ಕನಿಲ ಶ್ರೀ ಭಗವತಿ ಕ್ಷೇತ್ರದ ಆಡಳಿತ ಸಮಿತಿ ಅಧ್ಯಕ್ಷ ಗಣೇಶ್ ಪಾವೂರು ಅವರಿಗೆ ಸನ್ಮಾನ

ಮಂಜೇಶ್ವರ: ಕನಿಲ ಶ್ರೀ ಭಗವತಿ ಕ್ಷೇತ್ರದ ಆಡಳಿತ ಸಮಿತಿ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಗಣೇಶ್ ಪಾವೂರು ಅವರನ್ನು ಮಚ್ಚಾಂಬಾಡಿ ಉರ್ಯ ಪಾವೂರು ವಿಭಾಗದ ಭಗವತಿ ಸೇವಾ ಸಂಘದ ವತಿಯಿಂದ ಸನ್ಮಾನಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮನೋಜ್ ಕೊಪ್ಪಳ ವಹಿಸಿದ್ದರು. ಕಾರ್ಯಕ್ರಮದಲ್ಲಿ ದಯಾನಂದ ಬಜಾಲ್, ಡಾ. ಗಣೇಶ್ ಪಾವೂರು, ಆನಂದ ತಚ್ಚಿಲೇ, ಅಶೋಕ ಪಾವೂರು, ಸುರೇಶ್ ಬೊಳಿ ಯಂಗೋಡಿ, ದಿವಾಕರ ಸೇರಿದಂತೆ ಭಗವತಿ ಕ್ಷೇತ್ರದ ಗುರಿಕಾರರು ಹಾಗೂ ಆಚಾರಪಟ್ಟವರು ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಮಲ್ಲಿಕಾ ಬೇಕರಿ, ಸುಧಾಮಣಿ ಅರಿಬೈಲ್, ಸುನಂದಾ ಕಳ್ಳಾಜೆ ಸೇರಿದಂತೆ ಹಲವು ಸಮಾಜ ಬಾಂಧವರು ಕಾರ್ಯಕ್ರಮದಲ್ಲಿ ಭಾಗವಹಿಸಿ ಗಣೇಶ್ ಪಾವೂರು ಅವರನ್ನು ಅಭಿನಂದಿಸಿದರು.

ಕಾರ್ಯಕ್ರಮದಲ್ಲಿ ಸಂಘದ ಪದಾಧಿಕಾರಿಗಳು, ಕ್ಷೇತ್ರದ ಭಕ್ತರು ಹಾಗೂ ಸಮಾಜದ ಪ್ರಮುಖರು ಉಪಸ್ಥಿತರಿದ್ದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!