ಮಂಜೇಶ್ವರ ಬೀಚ್‌ನಲ್ಲಿ ಕಸದ ಪರ್ವತ: ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಮೀನುಗಾರರು–ಪ್ರವಾಸಿಗರ ಆಕ್ರೋಶ
ಮಂಜೇಶ್ವರ: ಪ್ರವಾಸಿ ಆಕರ್ಷಣೆಯಾಗಿ ಹೆಸರು ಮಾಡಿರುವ ಮಂಜೇಶ್ವರ ಬೀಚ್ ಇದೀಗ ಕಸದ ಗುಡ್ಡಗಳ ಕೇಂದ್ರವಾಗುತ್ತಿದೆ. ಬೀಚ್ ಸಮೀಪದ ಎಲ್ಲ ಪ್ರದೇಶಗಳು ಈಗ ಪ್ಲಾಸ್ಟಿಕ್ ಸೇರಿದಂತೆ ವಿವಿಧ ತ್ಯಾಜ್ಯಗಳಿಂದ ತುಂಬಿ ಹರಿಯುತ್ತಿವೆ. ಪ್ರತಿದಿನ ನೂರಾರು ಜನರು ಭೇಟಿ ನೀಡುವ ಈ ಪ್ರದೇಶದಲ್ಲಿ ಮಲಿನತೆ ಹೆಚ್ಚುತ್ತಿರುವುದು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತಿದೆ. ಬೀಚ್‌ಗೆ ಬರುವ ಪ್ರವಾಸಿಗರು ಮತ್ತು ಹತ್ತಿರದ ವಾಟರ್ ಥೀಮ್ ಪಾರ್ಕ್‌ಗೆ ಆಗಮಿಸುವವರು ಆಹಾರದ ಅವಶೇಷಗಳು ಹಾಗೂ ಪ್ಲಾಸ್ಟಿಕ್ ಕವರ್‌ಗಳನ್ನು ಎಸೆಯುತ್ತಿರುವುದು ಸಾಮಾನ್ಯವಾಗಿದೆ. ಕಸದ ರಾಶಿ ಹೆಚ್ಚಾಗುತ್ತಿದ್ದಂತೆ ಬೀದಿ ನಾಯಿಗಳ…