Avatar

NAMMA MEDIA 24X7

ವಾಣಿಜ್ಯ ಎಲ್‌ಪಿಜಿ ಬೆಲೆ ಏರಿಕೆ: ಕೇಂದ್ರದ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ

ಬೆಂಗಳೂರು: ಐದು ರಾಜ್ಯಗಳ ವಿಧಾನಸಭಾ ಚುನಾವಣೆಯ ಬಳಿಕ 19 ಕೆಜಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ಬೆಲೆ ಏರಿಕೆ ವಿಚಾರಕ್ಕೆ ರಾಜಕೀಯ ವಾಗ್ವಾದ ತೀವ್ರಗೊಂಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಅವರ ವಿದೇಶಾಂಗ ನೀತಿ ಆರ್ಥಿಕತೆಯನ್ನು ರಕ್ಷಿಸಲು ವಿಫಲವಾಗಿದೆ ಎಂದು ಆರೋಪಿಸಿದರು. ವಿಧಾನಸಭಾ ಚುನಾವಣೆಗಳು ಮುಗಿದ ತಕ್ಷಣವೇ ಬೆಲೆ ಏರಿಕೆ ಮಾಡಲಾಗಿದೆ. ಮೇ 1ರಿಂದ ವಾಣಿಜ್ಯ ಸಿಲಿಂಡರ್ ಬೆಲೆ…

Read More

ಆನೆ ದಾಳಿಗೆ ಮೂರು ಮಾವಿನ ಮರ ನಾಶ

ಹನಗೋಡು : ಮೇವನ್ನರಸಿ ರಾತ್ರಿ ಸಮಯದಲ್ಲಿ ರೈತರ ಜಮೀನಿಗೆ ಲಗ್ಗೆಯಿಟ್ಟ ಒಂಟಿ ಸಲಗವೊಂದು ಮೂರು ಮಾವಿನ ಮರಗಳನ್ನ ನಾಶಗೊಳಿಸಿರುವ ಘಟನೆ ಹನಗೋಡು ಹೋಬಳಿಯ ಕೊಳವಿಗೆ ಗ್ರಾಮದಲ್ಲಿ ನಡೆದಿದೆ. ಕೊಳವಿಗೆ ಗ್ರಾಮದ ಶಿವರುದ್ರಪ್ಪ ಎಂಬುವರಿಗೆ ಸೇರಿದ ಮಾವಿನ ಮರಗಳು ಆನೆ ದಾಳಿಯಿಂದ ಸಂಪೂರ್ಣ ನಾಶವಾಗಿದ್ದು, ಇನ್ನೇನು ಫಸಲನ್ನು ಕೂಯ್ಲು ಮಾಡುವ ಸಮಯವಾಗಿದ್ದು, ನಷ್ಟದಿಂದ ರೈತ ಶಿವರುದ್ರಪ್ಪ ರವರು ಪರಿಹಾರಕ್ಕಾಗಿ ಅರಣ್ಯ ಇಲಾಖೆಯವರನ್ನು ಮನವಿ ಮಾಡಿದ್ದಾರೆ.

Read More

ಮೃತ್ಯುಂಜಯಿ ಮಮತೆ: ಸಾವಿನ ಅಲೆಗಳಲ್ಲೂ ಸೋಲದ ತಾಯಿಯ ಅಪ್ಪುಗೆ

​ಜಗತ್ತಿನಲ್ಲಿ ಅಳೆದು ಮುಗಿಸಲಾಗದ ಸಾಗರವಿದ್ದರೆ ಅದು ತಾಯಿಯ ಪ್ರೀತಿ ಮಾತ್ರ. ಪ್ರಕೃತಿಯ ವಿಕೋಪದ ಮುಂದೆ ಮನುಷ್ಯ ಎಷ್ಟೇ ಕುಬ್ಜನಾದರೂ, ತನ್ನ ಮಗುವನ್ನು ರಕ್ಷಿಸುವ ತಾಯಿಯ ಸಂಕಲ್ಪದ ಮುಂದೆ ಸಾವು ಕೂಡ ಒಂದು ಕ್ಷಣ ತಲೆಬಾಗುವುದು ಅಚ್ಚರಿಯೇನಲ್ಲ. ಜಬಲ್‌ಪುರದ ಬಾರ್ಗಿ ಅಣೆಕಟ್ಟಿನಲ್ಲಿ ಸಂಭವಿಸಿದ ಆ ಕರಾಳ ದುರಂತದ ಈ ಮೌನ ಸಾಕ್ಷಿ, ಕೇವಲ ಒಂದು ಚಿತ್ರವಲ್ಲ; ಇದು ಮಮತೆಯ ಪರಾಕಾಷ್ಠೆ. ​ಕ್ರೂಸ್ ಹಡಗು ಮುಳುಗಿ ಅಲೆಗಳ ಅಬ್ಬರಕ್ಕೆ ಸಿಲುಕಿದ ಆ ತಾಯಿ ಮತ್ತು ಮಗು, ಸುಮಾರು ಹದಿನೈದು ಗಂಟೆಗಳ…

Read More

ಕಾರ್ಮಿಕರೇ ದೇಶದ ಅಭಿವೃದ್ಧಿಯ ಶಿಲ್ಪಿಗಳು: ಸಿದ್ದರಾಮಯ್ಯ

ಬೆಂಗಳೂರು, ಮೇ 2: ಕಾರ್ಮಿಕರು ದೇಶದ ಆರ್ಥಿಕ ಹಾಗೂ ಸಾಮಾಜಿಕ ಅಭಿವೃದ್ಧಿಯ ಶಿಲ್ಪಿಗಳಾಗಿದ್ದು, ಅವರ ಶ್ರಮವೇ ರಾಷ್ಟ್ರ ನಿರ್ಮಾಣದ ಮೂಲಶಕ್ತಿ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ. ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಆಯೋಜಿಸಿದ್ದ ವಿಶ್ವ ಕಾರ್ಮಿಕ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, “ಕಾಯಕವೇ ಕೈಲಾಸ” ಎಂದು ಬಸವಣ್ಣ ಹೇಳಿರುವುದನ್ನು ಉಲ್ಲೇಖಿಸಿದರು. ಯಾವುದೇ ಕೆಲಸ ಮಾಡಿದರೂ ಅದಕ್ಕೆ ಸಮಾನ ಗೌರವ ದೊರೆಯಬೇಕು. ಕಾರ್ಮಿಕರು ದೇಶದ ಸಾಮಾಜಿಕ ಹಾಗೂ ಆರ್ಥಿಕ ಅಭಿವೃದ್ಧಿಗೆ ಅವಿಭಾಜ್ಯ ಅಂಗ ಎಂದು ಹೇಳಿದರು. ದೇಶದಲ್ಲಿ 75 ಶೇಕಡಕ್ಕೂ…

Read More

ಬಂದಿಯೊಡ್–ಇಚ್ಚಿಲಂಗೋಡ್ ರಸ್ತೆ ದುಸ್ಥಿತಿ: ಸ್ಥಳೀಯರು ಸಂಕಷ್ಟದಲ್ಲಿ

ಮಂಜೇಶ್ವರ: ಬಂದಿಯೊಡ್–ಇಚ್ಚಿಲಂಗೋಡ್ ಸಂಪರ್ಕ ರಸ್ತೆ ಕಳೆದ ಮೂರು ವರ್ಷಗಳಿಂದ ಸಂಪೂರ್ಣ ಹದಗೆಟ್ಟಿದ್ದು, ನಿವಾಸಿಗಳು ತೀವ್ರ ಸಂಕಷ್ಟ ಅನುಭವಿಸುತ್ತಿದ್ದಾರೆ ಎಂದು ಸ್ಥಳೀಯರು ದೂರಿದ್ದಾರೆ.ರಸ್ತೆ ಹಾಳಾಗಿರುವುದರಿಂದ ಆಟೋ ರಿಕ್ಷಾಗಳು ಈ ಭಾಗಕ್ಕೆ ಬರುವುದಕ್ಕೂ ಹಿಂದೇಟು ಹಾಕುತ್ತಿವೆ. ಆಟೋ ಬಾಡಿಗೆಗೆ ಕರೆ ಮಾಡಿದರೂ ಚಾಲಕರು ಬಾರದ ಪರಿಸ್ಥಿತಿ ನಿರ್ಮಾಣವಾಗಿದೆ. ಇದಕ್ಕೆ ಚಾಲಕರ ತಪ್ಪಲ್ಲ, ರಸ್ತೆ ದುಸ್ಥಿತಿಯೇ ಕಾರಣ ಎಂದು ಸಾರ್ವಜನಿಕರು ಅಭಿಪ್ರಾಯಪಟ್ಟಿದ್ದಾರೆ. ಈ ಪ್ರದೇಶದಲ್ಲಿ ದೇವಸ್ಥಾನ ಹಾಗೂ ಮಸೀದಿ ಇರುವುದರಿಂದ ಜನರ ಸಂಚಾರ ಹೆಚ್ಚಾಗಿದೆ. ವಿಶೇಷವಾಗಿ ಇಚ್ಚಿಲಂಗೋಡ್ ಜುಮಾ ಮಸೀದಿಗೆ ಪ್ರತಿದಿನ…

Read More

​ಮಂಜೇಶ್ವರ: ಹೋಟೆಲ್‌ಗಳ ಮೇಲೆ ಆರೋಗ್ಯ ಇಲಾಖೆ ದಿಢೀರ್ ದಾಳಿ – ಹಳಸಿದ ಆಹಾರ ಪತ್ತೆ

ಮಂಜೇಶ್ವರ: ಮಂಜೇಶ್ವರ ಗ್ರಾಮ ಪಂಚಾಯತ್ ವ್ಯಾಪ್ತಿಯ ವಿವಿಧ ಭಾಗಗಳಲ್ಲಿ ಆರೋಗ್ಯ ಇಲಾಖೆಯ ಅಧಿಕಾರಿಗಳು ದಿಢೀರ್ ತಪಾಸಣೆ ನಡೆಸಿದ್ದು, ಹಲವು ಹೋಟೆಲ್‌ಗಳಲ್ಲಿ ಅಶುಚಿಯಾದ ಮತ್ತು ಹಳಸಿದ ಆಹಾರ ಪದಾರ್ಥಗಳು ಪತ್ತೆಯಾಗಿವೆ.​​ಮಂಜೇಶ್ವರ ಆರೋಗ್ಯ ಇಲಾಖೆಯ ಅಧಿಕಾರಿ ಹಾಶಿಂ ಅವರ ನೇತೃತ್ವದ ತಂಡವು ತಲಪಾಡಿ, ತೂಮಿನಾಡು ಹಾಗೂ ಉದ್ಯಾವರ ಸೇರಿದಂತೆ ಪಂಚಾಯತ್ ವ್ಯಾಪ್ತಿಯ ಪ್ರಮುಖ ಹೋಟೆಲ್‌ಗಳ ಮೇಲೆ ಈ ಕಾರ್ಯಾಚರಣೆ ನಡೆಸಿತು. ತಪಾಸಣೆಯ ವೇಳೆ ಕಿಚನ್‌ನ ಶುಚಿತ್ವ ಹಾಗೂ ಸಂಗ್ರಹಿಸಿಟ್ಟಿದ್ದ ಆಹಾರ ಪದಾರ್ಥಗಳನ್ನು ಪರಿಶೀಲಿಸಲಾಯಿತು. ಈ ಸಂದರ್ಭದಲ್ಲಿ ಕೆಲವು ಹೋಟೆಲ್‌ಗಳಲ್ಲಿ ಗ್ರಾಹಕರಿಗೆ…

Read More

ಕೇರಳದಲ್ಲಿ ಬಿಜೆಪಿ ಡಬಲ್ ಡಿಜಿಟ್ ಸ್ಥಾನ ಗೆಲ್ಲಲಿದೆ: ಕೆ. ಸುರೇಂದ್ರನ್ ವಿಶ್ವಾಸ

ಪುತ್ತೂರು: ಕೇರಳದಲ್ಲಿ ಈ ಬಾರಿ ಬಿಜೆಪಿ ಡಬಲ್ ಡಿಜಿಟ್ ಸಂಖ್ಯೆಯಲ್ಲಿ ಸ್ಥಾನ ಗಳಿಸಲಿದೆ ಎಂದು ಮಂಜೇಶ್ವರ ಬಿಜೆಪಿ ಅಭ್ಯರ್ಥಿ ಕೆ. ಸುರೇಂದ್ರನ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ಮಾತನಾಡಿದ ಅವರು, ಕಳೆದ ಲೋಕಸಭಾ ಚುನಾವಣೆಯಲ್ಲಿ ಕೇರಳದಲ್ಲಿ ಬಿಜೆಪಿ ಸುಮಾರು 20 ಶೇಕಡಾ ಮತಗಳನ್ನು ಪಡೆದಿದ್ದು, ತ್ರಿಶೂರ್ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಜಯಗಳಿಸಿರುವುದನ್ನು ಉಲ್ಲೇಖಿಸಿದರು. ಕೇರಳದಿಂದ ಲೋಕಸಭೆಗೆ ಬಿಜೆಪಿ ಅಭ್ಯರ್ಥಿಯನ್ನು ಗೆಲುವಿನತ್ತ ಕೊಂಡೊಯ್ದಿದ್ದೇವೆ. ಇದೇ ರೀತಿ ಈ ಬಾರಿ ವಿಧಾನಸಭಾ ಚುನಾವಣೆಯಲ್ಲೂ ಪಕ್ಷ ಉತ್ತಮ ಸಾಧನೆ…

Read More

ಭಾರತ–ಪಾಕಿಸ್ತಾನ ಸಂಘರ್ಷ ನಿಲ್ಲಿಸಿದ್ದು ನಾನೇ: ಟ್ರಂಪ್ ಪುನರುಚ್ಚಾರ

ವಾಷಿಂಗ್ಟನ್: ಭಾರತ–ಪಾಕಿಸ್ತಾನ ನಡುವಿನ ಸಂಘರ್ಷವನ್ನು ತಾನೇ ನಿಲ್ಲಿಸಿದ್ದೇನೆ ಎಂದು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತೆ ಪುನರುಚ್ಚರಿಸಿದ್ದಾರೆ. ಶ್ವೇತಭವನದಲ್ಲಿ ಕಾರ್ಯಕಾರಿ ಆದೇಶಕ್ಕೆ ಸಹಿ ಹಾಕಿದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಟ್ರಂಪ್, ಸಂಘರ್ಷ ಮುಂದುವರಿದಿದ್ದರೆ ಭಾರತ ಮತ್ತು ಪಾಕಿಸ್ತಾನದ ಮೇಲೆ ಶೇ.200ರಿಂದ 250ರವರೆಗೆ ಸುಂಕ ವಿಧಿಸುವುದಾಗಿ ಎಚ್ಚರಿಕೆ ನೀಡಿದ್ದಾಗಿ ಹೇಳಿದ್ದಾರೆ. ತಮ್ಮ ಈ ನಿಲುವಿನ ಪರಿಣಾಮವೇ ಉಭಯ ರಾಷ್ಟ್ರಗಳು ಕದನ ವಿರಾಮಕ್ಕೆ ಒಪ್ಪಿಕೊಂಡವು ಎಂದು ತಿಳಿಸಿದ್ದಾರೆ. “ನನ್ನ ಮಧ್ಯಸ್ಥಿಕೆಯಿಂದ ಸುಮಾರು 3ರಿಂದ 5 ಕೋಟಿ ಜನರ ಪ್ರಾಣ…

Read More

ಗ್ಯಾಸ್ ದರ ಏರಿಕೆ ಹೋಟೆಲ್ ಉದ್ಯಮಕ್ಕೆ ಆಘಾತ: ಡಾ. ತಲ್ಲೂರು ಶಿವರಾಮ ಶೆಟ್ಟಿ

ಉಡುಪಿ: ವಾಣಿಜ್ಯ ಬಳಕೆಯ ಎಲ್ ಪಿಜಿ ಸಿಲಿಂಡರ್ ಬೆಲೆಯಲ್ಲಿ ಏಕಾಏಕಿಯಾಗಿ ಇಂದು ಬರೋಬ್ಬರಿ 993ರೂ. ಹೆಚ್ಚಳವಾಗಿದೆ. ಇದರಿಂದ ಹೋಟೆಲ್ ಮತ್ತು ರೆಸ್ಟೋರೆಂಟ್ ಉದ್ಯಮಿಗಳಿಗೆ ದೊಡ್ಡ ಆರ್ಥಿಕ ಹೊರೆಯಾಗಲಿದೆ. ವಾಣಿಜ್ಯ ಸಿಲಿಂಡರ್ ಬೆಲೆ ಹೆಚ್ಚಳದಿಂದ ಹೊರಗಿನ ಆಹಾರ ಪದಾರ್ಥಗಳ ಬೆಲೆ ಏರಿಕೆಯ ಭೀತಿ ಎದುರಾಗಿದೆ. ಎಲ್ ಪಿಜಿ ದರ ಏರಿಕೆ ಕುರಿತು ಮಾಧ್ಯಮ ಪ್ರತಿನಿಧಿಗಳಿಗೆ ಪ್ರತಿಕ್ರಿಯೆ ನೀಡಿದ ಹೊಟೇಲ್ ಮಾಲಕರ ಸಂಘದ ರಾಜ್ಯ ಉಪಾಧ್ಯಕ್ಷ ಡಾ. ತಲ್ಲೂರು ಶಿವರಾಮ ಶೆಟ್ಟಿ ಅವರು, ಗ್ಯಾಸ್ ಸಿಲಿಂಡರ್ ಕೊರತೆ ಹಾಗೂ ದರ…

Read More

ಸುದೀಪ್ ಶೆಟ್ಟಿ ಆತ್ಮಹತ್ಯೆ ಪ್ರಕರಣ: ನಟಿ ಸೌಮ್ಯ ಶೆಟ್ಟಿಗೆ ಜಾಮೀನು ನಿರಾಕರಿಸಿದ ಉಡುಪಿ ಕೋರ್ಟ್

ಉಡುಪಿ: ಇತ್ತೀಚಿಗೆ ಕಾರ್ಕಳದಲ್ಲಿ ಸಂಚಲನ ಉಂಟುಮಾಡಿದ್ದ ಉದ್ಯಮಿ ಸುದೀಪ್‌ ಶೆಟ್ಟಿ ಆತ್ಮಹತ್ಯೆ ಪ್ರಕರಣದಲ್ಲಿ ನಟಿ ಸೌಮ್ಯ ಶೆಟ್ಟಿಗೆ ಜಾಮೀನು ನಿರಾಕರಣೆಯಾಗಿದೆ‌. ಸುದೀಪ್‌ ಶೆಟ್ಟಿ ಆತ್ಮಹತ್ಯೆ ಸಂಬಂಧ ಪೊಲೀಸ್‌ ವಶದಲ್ಲಿದ್ದ ಆತನ ಪತ್ನಿ ಸೌಮ್ಯ ಶೆಟ್ಟಿಗೆ ಉಡುಪಿ ಸೆಶನ್ಸ್‌ ನ್ಯಾಯಾಲಯ ಜಾಮೀನು ನಿರಾಕರಿಸಿದೆ. ಮಾ. 22ರಂದು ಸುದೀಪ್ ಶೆಟ್ಟಿ ಆತ್ಮಹತ್ಯೆಗೆ ಶರಣಾಗಿದ್ದು, ಸಾವಿಗೆ ಸೌಮ್ಯ ಶೆಟ್ಟಿಯೇ ಕಾರಣ ಎಂದು ಸುದೀಪ್‌ ತಂದೆ ದಾಮೋದರ್ ಕಾರ್ಕಳ ನಗರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪ್ರಕರಣ ಸಂಬಂಧ ಸೌಮ್ಯ ಶೆಟ್ಟಿಯನ್ನು ಎ….

Read More
error: Content is protected !!