ಕೊಂಡೆವೂರು: ಕರ್ಕಾಟಕ ಮಾಸದ ಔಷಧೀಯ ಗಂಜಿ ಕಾರ್ಯಕ್ರಮ ಆಗೋಸ್ತು 3ರಂದು
ಉಪ್ಪಳ: ಶ್ರೀ ನಿತ್ಯಾನಂದ ಯೋಗಾಶ್ರಮ ಕೊಂಡೆವೂರು ಮಠದಲ್ಲಿ .3.08.2025 ಆದಿತ್ಯವಾರ ವಿಶಿಷ್ಟವಾದ ಕರ್ಕಾಟಕ ಮಾಸದ ಔಷಧೀಯ ಗಂಜಿ ಕಾರ್ಯಕ್ರಮ ನಡೆಯಲಿದೆ. ಶ್ರೀ ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ಮಠದ ಆರೋಗ್ಯ ಯೋಜನೆಯ ನಿತ್ಯಾನಂದ ಆಯುರ್ವೇದಿಕ್ ಸಂರಕ್ಷಣಾ ಸಮಿತಿಯ ನೇತೃತ್ವದಲ್ಲಿ ಕೇರಳದ ಪಾರಂಪರಿಕ ನಾಟಿ ವೈದ್ಯರುಗಳು ಈ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಹಸಿರು ಪರಿಸರದ ಪ್ರತಿಯೊಂದು ಗಿಡ ಬಳ್ಳಿ ಎಲೆಗಳು ಹೊಂದಿರುವ ಔಷಧೀಯ ಗುಣಗಳ ಬಗ್ಗೆ ಕರ್ಕಾಟಕ ಮಾಸದಲ್ಲಿ ಬಳಕೆಯ ಮಹತ್ವದ ಬಗ್ಗೆ ಮತ್ತು ಔಷಧೀಯ ಗುಣಗಳ ಬಗ್ಗೆ…
