Avatar

NAMMA MEDIA 24X7

ಕ್ಷೇತ್ರ ಮರುವಿಂಗಡನೆ ವಿರುದ್ಧ ಉಡುಪಿ ಕಾಂಗ್ರೆಸ್ ಪ್ರತಿಭಟನೆ: ರಸ್ತೆ ತಡೆ ಮಾಡಿ ಆಕ್ರೋಶ

ಉಡುಪಿ: ಕೇಂದ್ರ ಸರ್ಕಾರದ ಕ್ಷೇತ್ರ ಮರುವಿಂಗಡನೆ ಮಸೂದೆ ವಿರೋಧಿಸಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಜಿಲ್ಲಾ ಘಟಕದಿಂದ ಉಡುಪಿಯಲ್ಲಿ ಪ್ರತಿಭಟನೆ ನಡೆಯಿತು. ಉಡುಪಿ ಜಿಲ್ಲಾ ಕಾಂಗ್ರೆಸ್ ಭವನದಿಂದ ಕಾಲ್ನಡಿಗೆ ಮೂಲಕ ಬ್ರಹ್ಮಗಿರಿ ಸರ್ಕಲ್‌ಗೆ ಆಗಮಿಸಿದ ಕಾರ್ಯಕರ್ತರು ಅಲ್ಲಿಗೆ ತಲುಪಿ ಕೆಲಕಾಲ ರಸ್ತೆ ತಡೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ಅವರು, ಕೇಂದ್ರ ಸರ್ಕಾರ ಮಹಿಳಾ ಮೀಸಲಾತಿ ಮಸೂದೆಯನ್ನು ಗುರಾಣಿಯಾಗಿ ಬಳಸಿಕೊಂಡು ಕ್ಷೇತ್ರ ಮರುವಿಂಗಡನೆ ಮಸೂದೆ ಮಂಡಿಸಲು ಯತ್ನಿಸಿದೆ ಎಂದು…

Read More

ಉಡುಪಿಯಲ್ಲಿ ‘ಶ್ರೀರಾಮ ಟಂಕ ಜಪ’ ಅಭಿಯಾನಕ್ಕೆ ಚಾಲನೆ: ಗೀತಾಮಂದಿರದಲ್ಲಿ ಭಕ್ತಿಭಾವದ ಕಾರ್ಯಕ್ರಮ

ಉಡುಪಿ: ಧಾರ್ಮಿಕ ನಗರಿ ಉಡುಪಿಯ ಶ್ರೀಕೃಷ್ಣ ಮಠ ಸಮೀಪದ ಗೀತಾಮಂದಿರ ದ ಶ್ರೀ ಪುತ್ತಿಗೆ ನರಸಿಂಹ ಸಭಾಂಗಣದಲ್ಲಿ ವಿಶೇಷ ‘ಶ್ರೀರಾಮ ಟಂಕ ಜಪ’ ಅಭಿಯಾನಕ್ಕೆ ಭಕ್ತಿಪೂರ್ವಕ ಚಾಲನೆ ನೀಡಲಾಯಿತು. ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ ಅವರು ಅಭಿಯಾನವನ್ನು ಉದ್ಘಾಟಿಸಿ ಚಾಲನೆ ನೀಡಿದರು. ಇನ್ನು ಮುಂದೆ ಪ್ರತಿ ಭಾನುವಾರ ಸಾರ್ವಜನಿಕರಿಗಾಗಿ ಈ ಜಪ ಅಭಿಯಾನ ನಿರಂತರವಾಗಿ ನಡೆಯಲಿದೆ. ಪುರಾಣ ಕಾಲದ ಅಪರೂಪದ ನಾಣ್ಯವಾಗಿರುವ “ಶ್ರೀರಾಮ ಟಂಕ”ಕ್ಕೆ ವಿಶಿಷ್ಟ ಧಾರ್ಮಿಕ ಮಹತ್ವವಿದೆ. ಈ ಪವಿತ್ರ ನಾಣ್ಯವನ್ನು ಎರಡು ಕೈಗಳ ಮಧ್ಯೆ…

Read More

ಮಹಿಳಾ ಮೀಸಲಾತಿ ಹೆಸರಿನಲ್ಲಿ ವಂಚನೆ: ಕೇಂದ್ರದ ವಿರುದ್ಧ ದಿನೇಶ್ ಗುಂಡೂರಾವ್ ಆರೋಪ

ಬೆಂಗಳೂರು: ಕೇಂದ್ರ ಸರ್ಕಾರ ಮಹಿಳೆಯರ ಹೆಸರಿನಲ್ಲಿ ವಂಚನೆ ಮಾಡಲು ಮುಂದಾಗಿದೆ ಎಂದು ರಾಜ್ಯ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಆರೋಪಿಸಿದ್ದಾರೆ. ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಮಹಿಳಾ ಮೀಸಲಾತಿಗೆ ವಿರೋಧ ವ್ಯಕ್ತಪಡಿಸುತ್ತಿರುವುದು ವಾಸ್ತವದಲ್ಲಿ ಬಿಜೆಪಿ ನಾಯಕರು ಎಂದರು. 2023ರಲ್ಲಿ ಮಹಿಳಾ ಮೀಸಲಾತಿ ಮಸೂದೆ ಬಂದಾಗ ಅದನ್ನು ಸರ್ವಾನುಮತದಿಂದ ಅಂಗೀಕರಿಸಿದ್ದೇವೆ ಎಂದು ತಿಳಿಸಿದರು. ಮಹಿಳಾ ಮೀಸಲಾತಿಗೆ ಕ್ಷೇತ್ರ ಪುನರ್‌ವಿಂಗಡಣೆ ಯಾವುದೇ ರೀತಿಯ ಸಂಬಂಧ ಹೊಂದಿಲ್ಲ. ಮಹಿಳೆಯರಿಗೆ 33 ಶೇಕಡಾ ಮೀಸಲಾತಿ ನೀಡುವ ಕುರಿತು ತಕ್ಷಣ ತೀರ್ಮಾನ ಕೈಗೊಳ್ಳಬೇಕು…

Read More

ಮಂಗಳೂರಿನಲ್ಲಿ ಬಜರಂಗದಳ ಸಂಯೋಜಕರ ಸಮಾವೇಶಕ್ಕೆ ಚಾಲನೆ: ಸಂಘನಿಕೇತನದಲ್ಲಿ ಎರಡು ದಿನಗಳ ಕಾರ್ಯಕ್ರಮ

ಮಂಗಳೂರು: ಬಜರಂಗ ದಳ ಕರ್ನಾಟಕ ದಕ್ಷಿಣ ಪ್ರಾಂತದ ಸಂಯೋಜಕರ ಸಮಾವೇಶ ಮಂಗಳೂರಿನ ಸಂಘನಿಕೇತನ ನಲ್ಲಿ ಎರಡು ದಿನಗಳ ಕಾಲ ನಡೆಯುತ್ತಿದ್ದು, ಶನಿವಾರ ಅದಕ್ಕೆ ಅಧಿಕೃತ ಚಾಲನೆ ನೀಡಲಾಯಿತು. ಗೋಪೂಜೆ ಹಾಗೂ ಧ್ವಜಾರೋಹಣದ ಮೂಲಕ ಸಮಾವೇಶವನ್ನು ವಿಧಿವತ್ತಾಗಿ ಉದ್ಘಾಟಿಸಲಾಯಿತು. ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಬಜರಂಗದಳ ಸಂಯೋಜಕ ಕಿಶನ್ ಪ್ರಜಾಪತ್ ಭಾಗವಹಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಸ್ಥಾಣು ಮಾಲಯನ್ ಜೀ, ಡಾ ಎಂ ಬಿ ಪುರಾಣಿಕ್, ಸುರೇಶ್ ಬಿ ಇ, ಶರಣ್ ಪಂಪುವೆಲ್ ಹಾಗೂ ಪ್ರಭಂಜನ್ ಸೂರ್ಯ ಸೇರಿದಂತೆ ಹಲವು ಪ್ರಮುಖರು…

Read More

ಸರ್ಕಾರಿ-ಖಾಸಗಿ ಆರೋಗ್ಯ ಒಪ್ಪಂದಗಳಿಗೆ ವಿರೋಧ: ಏ.28ರಂದು ಡಿವೈಎಫ್‌ಐ ಪ್ರತಿಭಟನೆ

Democratic Youth Federation of India (ಡಿವೈಎಫ್‌ಐ) ದಕ್ಷಿಣ ಕನ್ನಡ ಜಿಲ್ಲಾ ಸಮಿತಿಯು, ಸರ್ಕಾರಿ ಆಸ್ಪತ್ರೆಗಳು ಮತ್ತು ಖಾಸಗಿ ವೈದ್ಯಕೀಯ ಸಂಸ್ಥೆಗಳ ನಡುವಿನ ಒಪ್ಪಂದಗಳನ್ನು ರದ್ದುಪಡಿಸುವಂತೆ ಆಗ್ರಹಿಸಿ, ಏಪ್ರಿಲ್ 28ರಂದು ಜಿಲ್ಲಾ ಉಸ್ತುವಾರಿ ಸಚಿವರ ಕಚೇರಿಗೆ ಪ್ರತಿಭಟನೆಯನ್ನು ನಡೆಸುವುದಾಗಿ ಡಿವೈಎಫ್‌ಐ ಜಿಲ್ಲಾಧ್ಯಕ್ಷ ಬಿ.ಕೆ. ಇಮ್ತಿಯಾಜ್ ತಿಳಿಸಿದರು . ಅವರು ನಗರದ ಪತ್ರಿಕಾಭವನದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿ , ರಾಜ್ಯದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇತ್ತೀಚೆಗೆ ಕೈಗೊಂಡಿರುವ ಸರ್ಕಾರಿ ಆರೋಗ್ಯ ಕೇಂದ್ರಗಳನ್ನು ಖಾಸಗಿ ವೈದ್ಯಕೀಯ ಕಾಲೇಜುಗಳೊಂದಿಗೆ…

Read More

ರೆ| ಜಾನ್ ಫ್ರಾನ್ಸಿಸ್ ಸಿಕ್ವೇರಾ, ಒಸಿಡಿ, ಕರ್ನಾಟಕ-ಗೋವಾ ಪ್ರಾಂತ್ಯದ ಪ್ರೊವಿನ್ಶಿಯಲ್ ಸುಪೀರಿಯರ್ ಆಗಿ ಆಯ್ಕೆ

ಮೈಸೂರು, ಎಪ್ರಿಲ್ 17, 2026: ಮೈಸೂರಿನ ಬೋಗಾದಿಯ ಧ್ಯಾನ ಸಾಧನದಲ್ಲಿ ಶುಕ್ರವಾರ, ಎಪ್ರಿಲ್ 17, 2026 ರಂದು ನಡೆದ 16ನೇ ಪ್ರೊವಿನ್ಶಿಯಲ್ ಚಾಪ್ಟರ್ (ಮಹಾಧಿವೇಶನ) ನಲ್ಲಿ ಡಿಸ್ಕಾಲ್ಸ್ಡ್ ಕಾರ್ಮೆಲೈಟ್ಸ್ (Discalced Carmelites) ಸಭೆಯ ಕರ್ನಾಟಕ-ಗೋವಾ ಪ್ರಾಂತ್ಯದ ಪ್ರೊವಿನ್ಶಿಯಲ್ ಸುಪೀರಿಯರ್ ಆಗಿ ವಂದನೀಯ ರೆ| ಡಾ. ಜಾನ್ ಫ್ರಾನ್ಸಿಸ್ ಸಿಕ್ವೇರಾ, ಒಸಿಡಿ, ಆಯ್ಕೆಯಾಗಿದ್ದಾರೆ. ಕಳೆದ ಮೂರು ವರ್ಷಗಳಿಂದ ಪ್ರೊವಿನ್ಶಿಯಲ್ ಸುಪೀರಿಯರ್ ಆಗಿ ಸೇವೆ ಸಲ್ಲಿಸುತ್ತಿದ್ದ ವಂದನೀಯ ರೆ| ಸಿಲ್ವೆಸ್ಟರ್ ಡಿ’ಸೋಜಾ, ಒಸಿಡಿ ಅವರ ಉತ್ತರಾಧಿಕಾರಿಯಾಗಿ ಇವರು ಅಧಿಕಾರ ವಹಿಸಿಕೊಂಡಿದ್ದಾರೆ….

Read More

ಸ್ಕೂಟರ್‌ನಲ್ಲಿ ಮಾದಕ ವಸ್ತು ಸಾಗಾಟ:19.340 ಗ್ರಾಂ ಎಂ.ಡಿ.ಎಂ.ಎ ಸಹಿತ ಯುವಕನ ಬಂಧನ

ಕಾಸರಗೋಡು: ಸ್ಕೂಟರ್‌ನಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 19.340 ಗ್ರಾಂ ಎಂ.ಡಿ.ಎಂ.ಎ ಸಹಿತ ಓರ್ವನನ್ನು ಕುಂಬಳೆ ಪೊಲೀಸರು ಬಂಧಿಸಿದ್ದಾರೆ.ದಕ್ಷಿಣ ಕರ್ನಾಟಕದ ಪೆರುಮಣ್ಣೂರು, ಕಲ್ಲಾಪು ನಿವಾಸಿಯಾದ ಸಯ್ಯಿದ್ ಆಫ್ರೀದಿ (28) ಬಂಧಿತನಾಗಿದ್ದಾನೆ. ಶುಕ್ರವಾರ ಮಧ್ಯರಾತ್ರಿ ಸುಮಾರು 12 ಗಂಟೆಗೆ ಶಿರಿಯ ಮುಟ್ಟಮ್ ಪ್ರದೇಶದಲ್ಲಿ ಪೇಟ್ರೋಲಿಂಗ್ ನಡೆಸುತ್ತಿದ್ದ ವೇಳೆ ಸರ್ವೀಸ್ ರಸ್ತೆಯಲ್ಲಿ ಅನುಮಾನಾಸ್ಪದವಾಗಿ ಕಂಡುಬಂದ ಕರ್ನಾಟಕ ನೋಂದಣಿ ಸಂಖ್ಯೆಯ ಸ್ಕೂಟರ್ ಅನ್ನು ಪೊಲೀಸರು ತಡೆದು ಪರಿಶೀಲನೆ ನಡೆಸಿದರು. ಈ ವೇಳೆ ಆರೋಪಿಯ ಬಳಿ ಇದ್ದ ಮಾದಕ ವಸ್ತು ಪತ್ತೆಯಾಯಿತು ಎಂದು ಪೊಲೀಸರು ತಿಳಿಸಿದ್ದಾರೆ….

Read More

ಸೀಮಾಧಿಪತಿ ಮಹಾಲಿಂಗೇಶ್ವರ ಮತ್ತು ಬಲ್ನಾಡು ಉಳ್ಳಾಲ್ತಿಯ ದೈವಿಕ ಅನುಬಂಧ: ಒಂದು ಪಾರಂಪರಿಕ ಅವಲೋಕನ

​ತುಳುನಾಡಿನ ಸಾಂಸ್ಕೃತಿಕ ಪರಂಪರೆಯಲ್ಲಿ ದೈವಿಕ ನಂಬಿಕೆಗಳು ಕೇವಲ ವಿಧಿವಿಧಾನಗಳಲ್ಲ; ಅವು ಈ ಮಣ್ಣಿನ ಜೀವನಾಡಿಗಳು. ಇಲ್ಲಿನ ಆರಾಧನಾ ಪದ್ಧತಿಯಲ್ಲಿ ದೇವಸ್ಥಾನ ಮತ್ತು ದೈವಸ್ಥಾನಗಳ ನಡುವೆ ಇರುವ ಅವಿನಾಭಾವ ಸಂಬಂಧವು ಲೋಕದೃಷ್ಟಿಗೆ ವಿಸ್ಮಯಕಾರಿಯಾದರೂ, ಭಕ್ತನ ಪಾಲಿಗೆ ಅದು ಬದುಕಿನ ಪರಮ ಸತ್ಯ. ಇದಕ್ಕೆ ಅತ್ಯಂತ ಜ್ವಲಂತ ಉದಾಹರಣೆಯೆಂದರೆ ಪುತ್ತೂರಿನ ಸೀಮಾಧಿಪತಿ ಶ್ರೀ ಮಹಾಲಿಂಗೇಶ್ವರ ಮತ್ತು ಬಲ್ನಾಡಿನ ಶಕ್ತಿರೂಪಿ ಉಳ್ಳಾಲ್ತಿ ಅಮ್ಮನ ನಡುವಿನ ದೈವಿಕ ಅನುಬಂಧ. ಇದು ಕೇವಲ ಪುರಾಣದ ಕಥೆಯಲ್ಲ, ಭಕ್ತಿ ಮತ್ತು ತ್ಯಾಗದ ಸಂಗಮವಾಗಿ ತಲೆಮಾರುಗಳಿಂದ ಹರಿದುಬರುತ್ತಿರುವ…

Read More

ಮಂಜೇಶ್ವರ ರೈಲ್ವೆ ನಿಲ್ದಾಣಕ್ಕೆ ಅಭಿವೃದ್ಧಿಯ ಸ್ಪರ್ಶ: ಮೂಲಸೌಕರ್ಯ ವೃದ್ಧಿಗೆ ಡಿಆರ್‌ಎಂ ಮಧುಕರ್ ರಾವ್ ಭರವಸೆ

ಮಂಜೇಶ್ವರ: ಮಂಜೇಶ್ವರ ರೈಲ್ವೆ ನಿಲ್ದಾಣದಲ್ಲಿ ಅಗತ್ಯ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸಲಾಗುವುದು ಎಂದು ದಕ್ಷಿಣ ರೈಲ್ವೆಯ ಪಾಲಕ್ಕಾಡ್ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಮಧುಕರ್ ರಾವ್ ತಿಳಿಸಿದ್ದಾರೆ. ನಿಲ್ದಾಣಕ್ಕೆ ಭೇಟಿ ನೀಡಿದ ವೇಳೆ ಜನಪ್ರತಿನಿಧಿಗಳು, ಪ್ರಯಾಣಿಕರು ಹಾಗೂ ನಿಲ್ದಾಣ ಅಭಿವೃದ್ಧಿ ಸಮಿತಿ ಸದಸ್ಯರೊಂದಿಗೆ ಚರ್ಚೆ ನಡೆಸಿದ ಅವರು, ಹಲವು ಪ್ರಮುಖ ಕಾಮಗಾರಿಗಳ ಬಗ್ಗೆ ಮಾಹಿತಿ ನೀಡಿದರು. ಮಳೆಗಾಲದಲ್ಲಿ ನಿಲ್ದಾಣ ಆವರಣದಲ್ಲಿ ನೀರು ನಿಲ್ಲದಂತೆ ತಡೆಯಲು ಸುಸಜ್ಜಿತ ಚರಂಡಿ ವ್ಯವಸ್ಥೆ ನಿರ್ಮಿಸಲಾಗುವುದು. ಪ್ರಯಾಣಿಕರಿಗೆ ಅನುಕೂಲವಾಗುವಂತೆ ಪ್ಲಾಟ್‌ಫಾರ್ಮ್‌ನ ಎರಡೂ ಬದಿಗಳಲ್ಲಿ ಮೇಲ್ಛಾವಣಿ ನಿರ್ಮಾಣಕ್ಕೂ ಕ್ರಮ…

Read More

ಬೇಕೂರಿನಲ್ಲಿ ಪೈಪ್‌ಲೈನ್ ಸ್ಫೋಟ – ಮಿನಿ ಪ್ರವಾಹ, ಮನೆಗೆ ಹಾನಿ, ನೀರು ಸರಬರಾಜು ಸ್ಥಗಿತದ ಭೀತಿ

ಬೇಕೂರು: ಮಂಗಲ್ಪಾಡಿ ಪಂಚಾಯತ್ ವ್ಯಾಪ್ತಿಯ ವಿವಿಧ ವಾರ್ಡ್‌ಗಳಿಗೆ ನೀರು ಸರಬರಾಜು ಮಾಡುವ ಬೇಕೂರಿನ ಜಲಸಂಪನ್ಮೂಲ ಘಟಕದಲ್ಲಿ ಇಂದು ಬೆಳಗ್ಗೆ ಭಾರೀ ಅವಘಡ ಸಂಭವಿಸಿದೆ. ಬೇಕೂರು ಮಿಲ್ ಸಮೀಪದಲ್ಲಿರುವ ಚೆಂಬರ್‌ನಲ್ಲಿ ಪೈಪ್‌ಲೈನ್ ತುಂಡಾಗಿ, ದೊಡ್ಡ ಪ್ರಮಾಣದ ನೀರು ಹೊರಹರಿದು ಮಿನಿ ಪ್ರವಾಹದಂತ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಘಟನೆ ಇಂದು ಬೆಳಗ್ಗೆ ಸುಮಾರು 8 ಗಂಟೆಯ ವೇಳೆಗೆ ಸಂಭವಿಸಿದ್ದು, ಸ್ಥಳೀಯ ಸ್ಕ್ರಾಪ್ ಅಂಗಡಿ ಮಾಲೀಕ ಗಫೂರ್ ಅವರ ಮನೆಗೆ ನೀರು ನುಗ್ಗಿ, ಹಿತ್ತಲಿನಲ್ಲಿದ್ದ ಮರಗಿಡಗಳು ಹಾಗೂ ಅನೇಕ ವಸ್ತುಗಳು ಸಂಪೂರ್ಣ…

Read More
error: Content is protected !!