ಆರ್‌ಎಸ್‌ಎಸ್ ವಿರುದ್ಧ ಖರ್ಗೆ ಹೇಳಿಕೆಗೆ ಕಿಡಿ – ಹಿಂದೂ ಸಮಾಜಕ್ಕೆ ಅವಮಾನ: ಕೋಟ ಶ್ರೀನಿವಾಸ ಪೂಜಾರಿ
ಉಡುಪಿ: ಹಿಂದೂ ಸಮಾಜಕ್ಕೆ ನ್ಯಾಯ ಕೇಳುವ ಸಂಘಟನೆ ಆರ್‌ಎಸ್‌ಎಸ್. ಈ ಸಂಘಟನೆ ಬಗ್ಗೆ ಮಲ್ಲಿಕಾರ್ಜುನ ಖರ್ಗೆ ಅವರು ಆಡಿರುವ ಮಾತು ಸರಿಯಲ್ಲ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಕಿಡಿಕಾರಿದರು. ಉಡುಪಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಖರ್ಗೆಯವರ ಹಿರಿತನವನ್ನು ನಾವು ಗೌರವಿಸುತ್ತೇವೆ. ನಿನ್ನೆ ಅವರು ಆಡಿರುವ ಮಾತು ಸರಿಯಲ್ಲ. ಆರ್‌ಎಸ್‌ಎಸ್ ಬಗ್ಗೆ ಅತ್ಯಂತ ಕೀಳುಮಟ್ಟದ ಮಾತನಾಡಿದ್ದಾರೆ. ಆರ್‌ಎಸ್‌ಎಸ್ ಅನ್ನು ಕೊಲ್ಲಬೇಕು ಎಂದಿದ್ದಾರೆ. ಇಡೀ ಭಾರತದಲ್ಲಿ ಹಿಂದೂಗಳ ಪರ ಧ್ವನಿ ಎತ್ತಬಲ್ಲ ಸಂಘಟನೆ ಆರ್‌ಎಸ್‌ಎಸ್. ಸಮಾಜದ ಎಲ್ಲರನ್ನೂ…