ಕೀರ್ತೇಶ್ವರದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಸಾಮೂಹಿಕ ಸತ್ಯನಾರಾಯಣ ಪೂಜೆ

ಮಂಜೇಶ್ವರ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ತಲಪಾಡಿ ವಲಯದ ವತಿಯಿಂದ ಕೀರ್ತೇಶ್ವರದ ಶ್ರೀ ಕೀರ್ತೇಶ್ವರ ಸದಾಶಿವ ದೇವಸ್ಥಾನದಲ್ಲಿ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಭಕ್ತಿಭಾವಪೂರ್ಣವಾಗಿ ನೆರವೇರಿತು. ಕಾರ್ಯಕ್ರಮವು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ತಲಪಾಡಿ ವಲಯದ ಹಾಗೂ ಕೇಂದ್ರ ಸಮಿತಿಯ ಅಧ್ಯಕ್ಷರಾದ ಶ್ರೀ ಉದಯ ಕುಮಾರ್ ಆನೆ ಬಾಗಿಲು ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಪೂಜಾ ಕಾರ್ಯಕ್ರಮದಲ್ಲಿ ವೃತಾಧಾರಿಗಳು ಸಂಕಲ್ಪಕ್ಕೆ ಕುಳಿತು, ಅವರ ಮುಂಭಾಗದಲ್ಲಿ ಸ್ವಸ್ತಿಕ ಚಿಹ್ನೆ ಅಂಕಿತಗೊಳಿಸುವ ಮೂಲಕ ವಿಶೇಷ ವಿಧಿವಿಧಾನಗಳೊಂದಿಗೆ ಪೂಜೆ ಸಂಪನ್ನಗೊಂಡಿತು….

Read More

ಕನಿಲ ಶ್ರೀ ಭಗವತಿ ಕ್ಷೇತ್ರದಲ್ಲಿ ವಿಜೃಂಭಣೆಯಿಂದ ನಡೆದ ಆದಿಶಿಲೆ ಪ್ರತಿಷ್ಠೆ

ಮಂಜೇಶ್ವರ:ಕನಿಲ ಶ್ರೀ ಭಗವತಿ ಕ್ಷೇತ್ರದ ಜೀರ್ಣೋದ್ಧಾರ ಕಾರ್ಯಗಳ ಅಂಗವಾಗಿ ಕ್ಷೇತ್ರದ ಅತಿಪ್ರಧಾನ ಧಾರ್ಮಿಕ ಕಾರ್ಯಕ್ರಮವಾದ ದಂಬೆ ಕಲ್ಲು ಆದಿಶಿಲೆ ಪ್ರತಿಷ್ಠೆ ಕಾರ್ಯಕ್ರಮವು ದಿನಾಂಕ 21.01.2026 ಬುಧವಾರ ಬೆಳಗ್ಗೆ 8 ಗಂಟೆಗೆ ಕ್ಷೇತ್ರದಲ್ಲಿ ಭಕ್ತಿಭಾವಪೂರ್ಣವಾಗಿ ಮತ್ತು ಯಶಸ್ವಿಯಾಗಿ ನೆರವೇರಿತು. ಕ್ಷೇತ್ರದ ಆಚಾರಪಟ್ಟವರು ಹಾಗೂ ಗುರಿಕಾರರ ಪವಿತ್ರ ವಿಧಿವಿಧಾನಗಳೊಂದಿಗೆ ಆದಿಶಿಲೆ ಪ್ರತಿಷ್ಠೆ ನೆರವೇರಿಸಲ್ಪಟ್ಟಿತು. ಈ ಸಂದರ್ಭದಲ್ಲಿ ಜೀರ್ಣೋದ್ಧಾರ ಸಮಿತಿಯ ಪದಾಧಿಕಾರಿಗಳು, ಸದಸ್ಯರು, ಊರಿನ ಪ್ರಮುಖರು ಹಾಗೂ ಅಪಾರ ಸಂಖ್ಯೆಯ ಭಕ್ತಾದಿಗಳು ಭಾಗವಹಿಸಿ ಶ್ರೀ ಭಗವತಿಯ ಕೃಪೆಗೆ ಪಾತ್ರರಾದರು. ಕಾರ್ಯಕ್ರಮದ ವೇಳೆ…

Read More

ಕನಿಲ ಶ್ರೀ ಭಗವತಿ ಕ್ಷೇತ್ರದಲ್ಲಿ ವಿಜೃಂಭಣೆಯಿಂದ ನಡೆದ ಆದಿಶಿಲೆ ಪ್ರತಿಷ್ಠೆ

ಮಂಜೇಶ್ವರ:ಕನಿಲ ಶ್ರೀ ಭಗವತಿ ಕ್ಷೇತ್ರದ ಜೀರ್ಣೋದ್ಧಾರ ಕಾರ್ಯಗಳು ತ್ವರಿತ ಗತಿಯಲ್ಲಿ ಸಾಗುತ್ತಿದ್ದು, ಇದರ ಅಂಗವಾಗಿ ಕ್ಷೇತ್ರದ ಅತಿಪ್ರಧಾನ ಧಾರ್ಮಿಕ ಕಾರ್ಯಕ್ರಮವಾದ ದಂಬೆ ಕಲ್ಲು ಆದಿಶಿಲೆ ಪ್ರತಿಷ್ಠೆ ಕಾರ್ಯಕ್ರಮವು ದಿನಾಂಕ 21.01.2026 (ಬುಧವಾರ) ಬೆಳಗ್ಗೆ 8 ಗಂಟೆಗೆ ಕ್ಷೇತ್ರದಲ್ಲಿ ವಿಜೃಂಭಣೆಯಿಂದ ನಡೆಯಲಿದೆ. ಈ ಮಹತ್ವದ ಕಾರ್ಯಕ್ರಮದಲ್ಲಿ ಕ್ಷೇತ್ರದ ಆಚಾರಪಟ್ಟವರು, ಗುರಿಕಾರರು, ಜೀರ್ಣೋದ್ಧಾರ ಸಮಿತಿಯ ಪದಾಧಿಕಾರಿಗಳು ಹಾಗೂ ಸದಸ್ಯರು ಸೇರಿದಂತೆ ಎಲ್ಲಾ ಭಕ್ತಾದಿಗಳು ಭಾಗವಹಿಸುವಂತೆ ಕನಿಲ ಶ್ರೀ ಭಗವತಿ ಕ್ಷೇತ್ರ ಜೀರ್ಣೋದ್ಧಾರ ಸಮಿತಿ ವಿನಂತಿಸಿದೆ. ಶ್ರೀದೇವಿಯ ದಿವ್ಯ ಅನುಗ್ರಹಕ್ಕೆ ಪಾತ್ರರಾಗುವ…

Read More

ರಿಯಲ್ ಎಸ್ಟೇಟ್ ಉದ್ಯಮಿ ಹಠತ್ತನೆ ಹೃದಯಾಘಾತಕ್ಕೆ ಬಲಿ.ವಾರದಂತರದಲ್ಲಿ ಹೃದಯ ಆಘಾತದಿಂದ ಬಾವ ,ಬಾಮೈದ ಸಾವು

ಉಳ್ಳಾಲ: ಜ-20 ಕೃಷಿಕರು ಹಾಗೂ ರಿಯಲ್ ಎಸ್ಟೇಟ್ ಉದ್ಯಮಿಯಾಗಿದ್ದ ಸೋಮೇಶ್ವರ ಗ್ರಾಮದ ಪಿಲಾರು ದೇಲಂತ ಬೆಟ್ಟು ನಿವಾಸಿ ರಘುರಾಮ ಶೆಟ್ಟಿ (50)ಯವರು ಮಂಗಳವಾರ ಬೆಳಿಗ್ಗೆ ತಮ್ಮ ಸ್ವಗೃಹದಲ್ಲಿ ಹೃದಯಾಘಾತದಿಂದ ಹಠತ್ತನೆ ಸಾವನ್ನಪ್ಪಿದ್ದಾರೆ.ಮಂಗಳವಾರ ಬೆಳಿಗ್ಗೆ ಲವಲವಿಕೆಯಿಂದಲೇ ಪುತ್ರನನ್ನ ಶಾಲೆಗೆ ಬಿಟ್ಟು ಬಂದು,ತೋಟದ ಕೆಲಸದಲ್ಲಿ ತೊಡಗಿಸಿಕೊಂಡಿದ್ದ ರಘುರಾಮ್ ಅವರು ದಣಿದ ಕಾರಣ ಮನೆಯೊಳಗೆ ನಿದ್ದೆಗೆ ಜಾರಿದ್ದರು.ಮನೆಗೆ ಬಂದಿದ್ದ ಸಹೋದರಿಯು ರಘುರಾಮ್ ಅವರನ್ನ ಎಬ್ಬಿಸಲು ಹೋದಾಗ ರಘು ಅವರ ದೇಹವು ಪ್ರತಿಕ್ರಿಯಿಸದಿದ್ದಾಗ ವೈದ್ಯರನ್ನ ಕರೆಸಿ ಪರಿಶೀಲಿಸಿದ್ದು,ವೈದ್ಯರು ಹೃದಯಾಘಾತದಿಂದ ಸಾವನ್ನಪ್ಪಿರೋದಾಗಿ ಖಚಿತ ಪಡಿಸಿದ್ದಾರೆ….

Read More

ಜನವರಿ ೨೫ ರಿಂದ ಫೆಬ್ರವರಿ ೧ ರ ತನಕ ಕಡಬ ತಾಲೂಕಿನ ಹಲವೆಡೆ ಹಿಂದು ಐಕ್ಯ ಸಂಗಮ ಕಾರ್ಯಕ್ರಮ

ಕಡಬ: ಕಡಬ ತಾಲೂಕು ಹಿಂದು ಸಂಗಮ ಆಯೋಜನಾ ಸಮಿತಿಯ ವತಿಯಿಂದ ಕಡಬ ತಾಲೂಕಿನ ವಿವಿಧೆಡೆ ಜನವರಿ ೨೫ ರಿಂದ ಫೆ ೧ ರ ತನಕ ಹಿಂದೂ ಸಂಗಮ ಕಾರ್ಯಕ್ರಮಗಳು ನಡೆಯಲಿವೆ ಎಂದು ಹಿಂದೂ ಸಂಗಮ ಆಯೋಜನ ಸಮಿತಿಯ ಅಧ್ಯಕ್ಷ ಹರಿರಾಮಚಂದ್ರ ಉಪ್ಪಿನಂಗಡಿ ಹೇಳಿದರು.ಅವರು ಕಡಬದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಸಮಿತಿಯ ಯೋಜನೆಯಂತೆ ಕಡಬ ತಾಲೂಕಿನ ಏಳು ಪ್ರಮುಖ ಕೇಂದ್ರಗಳಲ್ಲಿ ಹಿಂದು ಸಂಗಮ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಮೂರು ಅಥವಾ ನಾಲ್ಕು ಗ್ರಾಮಗಳನ್ನು ಒಳಗೊಂಡoತೆ ಒಂದು ಮಂಡಲ ಮಾಡಿ ಕಾರ್ಯಕ್ರಮ ನಡಸಲಾಗುವುದು….

Read More

ರಾಜಧಾನಿ ಗೋಲ್ಡ್ ಈಗ ಗ್ರಾಂಡ್ ರಾಜಧಾನಿ ,ಹೊಸಂಗಡಿಯಲ್ಲಿ ನೂತನ ಮಳಿಗೆ ಉದ್ಘಾಟನೆ

ಕಳೆದ 25 ವರ್ಷಗಳಿಂದ ‘ರಾಜಧಾನಿ ಗೋಲ್ಡ್’ ಎಂಬ ಹೆಸರಿನಲ್ಲಿ ಜನರ ವಿಶ್ವಾಸ ಗೆದ್ದ ಸಂಸ್ಥೆ, ಇದೀಗ ಇನ್ನಷ್ಟು ದೊಡ್ಡ, ಇನ್ನಷ್ಟು ಭವ್ಯ ರೂಪದಲ್ಲಿ ‘ಗ್ರ್ಯಾಂಡ್ ರಾಜಧಾನಿ’ಯಾಗಿ ಗ್ರಾಹಕರಿಗಾಗಿ ಹೊಸಂಗಡಿಯಲ್ಲಿ ತೆರೆದುಕೊಂಡಿದೆ. ಕಳೆದ ಆದಿತ್ಯವಾರದಂದು ಹೊಸಂಗಡಿಯ ಹೃದಯಭಾಗದಲ್ಲಿ ತಲೆಯೆತ್ತಿರುವ ‘ಗ್ರ್ಯಾಂಡ್ ರಾಜಧಾನಿಯ ಉದ್ಘಾಟನಾ ಸಮಾರಂಭ ನಡೆದಿದ್ದು ರಾಜಧಾನಿ ಮಾಲಕ ಅಶ್ರಫ್ ಕೆ ಅವರು ರಿಬ್ಬನ್ ಕಟ್ ಮಾಡುವುದರ ಮೂಲಕ ‘ಗ್ರ್ಯಾಂಡ್ ರಾಜಧಾನಿ’ಯನ್ನು ಗ್ರಾಹಕರಿಗಾಗಿ ತೆರೆದು ಕೊಟ್ಟರು ,ಉದ್ಘಾಟನಾ ಸಮಾರಂಭದಲ್ಲಿ ಮಂಜೇಶ್ವರ ಶಾಸಕ ಎ ಕೆ ಎಂ ಅಶ್ರಫ್ ,…

Read More

ಕೆ ಎಸ್ ಆರ್ ಟಿ ಸಿ ಸೀಟ್ ಕಥೆ ವ್ಯಥೆ ….!

ಚುನಾವಣೆಯಲ್ಲಿ ಸೀಟ್ ಯಾರಿಗೆ ಸಿಗುತ್ತೆ ಅಂತ ಚಿಂತೆ ಆದ್ರೆ ನನಗೆ ಪಯಣಿಸುವಾಗ ಬಸ್ಸ್ ನಲ್ಲಿ ಒಂದು ಸೀಟ್ ಇದ್ರೆ ಸಾಕಪ್ಪ ಎನ್ನುವ ಚಿಂತೆ ಕಾಡುತಿತ್ತು . ಬಾಲ್ಯದಿಂದಲೂ ಕೇರಳದ ಕೆ ಎಸ್ ಆರ್ ಟಿ ಸಿ ಕಂಡರೆ ಬಲು ಮೆಚ್ಚುಗೆ . ದೀರ್ಘವಾದ ಅದರ ದೇಹ , ಟಿನ್ ಟಿನ್ ಮಾಡುವ ಅದರ ಬೆಲ್ಲು , ವೇಗವಾದ ಪ್ರಯಾಣ , ಮಳೆಯಲ್ಲಂತೂ ಬಸ್ಸ ಪಯಣ ಖುಷಿಯ ದಿಬ್ಬಣವನ್ನೇ ಒಂದು ಕಡೆಯಿಂದ ಮತ್ತೊಂದು ಕಡೆಗೆ ಕೊಂಡು ಹೋಗುತ್ತದೆ ….

Read More

ರೀಲ್ಸ್ ವ್ಯೂಸ್ ದಾಹಕ್ಕೆ ಬಿದ್ದ ಯುವತಿಯಿಂದ ಬಲಿಯಾಯಿತು ರಿಯಲ್ ಜೀವ … !

ಕೋಝಿಕೋಡ್:ಇಂದಿನ ದಿನಗಳಲ್ಲಿ ನಾನು ಸೆಲೆಬ್ರಿಟಿ ಆಗಬೇಕು.. ಸಾಮಾಜಿಕ ಮಾಧ್ಯಮದಲ್ಲಿ ಹಾಕಿದ ವಿಡಿಯೋ ತುಣುಕಿಗೆ ಲಕ್ಷಾಂತರ ಲೈಕು ಕಮೆಂಟು ಶೇರು ಸಿಗಬೇಕ್ಕೆನ್ನುವ ಮನಸ್ಥಿತಿಯ ಮನಸುಗಳು ನಾವಿರುವ ಸಮಾಜದ ಉದ್ದಗಲಕ್ಕೂ ಕಾಣಸಿಗುವುದು ಇಂದಿನ ದಿನಗಳಲ್ಲಿ ಟ್ರೆಂಡ್ ಎಂದೇ ಹೇಳಬಹುದು . ಆದರೆ ವ್ಯೂಸ್ , ಲೈಕ್ ಗಾಗಿ ಪ್ರಾಮಾಣಿಕ ಪ್ರಯತ್ನ ಮಾಡದೆ ಮತ್ತೊಬ್ಬರನ್ನು ಸಾವಿನ ಕುಣಿಕೆಗೆ ದೂಡಿ ತಮ್ಮ ಬೇಳೆಯನ್ನು ಬೇಯಿಸುತ್ತಾರೆ ಅಲ್ವಾ ಅಂಥವರದ್ದು ನರ ಜನುಮವೇ … ? ಇಲ್ಲಾ ಇನ್ನೊಬ್ಬರ ಕುಟುಂಬವನ್ನು ನರಕಕ್ಕೆ ದೂಡುವ ರಾಕ್ಷಸ ಜನುಮವೇ…

Read More

ಅಂತರ್ ರಾಜ್ಯ ಪ್ರತಿಷ್ಠಿತ ‘ ಕನ್ನಡ ಪಯಸ್ವಿನಿ ಅಚೀವ್ ಮೆಂಟ್ ಅವಾರ್ಡ್- 2026” ಮುಡಿಗೇರಿಸಿಕೊಂಡ ಖ್ಯಾತ ಅಂಕಣಕಾರ ಎಸ್. ಜಗದೀಶ್ಚಂದ್ರ ಅಂಚನ್

ಮಂಗಳೂರು:ಕಾಸರಗೋಡು ಕನ್ನಡ ಭವನದ ರಜತ ಸಂಭ್ರಮದ ಅಂಗವಾಗಿ ನೀಡಿದ ಪ್ರತಿಷ್ಠಿತ ‘ ಕನ್ನಡ ಪಯಸ್ವಿನಿ ಅಚೀವ್ ಮೆಂಟ್ ಅವಾರ್ಡ್- 2026 ಅಂತರ್ ರಾಜ್ಯ ಪ್ರಶಸ್ತಿಯನ್ನು ಖ್ಯಾತ ಅಂಕಣಕಾರ ಎಸ್. ಜಗದೀಶ್ಚಂದ್ರ ಅಂಚನ್ ಕಾಸರಗೋಡು ನುಳ್ಳಿಪ್ಪಾಡಿಯಲ್ಲಿ ಕನ್ನಡ ಭವನ ರಜತ ಸಂಭ್ರಮ -ನಾಡು ನುಡಿ ಹಬ್ಬ ಕಾರ್ಯಕ್ರಮದಲ್ಲಿ ಪ್ರಶಸ್ತಿಯನ್ನು ಸ್ವೀಕರಿಸಿದರು. ಈ ಸಂದರ್ಭದಲ್ಲಿ ಕನ್ನಡ ಭವನ ಸ್ಥಾಪಕಾಧ್ಯಕ್ಷ ಕೆ.ವಾಮನ್ ರಾವ್, ನಿರ್ದೇಶಕ ಕೆ.ಎನ್.ವೆಂಕಟ್ರಮಣ ಹೊಳ್ಳ, ಕರ್ನಾಟಕ ಬ್ಯಾರಿ ಅಕಾಡೆಮಿಯ ಮಾಜಿ ಅಧ್ಯಕ್ಷೆ ಆಯಿಷಾ ಪೆರ್ಲ, ಶಿಕ್ಷಣ ತಜ್ಞ ವಿ.ಬಿ.ಕುಳವರ್ಮ,…

Read More

ಉಡುಪಿ ಶ್ರೀಕೃಷ್ಣಮಠದಲ್ಲಿ ಇನ್ನು ಮುಂದೆ ವಸ್ತ್ರ ಸಂಹಿತೆ ಕಡ್ಡಾಯ

ಉಡುಪಿ: ಉಡುಪಿ ಶ್ರೀಕೃಷ್ಣ ಮಠಕ್ಕೆ ಪ್ರವೇಶಿಸುವ ಪುರುಷ ಭಕ್ತಾದಿಗಳು ಇನ್ನು ಮುಂದೆ ಅಂಗಿ ತೆಗೆದು ಪ್ರವೇಶಿಸಬೇಕಾಗಿದೆ. ಇಂದಿನಿಂದ ಈ ನಿಯಮವನ್ನು ಪರ್ಯಾಯ ಶೀರೂರು ಮಠ ಕಡ್ಡಾಯಗೊಳಿಸಿದೆ.ಕೃಷ್ಣಮಠಕ್ಕೆ ಆಗಮಿಸುವ ಭಕ್ತರಿಗೆ ವಸ್ತ್ರ ಸಂಹಿತೆ ಚಾಲ್ತಿಯಲ್ಲಿರಲಿದ್ದು, ಮಹಿಳೆಯರು ಸಭ್ಯ ಉಡುಪುಗಳನ್ನು ಧರಿಸಬೇಕು. ಜೀನ್ಸ್ ಪ್ಯಾಂಟ್, ಟಿ ಶರ್ಟ್ ಸ್ಟೀವ್ ಲೆಸ್ ಉಡುಪುಗಳನ್ನು ಧರಿಸಿ ಬರುವ ಮಹಿಳೆಯರು ಹಾಗು ಪುರುಷರಿಗೆ ಪ್ರವೇಶವಿಲ್ಲ. ಹಾಗೆಯೇ ಪುರುಷ ಭಕ್ತರು ದೇವಳದ ಒಳಗಡೆ ಪ್ರವೇಶಿಸುವ ಮೊದಲು ಅಂಗಿ ತೆಗೆಯಬೇಕು ಎಂಬ ನಿಯಮ ಮಾಡಲಾಗಿದೆ.ಶಿರೂರು ಮಠದ ದಿವಾನರಾದ…

Read More
error: Content is protected !!