ತುರ್ತಿ ತರವಾಡು ಸನ್ನಿಧಿಯಲ್ಲಿ ಶ್ರೀ ವಯನಾಟ್ಟುಕುಲವನ್ ತೆಯ್ಯಂ ಕಟ್ಟು ಮಹೋತ್ಸವ ಆಮಂತ್ರಣ ಬಿಡುಗಡೆ

ತುರ್ತಿ ಶ್ರೀ ವಿಷ್ಣುಮೂರ್ತಿ ವಯನಾಟ್ಟು ಕುಲವನ್ ಮಹಾಮಲರಾಯ ದೈವಸ್ಥಾನ ಪಡೆಂಕುಡಿಯ ತರವಾಡು ಸನ್ನಿಧಿಯಲ್ಲಿ ಇದೇ ಬರುವ ಏಪ್ರಿಲ್ ತಿಂಗಳ 9 10 11 12 ಎಂಬಿ ದಿನಾಂಕಗಳಲ್ಲಿ ನಡೆಯಲಿರುವ ಶ್ರೀ ವಯನಾಟುಕುಲವನ್ ತೆಯ್ಯಂ ಕಟ್ಟು ಮಹೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭವು ತರವಾಡು ಸನ್ನಿಧಿಯಲ್ಲಿ ನಡೆಯಿತು.

ಶ್ರೀ ದೈವಗಳಲ್ಲಿ ಪ್ರಾರ್ಥಿಸಿದ ಬಳಿಕ ಅಡ್ಕ ಶ್ರೀ ಭಗವತಿ ಕ್ಷೇತ್ರದ ಕಾರ್ನವರಾದ ಶ್ರೀ ಕೃಷ್ಣ ಕಾರ್ ನವರು.. ಆಮಂತ್ರಣ ಪತ್ರಿಕೆಯನ್ನು ಸಮಾಜ ಸೇವ ಧುರೀಣರಾದ ಶ್ರೀ ಕೆ ಆರ್ ಜಯಾನಂದ ಇವರಿಗೆ ನೀಡಿ ಔಪಚಾರಿಕವಾಗಿ ಬಿಡುಗಡೆಗೊಳಿಸಿದರು.

ಈ ಸಂದರ್ಭದಲ್ಲಿ ಕನಿಲ ಶ್ರೀ ಭಗವತಿ ಕ್ಷೇತ್ರದ ಆಚಾರ ಪಟ್ಟವರು ಗುರಿಕಾರರು ಸಮಿತಿ ಪದಾಧಿಕಾರಿಗಳು, ಪಟ್ಟತ್ತೂರು ಶ್ರೀ ಭಗವತಿ ಕ್ಷೇತ್ರದ ಪದಾಧಿಕಾರಿಗಳು, ಅಡ್ಕ ಶ್ರೀ ಭಗವತಿ ಕ್ಷೇತ್ರದ ಆಚಾರ ಪಟ್ಟವರು ಗುರಿಕಾರರು ಸಮಿತಿ ಪದಾಧಿಕಾರಿಗಳು, ಹಾಗೂ ಉಪ್ಪಳ ಶ್ರೀ ಭಗವತಿ ಕ್ಷೇತ್ರದ ಆಚಾರ ಪಟ್ಟವರು ಗುರಿಕಾರರು ಸಮಿತಿ ಪದಾಧಿಕಾರಿಗಳು ಮತ್ತು ವಿವಿಧ ತರವಾಡುಗಳ ಪ್ರತಿನಿಧಿಗಳು,, ಯುವಜನ ಸಂಘ, ಮಹಿಳಾ ಸಂಘದ ಪ್ರತಿನಿಧಿಗಳು ಭಾಗವಹಿಸಿದ್ದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!