Read More
error: Content is protected !!