ಮಂಜೇಶ್ವರ: ಭಜನಾ ತಂಡದ ಸದಸ್ಯರು ಹಾಗೂ ಪ್ರತಿಭಾವಂತ ಗಾಯಕರನ್ನು ಒಗ್ಗೂಡಿಸಿ, ಭಜನೆಯ ಮೂಲಕ ನಾಡಿನಾದ್ಯಂತ ಭಕ್ತಿಗೀತೆಗಳನ್ನು ಪಸರಿಸುವ ಉದ್ದೇಶದಿಂದ ‘ಸನಾತನಮ್’ ಭಜನಾ ತಂಡಕ್ಕೆ ಚಾಲನೆ ನೀಡಲಾಯಿತು .


ಭಾನುವಾರ ಹೊಸಂಗಡಿ ಅಯ್ಯಪ್ಪ ಕ್ಷೇತ್ರದಲ್ಲಿ ನಡೆದ ವಿಜೃಂಭಣೇ ಕಾಯಕ್ರಮದಲ್ಲಿ ಸನಾತಮ್ ತಂಡಕ್ಕೆ ಚಲನೆ ದೊರೆಕಿತು. ಉದ್ಯಾವರ ಮಾಡದ ಅಣ್ಣ ದೈವದ ಪಾತ್ರಿ ಶ್ರೀಯುತ ರಾಜ ಬೆಲ್ಚಪ್ಪಡರು, ನಾಡಿನ ಅನೇಕ ದೇವಸ್ಥಾನಗಳ ನಿರ್ಮಾಣದ ರೂವಾರಿಯಾದ ಕೃಷ್ಣ ಶಿವಕೃಪ, ಕಾಳಿಕಾ ಪರಮೇಶ್ವರಿ ದೇವಸ್ಥಾನದ ಪ್ರಧಾನ ಅರ್ಚಕರಾದ ಪ್ರಕಾಶ್ ಚಂದ್ರ ಶೌತ್ರಿ ಹಾಗೂ ಆದೀ ಕ್ಷೇತ್ರ ರಕ್ತೇಶ್ವರಿ ದೇವಸ್ಥಾನದ ಕಾರ್ಯಾಧ್ಯಕ್ಷರಾದ ಶ್ರೀಯುತ ಪದ್ಮನಾಭ ಬಾಡೂರು ಅವರು ದೀಪಪ್ರಜ್ವಲಿ ಸಿ ಕಾರ್ಯಕ್ರಮ ಉದ್ಘಾಟಿಸಿದರು.



ಕಾರ್ಯಕ್ರಮದಲ್ಲಿ ಅಯ್ಯಪ್ಪ ಕ್ಷೇತ್ರದ ಗೌರವಾಧ್ಯಕ್ಷರಾದ ಪದ್ಮನಾಭ ಕಾಡಪ್ಪರ, ಅಯ್ಯಪ್ಪ ಕ್ಷೇತ್ರದ ಅಧ್ಯಕ್ಷರಾದ ನ್ಯಾಯವಾದಿ ನವೀನ್ ರಾಜ್ ಕೆ.ಜೆ., ಸಾಮಾಜಿಕ ಹಾಗೂ ಧಾರ್ಮಿಕ ಕ್ಷೇತ್ರಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಹರೀಶ್ ಶೆಟ್ಟಿ ಮಾಡ, ಖ್ಯಾತ ವೀಣಾವಾದಕಿ ಹಾಗೂ ಶಿಕ್ಷಕಿ ಅಮೃತ ರವೀಂದ್ರ ಭಟ್ ಮಂಜೇಶ್ವರ ಹಾಗೂ ಅಯ್ಯಪ್ಪ ಕ್ಷೇತ್ರದ ಗೌರವ ಸದಸ್ಯರು ಮತ್ತು ಶಾರದಾ ಆರ್ಟ್‌ನ ಮಾಲಕರಾದ ಶ್ರೀ ಕೃಷ್ಣ ಜಿ. ಮಂಜೇಶ್ವರ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಗಣ್ಯರು ‘ಸನಾತನಮ್’ ತಂಡದ ಉದ್ದೇಶ, ಭಜನಾ ಪರಂಪರೆಯ ಮಹತ್ವ ಹಾಗೂ ಮುಂದಿನ ಕಾರ್ಯಚಟುವಟಿಕೆಗಳ ಕುರಿತು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.




ಇದೇ ಸಂದರ್ಭದಲ್ಲಿ ‘ಸನಾತನಮ್’ ತಂಡದ ಸದಸ್ಯರಿಂದ ವಿವಿಧ ಭಕ್ತಿ ಭಜನಾ ಕಾರ್ಯಕ್ರಮಗಳು ನಡೆಯಿತು. ಭಕ್ತಿ ಸಂಗೀತದ ರಸದೌತನದ ಜೊತೆಗೆ ಬಂದಂತಹ ಎಲ್ಲರಿಗೂ ವಿಶೇಷ ಉಪಹಾರದ ವ್ಯವಸ್ಥೆಯನ್ನು ಏರ್ಪಡಿಸಲಾಗಿತ್ತು .

ಭಕ್ತಿ, ಸಂಗೀತ ಹಾಗೂ ಸಾಂಸ್ಕೃತಿಕ ಪರಂಪರೆಯನ್ನು ಒಂದೆಡೆ ಸೇರಿಸಿ, ಮಂಜೇಶ್ವರದಿಂದ ನಾಡಿನಾದ್ಯಂತ ಭಜನಾ ಸಂಸ್ಕೃತಿಯನ್ನು ಪಸರಿಸುವ ಉದ್ದೇಶದಿಂದ ‘ಸನಾತನಮ್’ ತಂಡ ಕೈಗೊಂಡಿರುವ ಈ ಪ್ರಯತ್ನಕ್ಕೆ ಕಾರ್ಯಕ್ರಮದಲ್ಲಿ ಮೆಚ್ಚುಗೆ ವ್ಯಕ್ತವಾಯಿತು.



Really solid platform with a great variety of options. The customer support is also quite responsive which is a huge plus for me. Check out gtwin3.