ಮಂಗಳೂರಿನಲ್ಲಿ ಸಿರಿಧಾನ್ಯ ಆಹಾರ ಹಬ್ಬ – 2025
ಮಂಗಳೂರು: ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ, “ಸಿರಿಧಾನ್ಯ ಆಹಾರ ಹಬ್ಬ ನವೆಂಬರ್ 1 ಮತ್ತು 2. 2025 ರಂದು ಮಂಗಳೂರು ನಗರದ ಸೇಂಟ್ ಸೆಬಾಸ್ಟಿಯನ್ ಪ್ಲಾಟಿನಮ್ ಜ್ಯೂಬಿಲಿ ಆಡಿಟೋರಿಯಂ, ಸೆಂಟ್ ಆಗ್ನೆಸ್ ಕಾಲೇಜು ಸಮೀಪ, ಬೆಂದೂರ್ವೆಲ್‌ನಲ್ಲಿ ಸಾಂಸ್ಕೃತಿಕ ಹಾಗೂ ಸಾರ್ವಜನಿಕ ಉತ್ಸವದ ಸಡಗರದಲ್ಲಿ ನಡೆಯಲಿದೆ ಎಂದು ರೋಟರಿ ಕ್ಲಬ್ ಮಂಗಳೂರು ಸೆಂಟ್ರಲ್ ಇದರ ಅಧ್ಯಕ್ಷರಾದ ಭಾಸ್ಕರ್ ರೈ ಕಟ್ಟಾ ತಿಳಿಸಿದರು . ಸುದ್ದಿಗಾರರೊಂದಿಗೆ ಮಾತನಾಡಿದ ಅವರು , ಆರೋಗ್ಯಕರ ಜೀವನಶೈಲಿಗೆ ಉತ್ತೇಜನ ನೀಡುವ ಮತ್ತು ಸಿರಿಧಾನ್ಯ ಉತ್ಪಾದನೆ ಮಾಡುವ…
