Avatar

NAMMA MEDIA 24X7

ಚಂದ್ರ ಕಕ್ಷೆ ಸುತ್ತಿ ಬಂದ ಆರ್ಟೆಮಿಸ್-2 ಗಗನಯಾತ್ರಿಗಳು ಸುರಕ್ಷಿತವಾಗಿ ಭೂಮಿಗೆ

ಕ್ಯಾಲಿಫೋರ್ನಿಯಾ : ಸುಮಾರು ಐದು ದಶಕಗಳ ಸುದೀರ್ಘ ಕಾಯುವಿಕೆಯ ನಂತರ ಚಂದ್ರನತ್ತ ಪ್ರಯಾಣ ಬೆಳೆಸಿದ್ದ ನಾಸಾದ ‘ಆರ್ಟೆಮಿಸ್-2′ ಗಗನಯಾತ್ರಿಗಳ ತಂಡ ಯಶಸ್ವಿಯಾಗಿ ಭೂಮಿಗೆ ಮರಳಿದೆ. ನಾಲ್ವರು ಗಗನಯಾತ್ರಿಗಳನ್ನು ಹೊತ್ತ ಒರಿಯಾನ್ ಕ್ಯಾಪ್ಸೂಲ್ ಕ್ಯಾಲಿಫೋರ್ನಿಯಾದ ಸ್ಯಾನ್ ಡಿಯಾಗೋ ಕರಾವಳಿಯ ಪೆಸಿಫಿಕ್ ಮಹಾಸಾಗರದಲ್ಲಿ ಸುರಕ್ಷಿತವಾಗಿ ಇಳಿದಿದೆ. ಈ ತಂಡವು ಚಂದ್ರನ ಅಂಗಳಕ್ಕೆ ಇಳಿಯದಿದ್ದರೂ, ಚಂದ್ರನ ಕಕ್ಷೆಯಲ್ಲಿ ಸುತ್ತು ಹಾಕಿ ಭವಿಷ್ಯದ ಮಾನವ ಚಂದ್ರಯಾನ ಯೋಜನೆಗಳಿಗೆ ಪೂರಕವಾದ ಮಹತ್ವದ ಅಧ್ಯಯನ ಮತ್ತು ತಾಂತ್ರಿಕ ಪರಿಶೀಲನೆಗಳನ್ನು ನಡೆಸಿ ಬಂದಿದೆ. ಇದು ಚಂದ್ರನ ಮೇಲೆ…

Read More

ಕದ್ರಿ ದಕ್ಷಿಣ ವಾರ್ಡಿನಲ್ಲಿ 1 ಕೋಟಿ ರೂ. ವೆಚ್ಚದ ರಸ್ತೆ ಕಾಂಕ್ರೀಟೀಕರಣಕ್ಕೆ ಭೂಮಿ ಪೂಜೆ – ಶಾಸಕ ವೇದವ್ಯಾಸ ಕಾಮತ್ ನೇತೃತ್ವದಲ್ಲಿ ಚಾಲನೆ

ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ 33 ನೇ ಕದ್ರಿ ದಕ್ಷಿಣ ವಾರ್ಡಿನ ಮೈದಾನದಿಂದ ಕದ್ರಿ ಕಂಬಳ ಜಂಕ್ಷನ್ ವರೆಗಿನ ರಸ್ತೆಯು ಸುಮಾರು 1 ಕೋಟಿ ರೂ. ಅನುದಾನದಲ್ಲಿ ಕಾಂಕ್ರೀಟೀಕರಣಗೊಳ್ಳಲಿದ್ದು ಶಾಸಕ ವೇದವ್ಯಾಸ ಕಾಮತ್ ರವರ ನೇತೃತ್ವದಲ್ಲಿ ಭೂಮಿ ಪೂಜೆ ನಡೆಯಿತು. ನಂತರ ಮಾತನಾಡಿದ ಶಾಸಕರು, ಇದು ಹಲವು ಸಮಯದ ಬೇಡಿಕೆಯಾಗಿದ್ದು ಪ್ರತಿವರ್ಷ ಮಳೆಗಾಲದ ಸಂದರ್ಭದಲ್ಲಿ ಇಡೀ ರಸ್ತೆ ಹಾಳಾಗಿ ಸ್ಥಳೀಯರು ತೀವ್ರ ತೊಂದರೆ ಅನುಭವಿಸುತ್ತಿದ್ದರು. ಹಾಗಾಗಿ ಪಾಲಿಕೆಯ ಬಿಜೆಪಿ ಆಡಳಿತದ ಅವಧಿಯಲ್ಲಿ ಈ ಕಾಮಗಾರಿಗೆ ವಿಶೇಷ ಅನುದಾನವನ್ನು…

Read More

ಕೃತಕ ಬುದ್ಧಿಮತ್ತೆ ವೈದ್ಯಕೀಯ ಕ್ಷೇತ್ರಕ್ಕೆ ಸವಾಲು: ಡಾ. ಶರಣ್ ಪ್ರಕಾಶ ಪಾಟೀಲ್

ಮಂಗಳೂರು:ಆಧುನಿಕ ಯುಗದಲ್ಲಿ ವೇಗವಾಗಿ ಬೆಳೆಯುತ್ತಿರುವ ತಂತ್ರಜ್ಞಾನಗಳಲ್ಲಿ ಕೃತಕ ಬುದ್ಧಿಮತ್ತೆ (AI) ಪ್ರಮುಖ ಸ್ಥಾನ ಪಡೆದಿದ್ದು, ಇದು ವೈದ್ಯಕೀಯ ಕ್ಷೇತ್ರಕ್ಕೆ ಸ್ಪರ್ಧಾತ್ಮಕ ಸವಾಲಾಗಿ ಹೊರಹೊಮ್ಮುತ್ತಿದೆ ಎಂದು ಸಚಿವ Dr. Sharan Prakash Patil ಅಭಿಪ್ರಾಯಪಟ್ಟರು. ನಗರದಲ್ಲಿ ನಡೆದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮುಂದಿನ ದಿನಗಳಲ್ಲಿ ಕೃತಕ ಬುದ್ಧಿಮತ್ತೆ ವೈದ್ಯಕೀಯ ಸೇವೆಯ ಸ್ವರೂಪವನ್ನೇ ಬದಲಾಯಿಸುವ ಸಾಧ್ಯತೆಗಳಿದ್ದು, ಈ ಹಿನ್ನೆಲೆಯಲ್ಲಿ ವೈದ್ಯ ವೃತ್ತಿಯಲ್ಲಿ ಮಾನವೀಯತೆ ಮತ್ತು ನೈತಿಕ ಮೌಲ್ಯಗಳನ್ನು ಇನ್ನಷ್ಟು ಬಲಪಡಿಸುವ ಅಗತ್ಯವಿದೆ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ…

Read More

ಸುಡುವಬಿಸಿಲಿನಲ್ಲಿ ಮತದಾರರಿಗೆ ದಾಹ ನೀರು – ಮಂಗಲ್ಪಾಡಿ ಯುವಕರ ಸೇವೆ ಮಾದರಿ

ಕಾಸರಗೋಡು ಗಡಿಭಾಗದ ಮಂಗಲ್ಪಾಡಿ ಪಂಚಾಯತ್ ವ್ಯಾಪ್ತಿಯಲ್ಲಿ ಮಾನವೀಯತೆ ಮೆರೆಯುವ ಕಾರ್ಯ ಗಮನ ಸೆಳೆದಿದೆ. ಸುಡುವ ಬಿಸಿಲಿನ ನಡುವೆಯೂ ಮತದಾನಕ್ಕೆ ಆಗಮಿಸಿದವರಿಗೆ ದಾಹ ನೀರು ಒದಗಿಸುವ ಮೂಲಕ ಯುವಕರ ತಂಡವೊಂದು ಮಾದರಿಯಾಗಿದೆ. ಮಂಗಲ್ಪಾಡಿ ಪ್ರದೇಶದ ಪಾರಕ್ಕಟ್ಟ ಫ್ರೆಂಡ್ಸ್ ಕ್ಲಬ್ ಕಾರ್ಯಕರ್ತರು ಮತದಾರರಿಗಾಗಿ ತಂಪಾದ ಕಲ್ಲಂಗಡಿ ಹಣ್ಣಿನ ಜ್ಯೂಸ್ ಸಿದ್ಧಪಡಿಸಿ, ಅಗತ್ಯವಿರುವ ಎಲ್ಲರಿಗೂ ವಿತರಿಸಿದರು. ತೀವ್ರ ಬಿಸಿಲಿನ ನಡುವೆ ಮತದಾನಕ್ಕೆ ಬಂದ ಮಹಿಳೆಯರು, ಮಕ್ಕಳು ಹಾಗೂ ವೃದ್ಧರಿಗೆ ಇದು ಹೆಚ್ಚಿನ ದಾಹ ನೀಗಿಸಲು ಸೂಕ್ತವಾಯಿತು. ಯುವಕರ ಈ ಸೇವಾ ಮನೋಭಾವ…

Read More

ಕುಂದಾಪುರ: ಕೋಡಿ ಬೀಚ್‌ನಲ್ಲಿ ಸಮುದ್ರಕ್ಕೆ ಬಿದ್ದ ಡ್ರೋನ್- ಡ್ರೋನ್ ಕ್ಯಾಮೆರಾ ಪತ್ತೆಹಚ್ಚಿದ ಮುಳುಗು ತಜ್ಞ ದಿನೇಶ್ ಖಾರ್ವಿ

ಉಡುಪಿ: ಕುಂದಾಪುರ ಕೋಡಿ ಬೀಚ್‌ನಲ್ಲಿ ಡ್ರೋನ್ ಕ್ಯಾಮರಾ ನಿಯಂತ್ರಣ ತಪ್ಪಿ ಸಮುದ್ರಕ್ಕೆ ಬಿದ್ದ ಘಟನೆ ನಡೆದಿದೆ. ವೀಡಿಯೊ ಚಿತ್ರೀಕರಣಕ್ಕಾಗಿ ಡ್ರೋನ್ ಹಾರಿಸುತ್ತಿದ್ದ ವೇಳೆ ಅಚಾನಕ್ ನಿಯಂತ್ರಣ ತಪ್ಪಿ ನೀರಿಗೆ ಬಿದ್ದಿದ್ದು, ತಕ್ಷಣವೇ ಡ್ರೋನ್ ಮಾಲೀಕರು ಮುಳುಗು ತಜ್ಞ ದಿನೇಶ್ ಖಾರ್ವಿಯನ್ನು ಸಂಪರ್ಕಿಸಿದ್ದಾರೆ ಆ ಸಂದರ್ಭದಲ್ಲಿ ದಿನೇಶ್ ಖಾರ್ವಿ ಅವರು ಮುರುಡೇಶ್ವರದಲ್ಲಿ ಕೆಲಸದ ನಿಮಿತ್ತ ಇದ್ದರೂ, ಘಟನೆಯ ತುರ್ತು ಪರಿಸ್ಥಿತಿಯನ್ನು ಗಮನಿಸಿ ಕೂಡಲೇ ಕುಂದಾಪುರಕ್ಕೆ ಆಗಮಿಸಿ, ಡ್ರೋನ್ ಬಿದ್ದಿರುವ ಸ್ಥಳದ ಮಾಹಿತಿ ಸಂಗ್ರಹಿಸಿ ಸಮುದ್ರಕ್ಕೆ ಇಳಿದು ಶೋಧ ಕಾರ್ಯ…

Read More

ಸೇವೆ, ಕರ್ತವ್ಯ ಮತ್ತು ಸಮರ್ಪಣೆಯೇ ಜೀವನದ ನಿಜವಾದ ಮಾರ್ಗ: ರಾಜ್ಯಪಾಲರು

ದಕ್ಷಿಣ ಕನ್ನಡ ಜಿಲ್ಲೆ: “ನಮ್ಮ ಸಂಸ್ಕೃತಿ ಯಾವಾಗಲೂ ವಿಶ್ವ ಸಹೋದರತ್ವ, ವಿಶ್ವ ಕಲ್ಯಾಣ, ವಿಶ್ವ ಶಾಂತಿ, ಸಮಾನತೆ ಮತ್ತು ಸಾಮರಸ್ಯವನ್ನು ಪ್ರೇರೇಪಿಸುತ್ತದೆ. ಪ್ರಪಂಚದಾದ್ಯಂತದ ಅನೇಕ ದೇಶಗಳು ಆಧ್ಯಾತ್ಮಿಕ ಮತ್ತು ಮಾನಸಿಕ ಯೋಗಕ್ಷೇಮಕ್ಕಾಗಿ ಭಾರತದತ್ತ ನೋಡುತ್ತಿದೆ” ಎಂದು ಕರ್ನಾಟಕದ ಗೌರವಾನ್ವಿತ ರಾಜ್ಯಪಾಲರಾದ ಶ್ರೀ ಥಾವರ್ ಚಂದ್ ಗೆಹ್ಲೋಟ್ ಅವರು ಹೇಳಿದರು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶ್ರೀ ಕೋದಂಡರಾಮ, ಪಂಚಮುಖಿ ಆಂಜನೇಯ ಕ್ಷೇತ್ರ, ಹನುಮಾನಗಿರಿ ದೇವಸ್ಥಾನದ ಗೋಪುರ ಮತ್ತು ಮಂಟಪದ ಉದ್ಘಾಟನೆ ಮತ್ತು ಬ್ರಹ್ಮಕಲಶೋತ್ಸವ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು….

Read More

ಕಾಸರಗೋಡು: ಚೇಟ್ಟುಕುಂಡು ಕೀಕಾನ ಮೀತಲ್ ವೀಡ್ ತರವಾಡಿನಲ್ಲಿ ವಯನಾಟು ಕುಲವನ್ ದೈವಕಟ್ಟು ಮಹೋತ್ಸವ

ಕಾಸರಗೋಡು ಜಿಲ್ಲೆಯ ಹೊಸದುರ್ಗ ತಾಲ್ಲೂಕಿನ ಚೇಟ್ಟುಕುಂಡು ಕೀಕಾನ ಮೀತಲ್ ವೀಡ್ ತರವಾಡಿನಲ್ಲಿ ವಯನಾಟು ಕುಲವನ್ ದೈವಕಟ್ಟು ಮಹೋತ್ಸವದ ಅಂಗವಾಗಿ ಶೈವಾಂಶವಾದ ವಯನಾಟು ಕುಲವನ್ ಶತ ವರುಷಗಳ ವಿರಾಮದ ನಂತರ ದರ್ಶವನ್ನು ನೀಡಿತ್ತು . ಈ ದೈವ ಆಚರಣೆಯು ಅಪರೂಪದಲ್ಲಿ ಅಪರೂಪವಾಗಿದೆ . ಈ ಸಂದರ್ಭದಲ್ಲಿ ವಯನಾಟು ಕುಲವನ್ ದೈವದ ಐತಿಹ್ಯ ಈ ಪ್ರಕಾರವಾಗಿದೆ . ಪುರಾಣಗಳ ಪ್ರಕಾರ, ಶಿವ ಮತ್ತು ಪಾರ್ವತಿ ಬೇಡರ ವೇಷದಲ್ಲಿ ಕಾಡಿನಲ್ಲಿ ಬೇಟೆಯಾಡುತ್ತ ಕಾಲ ಕಳೆಯುತ್ತಿದ್ದ ಸಂದರ್ಭದಲ್ಲಿ ಈ ಘಟನೆಗಳು ನಡೆದವು. ಒಂದು…

Read More

“90 ಎಮ್ ಎಲ್” ತುಳು ಸಿನಿಮಾ ಕರಾವಳಿ ಜಿಲ್ಲೆಯಾದ್ಯಂತ ತೆರೆಗೆ

ಮಂಗಳೂರು: ಡಿ ಡಿ ಪ್ರೊಡಕ್ಷನ್ ಲಾಂಛನದಲ್ಲಿ ರಂಜಿತ್ ಸಿ ಬಜಾಲ್ ನಿರ್ದೇಶನದಲ್ಲಿ ಡೋಲ್ಪಿ ಡಿ ಸೋಜ ನಿರ್ಮಾಣದಲ್ಲಿ ತಯಾರಾದ “90 ಎಮ್ ಎಲ್” ತುಳು ಚಲನ ಚಿತ್ರ ಶುಕ್ರವಾರ ಭಾರತ್ ಸಿನಿಮಾಸ್ ನಲ್ಲಿ ತೆರೆ ಕಂಡಿತು. ದೀಪ ಬೆಳಗಿಸುವ ಮೂಲಕ ಸಿನಿಮಾ ಉದ್ಘಾಟನೆ ನೆರವೇರಿಸಿ ಮಾತಾಡಿದ ಬೆಂಜನಪದವು ಕೊರಗಜ್ಜ ಕ್ಷೇತ್ರದ ವಿಜಯ ಅವರು “ತುಳುವಿನಲ್ಲಿ ಸದಭಿರುಚಿಯ ಸಿನಿಮಾಗಳು ಬಿಡುಗಡೆಯಾಗುತ್ತಿರುವುದು ಖುಷಿಯ ವಿಚಾರ. ಇಂದು ಬಿಡುಗಡೆಯಾಗುತ್ತಿರುವ 90 ಎಂಎಲ್ ಸಿನಿಮಾ ತುಳು ಪ್ರೇಕ್ಷಕರ ಮನೆ ಮನ ಮುಟ್ಟುವ ಕೆಲಸ…

Read More

ಡ್ರೋನ್ ತರಬೇತಿ ಅಕಾಡೆಮಿ ಉದ್ಘಾಟನೆ – ಭವಿಷ್ಯದ ವಿಮಾನಯಾನ ತಜ್ಞರ ತಯಾರಿ : ಕ್ಯಾ.ಸುಧೀರ್ ಅಮೀನ್

ಮಂಗಳೂರು: ಮೂಡಬಿದ್ರೆಯ ಅಳ್ವಾಸ್ ಕಾಲೇಜು ಮೂಡಬಿದ್ರೆ ಆವರಣದಲ್ಲಿ, ವಿಮಾನಯಾನ ಹಾಗೂ ತಂತ್ರಜ್ಞಾನ ಶಿಕ್ಷಣ ಕ್ಷೇತ್ರದಲ್ಲಿ ಮಹತ್ವದ ಹೆಜ್ಜೆಯಾಗಿ ದಕ್ಷಿಣ ಕನ್ನಡ ಜಿಲ್ಲೆಯಲ್ಲೇ ಪ್ರಪ್ರಥಮ ಏರೋಡೈನಾಮಿಕ್ಸ್ ಡ್ರೋನ್ ತರಬೇತಿ ಅಕಾಡೆಮಿಯು ಏಪ್ರಿಲ್ 14ರಂದು ಉದ್ಘಾಟನೆಗೊಳ್ಳಲಿದೆ ಎಂದು ಸಂಸ್ಥೆಯ ಮುಖ್ಯಸ್ಥರಾದ ಕ್ಯಾ.ಸುಧೀರ್ ಅಮೀನ್ ತಿಳಿಸಿದರು . ಅವರು ನಗರದ ಪತ್ರಿಕಾಭವನದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ , ಈ ಅಕಾಡೆಮಿಯು ಡೈರೆಕ್ಟರೇಟ್ ಜನರಲ್ ಆಫ್ ಸಿವಿಲ್ ಏವಿಯೇಶನ್ (DGCA) ಮಾನ್ಯತೆ ಪಡೆದ ಅತ್ಯಾಧುನಿಕ ರಿಮೋಟ್ ಪೈಲಟ್ ತರಬೇತಿ ಸಂಸ್ಥೆಯಾಗಿದ್ದು, ಡ್ರೋನ್ ಕಾರ್ಯಾಚರಣೆ,…

Read More

800 ವರ್ಷದ ಸೌಹಾರ್ದದ ಸಂಕೇತ: ಉದ್ಯಾವರ ಅರಸು ಮಂಜಿಷ್ಣಾರ್ ಕ್ಷೇತ್ರದಲ್ಲಿ ಉತ್ಸವ ದಿನಾಂಕ ನಿಗದಿ

ಕಳೆದ ಸುಮಾರು 800 ವರ್ಷಗಳಿಂದ ಧಾರ್ಮಿಕ ಸೌಹಾರ್ದತೆಗೆ ಸಾಕ್ಷಿಯಾಗಿ ನಿಂತಿರುವ ಮಂಜೇಶ್ವರ ಉದ್ಯಾವರ ಶ್ರೀ ಅರಸು ಮಂಜಿಷ್ಣಾರ್ ಕ್ಷೇತ್ರದ ಮಹೋತ್ಸವದ ದಿನಾಂಕ ನಿಗದಿ ಸಮಾರಂಭವು ಶ್ರದ್ಧಾಭಕ್ತಿಯಿಂದ ನಡೆಯಿತು. “ಕುದಿಕಳ” ಎಂಬ ಹೆಸರಿನಲ್ಲಿ ಸಂಪ್ರದಾಯ ಪ್ರಕಾರ ನಡೆಯುವ ಸಮಾರಂಭದಲ್ಲಿ ಮುಸ್ಲಿಂ ಸಮುದಾಯದ ವ್ಯಾಪಾರಿಯೊಬ್ಬನಿಂದ ದೈವಪಾತ್ರಿಗಳೇ ವೀಳ್ಯದೆಲೆ ಹಾಗೂ ಅಡಿಕೆ ಖರೀದಿಸುವುದು ಸಮಾರಂಭದ ವಿಶೇಷತೆಯಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಕೆಲವೊಂದೆಡೆ ದೇವಸ್ಥಾನ ಅಥವಾ ಕ್ಷೇತ್ರದ ಉತ್ಸವಕ್ಕೆ ಮುಸಲ್ಮಾನರು ವ್ಯಾಪಾರ ನಡೆಸಬಾರದೆಂಬ ಒತ್ತಡದ ಮಧ್ಯೆ ಮತ ಸೌಹಾರ್ದತೆಗೆ ಇನ್ನಷ್ಟು ಮೆರುಗನ್ನು ನೀಡುವ…

Read More
error: Content is protected !!