ಮಿಯಾಪದವು ವ್ಯಾಪಾರಿ ಮೇಲಿನ ಗುಂಡಿನ ದಾಳಿ ಪ್ರಕರಣ ಮತ್ತೋರ್ವ ಆರೋಪಿ ಬಂಧನ

​ಮಂಜೇಶ್ವರ: ಮಿಯಾಪದವು ಬಟ್ಟಿಪ್ಪದವಿನಲ್ಲಿ ವ್ಯಾಪಾರಿಯೊಬ್ಬರ ಅಂಗಡಿಗೆ ನುಗ್ಗಿ ಗುಂಡು ಹಾರಿಸಿ ಕೊಲೆಗೆ ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಬ್ಬ ಆರೋಪಿಯನ್ನು ಮಂಜೇಶ್ವರ ಪೊಲೀಸರು ಬಂಧಿಸಿದ್ದಾರೆ.ಬಂಧಿತನನ್ನು ಮಿಯಾಪದವು ನಿವಾಸಿ ರಹೀಮ್ ಎಂದು ಗುರುತಿಸಲಾಗಿದೆ. ಈತನ ವಿರುದ್ಧ ಕೇರಳ ಮತ್ತು ಕರ್ನಾಟಕದಲ್ಲಿ ಸುಮಾರು 16 ಕ್ರಿಮಿನಲ್ ಪ್ರಕರಣಗಳಿವೆ.

​ಆಗಸ್ಟ್ ಎರಡನೇ ವಾರದಲ್ಲಿ ಈ ಘಟನೆ ನಡೆದಿತ್ತು. ಕಾರಿನಲ್ಲಿ ಬಂದ ತಂಡವು ಬಟ್ಟಿಪ್ಪದವಿನ ವ್ಯಾಪಾರಿ ಶುಹೈಬ್ ಮೊಯಿನ್ ಶೇಖ್ ಅವರಿಗೆ ಬೆದರಿಕೆಯೊಡ್ಡಿ ಗುಂಡು ಹಾರಿಸಿತ್ತು.ಪ್ರಕರಣದ ಇನ್ನೊಬ್ಬ ಆರೋಪಿ ‘ವೆಡಿ ಸಫಾನ್’ ಎಂದೇ ಪ್ರಸಿದ್ಧನಾದ ಮುಹಮ್ಮದ್ ಸಫಾನ್‌ನನ್ನು ಪೊಲೀಸರು ಈಗಾಗಲೇ ಬಂಧಿಸಿದ್ದಾರೆ.ರಹೀಮ್ ಚಲಾಯಿಸುತ್ತಿದ್ದ ಕಾರು ಅಪಘಾತಕ್ಕೀಡಾದ ನಂತರ ಆತ ಪರಾರಿಯಾಗಿದ್ದನು.

ಆತನ ಪತ್ತೆಗೆ ಜಾಲ ಬೀಸಿದ ಪೊಲೀಸರು ಕೊನೆಗೂ ಆತನನ್ನು ಬಂಧಿಸಿ, ಆತನ ಕಾರನ್ನು ವಶಕ್ಕೆ ಪಡೆದಿದ್ದಾರೆ.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ. ನಿಧಿನ್‌ರಾಜ್ ಮತ್ತು ಎಎಸ್‌ಪಿ ಅಶೋಕ್ ಅಚ್ಯುತ್ ಅವರ ಮಾರ್ಗದರ್ಶನದಲ್ಲಿ ಇನ್ಸ್‌ಪೆಕ್ಟರ್ ಎಂ.ವಿ. ವಿಷ್ಣುಪ್ರಸಾದ್ ನೇತೃತ್ವದ ತಂಡ ಈ ಕಾರ್ಯಾಚರಣೆ ನಡೆಸಿದೆ.ಇನ್ನುಳಿದ ಆರೋಪಿಗಳಿಗಾಗಿ ಪೊಲೀಸರು ಶೋಧ ತೀವ್ರಗೊಳಿಸಿದ್ದಾರೆ

SHARE
Loading spinner

Leave a Reply

Your email address will not be published. Required fields are marked *

error: Content is protected !!