ಮಂಜೇಶ್ವರ ತಾಲೂಕು ಲೈಬ್ರರಿ ಕೌನ್ಸಿಲ್ ನ ವಾಚನ ಪಕ್ಷಾಚರಣೆ ಸಮಾರೋಪ, ಐ. ವಿ .ದಾಸ್ ಸಂಸ್ಕರಣೆ

ಮಂಜೇಶ್ವರ ತಾಲೂಕು ಲೈಬ್ರರಿ ಕೌನ್ಸಿಲ್ ನ ನೇತೃತ್ವದಲ್ಲಿ ಯುವಶಕ್ತಿ ಫ್ರೆಂಡ್ಸ್ ಗ್ರಂಥಾಲಯ ಸುಭಾಷ್ ನಗರದ ಸಹಯೋಗದೊಂದಿಗೆ ಜಿ.ಯಚ್. ಎಸ್ .ಎಸ್ ಬೇಕೂರಿನಲ್ಲಿ ತಾಲೂಕು ಮಟ್ಟದ ವಾಚನ ಪಕ್ಷಾಚರಣೆಯ ಸಮಾರೋಪ ಹಾಗೂ ಐವಿ ದಾಸ್ ರ ಸಂಸ್ಕರಣೆಯು ನಡೆಯಿತು. ರಾಜ್ಯ ಲೈಬ್ರರಿ ಕೌನ್ಸಿಲ್ ನ ಕಾರ್ಯದರ್ಶಿಯಾಗಿದ್ದ ನ್ಯಾಯವಾದಿ ಪಿ ಅಪ್ಪು ಕುಟ್ಟನ್ ರವರು ಉದ್ಘಾಟಿಸಿದರು. ಕೇರಳ ರಾಜ್ಯ ಲೈಬ್ರರಿಯ ಕಾರ್ಯ ಯೋಜನೆಗಳ ಬಗ್ಗೆ ಸವಿವರವಾಗಿ ತಿಳಿಸಿದರು. ರಾಜ್ಯ ಲೈಬ್ರರಿ ಕೌನ್ಸಿಲ್ ಸದಸ್ಯ ಅಹಮ್ಮದ್ ಹುಸೈನ್ ಮಾಸ್ಟರ್ ಸಂಸ್ಕರಣೆ ನಡೆಸಿದರು….

Read More

ಹೊಸಂಗಡಿ ಶ್ರೀ ಅಯ್ಯಪ್ಪ ಫ್ರೆಂಡ್ಸ್ ಕ್ಲಬ್ ನ 15ನೇ ವಾರ್ಷಿಕೋತ್ಸವ ಹಾಗೂ 14ನೇ ವರ್ಷದ ಮೊಸರುಕುಡಿಕೆ ಉತ್ಸವ ಆಗಸ್ಟ್ 15 ರಂದು

ಮಂಜೇಶ್ವರ: ಇಲ್ಲಿನ ಹೊಸಂಗಡಿ ಅಯ್ಯಪ್ಪ ಫ್ರೆಂಡ್ಸ್ ಕ್ಲಬ್ ನ 15 ನೇ ವಾರ್ಷಿಕೋತ್ಸವ ಹಾಗೂ ಶ್ರೀ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ 14 ನೇ ವರ್ಷದ ಹೊಸಂಗಡಿ ಮೊಸರು ಕುಡಿಕೆ ಉತ್ಸವ ಆಗಸ್ಟ್ 15 ರಂದು ವಿವಿಧ ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ. ಅಂದು ಬೆಳಗ್ಗೆ 8 30 ಕ್ಕೆ ಗಣಹೋಮ ,ಮಧ್ಯಾಹ್ನ 2 ರಿಂದ ಕೃಷ್ಣ ವೇಷ ಸ್ಪರ್ಧೆ , ನಂತರ ,ವಿವಿಧ ಆಟೋಟ ಸ್ಪರ್ಧೆ, ಸಂಜೆ 6.30 ಕ್ಕೆ ಧಾರ್ಮಿಕ ಸಭೆ ನಡೆಯಲಿದೆ.ಕಾರ್ಯಕ್ರಮದ ಆಮಂತ್ರಣ ಪತ್ರವು…

Read More

ಮಧೂರು ಕ್ಷೇತ್ರದಲ್ಲಿ ಕನ್ಯಾನ ಸದಾಶಿವ ಶೆಟ್ಟಿ ಅಭಿಮಾನ ಬಳಗ ಬೆರಿಪದವು ಇವರಿಂದ ಬೃಹತ್ ಶ್ರಮದಾನ ಸಂಪನ್ನ.

ಕಾಸರಗೋಡು : ಇತಿಹಾಸ ಪ್ರಸಿದ್ಧ ಮಧೂರು ಶ್ರೀ ಮದನಂತೇಶ್ವರ ಸಿದ್ಧಿ ವಿನಾಯಕ ಕ್ಷೇತ್ರದಲ್ಲಿ ಕನ್ಯಾನ ಸದಾಶಿವ ಶೆಟ್ಟಿ ಅಭಿಮಾನಿ ಬಳಗ ಬೆರಿಪದವು ಇವರಿಂದ ಬೃಹತ್ ಶ್ರಮದಾನವು ಕ್ಷೇತ್ರ ಪರಿಸರದಲ್ಲಿ ಭಾನುವಾರ ಸಂಪನ್ನಗೊಂಡಿತು. ಹಲವಾರು ಸಮಾಜಮುಖಿ ಕಾರ್ಯಗಳನ್ನು ನಡೆಸಿಕೊಂಡು ಬಂದ ಬೆರಿಪದವು ಕನ್ಯಾನ ಸದಾಶಿವ ಶೆಟ್ಟಿ ಅಭಿಮಾನಿ ಬಳಗ ಕ್ಷೇತ್ರದಲ್ಲಿ ದಿನಪೂರ್ತಿ ನಡೆಸಿದ ಯಶಸ್ವಿ ಶ್ರಮದಾನವು ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ಇತ್ತೀಚೆಗೆ ಮಧೂರು ಕ್ಷೇತ್ರದಲ್ಲಿ ಅಷ್ಟಬಂಧ ಬ್ರಹ್ಮಕಲಶ ಉತ್ಸವ ಹಾಗೂ ಮೂಡಪ್ಪ ಸೇವೆ ಜರಗಿತ್ತು. ಶ್ರಮಧಾನ ಕಾರ್ಯದಲ್ಲಿ ಅಭಿಮಾನಿ…

Read More

ಕೇರಳದ ಆರೋಗ್ಯ ಇಲಾಖೆ ಅನಾರೋಗ್ಯ ಪೀಡಿತ- ಕಾಂಗ್ರೆಸ್ ಆರೋಪ

ಕೇರಳದ ಎಡರಂಗ ಸರಕಾರದ ಜನದ್ರೋಹಿ ಆಡಳಿತದಿಂದ ಆರೋಗ್ಯ ಇಲಾಖೆಯು ಐಸಿಯುವಿನಲ್ಲಿ ಚಡಪಡಿಸುತ್ತಿರುವಂತೆ ಭಾಸವಾಗುತ್ತಿದೆ. ಸರಕಾರಿ ಆಸ್ಪತ್ರೆಗಳಲ್ಲಿ ವೈದ್ಯರುಗಳಿಲ್ಲ, ವೈದ್ಯರಿದ್ದರೆ ಸಹಾಯಕ ಸಿಬ್ಬಂದಿಗಳಿಲ್ಲ, ಎಲ್ಲವೂ ಇದ್ದರೆ ಔಷಧಿಯಿಲ್ಲ. ಶಸ್ತ್ರ ಚಿಕಿತ್ಸೆಗೆ ಅಗತ್ಯವಾದ ಉಪಕರಣಗಳಿಲ್ಲ, ರೇಬೀಸ್ ರೋಗಕ್ಕೆ ಬೇಕಾದ ಕನಿಷ್ಠ ಮಟ್ಟದ ಔಷಧಿಗಳ ಕೊರತೆಯ ಕಾರಣ ಕಂದಮ್ಮಗಳು ಪ್ರಾಣ ಕಳೆದುಕೊಳ್ಳುವಂತಾಗಿದೆ, ಆಸ್ಪತ್ರೆಗಳಲ್ಲಿ ಡಾಕ್ಟರ್ ಗಳು ಹತ್ಯೆಗೀಡಾದ ದಾರುಣ ಘಟನೆಯೂ ನಡೆದಿವೆ. ವಿದ್ಯುತ್ ಸಂಪರ್ಕ ಕಡಿತವಾದಾಗ ಜನರೇಟರ್ ಇಲ್ಲದೆ ಕಷ್ಟ ಪಡುತ್ತಿರುವ ನಾಚಿಕೆಗೇಡಿನ ಪರಿಸ್ಥಿತಿ ಇದೆ. ಇವೆಲ್ಲಾ ಕೊರತೆಗಳ ನಡುವೆಯೂ ಎಡರಂಗ…

Read More

ನಮ್ಮ ಮೀಡಿಯಾ 24X7 ನ ಸಂಗೀತ ರಿಯಾಲಿಟಿ ಶೋ ಗೆ ಅದ್ಧೂರಿ ಚಾಲನೆ .ಗೆಲುವಿನ ಪ್ರಯತ್ನ ಸಹಜ , ಆದರೆ ವೇದಿಕೆ ಲಭಿಸುವುದೇ ವಿಜಯದ ಮೆಟ್ಟಿಲು – ಕೊಂಡೆವೂರು ಶ್ರೀ .

ಮಂಜೇಶ್ವರ : ಕರಾವಳಿಯ ನಾಡಿಮಿಡಿತ ಜನತೆಯ ಧ್ವನಿಯಾಗಿರುವ ನಮ್ಮ ಮೀಡಿಯಾ 24X7 ನ ಬಹು ನಿರೀಕ್ಷೆಯ ಸಂಗೀತ ರಿಯಾಲಿಟಿ ಶೋ ವಾಯ್ಸ್ ಒಫ್ ನಮ್ಮ ಮೀಡಿಯಾ 2025 ಕ್ಕೆ ಅದ್ಧೂರಿ ಚಾಲನೆ ದೊರೆಯಿತು.ಕೊಂಡೆವೂರು ನಿತ್ಯಾನಂದ ವಿದ್ಯಾಪೀಠದಲ್ಲಿ ನಡೆದ ಪ್ರಥಮ ಹಂತದ ಆಡಿಷನ್ ಕಾರ್ಯಕ್ರಮವನ್ನು ಕೊಂಡೆವೂರು ನಿತ್ಯಾನಂದ ಯೋಗಾಶ್ರಮದ ಪರಮಪೂಜ್ಯ ಶ್ರೀ ಶ್ರೀ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ ದೀಪ ಬೆಳಗಿಸಿ ಉಧ್ಘಾಟಿಸಿದರು. ಈ ಸಂದರ್ಭದಲ್ಲಿ ಆಶೀರ್ವಚನ ನೀಡಿದ ಶ್ರೀ ಗಳು ಗೆಲುವಿಗೋಸ್ಕರ ನಾವು ಪ್ರಯತ್ನ ಪಡುತ್ತಿರುವುದು ಸಹಜವಾದುದು…

Read More

ತಲಪಾಡಿ ಷಟ್ಪಥ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಲೆಮಾರಿ ದನಗಳ ಅಡ್ಡಾದಿಡ್ಡಿ ಅಲೆದಾಟ,ವಾಹನ ಸವಾರರು ಅಪಾಯದ ಭೀತಿಯಲ್ಲಿ

ಮಂಜೇಶ್ವರ : ನೂತನವಾಗಿ ನಿರ್ಮಾಣಗೊಂಡ ತಲಪಾಡಿ ಷಟ್ಪಥ ರಾಷ್ಟ್ರೀಯ ಹೆದ್ದಾರಿ ಸಾರ್ವಜನಿಕರ ಸುಲಭ ಹಾಗೂ ವೇಗದ ಸಾರಿಗೆಗಾಗಿ ನಿರ್ಮಿತವಾಗಿದ್ದರೂ, ಇತ್ತೀಚಿನ ರಸ್ತೆಯ ಮೇಲೆ ಅಲೆಮಾರಿ ದನಗಳ ಅಡ್ಡಾದಿಡ್ಡಿ ಅಲೆದಾಟದಿಂದಾಗಿ ವಾಹನ ಸವಾರರು ಅಪಾಯದ ಭೀತಿಯನ್ನು ಎದುರಿಸುವಂತಾಗಿದೆ. ಪ್ರತಿ ದಿನವೂ ಹಲವು ಸಮೀಪ ಪ್ರದೇಶದಿಂದ ಹತ್ತಾರು ದನಗಳು ರಸ್ತೆಗೆ ಪ್ರವೇಶಿಸುತ್ತಿದ್ದು, ವಿಶೇಷವಾಗಿ ಬೆಳಿಗ್ಗೆ ಮತ್ತು ಸಂಜೆ ವೇಳೆಯಲ್ಲಿ ಈ ಘಟನೆಗಳು ಹೆಚ್ಚಾಗಿ ಕಾಣಿಸುತ್ತಿವೆ. ದನ ಸಾಕುವವರು ಸೂಕ್ತವಾದ ಸ್ಥಳಗಳಲ್ಲಿ ದನಗಳನ್ನು ಮೇಯಲು ಬಿಡದೆ ಬೇಕಾಬಿಟ್ಟಿಯಾಗಿ ಬಿಡುತ್ತಿರುವ ಹಿನ್ನೆಲೆಯಲ್ಲಿಈ ದನಗಳು…

Read More

ತುಳುವೆರೆ ಉಡಲ್ ಜೋಡುಕಲ್ಲು ತಂಡದ ‘ಡೆನ್ನ ಡೆನ್ನಾನ’ ಹೊಚ್ಚ ಹೊಸ ನಾಟಕಕ್ಕೆ ಐಲ ಶ್ರೀ ದುರ್ಗಾಪರಮೇಶ್ವರಿ ಕ್ಷೇತ್ರದಲ್ಲಿ ಮುಹೂರ್ತ

ತುಳುವೆರೆ ಉಡಲ್ ಜೋಡುಕಲ್ಲು ಇದರ ಕಲಾವಿದರಿಂದ ಗಡಿನಾಡ ಕೇಸರಿ ಸುರೇಶ್ ಶೆಟ್ಟಿ ಜೋಡುಕಲ್ಲು ನಿರ್ಮಾಣ ಮತ್ತು ನಿರ್ವಹಣೆಯ , ಪ್ರಶಾಂತ್ ಶೆಟ್ಟಿ ಪರಪ್ಪಾಡಿ ರಚಿಸಿ ನಿರ್ದೇಶಿಸಿದ ಹೊಚ್ಚ ಹೊಸ ನಾಟಕ ಡೆನ್ನ ಡೆನ್ನಾನ ಐಲ ಶ್ರೀ ದುರ್ಗಾಪರಮೇಶ್ವರಿ ಕ್ಷೇತ್ರದಲ್ಲಿ ಶುಭ ಮುಹೂರ್ತಗೊಂಡಿತು. ವಿವೇಕ್ ಭಂಡಾರಿ ಸಣ್ಣತಡ್ಕ ಸಲಹೆ ಮತ್ತು ಸಹಕಾರ ನೀಡಿದ ಈ ನಾಟಕವು ತುಳು ರಂಗ ಭೂಮಿಯಲ್ಲಿ ವಿಶಿಷ್ಟಕಥೆಯಿಂದ ಎಲ್ಲರ ಮನಸೂರೆಗೊಂಡ ಯಶಸ್ವಿ ತುಳು ನಾಟಕ ಇದೀಗ ಹಲವು ಬದಲಾವಣೆಗಳೊಂದಿಗೆ ಹೊಸ ಶೈಲಿಯಲ್ಲಿ ಮೂಡಿ ಬರಲಿದೆ….

Read More

ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಿದ ಕುಂಜತ್ತೂರು – ಹೊಸಂಗಡಿ ಪೀಸ್ ಕ್ರಿಯೇಟಿವ್ ಶಾಲಾ ಸಂಸತ್ ಚುನಾವಣೆ

ಮಂಜೇಶ್ವರ : ಶಾಲಾ ವಿದ್ಯಾರ್ಥಿಗಳನ್ನು ಉತ್ತಮ ಪ್ರಜೆಗಳನ್ನಾಗಿಸುವ ಹಾಗೂ ಶಾಲೆಯ ಪ್ರಜಾಪ್ರಭುತ್ವಾತ್ಮಕ ಪರಂಪರೆಯನ್ನು ಗೌರವಿಸುವ ಉದ್ದೇಶದೊಂದಿಗೆ ಗಡಿ ಪ್ರದೇಶದಲ್ಲಿ ಕಾರ್ಯಾಚರಿಸುತ್ತಿರುವ ಕುಂಜತ್ತೂರು ಹಾಗೂ ಹೊಸಂಗಡಿ ಪೀಸ್ ಕ್ರಿಯೇಟಿವ್ ಶಾಲೆಗಳಲ್ಲಿ ಎರಡು ದಿನಗಳಲ್ಲಾಗಿ ಹಮ್ಮಿ ಕೊಂಡ ಶಾಲಾ ಸಂಸತ್ ಚುನಾವಣೆ 2025-26 ಬಹಳ ಅದ್ದೂರಿಯಾಗಿ ನೆರವೇರಿತು.ವಿದ್ಯಾರ್ಥಿ ದೆಸೆಯಲ್ಲಿಯೇ ಸಾರ್ವತ್ರಿಕ ಚುನಾವಣೆ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಶಾಲೆಯಲ್ಲಿ ಸಾರ್ವತ್ರಿಕ ಚುನಾವಣೆ ನಡೆಯುವ ಮಾದರಿಯಲ್ಲಿ ಚುನಾವಣೆ ನಡೆಯಿತು. ಪ್ರಜಾಪ್ರಭುತ್ವವನ್ನು ಅಲಿಂಗಿಸಿ – ನಿಮ್ಮ ಆಯ್ಕೆ, ನಿಮ್ಮ ಹಕ್ಕು, ನಿಮ್ಮ ಧ್ವನಿ…

Read More

ಉದಯೋನ್ಮುಖ ಪುಟಾಣಿ ಗಾಯಕರ ಗಾಯನಕ್ಕೆ ವೇದಿಕೆ ‘ವಾಯ್ಸ್ ಒಫ್ ನಮ್ಮ ಮೀಡಿಯಾ’ 2025 ರ ಆಡಿಷನ್ ಜುಲೈ 6 ರಂದು.

ಮಂಜೇಶ್ವರ: ಕರಾವಳಿಯ ನಾಡಿಮಿಡಿತ ಜನತೆಯ ಧ್ವನಿಯಾಗಿರುವ ನಮ್ಮ ಮೀಡಿಯಾ 24*7 ಸಾರಥ್ಯದಲ್ಲಿ ಉದಯೋನ್ಮುಖ ವಿದ್ಯಾರ್ಥಿ ಗಾನ ಪ್ರತಿಭೆಗಳ ಬಹು ನಿರೀಕ್ಷೆಯ ರಿಯಾಲಿಟಿ ಶೋ ವಾಯ್ಸ್ ಆಫ್ ನಮ್ಮ ಮೀಡಿಯಾ 2025.ಇದರ ಪ್ರಥಮ ಹಂತದ ಆಡಿಷನ್ ಜುಲೈ 6 ರಂದು ಭಾನುವಾರ ನಡೆಯಲಿದೆ. ಉಪ್ಪಳ ಕೊಂಡೆಯೂರ್ ಶ್ರೀ ನಿತ್ಯಾನಂದ ಯೋಗಶ್ರಮದಲ್ಲಿ ನಡೆಯುವ ಕಾರ್ಯಕ್ರಮವನ್ನು ಪರಮಪೂಜ್ಯ ಶ್ರೀ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ ಉದ್ಘಾಟಿಸಲಿದ್ದಾರೆ. ಇದರಲ್ಲಿ ಆಯ್ಕೆಯಾದ ಗಾನ ಪ್ರತಿಭೆಗಳಿಗೆ ಮುಂದೆ ಮೆಗಾ ಆಡಿಯೋಶನ್ ನಡೆಯಲಿದೆ

Read More

ಮೊಟಕುಗೊಂಡಿರುವ ಕೇರಳ ಸರಕಾರಿ ಯೋಜನೆಗಳು: ಮರು ಸ್ಥಾಪನೆಗೆ ಆಗ್ರಹಿಸಿ ಪ್ರತಿಭಟನೆ.

ಮಂಜೇಶ್ವರ : ಕೆ ಸ್ಮಾರ್ಟ್ ಅವ್ಯವಸ್ಥೆ ಸರಿಪಡಿಸಬೇಕು,ಬುಡಮೇಲು ಗೊಂಡಿರುವ ಪಿ ಎಂ ಎ ವೈ ಲೈಫ್ ಭವನ ಯೋಜನೆಯನ್ನು ಕೂಡಲೇ ಸರಿ ಪಡಿಸಬೇಕು,ಕಚೇರಿಗಳಲ್ಲಿ ಸಿಬ್ಬಂದಿಗಳ ಕೊರತೆಯನ್ನು ನೀಗಿಸಬೇಕು, ಪೆನ್ಸನ್ ಅರ್ಜಿಗಳ ಅವಗಣನೆಯನ್ನು ಕೊನೆಗೊಳಿಸಬೇಕು ಸ್ಥಗಿತಗೊಂಡಿರುವ ಅಭಿವೃದ್ದಿ ಯೋಜನೆಗಳನ್ನು ಕೂಡಲೇ ಸರಿ ಪಡಿಸಬೇಕು ಎಂಬಿತ್ಯಾದಿ ಬೇಡಿಕೆಗಳನ್ನು ಮುಂದಿಟ್ಟು ಎಲ್ ಜಿ ಎಂ ಲ್ ಸ್ಥಳೀಯಾಡಳಿತ ಸಂಸ್ಥೆಗಳ ಮುಸ್ಲಿಂ ಲೀಗ್ ಜನಪ್ರತಿನಿಧಿಗಳ ಸಂಘಟನೆ ಯ ನೇತೃತ್ವದಲ್ಲಿ ವರ್ಕಾಡಿ ಗ್ರಾಮ ಪಂಚಾಯತು ಮುಂಬಾಗದಲ್ಲಿ ಪ್ರತಿಭಟನಾ ಧರಣಿ ನಡೆಯಿತು. ಕೆ ಮೊಹಮ್ಮದ್ ಪಾವೂರು…

Read More
error: Content is protected !!