7 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ

7 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ಪೊಲೀಸರು ಬಂಧಿಸಿದ್ದಾರೆ. ಸುಳ್ಯ ಪೊಲೀಸ್ ಠಾಣಾ ಅಕ್ರ 115/2018 ಕಲಂ 504, 354(a) ಐಪಿಸಿ ಪ್ರಕರಣದಲ್ಲಿನ ಆರೋಪಿ ರವಿಂದ್ರ ಬಿ.ಎನ್ ಎಂಬವರು ಸುಮಾರು 7 ವರ್ಷಗಳಿಂದ ಮಾನ್ಯ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದರು. ಹೀಗಾಗಿ LPC No 04/2023 ರಂತೆ ವಾರೆಂಟ್ ಹೊರಡಿಸಿದ್ದು LPC ವಾರೆಂಟ್ ಆಸಾಮಿಯಾದ ರವೀಂದ್ರ ಎಂಬಾತ ನನ್ನು ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ವೇದಾವತಿ ನಗರ ಎಂಬಲ್ಲಿ ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಹಾಜರುಪಡಿಸಲಾಯ್ತು.

Read More

ಬೃಹತ್ ಜನಾಗ್ರಹ ಸಭೆಯಲ್ಲಿ ಅತ್ಯಧಿಕ ಸಂಖ್ಯೆಯಲ್ಲಿ ಭಾಗವಹಿಸಿ:- ಶಾಸಕ ಕಾಮತ್

ಕಾನೂನಿನ ನೆಪದಲ್ಲಿ ತುಳುನಾಡಿನ ಸಾಂಸ್ಕೃತಿಕ ಹಾಗೂ ಹಿಂದೂ ಧಾರ್ಮಿಕ ಆಚರಣೆಗಳಿಗೆ ತಡೆಯೊಡ್ಡುತ್ತಿರುವ ರಾಜ್ಯ ಕಾಂಗ್ರೆಸ್ ಸರ್ಕಾರದ ಜನವಿರೋಧಿ ನಡೆಯನ್ನು ಖಂಡಿಸಿ, ವಿಶ್ವ ಹಿಂದೂ ಪರಿಷದ್ ಹಾಗೂ ತುಳುನಾಡ ಧಾರ್ಮಿಕ ಸಾಂಸ್ಕೃತಿಕ ವೈಭವ ಸಂರಕ್ಷಣಾ ಸಮಿತಿ ನೇತೃತ್ವದಲ್ಲಿ ನಡೆಯುವ ಬೃಹತ್ ಜನಾಗ್ರಹ ಸಭೆಗೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಶಾಸಕ ವೇದವ್ಯಾಸ ಕಾಮತ್ ರವರು ಮನವಿ ಮಾಡಿದರು. ಕಳೆದ ಕೆಲವಾರು ದಿನಗಳಿಂದ ಹಿಂದೂ ಹಬ್ಬ ಹರಿದಿನಗಳ ಸಂದರ್ಭದಲ್ಲಿ ರಾಜ್ಯ ಸರ್ಕಾರವು ಪೊಲೀಸರ ಮೂಲಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಅರ್ಧಕ್ಕೆ ನಿಲ್ಲಿಸುವುದು,…

Read More

“ಅನುಭವಿ ಮತ್ತು ವಂಶಪಾರಂಪರಿಕ ವೈದ್ಯರು’ಗಳನ್ನು “ನಕಲಿ” ವೈದ್ಯರೆಂದು ಕೆರೆದು ಕಾನೂನು ದಬ್ಬಾಳಿಕೆ ಮಾಡುತ್ತಿದೆ. -ಬಿ.ಎಸ್ ಚಂದ್ರು

ಮಂಗಳೂರು: ದೇಶದಲ್ಲಿಯೇ ಕರ್ನಾಟಕ ಸರ್ಕಾರ ಮಾತ್ರ ಕರ್ನಾಟಕ ಖಾಸಗಿ ವೈದ್ಯಕೀಯ ಅಧಿನಿಯಮ 2007 ಮತ್ತು ತಿದ್ದುಪಡಿಗಳನ್ನು ಜಾರಿಗೆ ತಂದು ರಾಜ್ಯದಲ್ಲಿ ಸರ್ಕಾರದ ಫಲಪೇಕ್ಷೆಯಿಲ್ಲದೆ, ಜನ ಸಾಮಾನ್ಯರಿಗೆ ಅತಿ ಕಡಿಮೆ ವೆಚ್ಚದಲ್ಲಿ ಸೇವೆ ನೀಡುತ್ತಿರುವ “ಅನುಭವಿ ಮತ್ತು ವಂಶಪಾರಂಪರಿಕ ವೈದ್ಯರು’ಗಳನ್ನು “ನಕಲಿ” ವೈದ್ಯರೆಂದು ಕೆರೆದು ಕಾನೂನು ಕಠಣಗೊಳಿಸಿ ಅವರ ಬದುಕಿನ ಮೇಲೆ ದಬ್ಬಾಳಿಕೆ ಮಾಡುತ್ತಿರುವ ಸರ್ಕಾರದ ಕ್ರಮವನ್ನು ಸಂಸ್ಥೆಯ ಪ್ರಧಾನ ಸಂಯೋಜಕರಾದ ಬಿ.ಎಸ್ ಚಂದ್ರು ಖಂಡಿಸಿದರು . ಅವರು ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ , ಕರ್ನಾಟಕ ರಾಜ್ಯ…

Read More

ಮಚ್ಚಂಪಾಡಿಯಲ್ಲಿ, ಹೈಟೆನ್ಷನ್ ಲೈನ್ ಅಪಾಯ; ಸ್ಥಳೀಯರು ಮತ್ತು ಪಕ್ಷಿಗಳ ಪ್ರಾಣಕ್ಕೆ ಬೆದರಿಕೆ

ಮಂಜೇಶ್ವರ: ಮಚ್ಚಂಪಾಡಿ ಪುಚ್ಚತ್ತ್ ವಯಲ್ ಜುಮಾ ಮಸೀದಿ ರಸ್ತೆ ಸಮೀಪ ಹಾದುಹೋಗುವ ಹೈಟೆನ್ಷನ್ (ಎಚ್.ಟಿ.) ವಿದ್ಯುತ್ ತಂತಿಗಳು ಸ್ಥಳೀಯರ ಸುರಕ್ಷತೆಗೆ ದೊಡ್ಡ ಅಪಾಯವಾಗಿವೆ. ಕಿರಿದಾದ ರಸ್ತೆಯ ಅಂಚಿನಲ್ಲಿರುವ ಸಾಮಾನ್ಯ ಮನೆಗಳ ವಿದ್ಯುತ್ ಲೈನ್‌ಗಳ ಮೇಲೆ ಈ ಅಪಾಯಕಾರಿ ಹೈಟೆನ್ಷನ್ ಲೈನ್ ಹಾದುಹೋಗುತ್ತಿದೆ. ಈ ಲೈನ್‌ಗಳು ತೆಂಗಿನ ಮರಗಳು, ಅಡಿಕೆ ಮರಗಳು ಮತ್ತು ಮನೆಗಳಿಗೆ ತೀರಾ ಹತ್ತಿರದಲ್ಲಿವೆ. ಬಲವಾದ ಗಾಳಿ ಮತ್ತು ಮಳೆಯ ಸಮಯದಲ್ಲಿ ತೆಂಗಿನ ಗರಿಗಳು ಲೈನ್‌ಗೆ ತಗುಲಿ ಬೆಂಕಿ ಕಿಡಿಗಳು ಹೊತ್ತಿಕೊಳ್ಳುತ್ತವೆ. ಇಂತಹ ಘಟನೆಗಳು ದೊಡ್ಡ…

Read More

ತುಳು ಸಿನಿಮಾ ‘ಪಿದಾಯಿ’ ಸೆಪ್ಟೆಂಬರ್ 12ನೇ ತಾರೀಕಿನಂದು ತೆರೆಗೆ

ಮಂಗಳೂರು: ನಮ್ಮ ಕನಸು ಬ್ಯಾನರ್ ಅಡಿಯಲ್ಲಿ ಕೆ. ಸುರೇಶ್ ಅವರ ನಿರ್ಮಾಣದ , ರಮೇಶ್ ಶೆಟ್ಟಿಗಾರ್ ಕಥೆ ಬರೆದು, ರಾಷ್ಟ್ರಪ್ರಶಸ್ತಿ ವಿಜೇತ ನಿರ್ದೇಶಕ ಸಂತೋಷ್ ಮಾಡ ನಿರ್ದೇಶನದಲ್ಲಿ ಮೂಡಿ ಬಂದ ತುಳು ಸಿನಿಮಾ ಪಿದಾಯಿ ಸೆಪ್ಟೆಂಬರ್ 12ನೇ ತಾರೀಕಿನಂದು ಕರಾವಳಿಯಾದ್ಯಂತ ಬೆಳ್ಳಿ ತೆರೆಯ ಮೇಲೆ ಬಿಡುಗಡೆಯಾಗಲಿದೆ‌ ಎಂದು ನಟಿ ರೂಪಾ ವರ್ಕಾಡಿ ತಿಳಿಸಿದರು . ಪಿದಾಯಿ ಚಿತ್ರವು ಕೊಲ್ಕತ್ತ, ಸಿಮ್ಮಾ, ಜಾರ್ಖಂಡ್‌ ಹಾಗೂ ಕ್ಯಾಲಿಫೋರ್ನಿಯಾ ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಅಧಿಕೃತ ಆಯ್ಕೆಯಾಗುವುದರ ಜೊತೆಗೆ 16ನೇ ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ…

Read More

ಮಿಥುನ್ ರೈ ಸಾರಥ್ಯದಲ್ಲಿ ನಮ್ಮ ಟಿವಿಯ ಸಹಯೋಗದಲ್ಲಿ “ಪಿಲಿನಲಿಕೆ-10” ಅಕ್ಟೋಬರ್ 1 ರಂದು

ಮಂಗಳೂರು :ಪಿಲಿನಲಿಕೆ ಪ್ರತಿಷ್ಠಾನ(ರಿ.) ಮಂಗಳೂರು ಇದರ ಅಧ್ಯಕ್ಷರಾದ ಮಿಥುನ್ ರೈ ಸಾರಥ್ಯದಲ್ಲಿ ನಮ್ಮ ಟಿವಿಯ ಸಹಯೋಗದಲ್ಲಿ “ಪಿಲಿನಲಿಕೆ-10” ಮಂಗಳೂರಿನ ಮಂಗಳಾ ಕ್ರೀಡಾಂಗಣದ ಬಳಿಯ ಕರಾವಳಿ ಉತ್ಸವ ಮೈದಾನದಲ್ಲಿ ಅಕ್ಟೋಬರ್ 1 ಬುಧವಾರ ಬೆಳಿಗ್ಗೆ 10.00 ಗಂಟೆಯಿಂದ ನಡೆಯಲಿರುವುದು ಎಂದು ಮಿಥುನ್ ರೈ ತಿಳಿಸಿದರು . ಅವರು ನಗರದ ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ , ತುಳುನಾಡಿನ ಅದ್ಭುತ ಕಲಾ ಪರಂಪರೆ ಮತ್ತು ಇಂದು ಇಡೀ ವಿಶ್ವದ ಗಮನವನ್ನು ಸೆಳೆದಿರುವ ಹುಲಿವೇಷ ಕುಣಿತದ ಮೂಲ ಸ್ವರೂಪವನ್ನು ಉಳಿಸುವ, ಅದನ್ನು…

Read More

ದೇಶೀಯ ಅಧ್ಯಾಪಕ ಪರಿಷತ್ ಮಂಜೇಶ್ವರ ಉಪಜಿಲ್ಲಾ ವತಿಯಿಂದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮ.

ದೇಶೀಯ ಅಧ್ಯಾಪಕ ಪರಿಷತ್ ಮಂಜೇಶ್ವರ ಉಪಜಿಲ್ಲಾ ಸಮಿತಿ ವತಿಯಿಂದ ಶಿಕ್ಷಕರ ದಿನಾಚರಣೆಯ ಅಂಗವಾಗಿ ಶ್ರೀ ಶಂಕರನಾರಾಯಣ ಭಟ್ ಸಾದಂಗಾಯ, ನಿವೃತ್ತ ಮುಖ್ಯಶಿಕ್ಷಕರು,ಜಿ.ಎಚ್.ಎಸ್.ಎಸ್ ಮಂಗಲ್ಪಾಡಿ ಇವರನ್ನು ಸ್ವಗೃಹದಲ್ಲಿ ಗೌರವಿಸಲಾಯಿತು. ಎನ್ ಟಿ ಯು ಮಂಜೇಶ್ವರ ಉಪಜಿಲ್ಲಾ ಸಮಿತಿ ಸದಸ್ಯರಾದ ಗಣೇಶ್ ಕುಮಾರ್ ಸನ್ಮಾನಿತರ ಬಗ್ಗೆ ಮಾತನಾಡಿದರು. ಎ ಯು ಪಿ ಎಸ್ ಆನೆಕಲ್ ಶಾಲೆಯ ನಿವೃತ್ತ ಮುಖ್ಯಶಿಕ್ಷರಾದ ಸತ್ಯನಾರಾಯಣ ಭಟ್, ಎನ್ ಟಿ ಯು ಮಂಜೇಶ್ವರ ಉಪಜಿಲ್ಲಾ ಅಧ್ಯಕ್ಷೆ ಚಂದ್ರಿಕಾ ಟೀಚರ್ ಹಾಗೂ ಸನ್ಮಾನಿತರ ಧರ್ಮಪತ್ನಿ ನಿರ್ಮಲಾ ಟೀಚರ್…

Read More

ಡಾ ಬಿ.ಆರ್ ಅಂಬೇಡ್ಕರ್ ಗ್ರಾಮ ವಿಕಸನ ಮತ್ತು ಕಲಾ ವೇದಿಕೆ ವತಿಯಿಂದ ಓಣಂ ಹಬ್ಬದ ಪ್ರಯುಕ್ತ ಪೂಕಳಂ ಸ್ಪರ್ಧೆ:

ಡಾ ಬಿ.ಆರ್ ಅಂಬೇಡ್ಕರ್ ಗ್ರಾಮ ವಿಕಸನ ಮತ್ತು ಕಲಾ ವೇದಿಕೆ ವತಿಯಿಂದ ಓಣಂ ಹಬ್ಬದ ಪ್ರಯುಕ್ತ ಪೂಕಳಂ ಸ್ಪರ್ಧೆ ಆಯೋಜಿಸಲಾಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಶಿವಾನಂದ ಎಂ.ಸಿ ಅವರು ನಿರ್ವಹಿಸಿದರು. ಸ್ಪರ್ಧೆಯಲ್ಲಿ ಲಿಂಗಪ್ಪ ಕುಬಣೂರು ,ದಯಾನಂದ ಸೋಂಕಾಲ್,ಕೃಷ್ಣ ಕೆಪಿ ಸೋಂಕಾಲ್ ತೀರ್ಪುಗಾರರಾಗಿ ಸಹಕರಿಸಿದರು. ಆ ಬಳಿಕ ಹರೀಶ್ ಎಂ.ಜಿ ,ರಾಮಚಂದ್ರ ಎಂ ,ವೇದಿಕೆ ಅಧ್ಯಕ್ಷರಾದ ಕಿಶೋರ್ ಕುಮಾರ್ ಅವರ ಉಪಸ್ಥಿತಿಯಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ವೇದಿಕೆ ಸದಸ್ಯರು, ಸ್ಥಳೀಯರು ಉಪಸ್ಥಿತರಿದ್ದು ಕಾರ್ಯಕ್ರಮವನ್ನು ಅಮಿತಾ ಸುರೇಶ್ ನಿರೂಪಿಸಿದರು.

Read More

ಯುವಶಕ್ತಿ ಫ್ರೆಂಡ್ಸ್ ಸರ್ಕಲ್ ಲೈಬ್ರೆರಿ(ರಿ) ವತಿಯಿಂದ ಓಣಂ ಹಬ್ಬ ಆಚರಣೆ

ಯುವಶಕ್ತಿ ಫ್ರೆಂಡ್ಸ್ ಸರ್ಕಲ್ ಲೈಬ್ರೆರಿ(ರಿ)K.G.D. 6412 ಇದರ ವತಿಯಿಂದ ಓಣಂ ಹಬ್ಬದ ಪ್ರಯುಕ್ತ ರಂಗೋಲಿ ಸ್ಪರ್ಧೆ ಹಾಗೂ ಔತಣ ಕೂಟ ನಡೆಯಿತು. ಈ ಕಾರ್ಯಕ್ರಮವನ್ನು p.k ಅಹ್ಮದ್ ಹುಸ್ಸೈನ್ ಕೇರಳ ಸ್ಟೇಟ್ ಲೈಬ್ರೆರಿ ಕೌನ್ಸಿಲ್ ಸದ್ಶರು ದೀಪ ಬೆಳಗಿಸಿ ಉದ್ಘಾಟಿಸಿದರು ಇದರ ಅಧ್ಯಕ್ಷತೆಯನ್ನು ಯುವಶಕ್ತಿ ಲೈಬ್ರೆರಿ ಅಧ್ಯಕ್ಷರದ ಲಕ್ಷ್ಮನ ಪೂಜಾರಿ ವಹಿಸಿದರು ಮಂಜೇಶ್ವರ ತಾಲೂಕು ಕಾರ್ಯಕಾರಿ ಸಮಿತಿ ಸದಸ್ಯೆ ವನಿತಾ ಆರ್ ಶೆಟ್ಟಿ ಮಂಗಲ್ಪಾಡಿ ಗ್ರಾಮ ಪಂಚಾಯತ್ ಸದಸ್ಯೆ ಸುಜಾತ u ಶೆಟ್ಟಿ Y F C…

Read More

ಶ್ರೀ ಸತ್ಯನಾರಾಯಣ ಭಜನಾ ಮಂದಿರ(ರಿ.) ಅಂಬೇಡ್ಕರ್ ನಗರ ವಾರ್ಷಿಕೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ.

ಶ್ರೀ ಸತ್ಯನಾರಾಯಣ ಭಜನಾ ಮಂದಿರ(ರಿ.) ಅಂಬೇಡ್ಕರ್ ನಗರ, ಉದ್ಯಾವರ ಗುತ್ತು, ಮಂಜೇಶ್ವರ.ಇದರ ವಾರ್ಷಿಕೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆಯನ್ನು ಶ್ರೀ ಉದಯ ಪೂಜಾರಿ ಅವರು ನೆರವೇರಿಸಿದರು. ವಾರ್ಷಿಕೋತ್ಸವವು ನವೆಂಬರ್ 15 ರಿಂದ 17 ರವರೆಗೆ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ. ಮಂದಿರದ ಗೌರವಾಧ್ಯಕ್ಷರಾದ ಶ್ರೀ ಐತಪ್ಪ ಜಿ, ಉಪಾಧ್ಯಕ್ಷ ಶ್ರೀ ಲಕ್ಷ್ಮಣ,ಕೋಶಾಧಿಕಾರಿ ಶ್ರೀ ರಾಮ, ಮಹಿಳಾ ಸಮಿತಿಯ ಗೌರವಾಧ್ಯಕ್ಷೆ ಶ್ರೀಮತಿ ಸಾವಿತ್ರಿ, ಅಧ್ಯಕ್ಷೆ ಶ್ರೀಮತಿ ಸವಿತಾ ಮುಂತಾದವರು ಉಪಸ್ಥಿತರಿದ್ದರು. ಸಮಾರಂಭದಲ್ಲಿ ಶ್ರೀ ಉದಯ ಪೂಜಾರಿಯವರನ್ನು ಶಾಲು…

Read More
error: Content is protected !!