ಬಾಲಕಿಗೆ ಲೈಂಗಿಕ ಕಿರುಕುಳ: ಗಲ್ಫ್‌ಗೆ ಪರಾರಿಯಾಗಲು ಸಜ್ಜಾಗಿದ್ದ ಕಾಮುಕ ಆಟೋ ಚಾಲಕ ಅರೆಸ್ಟ್

​ಕಾಸರಗೋಡು: ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದಲ್ಲಿ, ಪರಾರಿಯಾಗಲು ಸಿದ್ಧತೆ ನಡೆಸಿದ್ದ ಆಟೋ ಚಾಲಕನನ್ನು ವಿದ್ಯಾನಗರ ಪೊಲೀಸರು ತೀವ್ರ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.ಬಾವಲಿಮನ ಅಮೀ‌ರ್ ಮಂಜಿಲ್‌ನ ಅಬುತಾಹಿರ್ (22) ಬಂಧಿತ ಆರೋಪಿ.​2022-23ರ ಅವಧಿಯಲ್ಲಿ ಆರೋಪಿ ಬಾಲಕಿಗೆ ನಿರಂತರ ಕಿರುಕುಳ ನೀಡಿದ್ದನು. ಇತ್ತೀಚೆಗೆ ಬಾಲಕಿಯ ಆರೋಗ್ಯದಲ್ಲಿ ವ್ಯತ್ಯಯ ಉಂಟಾದಾಗ ಕುಟುಂಬಸ್ಥರು ಆಕೆಯ ಫೋನ್ ಪರಿಶೀಲಿಸಿದಾಗ ಅಬುತಾಹಿರ್‌ನೊಂದಿಗಿನ ಚಾಟಿಂಗ್ ಬಯಲಾಗಿತ್ತು. ಕೌನ್ಸಿಲಿಂಗ್ ವೇಳೆ ಅಸಲಿ ವಿಷಯ ಹೊರಬೀಳುತ್ತಿದ್ದಂತೆ ಕುಟುಂಬಸ್ಥರು ಪೊಲೀಸರಿಗೆ ದೂರು ನೀಡಿದರು. ಎರಡು ದಿನಗಳಲ್ಲಿ ಗಲ್ಫ್‌ಗೆ ಪರಾರಿಯಾಗಲು…

Read More

ಬಂಗ್ರಕೂಳೂರಿನಲ್ಲಿ ಭೀಕರ ಅಪಘಾತ: ಕಂಟೈನರ್ ಲಾರಿ ಚಕ್ರಕ್ಕೆ ಸಿಲುಕಿ ಇವಿ ಸ್ಕೂಟರ್ ಸವಾರ ಸಾವು

ಮಂಗಳೂರು: ಬಂಗ್ರಕೂಳೂರು ವಿಅರ್ಎಲ್ ಮುಂಭಾಗ ಸ್ಕೂಟರ್ ಗೆ ಹಿಂಭಾಗದಿಂದ ಕಂಟೈನರ್ ಲಾರಿ ಡಿಕ್ಕಿ ಹೊಡೆದ ಪರಿಣಾಮ ನವಾರ ರಸ್ತೆಗೆ ಬಿದ್ದು ಮೃತಪಟ್ಟಿದ್ದಾರೆ. ಸವಾರ ರಸ್ತೆಗೆ ಬಿದ್ದಾಕ್ಷಣವೇ ಲಾರಿ ಚಕ್ರ ಸವಾರನ ಮೇಲೆಯೇ ಚಲಿಸಿದ ಪರಿಣಾಮ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಈ ದುರ್ಘಟನೆ ಶುಕ್ರವಾರ ಸಂಜೆ ನಡೆದಿದೆ. ಮೃತರನ್ನು ಹಳೆಯಂಗಡಿ ತೋಕೂರು ನಿವಾಸಿ ಸದಾನಂದ ಶೆಟ್ಟಿಗಾರ್ ಎಂದು ಗುರುತಿಸಲಾಗಿದೆ. ಸದಾನಂದ ಅವರು ತಮ್ಮ ಇವಿ ಸ್ಕೂಟರ್ ನಲ್ಲಿ ಕೂಳೂರಿನಲ್ಲಿ ಬರುತ್ತಿದ್ದಾಗ ದುರಂತ ಸಂಭವಿಸಿದೆ.

Read More

ಮತದಾರರ ಮ್ಯಾಪಿಂಗ್ ಪ್ರಕ್ರಿಯೆ ತ್ವರಿತಗೊಳಿಸಿ: ಐವನ್ ಡಿ’ಸೋಜಾ

ಮಂಗಳೂರು: ಜಿಲ್ಲೆಯಾದ್ಯಂತ ನಡೆಯುತ್ತಿರುವ ಮತದಾರರ ಮ್ಯಾಪಿಂಗ್ (ಎನ್ಯುಮರೇಷನ್) ಪ್ರಕ್ರಿಯೆಯಲ್ಲಿ ತಾಂತ್ರಿಕ ಹಾಗೂ ಕಾರ್ಯನಿರ್ವಹಣಾ ಸಮಸ್ಯೆಗಳು ಎದುರಾಗುತ್ತಿದ್ದು, ಸರ್ಕಾರ ಮತ್ತು ಚುನಾವಣಾ ಇಲಾಖೆ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಕೆಪಿಸಿಸಿ ಉಪಾಧ್ಯಕ್ಷ ಹಾಗೂ ವಿಧಾನ ಪರಿಷತ್ ಸದಸ್ಯ ಐವನ್ ಡಿ’ಸೋಜಾ ಆಗ್ರಹಿಸಿದರು. ಮನಪಾ ಕಚೇರಿಯಲ್ಲಿ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಒಟ್ಟು 18,04,476 ಮತದಾರರಿದ್ದು, ಸುಮಾರು 16 ಲಕ್ಷ ಮಂದಿಯ ಮ್ಯಾಪಿಂಗ್ ಪೂರ್ಣಗೊಂಡಿದ್ದು, 1,92,284 ಮತದಾರರ ಮ್ಯಾಪಿಂಗ್ ಬಾಕಿಯಿದೆ ಎಂದು ಹೇಳಿದರು. ಮ್ಯಾಪಿಂಗ್ ಆಗದಿದ್ದರೂ ಮತದಾರರ…

Read More

ಕನ್ನಡ ಭವನದ ಉಚಿತ ವಸತಿ ಸೌಲಭ್ಯಕ್ಕೆ ಇನ್ನೆರಡು ಸುಸಜ್ಜಿತ ಕೊಠಡಿಗಳ ನಿರ್ಮಾಣಕ್ಕೆ ಚಾಲನೆ

ಜುಲೈ 26ರಂದು ರಜತ ಸಂಭ್ರಮ ಸಮಾರೋಪ ಹಾಗೂ ಕರ್ನಾಟಕ ಗಡಿನಾಡು ಕನ್ನಡ ಸಮ್ಮೇಳನ; ₹10 ಲಕ್ಷ ವೆಚ್ಚದ ಕಾಮಗಾರಿಗೆ ಶುಭಾರಂಭ ಕಾಸರಗೋಡು, ಜು. 4: ಕಾಸರಗೋಡು ನುಳ್ಳಿಪ್ಪಾಡಿಯ ಸೀತಮ್ಮ ಪುರುಷನಾಯಕ ಸ್ಮಾರಕ ಕನ್ನಡ ಭವನ ಮತ್ತು ಗ್ರಂಥಾಲಯದ ರಜತ ಸಂಭ್ರಮ ಸಮಾರೋಪ ಕಾರ್ಯಕ್ರಮ ಇದೇ ಜುಲೈ 26ರಂದು ನಡೆಯಲಿದ್ದು, ಮಾಜಿ ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಸೋಮಶೇಖರ್ (ಐಎಎಸ್) ಅವರ ಸರ್ವಾಧ್ಯಕ್ಷತೆಯಲ್ಲಿ “ಕರ್ನಾಟಕ ಗಡಿನಾಡು ಕನ್ನಡ ಸಮ್ಮೇಳನ” ಆಯೋಜಿಸಲಾಗಿದೆ. ಕನ್ನಡ ಭವನದ ನಿರ್ದೇಶಕರಾದ ಡಾ….

Read More

ಸೋಮವಾರ ಕಾಸರಗೋಡು ಜಿಲ್ಲೆಯ ಖಾಸಗಿ ಬಸ್‌ಗಳ ಮುಷ್ಕರ:

ಪ್ರಿಯದರ್ಶಿನಿ ಉಚಿತ ಪ್ರಯಾಣ ಯೋಜನೆಯಿಂದ ಉಂಟಾಗಿರುವ ಆರ್ಥಿಕ ನಷ್ಟವನ್ನು ವಿರೋಧಿಸಿ, ಕಾಸರಗೋಡು ಜಿಲ್ಲೆಯ ಖಾಸಗಿ ಬಸ್‌ಗಳು ಸೋಮವಾರ ಒಂದು ದಿನದ ಸಾಂಕೇತಿಕ ಮುಷ್ಕರ ನಡೆಸಲಿವೆ. ಸಂಯುಕ್ತ ಟ್ರೇಡ್ ಯೂನಿಯನ್ ಮುಖಂಡರು ಸುದ್ದಿಗೋಷ್ಠಿಯಲ್ಲಿ ಈ ಮಾಹಿತಿ ನೀಡಿದ್ದು, ಪ್ರಿಯದರ್ಶಿನಿ ಯೋಜನೆ ಜಾರಿಯಾದ ನಂತರ ಖಾಸಗಿ ಬಸ್‌ಗಳಿಗೆ ಭಾರೀ ನಷ್ಟ ಉಂಟಾಗಿದೆ ಎಂದು ಆರೋಪಿಸಿದ್ದಾರೆ. ಯುಡಿಎಫ್ ಸರ್ಕಾರ ಜಾರಿಗೆ ತಂದಿರುವ ಪ್ರಿಯದರ್ಶಿನಿ ಯೋಜನೆಯಡಿ, ಕೆಎಸ್‌ಆರ್‌ಟಿಸಿ ಸಾಮಾನ್ಯ ಬಸ್‌ಗಳಲ್ಲಿ ಮಹಿಳೆಯರು ಮತ್ತು ಟ್ರಾನ್ಸ್‌ಜೆಂಡರ್ ಸಮುದಾಯದವರಿಗೆ ಉಚಿತ ಪ್ರಯಾಣ ಸೌಲಭ್ಯ ನೀಡಲಾಗುತ್ತಿದೆ. ಈ…

Read More

‘ಅಮ್ಮ’ ಅಡ್‌ಹಾಕ್ ಸಮಿತಿಯ ಕಾರ್ಯಚಟುವಟಿಕೆಗಳಿಗೆ ತಾತ್ಕಾಲಿಕ ತಡೆ; ಎರ್ನಾಕುಳಂ ಮುನ್ಸಿಫ್ ನ್ಯಾಯಾಲಯದ ಆದೇಶ

Association of Malayalam Movie Artists (AMMA) ಅಡ್‌ಹಾಕ್ ಸಮಿತಿಯ ಕಾರ್ಯಚಟುವಟಿಕೆಗಳಿಗೆ ಎರ್ನಾಕುಳಂ ಮುನ್ಸಿಫ್ ನ್ಯಾಯಾಲಯ ತಾತ್ಕಾಲಿಕ ತಡೆ ವಿಧಿಸಿದೆ. ನಟಿ Shweta Menon ಸಲ್ಲಿಸಿದ್ದ ಅರ್ಜಿಯ ಮೇರೆಗೆ ಈ ಆದೇಶ ಹೊರಡಿಸಲಾಗಿದೆ. ನ್ಯಾಯಾಲಯವು ಅಡ್‌ಹಾಕ್ ಸಮಿತಿಗೆ ಸಭೆ ನಡೆಸುವುದು ಹಾಗೂ ಯಾವುದೇ ನಿರ್ಣಯಗಳನ್ನು ಅಂಗೀಕರಿಸುವುದನ್ನು ತಾತ್ಕಾಲಿಕವಾಗಿ ನಿಷೇಧಿಸಿದೆ. ಈ ಅರ್ಜಿಯ ಮುಂದಿನ ವಿಚಾರಣೆಯನ್ನು ಇದೇ ತಿಂಗಳ 13ರಂದು ನಡೆಸಲಾಗುವುದು. ‘ಅಮ್ಮ’ ಸಂಘಟನೆಯ ಆಡಳಿತಾತ್ಮಕ ಕಾರ್ಯಗಳನ್ನು ನಡೆಸುವ ಅಧಿಕಾರ ಅಡ್‌ಹಾಕ್ ಸಮಿತಿಗೆ ಇಲ್ಲ ಎಂದು ಶ್ವೇತಾ ಮೆನನ್…

Read More

ಸಚಿವ ಕೆ. ಮುರಳೀಧರನ್ ಅವರ ಇಬ್ಬರು ವೈಯಕ್ತಿಕ ಸಿಬ್ಬಂದಿ ರಾಜೀನಾಮೆ; ಇಲಾಖೆಯಲ್ಲಿ ಭಿನ್ನಾಭಿಪ್ರಾಯಗಳ ಆರೋಪ

ಸಚಿವ K. Muraleedharan ಅವರ ಇಬ್ಬರು ವೈಯಕ್ತಿಕ ಸಿಬ್ಬಂದಿ ರಾಜೀನಾಮೆ ನೀಡಿದ್ದಾರೆ. ಹೆಚ್ಚುವರಿ ಖಾಸಗಿ ಕಾರ್ಯದರ್ಶಿ ಶ್ರೀಲಾಲ್ ಹಾಗೂ ಸಹಾಯಕ ಖಾಸಗಿ ಕಾರ್ಯದರ್ಶಿ ಗೋವಿಂದ ರಾಜ್ ತಮ್ಮ ಹುದ್ದೆಗಳಿಗೆ ರಾಜೀನಾಮೆ ಸಲ್ಲಿಸಿದ್ದಾರೆ. ವೈಯಕ್ತಿಕ ಕಾರಣಗಳಿಂದ ರಾಜೀನಾಮೆ ನೀಡಲಾಗಿದೆ ಎಂದು ಅವರು ತಿಳಿಸಿದ್ದಾರೆ. ಆದರೆ ಇಲಾಖೆಯೊಳಗಿನ ಭಿನ್ನಾಭಿಪ್ರಾಯಗಳೇ ಈ ರಾಜೀನಾಮೆಗೆ ಕಾರಣ ಎಂಬ ಟೀಕೆಗಳು ಕೇಳಿಬರುತ್ತಿವೆ. ಸಿಬ್ಬಂದಿ ಸದಸ್ಯರ ನಡುವೆ ಭಿನ್ನಾಭಿಪ್ರಾಯ ಉಂಟಾಗಿತ್ತು ಎಂಬ ಮಾಹಿತಿಯೂ ಲಭ್ಯವಾಗಿದೆ. ಇವರ ಸ್ಥಾನಕ್ಕೆ ಈಗಾಗಲೇ ಹೊಸ ಸಿಬ್ಬಂದಿಯನ್ನು ನೇಮಕ ಮಾಡಲಾಗಿದೆ. ಕೆ….

Read More

‘ಕೇರಳದಲ್ಲಿ ಎರಡು ಡೀಲ್‌ಗಳು ನಡೆಯುತ್ತಿವೆ; ಅಂಗಡಿಗಳಲ್ಲಿ ಬಕಾರ್ಡಿ, ಸಮುದ್ರದಲ್ಲಿ ಅದಾನಿ – ಇದೇ ಮುಖ್ಯಮಂತ್ರಿ ಅವರ ಯಶಸ್ಸಿನ ಮಂತ್ರ’ – ಎ.ಎ. ರಹೀಂ ಟೀಕೆ

ಎ.ಎ ರಹೀಮ್ ಅವರು ಕೇರಳದಲ್ಲಿ ಎರಡು ರೀತಿಯ ‘ಡೀಲ್‌ಗಳು’ ನಡೆಯುತ್ತಿವೆ ಎಂದು ಆರೋಪಿಸಿದ್ದಾರೆ. “ಅಂಗಡಿಗಳಲ್ಲಿ ಬಕಾರ್ಡಿ, ಸಮುದ್ರದಲ್ಲಿ ಅದಾನಿ – ಇದೇ ಮುಖ್ಯಮಂತ್ರಿ ಅವರ ಯಶಸ್ಸಿನ ಮಂತ್ರ” ಎಂದು ಅವರು ಟೀಕಿಸಿದರು. V. D. Satheesan ಅವರ ಮಂಗಳೂರು ಪ್ರವಾಸದ ಕುರಿತು ಗಂಭೀರ ಪ್ರಶ್ನೆಗಳು ಉದ್ಭವಿಸಿವೆ ಎಂದು ರಹೀಂ ಹೇಳಿದರು. ಆ ರಹಸ್ಯ ಪ್ರವಾಸದ ಉದ್ದೇಶವೇನು ಎಂದು ಅವರು ಪ್ರಶ್ನಿಸಿದರು. ಚುನಾವಣೆ ಗೆದ್ದ ಬಳಿಕ ಮೊದಲು ಕಾಂಗ್ರೆಸ್ ಅಧ್ಯಕ್ಷರನ್ನು ಭೇಟಿ ಮಾಡುವುದು ಕಾಂಗ್ರೆಸ್‌ನ ಸಂಪ್ರದಾಯವಾಗಿದ್ದರೂ, ಸತೀಶನ್ ಅದನ್ನು…

Read More

ಪ್ರಿಯದರ್ಶಿನಿ ಸೇವೆಗಳಿರುವ ಪ್ರದೇಶಗಳಲ್ಲಿ ಖಾಸಗಿ ಬಸ್‌ಗಳ ಸಂಕಷ್ಟ ಅಧ್ಯಯನಕ್ಕೆ ಸಮಿತಿ; ಸಾರಿಗೆ ಸಚಿವ ಸಿ.ಪಿ. ಜಾನ್

ಪ್ರಿಯದರ್ಶಿನಿ ಸೇವೆಗಳು ಸಂಚರಿಸುವ ಪ್ರದೇಶಗಳಲ್ಲಿ ಖಾಸಗಿ ಬಸ್‌ಗಳು ಎದುರಿಸುತ್ತಿರುವ ಸಂಕಷ್ಟವನ್ನು ಅಧ್ಯಯನ ಮಾಡಲು ರಾಜ್ಯ ಸರ್ಕಾರ ಸಮಿತಿಯನ್ನು ರಚಿಸಲು ತೀರ್ಮಾನಿಸಿದೆ.ಟಿಕೆಟ್ ಹೊರತಾದ ಆದಾಯದ ಮೂಲಗಳನ್ನು ಹೆಚ್ಚಿಸುವ ಮೂಲಕ ಖಾಸಗಿ ಬಸ್ ಕ್ಷೇತ್ರವನ್ನು ಸಂರಕ್ಷಿಸಲಾಗುವುದು ಎಂದು ಸಾರಿಗೆ ಸಚಿವ C. P. John ತಿಳಿಸಿದ್ದಾರೆ. ಜಾಹೀರಾತುಗಳಿಂದ ದೊರೆಯುವ ಆದಾಯವನ್ನು ಖಾಸಗಿ ಬಸ್‌ಗಳಿಗೂ ಒದಗಿಸಲಾಗುವುದು. ಪೆಟ್ರೋಲ್ ಬೆಲೆ ಏರಿಕೆಯನ್ನು ಗಮನದಲ್ಲಿಟ್ಟುಕೊಂಡು, ಪ್ರಸ್ತುತ ಸಂಚರಿಸುತ್ತಿರುವ ಬಸ್‌ಗಳನ್ನು ಸಿಎನ್‌ಜಿ (CNG) ಇಂಧನ ವ್ಯವಸ್ಥೆಗೆ ಪರಿವರ್ತಿಸುವ ಬಗ್ಗೆ ಸರ್ಕಾರ ಚಿಂತನೆ ನಡೆಸುತ್ತಿದೆ ಎಂದೂ ಸಚಿವರು…

Read More

ಮಂಗಳೂರು: ಸಮಗ್ರ ಒಳಚರಂಡಿ ಯೋಜನೆ ಜಾರಿಗೆ ತರಲು ಸರ್ಕಾರಗಳು ವಿಫಲ – ಐವನ್ ಡಿಸೋಜಾ ಆರೋಪ

ಮಂಗಳೂರು: ನಗರದ ಒಳಚರಂಡಿ ವ್ಯವಸ್ಥೆ ಸಂಪೂರ್ಣ ಶಿಥಿಲಗೊಂಡಿದ್ದು, ಸಮಗ್ರ ಯೋಜನೆ ಜಾರಿಯಾಗದ ಕಾರಣ ನಾಗರಿಕರು ತೀವ್ರ ಸಂಕಷ್ಟ ಅನುಭವಿಸುತ್ತಿದ್ದಾರೆ ಎಂದು ಕೆಪಿಸಿಸಿ ಉಪಾಧ್ಯಕ್ಷ ಹಾಗೂ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ ಆರೋಪಿಸಿದರು. ಮನಪಾ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 1952ರಿಂದಲೂ ಸಮಗ್ರ ಒಳಚರಂಡಿ ಯೋಜನೆ ಜಾರಿಗೆ ತರಬೇಕೆಂಬ ಮಾತು ಕೇಳಿಬರುತ್ತಿದ್ದರೂ, ಇಂದಿಗೂ ಅದು ಸಾಕಾರವಾಗಿಲ್ಲ. ಮಳೆಗಾಲದ ಈ ಸಮಯದಲ್ಲಿ ನಗರದ ಅನೇಕ ಪ್ರದೇಶಗಳಲ್ಲಿ ಇನ್ನೂ ಒಳಚರಂಡಿ ಸಂಪರ್ಕ ವ್ಯವಸ್ಥೆ ಇಲ್ಲದ ಕಾರಣ ಬಾವಿಗಳು ಹಾಗೂ ಕೆರೆಗಳು…

Read More
error: Content is protected !!