ಇಲಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ಜಿಲ್ಲಾಧಿಕಾರಿ ಕಚೇರಿ ಉದ್ಯೋಗಿ ಚಿಕಿತ್ಸೆ ಫಲಿಸದೆ ಸಾವು

ಕಾಸರಗೋಡು: ವೈಯಕ್ತಿಕ ಕಾರಣದಿಂದ ಇಲಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ಕಾಸರಗೋಡು ಜಿಲ್ಲಾಧಿಕಾರಿ ಕಚೇರಿಯ ಮಹಿಳಾ ಉದ್ಯೋಗಿ ಚಿಕಿತ್ಸೆ ಫಲಕಾರಿಯಾಗದೆ ಕೋಝಿಕ್ಕೋಡ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

​ಎಡನೀರು ಸಮೀಪದ ಅದ್ರುಗುಳಿ ನಿವಾಸಿ ಆಶಾಲತ (41) ಸಾವನ್ನಪ್ಪಿದ ದುರ್ದೈವಿ.
​ಕಳೆದ ಶುಕ್ರವಾರದಂದು ಅಸ್ವಸ್ಥಗೊಂಡಿದ್ದ ಅವರನ್ನು ಮೊದಲು ಚೆಂಗಳ ಆಸ್ಪತ್ರೆಗೆ, ನಂತರ ಕಾಸರಗೋಡು ಮತ್ತು ಹೆಚ್ಚಿನ ಚಿಕಿತ್ಸೆಗಾಗಿ ಕೋಝಿಕ್ಕೋಡ್ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಆದರೆ ಚಿಕಿತ್ಸೆ ಸ್ಪಂದಿಸದೆ ಭಾನುವಾರ ಮಧ್ಯಾಹ್ನ ಅವರು ಸಾವನ್ನಪ್ಪಿದ್ದಾರೆ.

​ ಸಾವು ಸಂಭವಿಸುವುದಕ್ಕೂ ಮುನ್ನ ಪೊಲೀಸರು ಆಶಾಲತ ಅವರ ಹೇಳಿಕೆಯನ್ನು ದಾಖಲಿಸಿಕೊಂಡಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

ಈ ಅನಿರೀಕ್ಷಿತ ದುರ್ಘಟನೆಯಿಂದ ಕುಟುಂಬದಲ್ಲಿ ಹಾಗೂ ಕಚೇರಿಯಲ್ಲಿ ತೀವ್ರ ಶೋಕ ಆವರಿಸಿದೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!