Avatar

NAMMA MEDIA 24X7

​ಮಂಜೇಶ್ವರ ಕುಂಡುಕೊಳಕೆ ಬೀಚ್: ಪ್ರವಾಸಿಗರ ಪಾಲಿಗೆ ಮೃತ್ಯುಕೂಪವಾಗುತ್ತಿದೆಯೇ ಈ ಕಿನಾರೆ?

​ಮಂಜೇಶ್ವರ: ಶಾಲಾ ರಜೆ ಅವಧಿಯಾದ್ದರಿಂದ ಮಂಜೇಶ್ವರದ ಪ್ರಸಿದ್ಧ ಕುಂಡುಕೊಳಕೆ ಬೀಚ್‌ಗೆ ಪ್ರತಿದಿನ ಸಾವಿರಾರು ಪ್ರವಾಸಿಗರು ಮತ್ತು ಕುಟುಂಬಗಳು ಆಗಮಿಸುತ್ತಿದ್ದಾರೆ. ಆದರೆ, ಕನಿಷ್ಠ ಭದ್ರತಾ ವ್ಯವಸ್ಥೆಯೂ ಇಲ್ಲದ ಕಾರಣ ಈ ಸುಂದರ ಕಿನಾರೆ ಇದೀಗ ಪ್ರಾಣಭಯ ಹುಟ್ಟಿಸುವ ತಾಣವಾಗಿ ಮಾರ್ಪಟ್ಟಿದೆ. ಬುಧವಾರ ಸಂಜೆ ಸಂಭವಿಸಿದ ದುರಂತದಲ್ಲಿ 18 ವರ್ಷದ ಝೈನುಲ್ ಹಾಬಿದ್ ಸಮುದ್ರ ಪಾಲಾಗಿದ್ದು, ಈತನ ಪತ್ತೆಗಾಗಿ ಶೋಧ ಕಾರ್ಯ ತೀವ್ರಗೊಂಡಿದ್ದರೂ ಇನ್ನು ಸುಳಿವು ಲಭ್ಯವಾಗಿಲ್ಲ. ಇದು ಕೇವಲ ಒಂದು ಆಕಸ್ಮಿಕವಲ್ಲ, ಇಲ್ಲಿನ ಭದ್ರತಾ ವೈಫಲ್ಯಕ್ಕೆ ಬಲಿಯಾದ ಮತ್ತೊಂದು…

Read More

ಮಂಗಳೂರು ನಗರಾಭಿವೃದ್ಧಿಗೆ ₹165 ಕೋಟಿ: ಏಪ್ರಿಲ್ 18ರಂದು ವಿವಿಧ ಕಾಮಗಾರಿಗಳಿಗೆ ಶಿಲಾನ್ಯಾಸ

ಮಹಾತ್ಮಗಾಂಧಿ ನಗರ ವಿಕಾಸ ಯೋಜನೆ (MGNVP) ದ್ವಿತೀಯ ಹಂತದಡಿ ರಾಜ್ಯ ಸರ್ಕಾರವು ಮಂಗಳೂರು ಮಹಾನಗರ ಪಾಲಿಕೆಗೆ ₹165 ಕೋಟಿ ಅನುದಾನ ಬಿಡುಗಡೆ ಮಾಡಿದ್ದು, ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಏಪ್ರಿಲ್ 18ರಂದು ಶಿಲಾನ್ಯಾಸ ನೆರವೇರಲಿದೆ ಎಂದು ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ತಿಳಿಸಿದ್ದಾರೆ. ಅವರು ಮನಪಾ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾಹಿತಿ ನೀಡಿ, ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಅವರು ಬೆಳಗ್ಗೆ 9ಕ್ಕೆ ಮರವೂರು ಸೇತುವೆ ಬಳಿ ₹3 ಕೋಟಿ ವೆಚ್ಚದ ಕಾಮಗಾರಿ, 9.45ಕ್ಕೆ ವೆಲೆನ್ಸಿಯಾ…

Read More

ಸ್ಥಳೀಯ ಸಂಸ್ಥೆಗಳ ಚುನಾವಣೆ ತಕ್ಷಣ ನಡೆಸಿ: ಎಸ್‌ಡಿಪಿಐ ಆಗ್ರಹ

ರಾಜ್ಯದಲ್ಲಿ ಸ್ಥಳೀಯಾಡಳಿತ ಚುನಾವಣೆ ತಕ್ಷಣ ನಡೆಯಲಿ ಎಂದು ಎಸ್‌ಡಿಪಿಐ ರಾಜ್ಯಾಧ್ಯಕ್ಷ ಅಬ್ದುಲ್‌ ಮಜೀದ್‌ ಆಗ್ರಹಿಸಿದ್ದಾರೆ. ಕರ್ನಾಟಕ ಸರ್ಕಾರ ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ನಡೆಸಲು ತಕ್ಷಣ ಕ್ರಮಕೈ ಗೊಳ್ಳಬೇಕು ಎಂದು ಎಸ್‌ಡಿಪಿಐ ರಾಜ್ಯಾಧ್ಯಕ್ಷ ಅಬ್ದುಲ್‌ ಮಜೀದ್‌ ಮೈಸೂರು ಸುದ್ದಿ ಗೋಷ್ಠಿಯಲ್ಲಿ ಆಗ್ರಹಿಸಿದ್ದಾರೆ. 15ನೇ ಹಣಕಾಸು ಆಯೋಗದಿಂದ ರಾಜ್ಯಕ್ಕೆ ಬಿಡುಗಡೆಯಾಗಬೇಕಿದ್ದ ಸುಮಾರು 2133 ಕೋಟಿ ರೂ. ಅನುದಾನ ವನ್ನು ಕೇಂದ್ರ ಸರ್ಕಾರ ಇನ್ನೂ ಬಿಡುಗಡೆ ಮಾಡಿಲ್ಲ. ನಾಲ್ಕು ಕಂತುಗಳಲ್ಲಿ ಬಿಡುಗಡೆಯಾಗಬೇಕಿದ್ದ ಹಣ ಮಾರ್ಚ್‌ ಅಂತ್ಯದವರೆಗೂ ಬಂದಿಲ್ಲ. ಇದರಿಂದ ಗ್ರಾಮ ಪಂಚಾಯಿತಿಗಳು…

Read More

ವೈಟ್ ಬೋರ್ಡ್ ವಾಹನಗಳಲ್ಲಿ ವಿದ್ಯಾರ್ಥಿ ಸಾಗಣೆ: ಕಠಿಣ ಕ್ರಮಕ್ಕೆ ಒತ್ತಾಯ

ಖಾಸಗಿ (ವೈಟ್ ಬೋರ್ಡ್) ವಾಹನಗಳಲ್ಲಿ ಶಾಲಾ ಮಕ್ಕಳನ್ನು ಸಾಗಿಸುವ ಹಾಗೂ ಬಾಡಿಗೆ ಆಧಾರದ ಮೇಲೆ ಬಳಸುತ್ತಿರುವ ಪ್ರಕರಣಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಸಂಘದ ಗೌರವಾಧ್ಯಕ್ಷ ಸುನಿಲ್ ಕುಮಾರ್ ಬಜಾಲ್ ಅವರು ದಕ್ಷಿಣ ಕನ್ನಡ ಜಿಲ್ಲಾಡಳಿತವನ್ನು ಒತ್ತಾಯಿಸಿದರು. ನಗರದ ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಶಾಲಾ ಮಕ್ಕಳನ್ನು ಸಾಗಿಸಲು ಮತ್ತು ಬಾಡಿಗೆಗೆ ಬಳಸಲು ಟೂರಿಸ್ಟ್ (ಯೆಲ್ಲೋ ಬೋರ್ಡ್) ವಾಹನಗಳಿಗೆ ಮಾತ್ರವೇ ಅವಕಾಶವಿದೆ. ನಮ್ಮ ಸಂಘದ ಸದಸ್ಯರು ಈ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಿದ್ದಾರೆ. ಆದರೆ, ಕೆಲವು ಚಾಲಕರು…

Read More

ಉಳ್ಳಾಲದಲ್ಲಿ ರಾಣಿ ಅಬ್ಬಕ್ಕ 500ನೇ ಜನ್ಮ ವರ್ಷಾಚರಣೆ ಸಮಾರೋಪ: ಏಪ್ರಿಲ್ ೧೮ರಂದು ವೈಭವದ ಕಾರ್ಯಕ್ರಮ

ಕರ್ನಾಟಕ ರಾಜ್ಯ ಮಹಾವಿದ್ಯಾಲಯ ಶಿಕ್ಷಕ ಸಂಘ ಮಂಗಳೂರು ವಿಭಾಗವು, ತುಳುನಾಡಿನ ವೀರ ವನಿತೆ ರಾಣಿ ಅಬ್ಬಕ್ಕಳ 500ನೇ ಜನ್ಮ ವರ್ಷಾಚರಣೆಯ ಸಂದರ್ಭದಲ್ಲಿ ಆಕೆಯ ಇತಿಹಾಸವನ್ನುನಾಡಿನ ಯುವ ಜನಾಂಗಕ್ಕೆ ಪರಿಚಯಿಸುವ ಕಾರ್ಯ ನಡೆಸಿದ್ದು ಇದರ ಸಮಾರೋಪ ಸಮಾರಂಭ ಹಾಗೂ ಅಬ್ಬಕ್ಕ @ ಐನೂರರ ಸಂಭ್ರಮದಲ್ಲಿ ಅಬ್ಬಕ್ಕ ನೆನಪಿನೈಸಿರಿ ಎಂಬ ಸಂಚಿಕೆ ಲೋಕಾರ್ಪಣೆ ಕಾರ್ಯಕ್ರಮ ನಿರ್ಮಲ ಭಾರತ ಚಾರಿಟಬಲ್ ಟ್ರಸ್ಟ್ ಇದರ ಸಹಯೋಗದೊಂದಿಗೆ ಎಪ್ರಿಲ್ 18 ರಂದು ಸಂಜೆ 5 ಗಂಟೆಯಿಂದ ಉಳ್ಳಾಲದ ಶಾರದಾನಿಕೇತನ ಸಭಾಂಗಣದಲ್ಲಿ ನಡೆಯಲಿದೆ ಎಂದು ಕೆ…

Read More

ಕುಲಶೇಖರ ಪದವು ಶ್ರೀ ಶನೈಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ

ನಗರದ ಪದವು ಕುಲಶೇಖರದಲ್ಲಿ ಹಿಂದು ಯುವಸೇನೆ ಸಂಚಾಲಿತ ಧಾರ್ಮಿಕ ಶ್ರದ್ಧಾಕೇಂದ್ರವಾದ ಶ್ರೀ ಶನೈಶ್ವರ ದೇವಸ್ಥಾನದ ಬಿಂಬ ಪ್ರತಿಷ್ಠೆ ಹಾಗೂ ಬ್ರಹ್ಮಕಲಶೋತ್ಸವವು ಏಪ್ರಿಲ್ 18 ರಿಂದ 24 ರವರೆಗೆ ವಿವಿಧ ವೈದಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ವಿಜೃಂಭಣೆಯಿಂದ ನಡೆಯಲಿದೆ ಎಂದು ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷರಾದ ನಳಿನ್ ಕುಮಾರ್ ಕಟೀಲ್ ತಿಳಿಸಿದರು. ಅವರು ದೇವಾಲಯದ ಆವರಣದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿ, ವೇದಮೂರ್ತಿ ಎಂ. ಗಿರಿಧರ ಭಟ್ ಮತ್ತು ವೇದಮೂರ್ತಿ ಡಾ. ಸತ್ಯಕೃಷ್ಣ ಭಟ್ ಅವರ ನೇತೃತ್ವದಲ್ಲಿ…

Read More

ಖಾಸಗಿ ವಾಹನಗಳಲ್ಲಿ (White Board) ಶಾಲಾ ಮಕ್ಕಳನ್ನು ಸಾಗಿಸುತ್ತಿರುವ ಹಾಗೂ ಬಾಡಿಗೆ ಮಾಡುತ್ತಿರುವ ವಾಹನಗಳ ವಿರುದ್ಧ ಕಠಿನ ಕ್ರಮ ಕೈಗೊಳ್ಳಲು ಮನವಿ

ಮಂಗಳೂರು: ನಮ್ಮ ನೆಲದ ಕಾನೂನಿಗನುಗುಣವಾಗಿ ನಾವು ಮಕ್ಕಳ ವಾಹನಗಳನ್ನು ಚಲಾಯಿಸುತ್ತಾ ಬಂದಿರುತ್ತೇವೆ. ತಮಗೆ ತಿಳಿದಂತೆ ಟೂರಿಸ್ಟ್ ವಾಹನಗಳಲ್ಲಿ (Yellow Board) ಮಾತ್ರವೇ ಶಾಲಾ ಮಕ್ಕಳನ್ನು ಕೊಂಡೊಯ್ಯಲು ಹಾಗೂ ಬಾಡಿಗೆ ಮಾಡಲು ಅವಕಾಶವಿದ್ದು, ನಮ್ಮ ಸಂಘದ ಎಲ್ಲಾ ಸದಸ್ಯರು ಈ ನಿಯಮಾವಳಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಾ ಬಂದಿರುತ್ತೇವೆ. ಹೀಗಿರುವಲ್ಲಿ ನಿರಂತರವಾಗಿ ಖಾಸಗಿ ವಾಹನಗಳಲ್ಲಿ (White Board) ಯಥೇಚ್ಛಿತವಾಗಿ ಶಾಲಾ ಮಕ್ಕಳನ್ನು ಕೆಲವು ಚಾಲಕರು ‌ಸಾಗಿದುತ್ತಿದ್ದಾರೆ. ಕಾನೂನು ಉಲ್ಲಂಘಿಸುವ ಚಾಲಕ/ಮಾಲಕರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಹಲವಾರು ಭಾರಿ ಸಂಬಂಧಪಟ್ಟ…

Read More

ಪದ್ಮಶ್ರೀ ಸತ್ಯನಾರಾಯಣ ಬೇಳೇರಿ ಅತಿಕಾರ ಟ್ರಸ್ಟ್: ಬೆಳ್ಳೂರಿನಲ್ಲಿ ಹೊಸ ಸೇವಾಯಾನಕ್ಕೆ ಮುನ್ನುಡಿ

​ಬೆಳ್ಳೂರಿನ ಮಣ್ಣಿನ ಸತ್ವ ಮತ್ತು ಇಲ್ಲಿನ ಜನರ ಸೇವಾ ಮನೋಭಾವಕ್ಕೆ ಸಾಕ್ಷಿಯಾಗಿ ಹೊಸದೊಂದು ಇತಿಹಾಸ ನಿರ್ಮಾಣವಾಗಿದೆ. ಈ ಮಹತ್ತರ ಯೋಜನೆಗೆ ಉದ್ಯಮಿ ಶ್ರೀ ಮಧುಸೂಧನ ಅಯರ್ ಅವರು ೪ ಲಕ್ಷ ರೂಪಾಯಿಗಳ ಪ್ರಥಮ ದೇಣಿಗೆಯನ್ನು ನೀಡುವ ಮೂಲಕ ಚಾಲನೆ ನೀಡಿದ್ದಾರೆ. ಈ ಉದಾರ ಧನಸಹಾಯವು ಸೇವಾ ಚಟುವಟಿಕೆಗಳ ವಿಸ್ತರಣೆಗಾಗಿ ಭದ್ರವಾದ ಬುನಾದಿಯನ್ನು ಹಾಕಿದೆ. ಸಮಾಲೋಚನೆ ಮತ್ತು ಮಾರ್ಗದರ್ಶನ ​ಬೆಳ್ಳೂರಿನ ಪವಿತ್ರ ಶ್ರೀ ಮಹಾವಿಷ್ಣು ದೇವಾಲಯದ ಸಭಾಂಗಣದಲ್ಲಿ ನಿನ್ನೆ ಸಂಜೆ ಹಮ್ಮಿಕೊಳ್ಳಲಾಗಿದ್ದ ಸಮಾಲೋಚನಾ ಸಭೆಯು ಭವಿಷ್ಯದ ಆಶೋತ್ತರಗಳಿಗೆ ದಿಕ್ಸೂಚಿಯಾಗಿತ್ತು….

Read More

ದೆಹಲಿ ಕರ್ನಾಟಕ ಸಂಘಕ್ಕೆ ನೂತನ ಪದಾಧಿಕಾರಿಗಳ ಆಯ್ಕೆ

ದೆಹಲಿ ಕರ್ನಾಟಕ ಸಂಘದ ಅಧ್ಯಕ್ಷರಾಗಿ ಆರ್. ರೇಣುಕುಮಾರ್,ಪ್ರಧಾನ ಕಾರ್ಯದರ್ಶಿಯಾಗಿ ರಾಧಾಕೃಷ್ಣ ಕುಂದಾಪುರ ಆಯ್ಕೆದೇಶದ ಪ್ರತಿಷ್ಠಿತ ದೆಹಲಿ ಕರ್ನಾಟಕ ಸಂಘದ 2026-28 ನೇ ಅವಧಿಗೆ ಅಧ್ಯಕ್ಷರಾಗಿ ಆರ್. ರೇಣುಕುಮಾರ್, ಉಪಾಧ್ಯಕ್ಷರಾಗಿ ವಸಂತ ಶೆಟ್ಟಿ ಬೆಳ್ಳಾರೆ ,ಶೋಭಾ ಗೌಡ, ಪ್ರಧಾನ ಕಾರ್ಯದರ್ಶಿಯಾಗಿ ರಾಧಾಕೃಷ್ಣ ಕುಂದಾಪುರ ಬೈಂದೂರು, ಖಜಾಂಚಿಯಾಗಿ ಎಂ.ಆಶಾಲತಾ,ಜಂಟಿ ಕಾರ್ಯದರ್ಶಿಯಾಗಿ ಜೆ. ಸಂತೋಷ, ಬಿ. ಎಸ್.ಅಶ್ವಿನಿ, ಕಾರ್ಯಕಾರಿ ಸಮಿತಿ ಸದಸ್ಯರಾಗಿ ಪೂಜಾ ಪಿ.ರಾವ್, ಎಂ.ಶಿವಪ್ಪ, ಡಾ. ವೆಂಕಟಾಚಲ ಜಿ.ಹೆಗಡೆ, ಡಾ. ಎಂ. ಎಸ್. ಶಶಿಕುಮಾರ್, ಬಿ. ನಾರಾಯಣ, ಎಂ. ಕೃಷ್ಣಪ್ಪ,…

Read More

ಶಿವ-ಶಕ್ತಿಯರ ದಿವ್ಯ ಸಂಗಮ: ಪುತ್ತೂರು ಸೀಮೆಯ ಪರಮ ಪಾವನ ಪರ್ವ

​ಪುತ್ತೂರಿನ ಪುಣ್ಯ ಮಣ್ಣಿನಲ್ಲಿ ಪ್ರತಿವರ್ಷದ ಚೈತ್ರ ಮಾಸದ ಸಂಭ್ರಮಕ್ಕೆ ಒಂದು ದಿವ್ಯವಾದ ಮೆರುಗು ಇರುತ್ತದೆ. ಇಲ್ಲಿನ ಗಾಳಿಯಲ್ಲಿ ‘ಮಹಾಲಿಂಗೇಶ್ವರ’ ಎಂಬ ನಾಮದ ಝೇಂಕಾರವಿದ್ದರೆ, ಅಂತರಂಗದಲ್ಲಿ ಬಲ್ನಾಡಿನ ಆರಾಧ್ಯಶಕ್ತಿ ಶ್ರೀ ಉಳ್ಳಾಲ್ತಿ ಅಮ್ಮನವರ ದಿವ್ಯ ಸಾನಿಧ್ಯದ ಹಂಬಲವಿರುತ್ತದೆ. ಜಗದೊಡೆಯ ಮತ್ತು ಜಗನ್ಮಾತೆಯರು ಮುಖಾಮುಖಿಯಾಗುವ ಆ ಅನಿರ್ವಚನೀಯ ಮಿಲನದ ಕ್ಷಣವಿದೆಯಲ್ಲ, ಅದು ಪುತ್ತೂರು ಸೀಮೆಯ ಆಸ್ತಿಕರ ಪಾಲಿಗೆ ಕೇವಲ ಒಂದು ಧಾರ್ಮಿಕ ವಿಧಿಯಲ್ಲ; ಅದು ಅಧ್ಯಾತ್ಮದ ಪರಮೋಚ್ಚ ಆನಂದವನ್ನು ಧಾರೆ ಎರೆಯುವ ದಿವ್ಯ ಚೇತನ.​ನನ್ನ ಆಪ್ತವಲಯದ ಹಿತೈಷಿಗಳಾದ ಶ್ರೀಮತಿ ಪರಿಣಿತಾ…

Read More
error: Content is protected !!