ಧಾರಾಕಾರವಾಗಿ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಹೊಸಂಗಡಿ ಪೇಟೆಯ ವ್ಯಾಪಾರ ಮಳಿಗೆಗಳು,ಅಂಗಡಿಗಳು,ಹೋಟೆಲುಗಳು ಸಂಪೂರ್ಣ ಜಲಾವೃತಗೊಂಡಿದೆ.
ಇದರಿಂದಾಗಿ ವ್ಯಾಪಾರಿಗಳು ಸಂಕಷ್ಟಕ್ಕೆ ಸಿಲಿಕ್ಕಿದ್ದು ಅಪಾರ ನಾಶ ನಷ್ಟ ಉಂಟಾಗಿದೆ.ನೀರು ಹರಿದು ಹೋಗಲು ಸರಿಯಾದ ಚರಂಡಿ ವ್ಯವಸ್ಥೆ ಇಲ್ಲದಿರುವುದು ಇದಕ್ಕೆ ಪ್ರಮುಖ ಕಾರಣ ಪಂಚಾಯತ್ ಅಧಿಕಾರಿಗಳು ಹೊಣೆಯೆಂದು ವ್ಯಾಪಾರಿಗಳು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ಪ್ರತಿವರ್ಷವೂ ಇಂತಹ ಕೃತಕ ನೆರೆ ಬರುವುದು ಹೊಸಂಗಡಿಯಲ್ಲಿ ಸಹಜವಾಗಿದೆ.ಸೂಕ್ತ ಕ್ರಮವನ್ನು ಕೈಗೊಳ್ಳಬೇಕು,ವ್ಯಾಪಾರಿಗಳಿಗೆ ನಷ್ಟ ಪರಿಹಾರವನ್ನು ನೀಡಬೇಕು ,ಇಲ್ಲದೆ ಇದ್ದಲ್ಲಿ ಹೋರಾಟವನ್ನು ನಡೆಸುವುದಾಗಿ ಮಂಜೇಶ್ವರ ವ್ಯಾಪಾರ ವ್ಯವಸಾಯಿ ಏಕೋಪನ ಸಮಿತಿಯ ಅಧ್ಯಕ್ಷ ಬಶೀರ್ ಕನಿಲ ಸೂಚನೆ ನೀಡಿದ್ದಾರೆ.