ವೇಡನ್ ಸಂಗೀತ ಕಾರ್ಯಕ್ರಮದಲ್ಲಿ ನೂಕು ನುಗ್ಗಲು , ಕಾರ್ಯಕ್ರಮ ವೀಕ್ಷಿಸಿ ಹೊರಡುವಾಗ ರೈಲು ಡಿಕ್ಕಿ ಹೊಡೆದು 19 ವರ್ಷದ ಯುವಕ ಧಾರುಣ ಸಾವು….. !

ಕಾಸರಗೋಡು:ಬೇಕಲ್ ಬೀಚ್ ಫೆಸ್ಟ್‌ನಲ್ಲಿ ನಡೆದ ಗದ್ದಲದ ನಂತರ ಸ್ಥಗಿತಗೊಂಡಿದ್ದ ರ‍್ಯಾಪರ್ ವೇಡನ್ ನ ಸಂಗೀತ ಕಾರ್ಯಕ್ರಮದಿಂದ ಹಿಂತಿರುಗುತ್ತಿದ್ದಾಗ 19 ವರ್ಷದ ಯುವಕ ರೈಲಿಗೆ ಡಿಕ್ಕಿ ಹೊಡೆದಿದ್ದಾನೆ. ಮೃತನನ್ನು ಪೊಯಿನಾಚಿಯ ಶಿವಾನಂದನ್ ಎಂದು ಗುರುತಿಸಲಾಗಿದೆ. ಇದೇ ಘಟನೆಯಲ್ಲಿ ಮತ್ತೊಬ್ಬ ಯುವಕ ಗಂಭೀರ ಗಾಯವಾಗಿದೆ ಎಂದು ವರದಿಯಾಗಿದೆ. ಕಾಸರಗೋಡಿನ ಬೇಕಲ್ ಬೀಚ್ ಫೆಸ್ಟ್‌ನ ಅಂಗವಾಗಿ ರ‍್ಯಾಪರ್ ವೇಡನ್ ಸಂಗೀತ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು . ತಮ್ಮ ನೆಚ್ಚಿನ ಗಾಯಕನನ್ನು ನೋಡಲು ಅಭಿಮಾನಿಗಳು ದೊಡ್ಡ ಸಂಖ್ಯೆಯಲ್ಲಿ ಬಂದಿದ್ದರು . ಆದರೆ ನಿಗದಿಗಿಂತ ಹೆಚ್ಚಿನ…

Read More

ಪೇಜಾವರ ವಿಶ್ವೇಶತೀರ್ಥ ನಮನ -2025 ಕಾರ್ಯಕ್ರಮ

ಮಂಗಳೂರು: ಕಲ್ಕೂರ ಪ್ರತಿಷ್ಠಾನ ಮಂಗಳೂರು ವತಿಯಿಂದ ಪೇಜಾವರ ಹರಿಪಾದ ಹರಿಪಾದಗೈದಿರುವ ಪೇಜಾವರ ಶ್ರೀಗಳ ಷಷ್ಠಮ ಸಂಸ್ಕರಣಾರ್ಥ ಪೇಜಾವರ ವಿಶ್ವೇಶತೀರ್ಥ ನಮನ ೨೦೨೫ ಕಾರ್ಯಕ್ರಮವು ಗುರು ವಂದನೆ , ಪ್ರಶಸ್ತಿ ಪ್ರದಾನ , ಕೃಷ್ಣ ಗಾಯನ ಕಾರ್ಯಕ್ರಮದೊಂದಿಗೆ ಪೇಜಾವರ ವಿಶ್ವೇಶತೀರ್ಥ ವೇದಿಕೆ , ವಾದಿರಾಜ ಮಂಟಪ ಕದ್ರಿಯ ಮಂಜುಪ್ರಸಾದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಪಲಿಮಾರು ಮಠದ ಶ್ರೀ ಶ್ರೀ ವಿದ್ಯಾಧೀಶ ತೀರ್ಥರು , ಮೂಡಬಿದರೆ ಜೈನ ಮಠದ ಶ್ರೀ ಶ್ರೀ ಚಾರು ಕೀರ್ತಿ ಭಟ್ಟಾರಕ ಸ್ವಾಮೀಜಿ ದಿವ್ಯ ಉಪಸ್ಥಿಯಲ್ಲಿ…

Read More

ತುಳು ಭಾಷೆ ಸಂಸ್ಕೃತಿ ಉತ್ತೇಜನಕ್ಕೆ ಎಲ್ಲರ ಪ್ರಯತ್ನ ಅಗತ್ಯ :ಕಿಶೋರ್ ಆಳ್ವ

ಮಂಗಳೂರು : ಪುರಾತನ ಹಿನ್ನೆಲೆ ಹೊಂದಿರುವ ತುಳು ಭಾಷೆ ಹಾಗೂ ತುಳುನಾಡಿನ ಸಂಸ್ಕೃತಿ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಸರಕಾರ, ಸಮುದಾಯ ಹಾಗೂ ಖಾಸಗಿ ರಂಗ ಜೊತೆಯಾಗಿ ಕೈಜೋಡಿಸಬೇಕಾಗಿದೆ ಎಂದು ಅದಾನಿ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಹಾಗೂ ಅಧ್ಯಕ್ಷ ಕಿಶೋರ್ ಆಳ್ವ ಅವರು ಹೇಳಿದರು. ಅವರು ಮಂಗಳೂರಿನ ತುಳು ಭವನದಲ್ಲಿ ‘ಎಸ್ .ಯು. ಪಣಿಯಾಡಿ ತುಳುನಾಡ ಚಾವಡಿ’ಯಲ್ಲಿ ಹಿರಿಯ ಛಾಯಾಗ್ರಾಹಕ ಯಜ್ಞ ಅವರು ಕ್ಲಿಕ್ಕಿಸಿದ ಹಳೆಯ ಮಂಗಳೂರಿನ ಛಾಯಾಚಿತ್ರಗಳನ್ನು ಅನಾವರಣಗೊಳಿಸಿ ಮಾತನಾಡಿದರು.ಮಂಗಳೂರು ವಿಮಾನ ನಿಲ್ದಾಣದಲ್ಲಿಯೂ ತುಳು ಭಾಷೆ ಹಾಗೂ…

Read More

ಕುವೆಂಪು ವಿಶ್ವಮಾನವ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಲು ಕರೆ

ಮಂಗಳೂರು:- ದಕ್ಷಿಣ ಕನ್ನಡ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್,ಕನ್ನಡ ಮತ್ತು ಸಂಸ್ಕೃತಿ ಇಲಾಖೆ ದಕ್ಷಿಣ ಕನ್ನಡ ಜಿಲ್ಲೆ ಇವರ ಸಂಯುಕ್ತ ಆಶ್ರಯದಲ್ಲಿ ವಿಶ್ವಮಾನವ ದಿನಾಚರಣೆ (ರಾಷ್ಟ್ರಕವಿ ಕುವೆಂಪುರವರ ಜನ್ಮದಿನ) ಸೋಮವಾರ ಸರಕಾರಿ ಪದವಿಪೂರ್ವ ಬಾಲಕಿಯರ ಕಾಲೇಜು,ಬಲ್ಮಠ ಇಲ್ಲಿ ನಡೆಯಿತು. ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸದಾಶಿವ ಉಳ್ಳಾಲ್ ಅವರು ಕುವೆಂಪು ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದರು. ಕುವೆಂಪುರವರ ಸಾಹಿತ್ಯವನ್ನು ವಿದ್ಯಾರ್ಥಿಗಳು ಓದಬೇಕು. ಅವರ ವಿಶ್ವಮಾನವ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವಂತೆ ಅವರು ಕರೆ ನೀಡಿದರು.ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಜಯಲಕ್ಷ್ಮೀ…

Read More

ಕುಂಬಳೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಿರಾಮದ ಬಳಿಕ ಮತ್ತೆ ಕಳ್ಳರ ಹಾವಳಿ ಆರಂಭ

ಮಂಜೇಶ್ವರ : ಕುಂಬಳೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಿರಾಮದ ಬಳಿಕ ಮತ್ತೆ ಕಳ್ಳರ ಹಾವಳಿ ಆರಂಭಗೊಂಡಿದೆ.ಸೋನಾ ಬಜಾರ್ ಜ್ಯುವೆಲ್ಲರಿ ಮಾಲಕ ದಿ. ಮಮ್ಮಿಣ್ಣಿ ಹಾಜಿ ಅವರ ಕುಂಬಳೆ ಪೇಟೆಯಲ್ಲಿರುವ ಮನೆಗೆ ನಿನ್ನೆ ಕಳ್ಳರು ಲಗ್ಗೆ ಇಟ್ಟಿದ್ದಾರೆ. ಮನೆಯವರು ಚೆಂಗಳದಲ್ಲಿ ನಡೆದ ಮದುವೆ ಕಾರ್ಯಕ್ರಮಕ್ಕೆ ತೆರಳಿದ್ದ ಸಮಯದಲ್ಲಿ ಮಧ್ಯಾಹ್ನ 2 ಗಂಟೆಗೆ ಮನೆಗೆ ಬೀಗ ಹಾಕಲಾಗಿತ್ತು. ರಾತ್ರಿ 12ರ ವೇಳೆಗೆ ಮರಳಿದಾಗ ಮುಂಭಾಗದ ಬಾಗಿಲು ಮುರಿದು ಒಳನುಗ್ಗಿರುವುದು ಪತ್ತೆಯಾಗಿದೆ. ಕಳ್ಳರು ಎರಡು ಕಪಾಟುಗಳನ್ನು ಮುರಿದು ಬಟ್ಟೆಬರೆಗಳನ್ನು ಚಲ್ಲಾಪಿಲ್ಲಿ ಮಾಡಿದ್ದು,…

Read More

ಡಿ.೩೧ರಂದು `ಪುತ್ತೂರು ಮಹಿಳಾ ವಿವಿಧೋದ್ದೇಶ ಸಹಕಾರಿ ಸಂಘ’ ಇದರ ಸುವರ್ಣ ಮಹೋತ್ಸವ ಉದ್ಘಾಟನೆ…. !

ಪುತ್ತೂರು: ಪುತ್ತೂರು ಟೌನ್ ಬ್ಯಾಂಕ್‌ನ ಸಣ್ಣ ಕೊಠಡಿಯಲ್ಲಿ ಪುತ್ತೂರು ತಾಲೂಕು ಮಹಿಳೆಯರ ಗ್ರಾಹಕ ಸಹಕಾರಿ ಸಂಘ’ ಎಂಬ ಹೆಸರಿನಿಂದ ಆರಂಭಗೊಂಡಪುತ್ತೂರು ಮಹಿಳಾ ವಿವಿಧೋದ್ದೇಶ ಸಹಕಾರಿ ಸಂಘ’ ಇದೀಗ ಸುವರ್ಣ ಸಂಭ್ರಮದ ಹೊಸ್ತಿಲಲ್ಲಿದೆ. ಡಿ.೩೧ರಂದು ಸುವರ್ಣ ಮಹೋತ್ಸವದ ಉದ್ಘಾಟನೆ ನಡೆಯಲಿದ್ದು, ಸುವರ್ಣ ಮಹೋತ್ಸವದ ಹಿನ್ನಲೆಯಲ್ಲಿ ಮುಂದೆ ಒಂದು ವರ್ಷ ಪ್ರತಿ ತಿಂಗಳು ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತದೆ ಎಂದು ಸಂಘದ ಹಿರಿಯರು, ಮಾಜಿ ನಿರ್ದೇಶಕಿ ವತ್ಸಲಾ ರಾಜ್ನಿ ಮತ್ತು ಅಧ್ಯಕ್ಷೆ ಗೌರಿ ಬನ್ನೂರು ಹೇಳಿದರು. ಸುದ್ದಿಗೋಷ್ಟಿಯಲ್ಲಿ ಮಾಹಿತಿ ನೀಡಿದ ಅವರು,…

Read More

ಸಮಾಜ ಸೇವಕ ಸಂಘಟಕ ಡಾ. ದೇವಪ್ಪ ಕೆ. ವಿ ಮಂಗಳೂರು ರಿಗೆ ಡಾ. ಭಿಕ್ಷು ಸದ್ಭಾವನಾ ರಾಷ್ಟ್ರೀಯ ಪ್ರಶಸ್ತಿ.

ಕಾಸರಗೋಡು :ಡಾ. ವಾಮನ್ ರಾವ್ ಬೇಕಲ್ -ಸಂದ್ಯಾರಾಣಿ ಸಾರಥ್ಯದ ಕಾಸರಗೋಡು ಕನ್ನಡ ಭವನದ “ರಜತ ಸಂಭ್ರಮ “ಪ್ರಯುಕ್ತ ನಡೆಯುವ “ನಾಡು -ನುಡಿ ಸಂಭ್ರಮ “ಕಾರ್ಯಕ್ರಮದಲ್ಲಿ ಮಂಗಳೂರಿನ ಡಾ. ಕೆ. ವಿ. ದೇವಪ್ಪ ರೀಗೆ ಕನ್ನಡ ಭವನದ ಪ್ರತಿಷ್ಠಿತ ಪ್ರಶಸ್ತಿಯಾದ ಶ್ರೀ ಶ್ರೀ ಭಿಕ್ಷು ಡಾ. ಲಕ್ಷ್ಮಣಾನಂದ ಸ್ವಾಮೀಜಿ “ಸದ್ಭಾವನಾ ರಾಷ್ಟ್ರೀಯ ಪ್ರಶಸ್ತಿ 2026.ನೀಡಿ ಗೌರವಿಸಲಾಗುವುದೆಂದು ಕನ್ನಡ ಭವನ ಸಮೂಹ ಸಂಸ್ಥೆಗಳ ರೂವಾರಿ ಡಾ ವಾಮನ್ ರಾವ್ ಬೇಕಲ್ ಹಾಗೂ ಕಾರ್ಯದರ್ಶಿ ವಸಂತ್ ಕೆರೆಮನೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

ಕುಂದಾಪುರ: ಭೀಕರ ಬೆಂಕಿ ದುರಂತ ಪ್ರಕರಣ: ಸ್ಥಳಕ್ಕೆ ಭೇಟಿ ನೀಡಿದ ಶಾಸಕ ಮಂಜುನಾಥ ಭಂಡಾರಿ

ಕುಂದಾಪುರ: ಇಲ್ಲಿನ ಪೇಟೆಯ ಹೃದಯಭಾಗವಾದ ರಥಬೀದಿಯಲ್ಲಿ ಇಂದು ಮುಂಜಾನೆ ಭೀಕರ ಅಗ್ನಿ ಅವಘಡ ಸಂಭವಿಸಿ ವೆಂಕಟರಮಣ ದೇವಸ್ಥಾನದ ಎದುರಿನ ಕಟ್ಟಡದಲ್ಲಿದ್ದ ಹಲವು ವ್ಯಾಪಾರ ಮಳಿಗೆಗಳು ಸಂಪೂರ್ಣವಾಗಿ ಬೆಂಕಿಗೆ ಆಹುತಿಯಾಗಿವೆ. ಈ ದುರಂತದಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳು ಸುಟ್ಟು ಭಸ್ಮವಾಗಿದ್ದು, ಸಣ್ಣ ಹಾಗೂ ಮಧ್ಯಮ ವರ್ಗದ ವ್ಯಾಪಾರಿಗಳಿಗೆ ತುಂಬಲಾರದ ನಷ್ಟ ಉಂಟಾಗಿದೆ. ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ಧಾವಿಸಿದ ವಿಧಾನ ಪರಿಷತ್ ಶಾಸಕ ಮಂಜುನಾಥ ಭಂಡಾರಿ ಅವರು ಅಂಗಡಿ ವರ್ತಕರಲ್ಲಿ ಧೈರ್ಯ ತುಂಬಿದ ಅವರು ದುರಂತದಿಂದ ಸಂಭವಿಸಿದ…

Read More

ಸಂತ್ರಸ್ತೆ ಪೂಜಾ ಆಚಾರ್ಯರ ಪರವಾಗಿ ಬಿಜೆಪಿ ಪಕ್ಷ ನಿಲ್ಲುತ್ತದೆ : ದ. ಕ ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ

ಮಂಗಳೂರು: ಸಂತ್ರಸ್ತೆ ಪೂಜಾ ಆಚಾರ್ಯ ಪ್ರಕರಣ ಆಗುವ ಮೊದಲು ಜಗನ್ನಿವಾಸ್ ರಾವ್ ಪುತ್ತೂರು ನಗರಸಭಾ ಸದಸ್ಯರಾಗಿ ಕಾರ್ಯ ಚಟುವಟಿಯನ್ನು ನಡೆಸುತ್ತಿದ್ದರು . ಅವರನ್ನು ಈ ಪ್ರಕರಣ ನಡೆದ ಬಳಿಕ ಆ ಸ್ಥಾನದಿಂದ ಉಚ್ಚಾಟನೆಯನ್ನು ಮಾಡಲಾಗಿದೆ ಎಂದು ದ. ಕ ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ತಿಳಿಸಿದ್ದಾರೆ . ಮಾಧ್ಯಮ ಮಿತ್ರರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಸಿದ ಅವರು , ಇದೀಗ ಅವರನ್ನು 100 ಶತಮಾನ ಪಕ್ಷದ ಚಟುವಟಿಗೆಗೆ ತೊಡಗಿಸಿಕೊಳ್ಳಲಿಲ್ಲ . , ಸಂತ್ರಸ್ತೆ ಪೂಜಾ ಆಚಾರ್ಯ ಜೊತೆ ಕೃಷ್ಣ…

Read More

ಮಗು ಹುಟ್ಟಿ ೬ ತಿಂಗಳು ಆದರೂ ಸಂತ್ರಸ್ತೆ ಪೂಜಾ ಆಚಾರ್ಯ ಮಗುವಿಗೆ ನಾಮಕರಣ ಆಗಿಲ್ಲ:ಮಾಜಿ ವಿಧಾನ ಪರಿಷತ್ ಸದಸ್ಯ ಹಾಗೂ ಅಖಿಲ ಕರ್ನಾಟಕ ವಿಶ್ವ ಕರ್ಮ ಮಹಾಸಭಾ ರಾಜ್ಯಾಧ್ಯಕ್ಷ ಕೆ ಪಿ ನಂಜುಂಡಿ

ಮಂಗಳೂರು: ಸಂತ್ರಸ್ತೆ ಪೂಜಾ ಆಚಾರ್ಯ ಮಗು ಕೃಷ್ಣ ಜೆ.ರಾವ್ ಅವರ ಮಗು ಎಂಬುದಾಗಿ ಡಿ ಎನ್ ಎ ರಿಪೋರ್ಟ್ ನಲ್ಲಿ ಸಾಬಿತ್ತಾದರು ಕೂಡ ಆರೋಪಿ ಕೃಷ್ಣ ನನ್ನ ಮಗು ಅಲ್ಲವೇ ಅಲ್ಲ ಎಂದು ಹೇಳುತ್ತಾನೆ. ಒಂದು ಬಡ ವರ್ಗದ ಮೇಲೆ ಅಧಿಕಾರಿ ವರ್ಗದವರ ಈ ರೀತಿಯ ನಡವಳಿಕೆ ಸರಿಯಲ್ಲಮಗು ಹುಟ್ಟಿ ೬ ತಿಂಗಳು ಆದರೂ ಸಂತ್ರಸ್ತೆಯ ಮಗುವಿಗೆ ಇನ್ನೂ ನಾಮಕರಣವೇ ಆಗಿಲ್ಲ ಇದರಿಂದ ಮಗುವಿನ ಭವಿಷ್ಯಕ್ಕೆ ಕುತ್ತು ಎಂದು ಮಾಜಿ ವಿಧಾನ ಪರಿಷತ್ ಸದಸ್ಯ ಹಾಗೂ ಅಖಿಲ…

Read More
error: Content is protected !!