ಸೀತಾಂಗೋಳಿ: ಇಲ್ಲಿನ ಪುತ್ತಿಗೆ ರಸ್ತೆಯ ಮುಕಾರಿಗದ್ದೆಯಲ್ಲಿ ನೂತನವಾಗಿ ಆರಂಭಗೊಂಡ ಆರ್ಶ್ ಹಾರ್ಡ್ ವೇರ್ ಅಂಗಡಿ ಅಗ್ನಿ ಅನಾಹುತಕ್ಕೊಳಗಾಗಿದೆ.
ಇಂದು ಬೆಳಿಗ್ಗೆ 9ಗಂಟೆಯ ವೇಳೆಗೆ ಮುಚ್ಚಿದ್ದ ಅಂಗಡಿಯೊಳಗಿಂದ ಹೊಗೆ ಏಳುವುದನ್ನು ಕಂಡು ನಾಗರಿಕರು ನೀಡಿದ ಮಾಹಿತಿಯಂತೆ ಅಗ್ನಿ ಶಾಮಕ ದಳದವರು ಮತ್ತು ಪೋಲೀಸರು ಆಗಮಿಸಿದರು. ಅಗ್ನಿ ಶಾಮಕ ದಳದ ಕಾಸರಗೋಡು, ಉಪ್ಪಳ ಘಟಕದ 4 ವಾಹನ ಬಂದರೂ ತಕ್ಷಣ ಅಗ್ನಿ ನಂದಿಸಲಿಕ್ಕಾಗಿಲ್ಲವೆಂದು ಸ್ಥಳೀಯರು ತಿಳಿಸಿದ್ದಾರೆ.
ಬದಿಯಡ್ಕ ಬಳಿಯ ಅರ್ಷಾದ್ ಎಂಬವರ ಮಾಲಕತ್ವದ ಸಂಸ್ಥೆ ಇದಾಗಿದೆ. ಕುಂಬಳೆ ಪೋಲೀಸರು ಸ್ಥಳದಲ್ಲಿದ್ದಾರೆ. ಅಗ್ನಿ ನಂದಿಸುವ ಪ್ರಕ್ರಿಯೆ ನಡೆಯುತ್ತಿದೆ.