ಅಪಪ್ರಚಾರಕ್ಕೆ ಅನಿ ಮಂಗಳೂರು ತಿರುಗೇಟು: ಕಿಡ್ನಾಪ್, ಹಣ ವಸೂಲಿ ಆರೋಪ ಸಂಪೂರ್ಣ ಸುಳ್ಳು
ಸಾಮಾಜಿಕ ಜಾಲತಾಣಗಳಲ್ಲಿ ತನ್ನ ವಿರುದ್ಧ ನಡೆಯುತ್ತಿರುವ ಅಪಪ್ರಚಾರವನ್ನು ಖಂಡಿಸಿ ಮಂಗಳೂರಿನ ‘ಅನಿ ಕೆಫೆ’ ಮಾಲೀಕಿ ಹಾಗೂ ಮಂಗಳಮುಖಿ ಅನಿ ಮಂಗಳೂರು ಸ್ಪಷ್ಟನೆ ನೀಡಿದ್ದಾರೆ.ನಗರದ ಪ್ರೆಸ್‌ಕ್ಲಬ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅನಿಲ್ ಕುಮಾರ್ ಎಂಬಾತ ತಮ್ಮ ಮೇಲೆ ಕಿಡ್ನಾಪ್, ದೌರ್ಜನ್ಯ ಹಾಗೂ ಹಣ ವಸೂಲಿಯ ಆರೋಪಗಳನ್ನು ಮಾಡುತ್ತಿರುವುದು ಸಂಪೂರ್ಣ ಸುಳ್ಳು ಎಂದು ತಿಳಿಸಿದ್ದಾರೆ. ಈ ಪ್ರಕರಣದ ಹಿಂದೆ ಯಾರೋ ಸಂಚು ರೂಪಿಸಿದ್ದು, ಸಮಗ್ರ ತನಿಖೆ ನಡೆಸಿ ಸತ್ಯವನ್ನು ಬಹಿರಂಗಪಡಿಸಬೇಕು ಎಂದು ಆಗ್ರಹಿಸಿದರು. ಮೈಸೂರಿನ ಸಬರ್ ಬಸ್ ಸ್ಟ್ಯಾಂಡ್‌ನಿಂದ…