ಮೀoಜ: ಮಂಜೇಶ್ವರ ಶಾಸಕರ ಕಪಟ ನಾಟಕ ನಿಲ್ಲಿಸಬೇಕು, ಶಾಸಕರು ಅಧಿವೇಶನದಲ್ಲಿ ಭಾಗವಹಿಸದೆ ಇದ್ದುದ್ದು ಬೇಜವಾಬ್ದಾರಿ ತನದ ಪರಮಾವಧಿ ಅಭಿವೃದ್ಧಿಯಲ್ಲಿ ಮೂಲಭೂತ ಸೌಕರ್ಯ ದಲ್ಲಿ, ಅತಂತ್ಯ ಹಿಂದುಳಿದ ಪ್ರದೇಶವದ ಮಂಜೇಶ್ವರ ವಿ ಸಭಾ ಕೇತ್ರ ದ ಅಭಿವೃದ್ಧಿ ಯ ರೂಪುರೇಷೆ ಸಿದ್ದಪಡಿಸಿ ಅಧಿವೇಶನದಲ್ಲಿ ಭಾಗವಹಿಸಿ ಯೋಜನೆ ಗಳನ್ನು ಅನುಷ್ಠಾನ ಮಾಡಬೇಕಾದ ಶಾಸಕರು ಅಧಿವೇಶನ ದಲ್ಲಿ ಭಾಗವಹಿಸದೆ ಇರುವುದು ಬೇಜವಾಬ್ದಾರಿ, ಮಂಜೇಶ್ವರ ದಲ್ಲಿ ಬಂದು ಕಪಟ ನಾಟಕ ಹೋರಾಟ ಮಾಡುವುದು ನಿಲ್ಲಿಸಬೇಕೆಂದು ಬಿಜೆಪಿ ಕಾಸರಗೋಡು ಜಿಲ್ಲಾ ಉಸ್ತುವಾರಿ ನ್ಯಾ ಸಜೀವನ್ ವಿ ಕೆ ಅಗ್ರಹಿಸಿದ್ದಾರೆ.
ಬಿಜೆಪಿ ಪೈವಳಿಕೆ, ಮೀoಜ, ವರ್ಕಾಡಿ ಪಂಚಾಯತ್ ಬಿಜೆಪಿ ಕಾರ್ಯಾಗಾರ ವಿವಿಧ ಪಂಚಾಯತ್ ಗಳಲ್ಲಿ ಜರಗಿತು.ಕಾಸರಗೋಡು ಜಿಲ್ಲಾ ಉಸ್ತುವಾರಿ ನ್ಯಾ ಸಜೀವನ್ ವಿ ಕೆ ಕಾರ್ಯಕ್ರಮ ಉದ್ಘಾಟನೆ ಮಾಡಿ ಮಾತನಾಡಿದರು.
ಮಂಡಲ ಅಧ್ಯಕ್ಷಆದರ್ಶ ಬಿ ಎಂ ಮಾತನಾಡಿ ಎಡರಂಗ ಸರಕಾರ ರಾಜ್ಯ ದಲ್ಲಿ ಸ್ಥಳೀಯಡಳಿತ ಪಂಚಾಯತ್ ಗಳಿಗೆ ನೀಡಬೇಕಾದ
ಯೋಜನೆ ಗಳಿಗೆ ಕಡಿವಾಣ ಹಾಕುತ್ತಿದೆ .ಇದರಿಂದ ಲೈಫ್ ಯೋಜನೆ, ಟೆಂಡರ್ ಪ್ರಕ್ರಿಯೆ, ಗಳು ಸ್ತಬ್ದ ವಾಗಿದೆ ಸರಕಾರ ಉದ್ದೇಶ ಪೂರ್ವಕ ವಾಗಿ ಪಂಚಾಯತ್ ಕಾರ್ಯದರ್ಶಿ ಗಳನ್ನು, ಅಧಿಕಾರಿಗಳನ್ನು ನೇಮಕ ಮಾಡದೇ, ಬ್ಲಾಕ್ ಇಂಜಿನಿಯರ್ ಗಳಿಗೆ ಕಡ್ಡಾಯ ರಜೆ ನೀಡಿ ಯೋಜನೆಗಳು ಜಾರಿ ಆಗದಂತೆ ತಡೆಯುವ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದರು.
ಜಿಲ್ಲಾ ಉಪಾಧ್ಯಕ್ಷ ಮಣಿಕಂಠ ರೈ ಕಾರ್ಯದರ್ಶಿ ಲೋಕೇಶ್ ಎನ್, ಮುಖಂಡರಾದ ಎ ಕೆ ಕಯ್ಯರ್, ಪ್ರಸಾದ್ ರೈ ಭಾಸ್ಕರ್ ಪೊಯ್ಯೇ, ನಾಗೇಶ್ ಬಳ್ಳೂರ್, ತುಳಸಿ ವರ್ಕಾಡಿ, ಪದ್ಮನಾಭ ರೈ, ಬೆಜ್ಜ ಚಂದ್ರಹಾಸ, ಸದಾಶಿವ ಚೇರಲ್, ಸುಬ್ರಮಣ್ಯ ಭಟ್, ಜಯಶಂಕರ್ ಸತ್ಯ ಶಂಕರ ಆಯಾ ಪಂಚಾಯತ್ ಗಳ ನೇತೃತ್ವ ನೀಡಿದರು.ಕೆ ವಿ ಭಟ್ ಸ್ವಾಗತಿಸಿ ಯತೀರಾಜ್ ಶೆಟ್ಟಿ ವಂದಿಸಿದರು