ಮಂಜೇಶ್ವರ ಗ್ರಾಮ ಪಂಚಾಯತ್ ಡಿಜಿಟಲೀಕರಣ
ಮಂಜೇಶ್ವರ : ಮಂಜೇಶ್ವರ ಗ್ರಾಮ ಪಂಚಾಯತ್ ಡಿಜಿಟಲೀಕರಣಗೊಂಡ ದಾಖಲೆಗಳ ಹಸ್ತಾಂತರ ಮತ್ತು ಕಳೆದ 5 ವರ್ಷಗಳಲ್ಲಿ ಪಂಚಾಯತಿನಲ್ಲಿ ನಡೆದ ಅಭಿವೃದ್ಧಿ ಕಾರ್ಯಗಳ ವೀಡಿಯೋ ಬಿಡುಗಡೆ ಹಾಗೂ ಲೈಫ್ ಭವನ ಪದ್ಧತಿಯ ನೂತನ ಫಲಾನುಭವಿಗಳಿಗೆ ಮಾಹಿತಿ ಕಾರ್ಯಕ್ರಮ ಮಂಜೇಶ್ವರ ಗೋವಿಂದ ಪೈ ಗಿಳಿವಿಂಡುನಲ್ಲಿ ಅದ್ದೂರಿಯಾಗಿ ನಡೆಯಿತು. ಮಂಜೇಶ್ವರ ಗ್ರಾಮ ಪಂಚಾಯತ್‌ನ ಆಡಳಿತಾತ್ಮಕ ಪಾರದರ್ಶಕತೆ, ದಕ್ಷತೆ ಮತ್ತು ಸಾರ್ವಜನಿಕ ಸೇವಾ ಗುಣಮಟ್ಟವನ್ನು ಇನ್ನಷ್ಟು ಹೆಚ್ಚಿಸುವ ಉದ್ದೇಶದಿಂದ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು. ವೇದಿಕೆಯಲ್ಲಿ ಮಂಜೇಶ್ವರ ಗ್ರಾಮ ಪಂಚಾಯತ್ ಡಿಜಿಟಲೀಕರಣಗೊಂಡ ದಾಖಲೆಗಳ ಹಸ್ತಾಂತರ…
