Headlines

ಸೆ.13ರಂದು ತುಂಬೆಯಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ

ಬಂಟ್ವಾಳ: ತುಂಬೆ ಮುಹಿಯುದ್ದೀನ್ ಎಜುಕೇಶನಲ್ ಟ್ರಸ್ಟ್ ಆಶ್ರಯದಲ್ಲಿ ಹಾಗೂ ತುಂಬೆ ಗ್ರೂಪ್ ಅಜ್ಜಾನ್ ಯುಎಇ ಸಂಸ್ಥಾಪಕ ಡಾ. ತುಂಬೆ ಮೊಯ್ದಿನ್ ಅವರ ಸಹಯೋಗದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಸೆ.13ರಂದು ಬೆಳಿಗ್ಗೆ 10ರಿಂದ ಮಧ್ಯಾಹ್ನ 1ರವರೆಗೆ ತುಂಬೆ ಪದವಿ ಪೂರ್ವ ಕಾಲೇಜು ಸಭಾಂಗಣದಲ್ಲಿ ನಡೆಯಲಿದೆ. ನುರಿತ ವೈದ್ಯರ ನೇತೃತ್ವದಲ್ಲಿ ಕಣ್ಣಿನ ಹಾಗೂ ಸ್ತ್ರೀರೋಗ ತಪಾಸಣೆ, ರಕ್ತದೊತ್ತಡ, ಮಧುಮೇಹ ಸೇರಿದಂತೆ ವಿವಿಧ ಸಾಮಾನ್ಯ ಕಾಯಿಲೆಗಳ ತಪಾಸಣೆ ಮತ್ತು ಚಿಕಿತ್ಸೆ ನೀಡಲಾಗುವುದು. ಅಗತ್ಯವಿರುವವರಿಗೆ ಉಚಿತ ಔಷಧಿಯನ್ನೂ ವಿತರಿಸಲಾಗುವುದು. ಹೆಚ್ಚಿನ ಚಿಕಿತ್ಸೆಯ…

Read More

ದ.ಕ.ದ 7 ಗ್ರಾಪಂಗಳಿಗೆ ಲೋಕಾಯುಕ್ತ ಪೊಲೀಸರ ದಾಳಿ

ಮಂಗಳೂರು, ಸೆ.10: ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಗ್ರಾಮ ಪಂಚಾಯಿತಿಗಳಿಗೆ ಲೋಕಾಯುಕ್ತ ಪೊಲೀಸರು ಗುರುವಾರ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ. ಸುಳ್ಯ ತಾಲೂಕಿನ ಬೆಳ್ಳಾರೆ ಹಾಗೂ ಪಂಜ, ಉಳ್ಳಾಲ ತಾಲೂಕಿನ ತಲಪಾಡಿ, ಕೊಣಾಜೆ ಹಾಗೂ ಬಾಳೆಪುಣಿ, ಮಂಗಳೂರು ತಾಲೂಕಿನ ಬಾಳ ಮತ್ತು ಮೂಡುಬಿದಿರೆ ತಾಲೂಕಿನ ಬೆಳುವಾಯಿ ಗ್ರಾಮ ಪಂಚಾಯಿತಿಗಳಲ್ಲಿ ಲೋಕಾಯುಕ್ತ ತಂಡಗಳು ಕಾರ್ಯಾಚರಣೆ ನಡೆಸಿವೆ. ಲೋಕಾಯುಕ್ತ ಕೇಂದ್ರ ಕಚೇರಿಯಲ್ಲಿ ದಾಖಲಾಗಿರುವ ಸ್ವಯಂಪ್ರೇರಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ದಾಳಿ ನಡೆಸಲಾಗಿದೆ. ಲೋಕಾಯುಕ್ತ ಮಂಗಳೂರು ವಿಭಾಗದ ಪೊಲೀಸ್ ಅಧೀಕ್ಷಕ ಬಿ.ಪಿ….

Read More

ಹೂಹಾರ, ಪಟಾಕಿ, ಸಿಹಿ ಹಂಚಿ ಪದ್ಮರಾಜ್ ಪೂಜಾರಿ ಆಯ್ಕೆಗೆ ಕಾರ್ಯಕರ್ತರ ಸಂಭ್ರಮ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಕಾಂಗ್ರೆಸ್ ಅಧ್ಯಕ್ಷರಾಗಿ ಆಯ್ಕೆಯಾದ ಪದ್ಮರಾಜ್ ಪೂಜಾರಿ ಅವರನ್ನು ಕಾರ್ಯಕರ್ತರು ಇಂದು ಅಭಿನಂದಿಸಿದರು. ಎನ್.ಎಸ್.ಯು.ಐ. ಮತ್ತು ಯುವ ಕಾಂಗ್ರೆಸ್ ಪದಾಧಿಕಾರಿಗಳು ಕಾಂಗ್ರೆಸ್ ಕಛೇರಿ ಎದುರು ಆತ್ಮೀಯವಾಗಿ ಹೊಸ ಅಧ್ಯಕ್ಷರನ್ನು ಸ್ವಾಗತಿಸಿದರು .ನೂತನ ಅಧ್ಯಕ್ಷರಿಗೆ ಹೂ ಹಾರ ,ಹೂ ಗುಚ್ಚ ನೀಡಿ ,ಪಟಾಕಿ ಸಿಡಿಸಿ ,ಸಿಹಿ ಹಂಚಿಕೆ ಮಾಡಿ ಸಂಭ್ರಮಿಸಿದರು . ಈ ಸಂದರ್ಭದಲ್ಲಿ ಘೋಷಣೆ ಕೂಗಿ ಹರ್ಷ ವ್ಯಕ್ತ ಪಡಿಸಿದರು.ಎಲ್ಲರ ನಿರೀಕ್ಷೆಗೆ ಸ್ಪಂದಿಸುವುದಾಗಿ ಹಾಗು ಪಕ್ಷದ ಬಲವರ್ಧನೆಗೆ ಶ್ರಮಿಸುವುದಾಗಿ ಪದ್ಮರಾಜ ಪೂಜಾರಿ ಹೇಳಿದರು.

Read More

ಕಾಸರಗೋಡು ದಸರಾ ಕವಿಗೋಷ್ಠಿಗೆ ಡಾ. ಜಯಪ್ಪ ಹೊನ್ನಾಳಿ ಘನ ಅಧ್ಯಕ್ಷತೆ

ಕಾಸರಗೋಡು: ಕಾಸರಗೋಡು ಕನ್ನಡ ಭವನದ ಆಶ್ರಯದಲ್ಲಿ ಅ.11ರಿಂದ 21ರವರೆಗೆ ನಡೆಯಲಿರುವ ‘ಕಾಸರಗೋಡು ದಸರಾ ಸಾಂಸ್ಕೃತಿಕೋತ್ಸವ–2026’ರ ಅಂಗವಾಗಿ ಅ.18ರಂದು ಪಾಂಗೋಡು ಶ್ರೀ ದುರ್ಗಾಪರಮೇಶ್ವರಿ–ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಸಭಾಂಗಣದಲ್ಲಿ ನಡೆಯಲಿರುವ ದಸರಾ ಕವಿಗೋಷ್ಠಿಗೆ ಖ್ಯಾತ ಕವಿ, ಮೈಸೂರಿನ (ಜಯ ಕವಿ ಮೈಸೂರು) ಡಾ. ಜಯಪ್ಪ ಹೊನ್ನಾಳಿ ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ಡಾ. ವಾಮನ್ ರಾವ್ ಬೇಕಲ್ ಹಾಗೂ ಸಂಧ್ಯಾರಾಣಿ ಟೀಚರ್ ಅವರ ಸಾರಥ್ಯದಲ್ಲಿ ಕನ್ನಡ ಭವನ ಮತ್ತು ಗ್ರಂಥಾಲಯ, ಕನ್ನಡ ಭವನ ಪ್ರಕಾಶನ, ಕನ್ನಡ ಭವನ ಉಚಿತ ವಾಚನಾಲಯ ಹಾಗೂ…

Read More

ದ.ಕ.ದಲ್ಲಿ ಕಾಂಗ್ರೆಸ್ ಗೆಲುವಿನ ಗತವೈಭವ ಮರುಕಳಿಸುವುದೇ ಗುರಿ: ಪದ್ಮರಾಜ್

ಮಂಗಳೂರು: ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸುವುದಕ್ಕಿಂತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾಂಗ್ರೆಸ್‌ನ ಗೆಲುವಿನ ಗತವೈಭವವನ್ನು ಮರಳಿ ತರುವುದೇ ತಮ್ಮ ಮೊದಲ ಆದ್ಯತೆ ಎಂದು ಜಿಲ್ಲಾ ಕಾಂಗ್ರೆಸ್‌ನ ನೂತನ ಅಧ್ಯಕ್ಷ ಪದ್ಮರಾಜ್ ಆರ್. ಪೂಜಾರಿ ಹೇಳಿದರು. ಕಾಂಗ್ರೆಸ್ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯ ವಿವಿಧ ವಿಧಾನಸಭಾ ಕ್ಷೇತ್ರಗಳಲ್ಲಿನ ಪಕ್ಷದ ಹಿನ್ನಡೆಯನ್ನು ಪುನರ್‌ವಿಮರ್ಶಿಸಿ, ತಳಮಟ್ಟದಿಂದ ಪಕ್ಷ ಸಂಘಟನೆ ಬಲಪಡಿಸಲಾಗುವುದು. ಹಿರಿಯ-ಕಿರಿಯ ನಾಯಕರನ್ನು ವಿಶ್ವಾಸಕ್ಕೆ ಪಡೆದು ಗ್ರಾಮ ಹಾಗೂ ಬೂತ್ ಮಟ್ಟದ ಕಾರ್ಯಕರ್ತರನ್ನು ಸಂಪರ್ಕಿಸಿ ಸಂಘಟನೆಗೆ ಹೊಸ ಚೈತನ್ಯ ನೀಡಲಾಗುವುದು ಎಂದರು….

Read More

ಮೊನಾಲಿಸಾ ಇಸ್ ಇನ್ ಟ್ರಬಲ್ ಚಿತ್ರದ ನಾಯಕಿ ವಿನುತಾ ಸಿ. ನಾಯ್ಕ್ ರವರಿಗೆ ಕಲಾ ರತ್ನ ಪ್ರಶಸ್ತಿ-2026

ಇತ್ತೀಚೆಗೆ ಮೇ 15 ರಿಂದ 17 ರವರೆಗೆ ಮಂಗಳೂರಿನ ಭಾರತ್ ಸಿನಿಮಾ ಚಿತ್ರ ಮಂದಿರದಲ್ಲಿ 3 ದಿನಗಳಲ್ಲಿ ಹೌಸ್ ಫುಲ್ ಆಗಿ 8 ಪ್ರದರ್ಶನ ಕಂಡ ಕನ್ನಡದ ಕರಾವಳಿಯ ಮೊಟ್ಟಮೊದಲ ಟೆಲಿ ಮೂವಿ ಮೊನಾಲಿಸಾ ಇಸ್ ಇನ್ ಟ್ರಬಲ್ ಈ ಚಿತ್ರದ ನಾಯಕಿ ವಿನುತಾ ಸಿ. ನಾಯ್ಕ್ ಅವರಿಗೆ *ಕಲಾ ರತ್ನ ಪ್ರಶಸ್ತಿ -2026 ಲಭಿಸಿದೆ. ಬೃಂದಾವನ್ N ಶೆಟ್ಟಿ ನಿರ್ದೇಶನದ, ನವೀನ್ ಕುಮಾರ್ ಶೆಟ್ಟಿ ನಿರ್ಮಾಣದ, ಶ್ರೇಯಸ್ ಕುಮಾರ್ ಫರಂಗಿ ಪೇಟೆ ಇವರು ವಿಭಿನ್ನವಾಗಿ, ವಿಶಿಷ್ಟವಾಗಿ…

Read More

ತುಳು ರಾಜ್ಯದ ಎರಡನೇ ಅಧಿಕೃತ ಭಾಷೆಯಾಗಲಿ: ವೇದವ್ಯಾಸ ಕಾಮತ್ ಆಗ್ರಹ

ತುಳು ಭಾಷೆ ರಾಜ್ಯದ ಎರಡನೇ ಅಧಿಕೃತ ಭಾಷೆಯಾಗಬೇಕೆಂಬ ತುಳುವರ ಒಕ್ಕೊರಲ ಬೇಡಿಕೆಯನ್ನು ಪರಿಗಣಿಸಿ ಸೆಪ್ಟೆಂಬರ್ 18 ರಂದು ಮಂಗಳೂರಲ್ಲಿ ನಡೆಯಲಿರುವ ರಾಜ್ಯ ಸಚಿವ ಸಂಪುಟದಲ್ಲಿ ಅಂತಿಮ ನಿರ್ಣಯ ಕೈಗೊಳ್ಳಬೇಕೆಂದು ಶಾಸಕ ವೇದವ್ಯಾಸ ಕಾಮತ್ ರವರು ಸರ್ಕಾರಕ್ಕೆ ಆಗ್ರಹಿಸಿದರು. ಈ ಬಗ್ಗೆ ನಾನು ಶಾಸಕನಾದಾಗಿನಿಂದಲೂ ಪ್ರಾಮಾಣಿಕವಾಗಿ ಪ್ರಯತ್ನಿಸಿದ್ದು ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ, ತುಳು ಪರ ಹೋರಾಟಗಾರರೊಂದಿಗೆ ತುಳು ಲಿಪಿ ಶಾಸನ, ಸಾವಿರಾರು ವರ್ಷಗಳ ಇತಿಹಾಸವಿರುವ ತಾಳೆ ಓಲೆಗಳು, ಪಾಡ್ದನ, ದೈವಾರಾಧನೆಯ ನುಡಿಗಳು, ತುಳುನಾಡಿನ ಪುರಾತನ ದೇವಸ್ಥಾನ ಹಾಗೂ…

Read More

ಕೇರಳಕ್ಕೆ ಪ್ರತ್ಯೇಕ ರೈಲ್ವೇ ವಲಯ ಬೇಕು: ಬೇಡಿಕೆ ತೀವ್ರ

ಕುಂಬಳೆ: ಪಾಲಕ್ಕಾಡ್ ಡಿವಿಷನ್‌ನಿಂದ ಮಂಗಳೂರು ವಲಯವನ್ನು ಬೇರ್ಪಡಿಸುವ ಮತ್ತು ತಿರುವನಂತಪುರ ಡಿವಿಷನ್ ವಿಭಜಿಸುವ ಪ್ರಕ್ರಿಯೆಗಳು ತೀವ್ರಗೊಳ್ಳ ಬೆನ್ನಲ್ಲೇ, ಕೇರಳಕ್ಕೆ ಪ್ರತ್ಯೇಕ ರೈಲ್ವೇ ವಲಯ ಬೇಕೆಂಬ ಕೂಗು ಬಲವಾಗಿದೆ. ದಕ್ಷಿಣ ಭಾರತದಲ್ಲೇ ಗರಿಷ್ಠ ಪ್ರಯಾಣಿಕರು ಹಾಗೂ ಆದಾಯ ತಂದುಕೊಡುವ ಕೇರಳ, ಪ್ರಸ್ತುತ ಚೆನ್ನೈ ಕೇಂದ್ರಿತ ದಕ್ಷಿಣ ರೈಲ್ವೇಯ ನಿರ್ಲಕ್ಷ್ಯಕ್ಕೆ ಒಳಗಾಗುತ್ತಿದೆ ಎಂಬ ಆಕ್ಷೇಪವಿದೆ. ವಿಶಾಖಪಟ್ಟಣಂನಲ್ಲಿ ಹೊಸ ವಲಯ ರಚನೆಯಾಗಿರುವಾಗ ಕೇರಳದ ಬೇಡಿಕೆಯೂ ನ್ಯಾಯಯುತವಾಗಿದೆ. ​ಇದೇ ವೇಳೆ, ಕುಂಬಳೆ ರೈಲ್ವೇ ನಿಲ್ದಾಣದ ಬಳಿಯಿರುವ 34 ಎಕರೆ ಜಾಗವನ್ನು ಮೂಲಸೌಕರ್ಯ ಅಭಿವೃದ್ಧಿಗೆ…

Read More

ಪೆರಿಯಾಟಡ್ಕ ಮುನಿಕ್ಕಲ್ ತಿರುವಿನಲ್ಲಿ ಅಪಾಯದ ಸ್ಥಿತಿಯಲ್ಲಿ ಲಾರಿ: ಚಾಲಕ ಪಾರು

ಕಾಸರಗೋಡು: ರಾಷ್ಟ್ರೀಯ ಹೆದ್ದಾರಿಯ ಪೆರಿಯಾಟಡ್ಕ ಮುನಿಕ್ಕಲ್ ತಿರುವಿನಲ್ಲಿ ಭೀಕರ ಅಪಘಾತವೊಂದು ಸ್ವಲ್ಪದರಲ್ಲೇ ತಪ್ಪಿದ್ದು, ಕಂಟೈನರ್ ಲಾರಿಯೊಂದು ಅಪಾಯಕಾರಿ ಸ್ಥಿತಿಯಲ್ಲಿ ಪಾರಾಗಿದೆ. ​ಸುಮಾರು 10 ಮೀಟರ್ ಎತ್ತರದ ಹೆದ್ದಾರಿಯಲ್ಲಿ ಚಲಿಸುತ್ತಿದ್ದ ಲಾರಿ ಚಾಲಕನ ನಿಯಂತ್ರಣ ತಪ್ಪಿ ಪೊಲೀಸ್ ಕಂಟ್ರೋಲ್ ರೂಂ ಸಮೀಪ ಅಪಘಾತಕ್ಕೀಡಾಗಿದೆ. ಲಾರಿಯ ಹಿಂಭಾಗವು ರಸ್ತೆಯ ತಡೆಗೋಡೆ ಗೆ ಬಲವಾಗಿ ಸಿಲುಕಿಕೊಂಡಿದ್ದರಿಂದ ಕೆಳಗೆ ಉರುಳದೆ ತಡೆದು ನಿಂತಿದೆ. ಒಂದು ವೇಳೆ ತಡೆಗೋಡೆ ಇಲ್ಲದಿದ್ದರೆ ಲಾರಿ ಕೆಳಗಿನ ಸರ್ವೀಸ್ ರಸ್ತೆಗೆ ಮಗುಚಿ ಬಿದ್ದು ದೊಡ್ಡ ಮಟ್ಟದ ಅನಾಹುತ ಸಂಭವಿಸುತ್ತಿತ್ತು…

Read More

ಪುತ್ತೂರು: ಆಟೋ ಚಾಲಕನಿಂದ ಮಹಿಳೆಗೆ ಲೈಂಗಿಕ ಕಿರುಕುಳ – ವಿಮೆನ್ ಇಂಡಿಯಾ ಮೂವ್‌ಮೆಂಟ್ ತೀವ್ರ ಖಂಡನೆ

ಪುತ್ತೂರು: ಕೆಲಸದ ನಿಮಿತ್ತ ಮನೆಯಿಂದ ಹೊರಟಿದ್ದ ಮಹಿಳೆಯೊಬ್ಬರಿಗೆ ಆಟೋ ಚಾಲಕನೊಬ್ಬ ಲೈಂಗಿಕ ಕಿರುಕುಳ ನೀಡಿದ ಘಟನೆಯನ್ನು ‘ವಿಮೆನ್ ಇಂಡಿಯಾ ಮೂವ್‌ಮೆಂಟ್’ (WIM) ತೀವ್ರವಾಗಿ ಖಂಡಿಸಿದೆ.ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ವಿಮ್ ಮಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷೆ ಶಿನೀರ ಅವರು ಆಘಾತ ವ್ಯಕ್ತಪಡಿಸಿದ್ದು, ಪುತ್ತೂರು ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಸೆಪ್ಟೆಂಬರ್ 9ರ ಬೆಳಿಗ್ಗೆ ಈ ಘಟನೆ ನಡೆದಿದೆ ಎಂದು ತಿಳಿಸಿದ್ದಾರೆ. ನಿವಾಸಿಯಾದ ಮಹಿಳೆಯೊಬ್ಬರು ಕೆಲಸದ ನಿಮಿತ್ತ ಮನೆಯಿಂದ ಹೊರಟು ಪರಿಚಯದ ಆಟೋ ರಿಕ್ಷಾದಲ್ಲಿ ಪುತ್ತೂರಿಗೆ ತೆರಳುತ್ತಿದ್ದ ವೇಳೆ, ಆಟೋ…

Read More
error: Content is protected !!