ಮಂಜೇಶ್ವರದಲ್ಲಿ ಸ್ಫೋಟ ಆತಂಕ: ಉದ್ಯಮಿ ವಿಕ್ರಮ್ ಪೈ ಕಾರಿಗೆ ಬಾಂಬ್ ಶಂಕೆ, ಕೊಲೆ ಯತ್ನ ಆರೋಪ
ಮಂಜೇಶ್ವರ: ಕುಂಬಳೆಯ ಉದ್ಯಮಿ ವಿಕ್ರಮ್ ಪೈ ವಿರುದ್ಧ ಕೊಲೆ ಯತ್ನ ನಡೆದಿರುವ ಶಂಕೆ ವ್ಯಕ್ತವಾಗಿದೆ. ಪೊಸತ್ತಡ್ಕದಲ್ಲಿರುವ ಅವರ ಆಕ್ರೋ ಡೈರಿ ಫಾರ್ಮ್‌ಗೆ ಸಂಪರ್ಕಿಸುವ ಖಾಸಗಿ ಕಾಂಕ್ರೀಟ್ ರಸ್ತೆಯಲ್ಲಿ ಕಾರಿನ ಚಕ್ರ ಹತ್ತಿದ ತಕ್ಷಣ ಸ್ಫೋಟ ಸಂಭವಿಸಿ ವಾಹನಕ್ಕೆ ಹಾನಿಯಾಗಿದೆ. ಟಯರ್ ಸಂಪೂರ್ಣ ನಾಶವಾಗಿ, ಕಾರಿನ ಅಡಿಭಾಗ ಜಜ್ಜುಗುಜ್ಜಾಗಿದೆ. ಭಾರೀ ಶಬ್ದ ಕೇಳಿ ಸ್ಥಳೀಯರು ಧಾವಿಸಿ ಬಂದಾಗ ಕಾರಿಗೆ ಬೆಂಕಿ ಹೊತ್ತಿಕೊಂಡಿರುವುದು ಕಂಡುಬಂದಿತು. ಅದೃಷ್ಟವಶಾತ್ ವಿಕ್ರಮ್ ಪೈ ಅಪಾಯದಿಂದ ಪಾರಾಗಿದ್ದಾರೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು….