ಕುಂಬಳೆ : ಶ್ರೀ ಧೂಮಾವತಿ ಕೋಮರಾಯ ಚಾಮುಂಡೇಶ್ವರಿ ಪರಿವಾರ ದೈವಸ್ಥಾನ ಕಕ್ಕೆಪ್ಪಾಡಿ ಪುತ್ತಿಗೆ ಇಲ್ಲಿನ ಜೀರ್ಣೋದ್ಧಾರದ ಅಂಗವಾಗಿ ವಿಜ್ಞಾಪನಾ ಪತ್ರ ಬಿಡುಗಡೆ ಮತ್ತು ನಿಧಿ ಸಂಚಯನ ಕಾರ್ಯಕ್ರಮ ನಡೆಯಿತು.
ಈ ಸಂದರ್ಭದಲ್ಲಿ ನಡೆದ ಸಭಾಕಾರ್ಯಕ್ರಮವನ್ನು ಪುತ್ತಿಗೆ ಗ್ರಾಮ ಪಂಚಾಯತ್ ನ ಸ್ಥಾಯಿ ಸಮಿತಿ ಅಧ್ಯಕ್ಷ ಪಿ .ಪಾಲಾಕ್ಷ ರೈ ಉಧ್ಘಾಟಿಸಿದರು.ಬಾಕುಡ ಸಮುದಾಯದ 18 ದೈವಸ್ಥಾನದ ದೈವದ ಪಾತ್ರಿಗಳ ಒಕ್ಕೂಟದ ಅಧ್ಯಕ್ಷರಾದ ಶ್ರೀ ಶಂಕರ ಅಡ್ಕ ದೀಪ ಪ್ರಜ್ವಲನೆ ಮಾಡಿದರು.
ಮುಗು ಶ್ರೀ ಸುಬ್ರಾಯ ಕ್ಷೇತ್ರದ ಆಡಳಿತ ಮೊಕ್ತೇಸರರಾದ ರವೀಂದ್ರ ನಾಯಕ್ ಶೇಣಿ ವಿಜ್ಞಾಪನಾ ಪತ್ರ ಬಿಡುಗಡೆಗೊಳಿಸಿದರು .ನಿಧಿ ಸಂಚಯನ ಕಾರ್ಯಕ್ರಮವನ್ನು ಪುತ್ತಿಗೆ ಶ್ರೀ ಕಿನ್ನಿಮಾಣಿ ದೈವ ಸುಬ್ರಾಯ ಕ್ಷೇತ್ರ ಇದರ ಶ್ರೀ ಮಹಾಲಿಂಗೇಶ್ವರ ಪಿ ಎ ಮಹಾಲಿಂಗೇಶ್ವರ ಅಧಿಕಾರಿ ಉಧ್ಘಾಟಿಸಿದರು.ಸಮಾರಂಭದಲ್ಲಿ ಪುತ್ತಿಗೆ ಸುಬ್ರಾಯ ಕ್ಷೇತ್ರದ ಗುರಿಕಾರರಾದ ಬಾಲಸುಬ್ರಮಣ್ಯ ಭಟ್ ಚೆಕ್ಕಣಿಕೆ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ಧಾರ್ಮಿಕ ಮುಂದಾಳು ಕೃಷ್ಣ ಶಿವಕೃಪ ಕುಂಜತ್ತೂರ್ ಧಾರ್ಮಿಕ ಭಾಷಣ ಮಾಡಿದರು.ಡಾ|ಹರೀಶ್ ಬೊಟ್ಟಾರಿ ,ದಾಮೋದರ ದೇಲಂಪಾಡಿ ,ಉಮೇಶ್ ಎಂ ಅಸೈಗೋಳಿ ,ವಿಜಯ ಪಂಡಿತ್ ಮಂಗಲ್ಪಾಡಿ ,ಸುರೇಶ್ ಶೆಟ್ಟಿ , ಜೀವನ್ ದಾಸ್ ನೀರೋಳಿ ,ತುಳಸೀದಾಸ್ ಮಂಜೇಶ್ವರ ,ಅಶೋಕ್ ಕೊಡ್ಲಮೊಗರು,ಗಣೇಶ್ ದೈವದ ಪಾತ್ರಿ ಮುಂತಾದವರು ಹಾಜರಿದ್ದರು .ಪಿ ಸಂಜೀವ ರೈ ಪುತ್ತಿಗೆ ಬಾರೆಮಟ್ಟು ಸ್ವಾಗತಿಸಿದರು.ಕುಮಾರಿ ಗಾಯಂತಿಕ ಪ್ರಾರ್ಥನೆ ಹಾಡಿದರು.ಸುರೇಶ್ ಕುಮಾರ್ ಮಂಗಲ್ಪಾಡಿ ಕಾರ್ಯಕ್ರಮ ನಿರೂಪಿಸಿದರು.ಅನಿಲ್ ಎನ್ ಕೆ ವಂದಿಸಿದರು.