ಜಾಲ್ಸೂರು ಭಾಗದ ರೈತರ ವಿದ್ಯುತ್ ಸಮಸ್ಯೆಗೆ ಶಾಶ್ವತ ಪರಿಹಾರ: ನೂತನ 33/11 ಕೆವಿ ಉಪಕೇಂದ್ರ ಮಂಜೂರಾತಿಗೆ ಶಾಸಕ ಕಿಶೋರ್ ಕುಮಾರ್ ಒತ್ತಾಯ

ಬೆಂಗಳೂರು: ಸುಳ್ಯ ತಾಲೂಕಿನ ಜಾಲ್ಸೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ರೈತರು ಎದುರಿಸುತ್ತಿರುವ ವಿದ್ಯುತ್ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ, ನೂತನ 33/11 ಕೆವಿ (33/11 KV) ವಿದ್ಯುತ್ ಉಪಕೇಂದ್ರವನ್ನು ತುರ್ತಾಗಿ ಮಂಜೂರು ಮಾಡುವಂತೆ ಕೋರಿ ಪುತ್ತೂರು ಶಾಸಕರಾದ ಶ್ರೀ ಕಿಶೋರ್ ಕುಮಾರ್ ಪುತ್ತೂರು ಅವರು ಇಂದು ಇಂಧನ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗಳಾದ ಶ್ರೀ ಗೌರವ್ ಗುಪ್ತ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು. ಬೆಂಗಳೂರಿನ ವಿಕಾಸ ಸೌಧದಲ್ಲಿ ಶ್ರೀ ಗೌರವ್ ಗುಪ್ತ ಅವರನ್ನು ಭೇಟಿಯಾದ…

Read More

ಅಬ್ಬಕ್ಕ @ 500 ರಾಷ್ಟ್ರೀಯ ವಿಚಾರ ಸಂಕೀರ್ಣಕ್ಕೆ 100ರ ಸಂಭ್ರಮ

ಮಂಗಳೂರು: ಭಾರತ ಉತ್ಕೃಷ್ಟ ಕ್ಷಾತ್ರ ಪರಂಪರೆಯನ್ನು ಹೊಂದಿರುವ ಮಹಾನ್ ರಾಷ್ಟ್ರ. ಪುರುಷರು ಮಹಿಳೆಯರಾದಿಯಾಗಿ ಅನೇಕರು ಭಾರತದ ಸ್ವಾತಂತ್ರ್ಯಕ್ಕಾಗಿ ತಮ್ಮ ಪ್ರಾಣವನ್ನು ಬಲಿದಾನ ನೀಡಿದ್ದಾರೆ. ಅದೆಷ್ಟೋ ವೀರಗಾಥೆ ಇತಿಹಾಸದ ಪುಟಗಳಲ್ಲಿ ಅಳಿದು ಹೋಗಿದೆ. ಇನ್ನೊಂದಷ್ಟು ವಿಚಾರಗಳು ಬಲವಂತಕ್ಕೆ ಮಣಿದು ತೆರೆಮರೆಗೆ ಸರಿಸಲ್ಪಟ್ಟಿವೆ. ಅಂತಹ ಪರಂಪರೆಯಲ್ಲಿ ಕ್ಷಾತ್ರ ತೇಜದಲ್ಲಿ ಹೊಳೆಯಬೇಕಾಗಿದ್ದ ಮಹಿಳೆಯರದ್ದೂ ಸೇರಿಕೊಂಡಿದೆ ಅನ್ನುವುದು ದುರಂತ. ಹೆಣ್ಣನ್ನು ಅಬಲೆ, ಶೋಷಿತೆ ಎಂದು ನಮ್ಮ ಇತಿಹಾಸ ಪುಸ್ತಕಗಳು ಬಿಂಬಿಸಿದ್ದೇ ಹೆಚ್ಚು. ಆದರೆ ನಿಜವಾದ ಭಾರತದ ಇತಿಹಾಸವನ್ನು ಗಮನಿಸಿದರೆ ಅಲ್ಲಿ ಅಪ್ರತಿಮ ಧೈರ್ಯ,…

Read More

ಪಲ್ಗುಣಿ ನದಿ ಮಾಲಿನ್ಯ ತೀವ್ರ – ಕೈಗಾರಿಕೆಗಳ ವಿರುದ್ಧ ಆಕ್ರೋಶ

ಮಂಗಳೂರು:ಕೂಳೂರು ಬಳಿಯ ರಾಯಿಕಟ್ಟೆ ಪ್ರದೇಶದಲ್ಲಿ ಹರಿಯುವ ಪಲ್ಗುಣಿ ನದಿಗೆ ಸೇರುವ ಹಳ್ಳದಲ್ಲಿ ನೀರು ಕೊಳೆತು ನಾರುತ್ತಿದೆ. ಮೀನುಗಳು ಸತ್ತಿವೆ.ಕಳೆದ ಒಂದು ವಾರದಿಂದ ಈ ಸ್ಥಿತಿ ಇದ್ದರೂ ಜಿಲ್ಲಾಡಳಿತ ಯಾವುದೇ ಕ್ರಮಗಳನ್ನು ಕೈಗೊಂಡಿಲ್ಲ ಎಂದು ಆರೋಪಿಸಲಾಗಿದೆ. ಈ ಭಾಗದ ಕೈಗಾರಿಕೆಗಳು ಹಲವು ವರ್ಷಗಳಿಂದ ತಮ್ಮ ಕೈಗಾರಿಕಾ ಮಾಲಿನ್ಯವನ್ನು ಆನಧಿಕೃತವಾಗಿ ಪಲ್ಗುಣಿಯನ್ನು ಸೇರುವ ಹಲವು ಹಳ್ಳಗಳಿಗೆ ನೇರವಾಗಿ ಹರಿಸುತ್ತಿವೆ. ಈ ಕುರಿತು ಪ್ರತಿಭಟನೆಗಳನ್ಜು ನಡೆಸಿದರೂ ಸೂಕ್ತವಾದ ಕ್ರಮಗಳು ಜರುಗುತ್ತಿಲ್ಲ. ಈಗ ಪರಿಸ್ಥಿತಿ ಅತಿರೇಕಕ್ಕೆ ತಲುಪಿದೆ ಎಂದು ಮುನೀರ್ ಕಾಟಿಪಳ್ಳ ಹೇಳಿದ್ದಾರೆ.

Read More

ಮಂಗಳೂರು-ಬೆಂಗಳೂರು ಪ್ರಯಾಣಿಕರಿಗೆ ಆತಂಕ – ಜನಪ್ರಿಯ ರೈಲು ಸಮಯ ಬದಲಾವಣೆಯ ಚರ್ಚೆ

ಮಂಗಳೂರು : ಅದ್ಯಾಕೋ ಏನೋ ರೈಲ್ವೇಗೆ ಮಂಗಳೂರಿಗರೆಂದರೆ ಭಾರಿ ಸದರ, ಏನು ಮಾಡಿದರೂ ಮಾತನಾಡುವುದಿಲ್ಲ ಎಂಬ ನಂಬಿಕೆ. ಆದ್ದರಿಂದ ಅದು ಇರುವ ಸೌಲಭ್ಯಗಳನ್ನು ಮೊಟಕು ಮಾಡಲು ಹೊರಟಿದೆ. ಆ ಕುರಿತ ಒಂದು ಸ್ಟೋರಿ ಇದು.ಮಂಗಳೂರು ರೈಲು ನಿಲ್ದಾಣ ಅತ್ಯಂತ ಹಳೆಯ ನಿಲ್ದಾಣಗಳಲ್ಲಿ ಒಂದು. ಮಂಗಳೂರಿನ ಹಂಚು ಸಾಗಾಟಕ್ಕಾಗಿ ಇಲ್ಲಿಗೆ ರೈಲು ಮಾರ್ಗ ಬಂತು. ಹಂಚಿನ ಕಾಲ ಮುಗಿಯಿತು. ರೈಲು ಪ್ರಯಾಣ ಮರುರೂಪಿಸಲ್ಪಟ್ಟ ಕಾಲಘಟ್ಟ ಇದು.ಆದರೆ ಮಂಗಳೂರಿನ ಮಟ್ಟಿಗೆ ನೆಮ್ಮದಿಯ ರೈಲು ಪ್ರಯಾಣ ಎಂದರೆ ಅದೊಂದು ಕನಸು ಎಂಬಂತಾಗುತ್ತಿದೆ….

Read More

ಲೇಖಕ, ಶಿಕ್ಷಕ, ಸಂಘಟಕ ಶಿವಾನಂದ ಪಸರಣ್ಣನವರ ಕೊತಬಾಳ ಗದಗ ರೀಗೆ ಕನ್ನಡ ಭವನದ ಪ್ರತಿಷ್ಠಿತ ಅಂತರ್ ರಾಜ್ಯ ಪ್ರಶಸ್ತಿಯಾದ “ಕನ್ನಡ ಪಯಸ್ವಿನಿ ಅಚೀವ್ಮೆಂಟ್ ಅವಾರ್ಡ್ 2026.ge ಆಯ್ಕೆ

ಕಾಸರಗೋಡು : ಡಾ. ವಾಮನ್ ರಾವ್ ಬೇಕಲ್ ಸ್ಥಾಪಕ ಅಧ್ಯಕ್ಷರಾಗಿರುವ “ಸೀತಮ್ಮ ಪುರುಷನಾಯಕ ಸ್ಮಾರಕ ಕನ್ನಡ ಭವನ ಮತ್ತು ಗ್ರಂಥಾಲಯ (ರಿ. 223/2008)ಇದರ ಅಂಗ ಸಂಸ್ಥೆಯಾದ ಕೇರಳ ರಾಜ್ಯ -ಕನ್ನಡ ಚುಟುಕು ಸಾಹಿತ್ಯ ಪರಿಷತ್ತಿನ ವರ್ಷಾಚರಣೆ ಅಂಗವಾಗಿ ಕಾಸರಗೋಡು ನುಳ್ಳಿಪ್ಪಾಡಿಯ ಕನ್ನಡ ಭವನ ಬಯಲು ರಂಗ ಮಂಟಪದ “ಚುಟುಕು ಯುಗಾಚಾರ್ಯ ಎಂ. ಜಿ. ಆರ್ ಅರಸ್ “ವೇದಿಕೆಯಲ್ಲಿ 22.02.2026.ರಂದು, ನಾಡೋಜ ಡಾ. ನೇತ್ರಾಲಯ ಕೃಷ್ಣ ಪ್ರಸಾದ್ ಸರ್ವಾಧ್ಯಕ್ಷತೆಯಲ್ಲಿ ನಡೆಯಲಿರುವ ಕಾಸರಗೋಡು -ಕರ್ನಾಟಕ ಚುಟುಕು ಸಾಹಿತ್ಯ ಸಮ್ಮೇಳನದಲ್ಲಿ, ಕನ್ನಡ…

Read More

ಅಪ್ರಾಪ್ತೆಯ ಅಪಹರಣ ಸುಳ್ಳು: ಕಟ್ಟುಕಥೆ ಹೇಳಿ ಸಿಕ್ಕಿಬಿದ್ದ ವಿದ್ಯಾರ್ಥಿನಿ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯಲ್ಲಿ ನಿನ್ನೆ ನಡೆದಿದೆ ಎನ್ನಲಾದ ಶಾಲಾ ಬಾಲಕಿಯ ಅಪಹರಣ ಸುಳ್ಳು ಎಂದು ಪೊಲೀಸ್ ತನಿಖೆ ವೇಳೆ ಬಯಲಾಗಿದೆ.ಈ ಕುರಿತು ಮಂಗಳವಾರ ಪ್ರಕಟಣೆಯಲ್ಲಿ ಮಾಹಿತಿ ನೀಡಿರುವ ಪೊಲೀಸ್ ಇಲಾಖೆ, ಬೆಳ್ತಂಗಡಿ ಠಾಣಾ ವ್ಯಾಪ್ತಿಯಲ್ಲಿ ಶಾಲಾ ವಿದ್ಯಾರ್ಥಿನಿಯ ಅಪಹರಣ, ಚೂರಿ ಇರಿತ ಪ್ರಕರಣಕ್ಕೆ ಸಂಬಂಧಿಸಿದಂತೆ CCTV ದೃಶ್ಯಗಳನ್ನು ಪರಿಶೀಲಿಸಿದ ಬಳಿಕ, ದೂರಿನಲ್ಲಿ ಉಲ್ಲೇಖಿಸಿದಂತೆ ಯಾವುದೇ ವಾಹನ ಕಂಡುಬಂದಿಲ್ಲ. ವೈದ್ಯಕೀಯ ಪರೀಕ್ಷೆಯಲ್ಲಿ ಪ್ರಥಮವಾಗಿ ಇದು ಸ್ವಯಂ ಉಂಟುಮಾಡಿಕೊಂಡ ಗಾಯ (Self inflicted wound) ಎಂದು ತಿಳಿಸಲಾಗಿದೆ….

Read More

ಉಡುಪಿಯಲ್ಲಿ ಆರೋಗ್ಯ ಹಕ್ಕಿನ‌ ಜಾಥಾ- ಮಣಿಪಾಲದ ಟೈಗರ್ ಸರ್ಕಲ್‌ನಿಂದ ಡಿ.ಸಿ. ಕಚೇರಿಯವರೆಗೆ ಪಾದಯಾತ್ರೆ

ಉಡುಪಿ: ಉಡುಪಿಯ ಹಲವಾರು ಪ್ರಗತಿಪರ ಸಂಘಟನೆಗಳ ಸಹಭಾಗಿತ್ವದಲ್ಲಿ ಆರೋಗ್ಯ ಹಕ್ಕಿನ‌ಜಾಥಾ ನಡೆಯಿತು. ಫೆಬ್ರವರಿ 2 ರಿಂದ 17 ರವರೆಗೆ ಕರ್ನಾಟಕದಾದ್ಯಂತ ಎಲ್ಲಾ 31 ಜಿಲ್ಲೆಗಳಲ್ಲಿ ಈ ಜಾಥಾ ಹಮ್ಮಿಕೊಳ್ಳಲಾಗಿದೆ. ಮಣಿಪಾಲದ ಟೈಗರ್ ಸರ್ಕಲ್‌ನಿಂದ ಡಿ.ಸಿ. ಕಚೇರಿಯವರೆಗೆ ಪಾದಯಾತ್ರೆ ನಡೆಸಲಾಯಿತು. ಬಳಿಕ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಮನವಿ ನೀಡಲಾಯಿತು. ಎಡಿಸಿ ಅಬೀದ್ ಗದ್ಯಾಳ ಮನವಿ ಸ್ವೀಕರಿಸಿದರು.ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತ ಹಾಗೂ ಗುಣಮಟ್ಟದ ಔಷಧಿಗಳು ಲಭ್ಯವಿರಬೇಕು ಎನ್ನುವುದು ಪ್ರಮುಖ ಬೇಡಿಕೆಯಾಗಿತ್ತು. ಉಳಿದಂತೆ ಕರ್ನಾಟಕದಲ್ಲಿ ಆರೋಗ್ಯ ಹಕ್ಕಿನ ಕಾಯಿದೆಯನ್ನು ಜಾರಿಗೆ ತರಬೇಕು.ಕರ್ನಾಟಕದ…

Read More

ಮಂಜೇಶ್ವರ: ಬ್ಲಾಕ್ ಪಂಚಾಯತ್ ಅಭಿವೃದ್ಧಿ ವರ್ಕಿಂಗ್ ಗ್ರೂಪ್ ರಚನೆ

ಮಂಜೇಶ್ವರ : ಜನರ ಅಗತ್ಯತೆಗಳು, ಸ್ಥಳೀಯ ಅಭಿವೃದ್ಧಿ ಅವಕಾಶಗಳು ಹಾಗೂ ಭವಿಷ್ಯ ಯೋಜನೆಗಳನ್ನು ಗಮನದಲ್ಲಿಟ್ಟುಕೊಂಡು ಮಂಜೇಶ್ವರ ಬ್ಲಾಕ್ ಪಂಚಾಯತ್ ಅಧೀನದಲ್ಲಿ ಅಭಿವೃದ್ಧಿ ವರ್ಕಿಂಗ್ ಗ್ರೂಪ್ ರಚಿಸಲಾಯಿತು. ಪಂಚಾಯತ್ ಕಚೇರಿಯಲ್ಲಿ ನಡೆದ ಸಭೆಯಲ್ಲಿ ವಿವಿಧ ಕ್ಷೇತ್ರಗಳ ಪ್ರತಿನಿಧಿಗಳನ್ನು ಒಳಗೊಂಡ ಸಮಗ್ರ ವರ್ಕಿಂಗ್ ಗ್ರೂಪ್‌ಗೆ ರೂಪು ನೀಡಲಾಯಿತು. ಸಭೆಯಲ್ಲಿ ಮೂಲಸೌಕರ್ಯ ಅಭಿವೃದ್ಧಿ, ಸಾಮಾಜಿಕ ಮತ್ತು ಆರ್ಥಿಕ ಪ್ರಗತಿ, ಜನಪರ ಯೋಜನೆಗಳ ಪರಿಣಾಮಕಾರಿ ಅನುಷ್ಠಾನ ಕುರಿತು ಸುದೀರ್ಘ ಚರ್ಚೆ ನಡೆಯಿತು. ಜನರ ಸಕ್ರಿಯ ಭಾಗವಹಿಸುವಿಕೆಯಿಂದ ಯೋಜನೆಗಳನ್ನು ಜಾರಿಗೊಳಿಸುವ ಸ್ಪಷ್ಟ ರೂಪರೇಖೆ ತಯಾರಿಸುವುದು…

Read More

ಸೈಂಟ್ ಮೇರಿಸ್ ಶಾಲೆಯಲ್ಲಿ ಸಾಹಿತ್ಯ ಸಂಭ್ರಮ – ವಿದ್ಯಾರ್ಥಿಗಳ ಕವನ ವಾಚನ, ರಸಪ್ರಶ್ನೆ

ಮಂಗಳೂರು: ಕನ್ನಡ ಭವನ ದಕ್ಷಿಣ ಕನ್ನಡ ಜಿಲ್ಲಾ ಘಟಕ ದ ವತಿಯಿಂದ ವಿದ್ಯಾರ್ಥಿಗಳಿಗಾಗಿ ಏಕದಿನ ಸಾಹಿತ್ಯ ಅಭಿಯಾನ ಕನ್ನಡದ ನಡಿಗೆ ಶಾಲೆಯ ಕಡೆಗೆ, ದಿನಾಂಕ 10.02.2026 ರಂದು ಮಂಗಳವಾರ ಮಧ್ಯಾಹ್ನ 2.00 ರಿಂದ ಸೈಂಟ್ ಮೇರಿಸ್ ಹಿರಿಯ ಪ್ರಾಥಮಿಕ ಶಾಲೆ ಪಳ್ನೀರು ಮಂಗಳೂರು ಇಲ್ಲಿನ ಸಭಾಂಗಣದಲ್ಲಿ ಶಾಲಾ ವಿದ್ಯಾರ್ಥಿಗಳಿಂದ ಪ್ರಾರ್ಥನೆ ಮುಖೇನ ಕಾರ್ಯಕ್ರಮ ಆರಂಭವಾಯಿತು. ಶಿಕ್ಷಕರು, ದಕ್ಷಿಣಕನ್ನಡ ಜಿಲ್ಲಾಧ್ಯಕ್ಷರಾದ ಶ್ರೀಮತಿ ರೇಖಾ ಸುದೇಶ್ ರಾವ್ ಸ್ವಾಗತಿಸಿದರು. ಶಾಲಾ ಮುಖ್ಯೋಪಾಧ್ಯಾಯಿನಿ ಸಿಸ್ಟರ್ ಸಿಂತಿಯ ಡಿಸೋಜಾ ದೀಪ ಬೆಳಗಿಸಿ ಉದ್ಘಾಟನೆಗೈದರು….

Read More

ಮಂಜೇಶ್ವರ: ಅಪ್ರಾಪ್ತೆಯ ಮುಂದೆ ನಗ್ನತೆ ಪ್ರದರ್ಶನ – ಪೋಕ್ಸೋ ಆರೋಪಿ ಅರ್ಶಾದ್ ಬಂಧನ

ಮಂಜೇಶ್ವರ : ಅಪ್ರಾಪ್ತ ಬಾಲಕಿಯ ಮುಂದೆ ನಗ್ನತೆ ಪ್ರದರ್ಶಿಸಿದ ಆರೋಪದ ಹಿನ್ನೆಲೆಯಲ್ಲಿ ದಾಖಲಾಗಿದ್ದ ಪೋಕ್ಸೋ ಪ್ರಕರಣದ ಆರೋಪಿ ಪೊಲೀಸರ ಬಲೆಗೆ ಬಿದ್ದಿದ್ದಾನೆ.ರಾಜಪುರಂ ನಿವಾಸಿ ಅರ್ಶಾದ್ (35) ಬಂಧಿತ ಆರೋಪಿ. ಕುಂಬಳೆ ಪೊಲೀಸರ ತಂಡ ಕರ್ನಾಟಕದಿಂದ ಆರೋಪಿಯನ್ನು ವಶಕ್ಕೆ ಪಡೆದುಕೊಂಡಿದೆ. ಅರ್ಶಾದ್ ಕರ್ನಾಟಕದಿಂದ ಹಣ್ಣು–ಹಂಪಲುಗಳನ್ನು ತಂದು ಕಾಞಂಗಾಡ್ ಭಾಗದಲ್ಲಿ ಮಾರಾಟ ಮಾಡುತ್ತಿದ್ದನು. ಕಳೆದ ಜನವರಿ 8ರಂದು ಕುಂಬಳೆ ಠಾಣಾ ವ್ಯಾಪ್ತಿಯಲ್ಲಿ ಅಪ್ರಾಪ್ತ ಬಾಲಕಿಯ ಎದುರು ಅಶ್ಲೀಲವಾಗಿ ವರ್ತಿಸಿದ್ದಾನೆ ಎಂಬ ಆರೋಪದ ಮೇರೆಗೆ ಪ್ರಕರಣ ದಾಖಲಾಗಿತ್ತು. ಬಳಿಕ ತಲೆಮರೆಸಿಕೊಂಡಿದ್ದ ಆರೋಪಿ…

Read More
error: Content is protected !!