ಜೆಪ್ಪು ಮಹಾಕಾಳಿಪಡ್ಪು ರೈಲ್ವೇ ಅಂಡರ್ ಪಾಸೋ ಸ್ವಿಮಿಂಗ್ ಪುಲೋ ?!
ಮಂಗಳೂರು : ಆಮೆಗತಿಯಲ್ಲಿ ಸಾಗುತ್ತಿರುವ ಮಂಗಳೂರು ನಗರದ ಜೆಪ್ಪು ಮಹಾಕಾಳಿಪಡ್ಪು ರೈಲ್ವೇ ಅಂಡರ್ ಪಾಸ್ ನಿರ್ಮಾಣ ಕಾಮಗಾರಿಯು ಸುತ್ತಮುತ್ತಲಿನ ಪ್ರದೇಶವಾಸಿಗಳಿಗೆ ತೊಂದರೆ ಕೊಡುವುದಂತೂ ಸತ್ಯ . ಒಂದು ವರ್ಷದಲ್ಲಿ ಕಾಮಗಾರಿ ಪೂರ್ತಿಯಾಗುತ್ತೆ ಎನ್ನುವ ವಿಸ್ವಾಸವನ್ನು ನೀಡಿದ್ದ ರೈಲ್ವೇ ಇಲಾಖೆ ಮತ್ತು ಮಂಗಳೂರು ಮಹಾನಗರ ಪಾಲಿಕೆ ಮೂರು ವರುಷ ಕಳೆಯುತ್ತಾ ಬಂದರೂ ಕಾಮಗಾರಿಯನ್ನು ಪೂರ್ತಿ ಮಾಡದೇ ಕೊಟ್ಟ ಮಾತನ್ನು ಉಳಿಸಿಕೊಳ್ಳಲು ವಿಫಲವಾಗಿದೆ . ಅತ್ಯಂತ ನುರಿತ ತಾಂತ್ರಿಕರು ಇದ್ದರೂ ಕಾಮಗಾರಿ ಪೂರ್ತಿಯಾಗದೇ ಅಲ್ಲಿನ ನಗರವಾಸಿಗಳಿಗೆ ತೊಂದರೆಯನ್ನು ನೀಡುತ್ತದೆ ….