ಚೆರ್ಕಳ : ಬೈಕ್ ಗಳು ಡಿಕ್ಕಿ : ಓರ್ವ ಮೃತ್ಯು

ಕಾಸರಗೋಡು: ಚೆರ್ಕಳ ಬಳಿಯ ಪೊವ್ವಲ್ ನಲ್ಲಿ ಬೈಕುಗಳು ಪರಸ್ಪರ ಡಿಕ್ಕಿ ಹೊಡೆದು ಉಂಟಾದ ಅಫಘಾತದಲ್ಲಿ ಓರ್ವ ಮೃತಪಟ್ಟಿದ್ದಾರೆ. ಪೊವ್ವಲ್ ನಿವಾಸಿ ಕಬೀರ್(42) ಮೃತಪಟ್ಟವರು. ಇಂದು (ಸೋಮವಾರ) ಬೆಳಗ್ಗೆ 7 ಗಂಟೆಗೆ ಈ ಘಟನೆ ನಡೆದಿದೆ. ಕಬೀರ್ ಅವರು ಪೊವ್ವಲ್ ಎಲ್.ಬಿ.ಎಸ್. ಇಂಜಿನಿಯರಿಂಗ್ ಕಾಲೇಜು ಬಳಿ ನೂತನ ಮನೆ ನಿರ್ಮಿಸಿದ್ದು ಅದರ ನಿನ್ನೆ (ಆದಿತ್ಯವಾರ) ಗೃಹಪ್ರವೇಶ ನಡೆದಿತ್ತು. ಇಂದು ಬೆಳಗ್ಗೆ ಅವರು ಮನೆಯಿಂದ ಬೋವಿಕಾನ ಭಾಗಕ್ಕೆ ಹೊರಟಾಗ ಅವರ ಬೈಕು ಮುಳ್ಳೇರಿಯ ಭಾಗದಿಂದ ಬರುತ್ತಿದ್ದ ಇನ್ನೊಂದು ಬೈಕಿಗೆ ಡಿಕ್ಕಿ…

Read More

ಚಿಕೂನ್ ಗುನ್ಯಕ್ಕೆ 10 ವರ್ಷದ ಬಾಲಕಿ ಬಲಿ

ಕಾಸರಗೋಡು: ಚಿಕೂನ್ ಗುನ್ಯ ರೋಗ ಬಾಧಿತಳಾದ 10 ವರ್ಷ ಪ್ರಾಯದ ಬಾಲಕಿ ಪೆರಿಯಾರಂ ಮೆಡಿಕಲ್ ಕಾಲೇಜಿನಲ್ಲಿ ಮೃತಪಟ್ಟ ಘಟನೆ ನಡೆದಿದೆ. ಪಾಣತ್ತೂರು ನಿವಾಸಿ ಗೌತಂ ಶರ್ಮ ಎಂಬವರ ಪುತ್ರಿ ಶಿವಾನಿ ಶರ್ಮ ಮೃತಪಟ್ಟ ಬಾಲಕಿ. ನಿನ್ನೆ (ಆದಿತ್ಯವಾರ) ಮುಂಜಾನೆ ಪೆರಿಯಾರಂ ಮೆಡಿಕಲ್‌ ಕಾಲೇಜಿನಲ್ಲಿ ಆಕೆ ಕೊನೆಯುಸಿರೆಳೆದಳು. ಕಳೆದ ಕೆಲವು ತಿಂಗಳುಗಳಿಂದ ಶಿವಾನಿ ಲಿವರ್ ಸಂಬಂಧ ರೋಗದಿಂದ ಬಳಲುತ್ತಿದ್ದರೆನ್ನಲಾಗಿದೆ. ರೋಗ ಉಲ್ಬಣಗೊಂಡ ಹಿನ್ನೆಲೆಯಲ್ಲಿ ಶನಿವಾರದಂದು ಕಾಞಂಗಾಡ್ ಜಿಲ್ಲಾ ಆಸ್ಪತ್ರೆಗೆ ಕೊಂಡೊಯ್ಯಲಾಯಿತು. ಆದರೆ ಬಾಲಕಿಯ ಸ್ಥಿತಿ ಚಿಂತಾಜನಕವಾದ ಹಿನ್ನೆಲೆಯಲ್ಲಿ ಪೆರಿಯಾರಂ…

Read More

272 .16 ಲೀಟರ್ ವಿದೇಶಿ ಮದ್ಯ ವಶ ಪಡಿಸಿದ ಅಬಕಾರಿ ಇಲಾಖೆ ಪರಾರಿಯಾದ ಆರೋಪಿಗಳು

ಕಾಸರಗೋಡು: ಕಾರಿನಲ್ಲಿ ಸಾಗಿಸುತ್ತಿದ್ದ 272.16 ಲೀಟರ್ ಕರ್ನಾಟಕ ನಿರ್ಮಿತ ವಿದೇಶ ಮದ್ಯವನ್ನು ಕಾಸರಗೋಡು ಚೌಕಿ, ಸಿಪಿ.ಸಿ.ಆ‌ರ್.ಐ. ಪರಿಸರದಿಂದ ಅಬಕಾರಿ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಎಕ್ಸೆಸ್ ಎನ್ಫೋರ್ಸ್ ಮೆಂಟ್ & ಆಂಟಿ ನರ್ಕೋಟಿಕ್ ಸ್ಪೆಶಲ್ ತಂಡ ಹಾಗೂ ಎಕ್ಸೆಸ್ ಸರ್ಕಲ್ ಆಫೀಸ್ ತಂಡದ ನೇತೃತ್ವದಲ್ಲಿ ಕುಂಬಳೆ ಆರಿಕ್ಕಾಡಿ ಬಳಿ ವಾಹನ ತಪಾಸಣೆ ನಡೆಸುವ ವೇಳೆ ಕಾರೊಂದು ನಿಲ್ಲಿಸದೆ ಪರಾರಿಯಾಗಿತ್ತು. ಈ ಕಾರನ್ನು ಬೆನ್ನಟ್ಟಿ ಚೌಕಿ ಪರಿಸರದಿಂದ ಹಿಡಿದಾಗ ಕರ್ಣಾಟಕ ನಿರ್ಮಿತ ವಿದೇಶ ಮದ್ಯ ವಶಪಡಿಸಲಾಗಿದೆ. ಕಾರಿನಲ್ಲಿದ್ದವರು ಓಡಿ ಪರಾರಿಯಾದರು. ಅಸಿಸ್ಟೆಂಟ್…

Read More

ಸಾರ್ವಜನಿಕ ಶಿಕ್ಷಣವನ್ನು ಅಧ:ಪತನಗೊಳಿಸಿದ ಎಡರಂಗ ಸರಕಾರದ ವಿರುದ್ಧ ದೇಶೀಯ ಅಧ್ಯಾಪಕ ಪರಿಷತ್ ಕಾಸರಗೋಡು ಡಿಡಿಇ ಕಚೇರಿ ಮುಂದೆ ಮಾರ್ಚ್ ಮತ್ತು ಧರಣಿ

ಸಾರ್ವಜನಿಕ ಶಿಕ್ಷಣವನ್ನು ಅಧ:ಪತನಗೊಳಿಸಿದ ಎಡರಂಗ ಸರಕಾರದ ವಿರುದ್ಧ ದೇಶೀಯ ಅಧ್ಯಾಪಕ ಪರಿಷತ್ ಕಾಸರಗೋಡು ಡಿಡಿಇ ಕಚೇರಿ ಮುಂದೆ ಮಾರ್ಚ್ ಮತ್ತು ಧರಣಿಯನ್ನು ಶನಿವಾರ ನಡೆಸಿತು.ಧರಣಿಯನ್ನು ದೇಶೀಯ ಅಧ್ಯಾಪಕ ಪರಿಷತ್ ನ ರಾಜ್ಯ ಸಮಿತಿ ಉಪಾಧ್ಯಕ್ಷ ಕೆ.ಕೆ ರಾಜೇಶ್ ಉದ್ಘಾಟಿಸಿ ಸರಕಾರ ಅಧ್ಯಾಪಕ ವರ್ಗವನ್ನು ಕಡೆಗಣಿಸುತ್ತಿದೆ. ನ್ಯಾಯವಾಗಿ ಸಿಗಬೇಕಾದ ಸವಲತ್ತುಗಳನ್ನು ಕೊಡದೆ ಶೋಷಣೆ ಮಾಡುತ್ತಿದೆ. ಅಧ್ಯಾಪಕರ ಬದುಕಿಗೆ ಭದ್ರತೆಯೇ ಇಲ್ಲದಾಗಿದೆ. ಸಾರ್ವಜನಿಕ ಶಿಕ್ಷಣ ರಂಗವನ್ನು ಅಧಃಪತನಗೊಳಿಸಿದ ಎಡರಂಗ ಸರಕಾರದ ಕಾರ್ಯವೈಖರಿಯ ವಿರುದ್ಧ ಹೋರಾಡುವ ಸಂದರ್ಭ ಒದಗಿ ಬಂದಿದೆ ಎಂದರು.ಸಾರ್ವಜನಿಕ…

Read More

ಕುಲವನ್ ಐತಿಹ್ಯ

ಉತ್ತರ ಕೇರಳ ಭಾಗವು ಕಲೆ, ಸಂಸ್ಕೃತಿ, ಧಾರ್ಮಿಕ ಆಚಾರ ವಿಚಾರಗಳಿಗೆ ತನ್ನದೇ ಆದ ಕೊಡುಗೆಯನ್ನು ನೀಡುತ್ತಾ ಬರುವ ತಾಣವಾಗಿದೆ . ತಲತಲಾಂತರದ ಕಾಲದ ಹಿಂದಿನಿಂದಲೂ ಇಲ್ಲಿ ಆಚಾರಗಳು ಶ್ರೀಮಂತವಾಗಿತ್ತು , ಸಂಪ್ರದಾಯಗಳು ಹಾಸುಹೊಕ್ಕಾಗಿತ್ತು , ಧಾರ್ಮಿಕತೆಯ ಸಾರವು ಅಗಾಧವಾಗಿ ಬೇರೂರಿತ್ತು . ಮಲಬಾರ್ ಭಾಗ ಎಂದ ಕೂಡಲೇ ತಟ್ಟನೆ ನೆನಪಿಗೆ ಬರುವುದು ದೈವಾರಾಧನೆ . ಕರಾವಳಿಯದಾದಂತ್ಯ ಗುಡಿ , ದೈವಸ್ಥಾನ , ಕುಲಂ , ಕಳಗಂ , ಕಾವು ಈ ರೀತಿಯ ನಾನಾ ಕಡೆಗಳಲ್ಲಿ ದೈವಗಳು ತನ್ನ…

Read More

ಕುಂಜತ್ತೂರು ಎಲ್.ಪಿ. ಶಾಲೆಯ ಸಮೀಪದಲ್ಲಿ ಹೈವೋಲ್ಟೇಜ್ ವಿದ್ಯುತ್ ಟ್ರಾನ್ಸ್‌ಫಾರ್ಮರ್ ಸ್ಥಾಪನೆ . ಸ್ಥಳೀಯರಲ್ಲಿ ಹೆಚ್ಚಿದ ಆತಂಕ

ಮಂಜೇಶ್ವರ: ಕೇರಳ-ಕರ್ನಾಟಕ ಗಡಿ ಪ್ರದೇಶದ ಕುಂಜತ್ತೂರು ಸರ್ಕಾರಿ ಎಲ್.ಪಿ. ಶಾಲೆಯ ಪ್ರವೇಶ ದ್ವಾರದ ಸಮೀಪದಲ್ಲಿ ಸ್ಥಾಪಿಸಲಾದ ಹೈವೋಲ್ಟೇಜ್ ವಿದ್ಯುತ್ ಟ್ರಾನ್ಸ್‌ಫಾರ್ಮರ್ ಸ್ಥಳೀಯರಲ್ಲಿ ಆತಂಕ ಸೃಷ್ಟಿಸಿದೆ. ಶಾಲೆಗೆ ಆಗಮಿಸುವ ನೂರಾರು ಮಕ್ಕಳ ಪ್ರಾಣಭದ್ರತೆಗೆ ಇದು ಅಪಾಯಕಾರಿಯಾಗಿರುವುದಾಗಿ ಪೋಷಕರು ಹಾಗೂ ಊರವರು ತಮ್ಮ ಕಳವಳವನ್ನು ವ್ಯಕ್ತಪಡಿಸಿದ್ದಾರೆ ಶಾಲೆಯ ಕಟ್ಟಡಕ್ಕೆ ಸಮೀಪದಲ್ಲಿಯೇ ಈ ಟ್ರಾನ್ಸ್‌ಫಾರ್ಮರ್ ಸ್ಥಾಪನೆಯಾಗಿದ್ದು, ಯಾವುದೇ ಸಮಯದಲ್ಲಾದರೂ ವಿದ್ಯುತ್ ದುರಂತವು ದೈಹಿಕ ಹಾನಿಗೆ ಕಾರಣವಾಗಬಹುದೆಂಬ ಭೀತಿ ಎದುರಾಗಿದೆ. ಶಾಲಾ ಸಮಯದಲ್ಲಿ ಮಕ್ಕಳು ಆಟವಾಡುವಾಗ ಅಥವಾ ಗುಂಪುಗಳಾಗಿ ಸಂಚರಿಸುವಾಗ ಇದೀಗ ಸ್ಥಾಪನೆಯಾಗಿರುವ…

Read More

ಮಂಜೇಶ್ವರ ಪಂಚಾಯತ್ ಅಧ್ಯಕ್ಷೆಯ ಜನವಿರೋಧಿ ನೀತಿ ವಿರುದ್ಧ ಮುಸ್ಲಿಂ ಲೀಗ್ ಧರಣಿ

ಮಂಜೇಶ್ವರ : ಮಂಜೇಶ್ವರ ಪಂಚಾಯತ್ ಬೋರ್ಡ್ ಅಧ್ಯಕ್ಷೆ ಯ ಜನವಿರೋಧಿ ನೀತಿ ವಿರುದ್ಧ ಮಂಜೇಶ್ವರ ಪಂಚಾಯತ್ ಮುಸ್ಲಿಂ ಲೀಗ್ ಸಮಿತಿಯ ನೇತೃತ್ವದಲ್ಲಿ ಪಂಚಾಯತ್ ಕಚೇರಿ ಮುಂಭಾಗದಲ್ಲಿ ಪ್ರತಿಭಟನಾ ಧರಣಿ ಹಮ್ಮಿಕೊಳ್ಳಲಾಯಿತು. ಆಸ್ತಿಗಾರಿಕೆ (ಕಟ್ಟಡ ತೆರಿಗೆ) ಹೆಸರಿನಲ್ಲಿ ತೆಗೆದುಕೊಂಡಿರುವ RR ಕ್ರಮವನ್ನು ಹಿಂತೆಗೆದುಕೊಳ್ಳಬೇಕು, ರಸ್ತೆಗಳ ಇಕ್ಕೆಡೆಗಳಲ್ಲಿ ಗುಬ್ಬೆದ್ದು ನಾರುತ್ತಿರುವ ತ್ಯಾಜ್ಯಗಳನ್ನು ಕೂಡಲೇ ತೆರವುಗೊಳಿಸಬೇಕು, ಬೀದಿ ನಾಯಿಗಳ ಅಟ್ಟಹಾಸಕ್ಕೆ ಪರಿಹಾರ ಕಂಡುಹಿಡಿಯಬೇಕು, ಕಲ್ಯಾಣ ಪಿಂಚಣಿ ಅರ್ಜಿಗಳನ್ನು ವಿಳಂಬವಿಲ್ಲದೆ ಪರಿಶೀಲಿಸಿ ತೀರ್ಮಾನಿಸಬೇಕು, ಪಂಚಾಯತ್ ಅಧ್ಯಕ್ಷರ ಸಾರ್ವಜನಿಕರೊಡನೆ ಇರುವ ವರ್ತನೆ ಸುಧಾರಿಸಬೇಕು ಎಂಬೀ…

Read More

ಕುಂಬಳೆ ಗ್ರಾಮ ಪಂಚಾಯತ್ ಆಡಳಿತ ಪಕ್ಷದ ವಿರುದ್ಧ ಅವಿಶ್ವಾಸ ಗೊತ್ತುವಳಿ ಮೇ 26 ರಂದು ಮತಕ್ಕೆ

ಕುಂಬಳೆ ಭ್ರಷ್ಟಾಚಾರ ಹಗರಣದ ಆರೋಪವನ್ನು ಎದುರಿಸುತ್ತಿರುವ ಕುಂಬಳೆ ಗ್ರಾಮ ಪಂಚಾಯತ್ ನ ಮುಸ್ಲಿಂ ಲೀಗ್ ಆಡಳಿತ ಸಮಿತಿಯನ್ನು ಪ್ರಶ್ನಿಸಿ ವಿರೋಧ ಪಕ್ಷ ಬಿಜೆಪಿ ನೀಡಿದ ಅವಿಶ್ವಾಸ ಗೊತ್ತುವಳಿ ಮೇ 26 ರಂದು ನಿರ್ಧಾರವಾಗಲಿದೆ.ಚುನಾವಣಾಧಿಕಾರಿಯಾದ ಬ್ಲಾಕ್ ಪಂಚಾಯತ್ ಕಾರ್ಯದರ್ಶಿ ಜೋನ್ ಎ ಡಿಕ್ರೂಸ್ ರವರಿಗೆ ಬಿಜೆಪಿ ಇತ್ತೀಚಿಗೆ ಅವಿಶ್ವಾಸ ಗೊತ್ತುವಳಿಯ ನೋಟೀಸು ನೀಡಿತ್ತು.ಕುಂಬಳೆ ಪಂಚಾಯತ್ ನಲ್ಲಿ ಕಳೆದ ನಾಲ್ಕು ವರೆ ವರ್ಷಗಳಿಂದ ನಡೆದ ಭ್ರಷ್ಟಾಚಾರದ ತನಿಖೆ ಯಾಗಬೇಕು .ಸರಕಾರಿ ಆಡಳಿತ ಯಂತ್ರ ದುರುಪಯೋಗ ,ಸರಕಾರಿ ಸೊತ್ತು ಕಬಳಿಸಿದವರಿಗೆ ಕಾನೂನಾತ್ಮಕ…

Read More

ಮಂಗಳೂರಿನ ರಥಬೀದಿಯ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ 25 ಲಕ್ಷ ರೂ ವೆಚ್ಚದ ವಿವೇಕ ಕೊಠಡಿಯ ಗುದ್ದಲಿ ಪೂಜೆ ಹಾಗೂ ನೂತನ ವಿವೇಕ ಕೊಠಡಿಯ ಉದ್ಘಾಟನೆ:

ಮಂಗಳೂರಿನ ರಥಬೀದಿಯ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ 25 ಲಕ್ಷ ರೂ ವೆಚ್ಚದ ವಿವೇಕ ಕೊಠಡಿಯ ಗುದ್ದಲಿ ಪೂಜೆ ಹಾಗೂ ನೂತನ ವಿವೇಕ ಕೊಠಡಿಯ ಉದ್ಘಾಟನೆಯನ್ನು ಶಾಸಕ ವೇದವ್ಯಾಸ ಕಾಮತ್ ರವರು ನೆರವೇರಿಸಿದರು. ನಂತರ ಮಾತನಾಡಿದ ಶಾಸಕರು, 2022-23ನೇ ಸಾಲಿನ ವಿವೇಕ ಯೋಜನೆಯ ಕೊಠಡಿಗಳು ಇದಾಗಿದೆ. ಈ ಕಾಲೇಜಿನ ವಿಜ್ಞಾನ ಪ್ರಯೋಗ ಶಾಲೆಯ ಉನ್ನತೀಕರಣಕ್ಕೆ ಬೇಡಿಕೆಯಿದ್ದು, ಎಂ.ಆರ್.ಪಿ.ಎಲ್, ಎಂ.ಸಿ.ಎಫ್ ನಂತಹ ಕಂಪನಿಗಳೊಂದಿಗೆ ಮಾತುಕತೆ ನಡೆಸಿ ಸಿಎಸ್ಆರ್ ಅನುದಾನದ ಮೂಲಕ ಬೇಡಿಕೆಯನ್ನು ಪೂರ್ಣ ಗೊಳಿಸಲು ಪ್ರಯತ್ನಿಸಲಾಗುವುದು. ಇದೇ ವೇಳೆ…

Read More

ಆಧುನಿಕತೆಯ ಭರಾಟೆಯಲ್ಲಿ ಧಾರ್ಮಿಕ ನಂಬಿಕೆಯ ಶಿಖರ ಮಣಿಯಂತೆ ಶೋಭಿಸುತ್ತಿರುವ ತುಳುನಾಡಿನ “ಕುಲೆ ಮದಿಮೆ”

ಧಾರ್ಮಿಕ ನಂಬಿಕೆಗಳು ಸನಾತನ ಧರ್ಮದ ಜೀವಾಳ. ಪ್ರಕೃತಿಯ ಚರಾಚರ ವಸ್ತುವಿನಲ್ಲೂ ದೈವ ದೇವರಿದ್ದಾರೆ ಎಂಬ ಅಚಲವಾದ ನಂಬಿಕೆ ನಮ್ಮದು .ಉದಾಹರಣೆಗೆ ಒಂದು ವೃಕ್ಷವನ್ನು ನಾವು ದೇವರು ಎಂಬ ಅಪಾರವಾದ ನಂಬಿಕೆಯಿಂದ ಪೂಜಿಸುತ್ತೇವೆ .ಅಂದರೆ ಆ ವೃಕ್ಷವನ್ನು ಕೇವಲ ಒಂದು ಮರವೆಂದು ಭಾವಿಸದೆ ಅದರಲ್ಲೂ ದೇವರಿದ್ದಾನೆ ಎಂಬ ನಂಬಿಕೆ ನಮ್ಮದು .ಅದನ್ನೇ ನಾವು ‘ಮೂಲತೋ ಬ್ರಹ್ಮರೂಪಾಯ ,ಮಧ್ಯತೋ ವಿಷ್ಣುರೂಪಾಯ ,ಅಗ್ರತೋ ಶಿವ ರೂಪಾಯ ವೃಕ್ಷ ರಾಜಾಯತೇ ನಮೋ ನಮಃ ‘ಎಂಬ ನಂಬಿಕೆ ನಮ್ಮದು . ಈ ಎಲ್ಲಾ ನಂಬಿಕೆಗಳ…

Read More
error: Content is protected !!