Avatar

NAMMA MEDIA 24X7

ಕೊಟ್ಟಕುನ್ನು ಪ್ರತಿಭಟನೆ ಎರಡನೇ ಹಂತಕ್ಕೆ; ಪ್ರತಿಭಟನಾ ಟೆಂಟ್ ನಿರ್ಮಿಸುವ ಮೂಲಕ ಸತ್ಯಾಗ್ರಹ ಆರಂಭ

​ಮೊಗ್ರಾಲ್ ಪುತ್ತೂರು: ವರ್ಷಗಳ ಪ್ರಯಾಣ ಸಂಕಷ್ಟಕ್ಕೆ ಅಂತ್ಯ ಹಾಡಬೇಕೆಂದು ಒತ್ತಾಯಿಸಿ ಕಡವತ್-ಕೊಟ್ಟಕುನ್ನು ರಸ್ತೆ ಕ್ರಿಯಾ ಸಮಿತಿ ನೇತೃತ್ವದಲ್ಲಿ ನಡೆಯುತ್ತಿರುವ ಜನಾಂದೋಲನ ಎರಡನೇ ಹಂತಕ್ಕೆ ಪ್ರವೇಶಿಸಿದೆ. ಆಂದೋಲನದ ಭಾಗವಾಗಿ, ಸ್ಥಳೀಯರು ಪ್ರತಿಭಟನಾ ಸ್ಥಳದಲ್ಲಿ ಟೆಂಟ್ ನಿರ್ಮಿಸಿ ಸತ್ಯಾಗ್ರಹ ಆರಂಭಿಸಿದ್ದಾರೆ. ಮಂಗಳವಾರ ನಡೆದ ಪಂಜಿನ ಬೆಳಕಿನ ಪ್ರದರ್ಶನದ ನಂತರ ಸ್ಥಳೀಯರು ಮುಷ್ಕರವನ್ನು ಹೆಚ್ಚು ಪ್ರಬಲ ರೂಪಕ್ಕೆ ಕೊಂಡೊಯ್ಯಲು ನಿರ್ಧರಿಸಿದ್ದಾರೆ. ​ಹಿರಿಯ ನಾಗರಿಕರು ಮತ್ತು ಮಹಿಳೆಯರು ಸೇರಿದಂತೆ ನೂರಾರು ಜನರು ಬೆಳಿಗ್ಗೆ ಪ್ರತಿಭಟನಾ ಟೆಂಟ್ ತಲುಪಿ ಒಗ್ಗಟ್ಟು ವ್ಯಕ್ತಪಡಿಸಿದರು. ರಸ್ತೆ ನಿರ್ಮಾಣ…

Read More

ಮರಳು ಸಾಗಾಟ ಮಾಹಿತಿ ನೀಡಿದ ದ್ವೇಷಕ್ಕೆ ಯುವಕನ ಮೇಲೆ ದಾಳಿ.ಮೂವರ ಬಂಧನ

ಕಾಸರಗೋಡು: ಅನಧಿಕೃತವಾಗಿ ನದಿಯ ಮರಳು ಸಾಗಾಟದ ಮಾಹಿತಿ ಪೊಲೀಸರಿಗೆ ನೀಡಿದ ದ್ವೇಷದಿಂದ ಮೊಗ್ರಾಲ್‌ನಲ್ಲಿ ಯುವಕನ ಮನೆಗೆ ನುಗ್ಗಿ ಕೊಲೆ ಯತ್ನ ನಡೆಸಿದ ಪ್ರಕರಣದಲ್ಲಿ ಮೂವರನ್ನು ಬಂಧಿಸಲಾಗಿದೆ.ಕೆ.ಕೆ.ಪುರಂ ನಿವಾಸಿಗಳಾದ ಸನದ್ (31), ಗಫೂರ್ (34) ಮತ್ತು ತನ್ಸೀಫ್ (27) ಬಂಧಿತರಾಗಿದ್ದು, ಕುಂಬಳೆ ಪೊಲೀಸ್ ಇನ್ಸ್‌ಪೆಕ್ಟರ್ ಬೈಜು ಕೆ. ಥಾಮಸ್ ಅವರ ಸೂಚನೆಯ ಮೇರೆಗೆ ಎಸ್‌ಐ ಅನಂತಕೃಷ್ಣನ್ ಆರ್ ಮೆನನ್ ಹಾಗೂ ಅವರ ತಂಡ ಬಂಧಿಸಿದೆ. ಆರೋಪಿಗಳು ಸುಲ್ತಾನ್ ಬತ್ತೇರಿಯಲ್ಲಿ ಅಡಗಿ ಇದ್ದರು ಎಂದು ಪೊಲೀಸರು ತಿಳಿಸಿದ್ದಾರೆ.ಕೆಲವು ವಾರಗಳ ಹಿಂದೆ…

Read More

ಅಡುಗೆ ಅನಿಲ ಕ್ಷಾಮ ವಿರುದ್ಧ ಹೊಸಂಗಡಿಯಲ್ಲಿ ಸಿಪಿಐಎಂ ನೇತೃತ್ವದಲ್ಲಿ ಪ್ರತಿಭಟನೆ

ಕೇಂದ್ರ ಸರ್ಕಾರದ ಎಡಬಿಡಂಗಿ ನಿರ್ಧಾರದ ಭಾಗವಾಗಿ ದೇಶದಲ್ಲಿ ಅಡುಗೆ ಅನಿಲ ಕ್ಷಾಮ ಉಂಟಾಗಿದೆ. ಕೇಂದ್ರ ಸರ್ಕಾರ ಅಮೆರಿಕಾ ಅಧ್ಯಕ್ಷರ ಬೆದರಿಕೆಗೆ ಬಗ್ಗಿ ರಷ್ಯಾ ದಿಂದ ಸಿಗುತ್ತಿದ್ದ ಕಚ್ಚಾ ಕ್ರೂಡ್ ಆಯಿಲ್ ಖರೀದಿಸದೆ ಇರುವುದರಿಂದ ಅಡುಗೆ ಅನಿಲ ಕ್ಷಾಮ ಉಂಟಾಗಿದ್ದು ನಗರ, ಗ್ರಾಮ ಪ್ರದೇಶದ ಜನತೆ ಸಂಕಷ್ಟಕ್ಕೆ ಒಳಗಾಗಿದ್ದು ಹಲವಾರು ಜನರು ಹೋಟೆಲ್ ಮುಚ್ಚಿದರಿಂದ ಆಹಾರ ಸಿಗದೆ ಪರದಾಡುವ ಪರಿಸ್ತಿತಿ ಬಂದಿದೆ. ಇದಕ್ಕೆದುರಾಗಿ ಜನತೆ ಬೀದಿಗಿಳಿದು ಪ್ರತಿಭಟಿಸಬೇಕೆಂದು ಸಿಪಿಐಎಂ ಕಾಸರಗೋಡು ಜಿಲ್ಲಾ ಸಮಿತಿ ಸದಸ್ಯೆ ಹಾಗೂ ಮಾಜಿ ಜಿಲ್ಲಾ…

Read More

ವಿಧಾನಸಭಾ ಚುನಾವಣೆಗೆ ವಾರಗಳಷ್ಟೇ ಬಾಕಿ ಎಣ್ಮಕಜೆ ಮುಂಡ್ಯತಡ್ಕ ಪಳ್ಳತ್‌ನಲ್ಲಿ ಎಕೆಎಂ ಅಶ್ರಫ್ ಕ್ಷೇತ್ರ ಪರ್ಯಟನೆಗೆ ಚಾಲನೆ

ಪೆರ್ಲ:ಬೇಸಿಗೆಯ ಬಿಸಿ ಸುಡುತ್ತಿರುವಾಗ ಕೇರಳ ವಿಧಾನಸಭಾ ಚುನಾವಣೆಯ ಬಿಸಿ ಮುಗಿಲು ಮುಟ್ಟಿದೆ.ಸುಡು ಬಿಸಿಲಿನಲ್ಲಿಯೂ ಪ್ರಚಾರ ಸಭೆ ಭರದಿಂದ ಸಾಗುತ್ತಿದೆ.ಕುತೂಹಲ ಮೂಡಿಸಿದ ಮಂಜೇಶ್ವರ ಕ್ಷೇತ್ರದಲ್ಲಿಯೂ ಚುನಾವಣಾ ಚಟುವಟಿಕೆ ಮುಂದುವರಿದಿದೆ. ಮಂಜೇಶ್ವರ ಕ್ಷೇತ್ರದ ಯುಡಿಎಫ್ ಅಭ್ಯರ್ಥಿ ಎಕೆಎಂ ಅಶ್ರಫ್ ಅವರ ಕ್ಷೇತ್ರ ಪ್ರವಾಸವು ಎಣ್ಮಕಜೆ ಪಂಚಾಯತ್ ವ್ಯಾಪ್ತಿಯ ಮುಂಡ್ಯತಡ್ಕ ಪಳ್ಳತ್ ನಲ್ಲಿ ಆರಂಭವಾಯಿತು.ಸಂಸದ ರಾಜ್ ಮೋಹನ್ ಉನ್ನಿಥಾನ್ ಉದ್ಘಾಟಿಸಿದರು.ಯುಡಿಎಫ್ ಕ್ಷೇತ್ರದ ಸಂಚಾಲಕ ಮಂಜುನಾಥ ಆಳ್ವ ಅಧ್ಯಕ್ಷತೆ ವಹಿಸಿದ್ದರು. ಅಧ್ಯಕ್ಷ ಅಜೀಜ್ ಮೆರಿಕೆ ಸ್ವಾಗತಿಸಿದರು.ಪುತ್ತೂರು ಶಾಸಕ ಅಶೋಕ್ ರೈ, ಕರ್ನಾಟಕ ಪಿಸಿಸಿ…

Read More

ಆದಿಶಕ್ತಿ ಶ್ರೀ ಮಹಮ್ಮಾಯಿ ದೇವಾಲಯದಲ್ಲಿ ಏಪ್ರಿಲ್ 9-10ರಂದು ಪೂಜಾ ಮಹೋತ್ಸವ

ಆದಿಶಕ್ತಿ ಶ್ರೀ ಮಹಮ್ಮಾಯಿ ದೇವಸ್ಥಾನದಲ್ಲಿ ಶ್ರೀ ಮಹಮ್ಮಾಯಿ ದೇವಿಯ ವಾರ್ಷಿಕ ಮಹಾಪೂಜೆ ಹಾಗೂ ಗೋಂದೋಳು ಪೂಜಾ ಮಹೋತ್ಸವವು ಏಪ್ರಿಲ್ 9 ಮತ್ತು 10ರಂದು ಭಕ್ತಿಭಾವದಿಂದ ನಡೆಯಲಿದೆ. ಏಪ್ರಿಲ್ 9ರಂದು ಬೆಳಗ್ಗೆ ಗಣಪತಿ ಹೋಮ, ನಾಗಾರಾಧನೆ ಹಾಗೂ ಮಹಾಮಂಗಳಾರತಿ ಮತ್ತು ಪ್ರಸಾದ ವಿತರಣೆ ನಡೆಯಲಿದೆ. ಮಧ್ಯಾಹ್ನ ಅನ್ನಪ್ರಸಾದ ವ್ಯವಸ್ಥೆ ಇರಲಿದ್ದು, ಸಂಜೆ ದೀಪಾರಾಧನೆ ಮತ್ತು ವಿಶೇಷ ಪೂಜಾ ವಿಧಿಗಳು ಜರುಗಲಿವೆ. ರಾತ್ರಿ ಅನ್ನಸಂತರ್ಪಣೆಯೂ ನಡೆಯಲಿದೆ. ಏಪ್ರಿಲ್ 10ರಂದು ಬೆಳಿಗ್ಗೆ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಅಮೈ ಮಹಾಲಿಂಗ ನಾಯ್ಕ್ ರಿಂದ…

Read More

ಕಾಸರಗೋಡಿನ ಕನ್ನಡ ಭವನದಲ್ಲಿ ಮಲಯಾಳ ಭಾಷಾ ಮಸೂದೆಯ ವಿರುದ್ಧ ಕನ್ನಡಿಗರ ಪ್ರತಿಭಟನೆ

ಕಾಸರಗೋಡು: ಕೇರಳ ಸರಕಾರದ ಮಲಯಾಳ ಭಾಷಾ ಮಸೂದೆಯು ಕಾಸರಗೋಡಿನ ಕನ್ನಡಿಗರ ಹಿತಕ್ಕೆ ಮಾರಕವಾದುದು. ಒಂದರಿಂದ ಹತ್ತನೇ ತರಗತಿಯ ತನಕ ಎಲ್ಲಾ ಸರಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಮಲಯಾಳಂ ಕಡ್ಡಾಯಗೊಳಿಸುವ ಪ್ರಸ್ತಾಪದಿಂದ ಕಾಸರಗೋಡಿನ ಭಾಷಾ ಅಲ್ಪಸಂಖ್ಯಾತ ಪ್ರದೇಶವನ್ನು ಹೊರತುಪಡಿಸಬೇಕು. ಗಡಿನಾಡಿನಲ್ಲಿ ಭಾಷಾ ಅಲ್ಪಸಂಖ್ಯಾತರಿಗೆ ಮಲಯಾಳ ಕಡ್ಡಾಯಗೊಳಿಸುವುದು ಭಾಷಾ ಅಲ್ಪಸಂಖ್ಯಾತರ ಮೂಲಭೂತ ಹಕ್ಕುಗಳನ್ನು ಕಸಿಯುವುದಕ್ಕೆ ಸಮಾನವಾಗಿದೆ. ಗಡಿನಾಡು ಕಾಸರಗೋಡಿನ ಕನ್ನಡಿಗರ ಹಕ್ಕು ಸವಲತ್ತುಗಳನ್ನು ಕಸಿದರೆ ಉಗ್ರ ಹೋರಾಟ ನಡೆಸಲಾಗುವುದೆಂದು ಕನ್ನಡ ಭವನ ಮತ್ತು ಗ್ರಂಥಾಲಯದ ಸ್ಥಾಪಕ ಅಧ್ಯಕ್ಷ ಡಾ. ವಾಮನರಾವ್…

Read More

ಎಪ್ರಿಲ್ 4 – 5 , ಮಂಗಳೂರಿನಲ್ಲಿ CITU ಕರ್ನಾಟಕ ರಾಜ್ಯ ಮಟ್ಟದ ಸಂಘಟನಾ ಕಾರ್ಯಾಗಾರ

ಕಾರ್ಮಿಕ ಕಾನೂನುಗಳ ರಕ್ಷಣೆಗಾಗಿ, ದುಡಿಯುವ ವರ್ಗದ ಚಳುವಳಿಯ ವಿಸ್ತರಣೆಗಾಗಿ CITU ಕರ್ನಾಟಕ ರಾಜ್ಯ ಮಟ್ಟದ ಸಂಘಟನಾ ಕಾರ್ಯಾಗಾರವು ಎಪ್ರಿಲ್ 4 ಮತ್ತು 5ರಂದು ಎರಡು ದಿನಗಳ ಕಾಲ ಮಂಗಳೂರಿನ ಸಂದೇಶ ಪ್ರತಿಷ್ಠಾನದಲ್ಲಿ ಜರುಗಲಿದೆ ಎಂದು ಕೇಂದ್ರ ಕಾರ್ಮಿಕ ಸಂಘಟನೆಯಾದ CITU ಪತ್ರಿಕಾಹೇಳಿಕೆಯೊಂದರಲ್ಲಿ ತಿಳಿಸಿದೆ ಕರ್ನಾಟಕ ರಾಜ್ಯಾದ್ಯಂತ ಆಯ್ದ 250ರಷ್ಟು ಪ್ರಮುಖ CITU ನಾಯಕರು ಭಾಗವಹಿಸಲಿರುವ ಸಂಘಟನಾ ಕಾರ್ಯಾಗಾರವನ್ನು CITU ರಾಷ್ಟ್ರೀಯ ಕಾರ್ಯದರ್ಶಿಗಳಾದ ಕೆ ಎನ್ ಉಮೇಶ್ ರವರು ಉದ್ಘಾಟಿಸಲಿದ್ದು, ಮುಖ್ಯ ಅತಿಥಿಗಳಾಗಿ CITU ರಾಜ್ಯಾಧ್ಯಕ್ಷರಾದ ಮೀನಾಕ್ಷಿ ಸುಂದರಂ,ರಾಜ್ಯ…

Read More

ಪಂಚಾಯತ್‌ ನಿರ್ಮಿಸಿದ ಮಳೆ ನೀರಿನ ತೋಡನ್ನೇ ಮುಚ್ಚಿದ ಭೂಪ

ಉಳ್ಳಾಲ: ಪಂಚಾಯತ್‌ ನಿರ್ಮಿಸಿದ ಮಳೆ ನೀರಿನ ತೋಡನ್ನು ಮುಚ್ಚಿದ ಭೂಪನೋರ್ವನ ಕೃತ್ಯವನ್ನು ಪ್ರಶ್ನಿಸಿದ ನೆರೆಮನೆಯ ಇಬ್ಬರು ಮಹಿಳೆಯರು ಹಾಗೂ ಯುವಕನಿಗೆ ಕಲ್ಲಿನಿಂದ ಹಲ್ಲೆ ನಡೆಸಿರುವ ಘಟನೆ ಕೊಣಾಜೆ ಪೊಲೀಸ್‌ ಠಾಣಾ ವ್ಯಾಪ್ತಿಯ ಅಂಬ್ಲಮೊಗರು ಗ್ರಾಮದ ಪಟ್ನಮೊಗರು ಎಂಬಲ್ಲಿ ಇಂದು ನಡೆದಿದೆ. ಆರೋಪಿಯನ್ನು ಕೊಣಾಜೆ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಪಟ್ನಮೊಗರು ನಿವಾಸಿ ನಾಗೇಶ್‌ ಶೇಣವ ಹಲ್ಲೆ ನಡೆಸಿರುವ ವ್ಯಕ್ತಿಯಾಗಿದ್ದು, ನೆರೆಮನೆಯ ಬೇಬಿ(56), ಅವರ ಪುತ್ರ ರವಿರಾಜ್‌ ಮತ್ತು ಸೊಸೆ ವರ್ಷಾ ಎಂಬವರು ಹಲ್ಲೆಗೊಳಗಾದವರು. ಇಂದು ಬೆಳಿಗ್ಗೆ 8.30 ರ…

Read More

ಬಸ್ಸಿನಲ್ಲೇ ಕುಸಿದು ಬಿದ್ದ ಮಹಿಳೆ ಸಾವು: ಮೃತರ ಗುರುತು ಪತ್ತೆಗೆ ಪೊಲೀಸರ ಮೊರೆ

ಮಂಜೇಶ್ವರ:ಮಂಗಳೂರು-ಕಾಸರಗೋಡು ಕೆಎಸ್ಸಾರ್ಟೀಸಿ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಅಪರಿಚಿತ ಮಹಿಳೆಯೊಬ್ಬರು ಚಲಿಸುವ ಬಸ್ಸಿನಲ್ಲೇ ಪ್ರಜ್ಞೆ ತಪ್ಪಿ ಸಾವನ್ನಪ್ಪಿದ ಘಟನೆ ಶನಿವಾರ ಸಂಜೆ ಸಂಭವಿಸಿದೆ. ​ಮಂಗಳೂರಿನಿಂದ ಹೊರಟಿದ್ದ ಸಾರಿಗೆ ಬಸ್ಸನ್ನು ಇವರು ಕೈಕಂಬ ಎಂಬಲ್ಲಿ ಹತ್ತಿದ್ದರು. ಕಾಸರಗೋಡಿಗೆ ಟಿಕೆಟ್ ಪಡೆದಿದ್ದ ಇವರು, ಬಸ್ ಕುಂಬಳೆ ತಲುಪುವಷ್ಟರಲ್ಲಿ ಇದ್ದಕ್ಕಿದ್ದಂತೆ ಕುಸಿದು ಬಿದ್ದಿದ್ದಾರೆ. ತಕ್ಷಣವೇ ಸಹಪ್ರಯಾಣಿಕರು ಹಾಗೂ ಬಸ್ ಸಿಬ್ಬಂದಿ ಇವರನ್ನು ಕುಂಬಳೆ ಸೇವಾ ಸಹಕಾರಿ ಆಸ್ಪತ್ರೆಗೆ ದಾಖಲಿಸಿದರಾದರೂ, ಪರೀಕ್ಷಿಸಿದ ವೈದ್ಯರು ಅವರು ಅದಾಗಲೇ ಮೃತಪಟ್ಟಿದ್ದಾರೆ ಎಂದು ಘೋಷಿಸಿದ್ದಾರೆ. ​ಮೃತ ಮಹಿಳೆಯ ಬಳಿ ಯಾವುದೇ…

Read More

ಇರಾನ್ ಯುದ್ಧದ ಪ್ರಭಾವ ವಿಶ್ವದ ಮೇಲೆ: ಇಂಧನ ಬೆಲೆ ಏರಿಕೆ, ಪೂರೈಕೆ ಅಸ್ತವ್ಯಸ್ತ

ಅಂತಾರಾಷ್ಟ್ರೀಯ:ಇರಾನ್ ವಿರುದ್ಧ ಅಮೆರಿಕಾ ಮತ್ತು ಇಸ್ರೇಲ್ ಸಾರಿರುವ ಯುದ್ದ ಜಗತ್ತಿನಾದ್ಯಂತ ಪರಿಣಾಮ ಬೀರಲು ಆರಂಭ ಮಾಡಿದೆ. ಇಂಧನ ಬೆಲೆಗಳು ಹೆಚ್ಚಲಾರಂಭಿಸಿದ್ದು, ಪೂರೈಕೆ ಜಾಲ ಹದಗೆಟ್ಟಿದೆ. ಈ ಹಿನ್ನೆಲೆಯಲ್ಲಿ ಭಾರತ ಸರಕಾರ ತೈಲದ ಮೇಲೆ ಹೇರಿದ್ದ ವಿಶೇಷ ಹೆಚ್ಚುವರಿ ಅಬಕಾರಿ ಸುಂಕದ ಪ್ರಮಾಣವನ್ನು ಕಡಿತ ಮಾಡಿದೆ. ಭಾರತ ಸರಕಾರ ತೈಲೋತ್ಪನ್ನಗಳ ಮೇಲೆ ವಿಧಿಸಿದ್ದ ವಿಶೇಷ ಹೆಚ್ಚುವರಿ ಅಬಕಾರಿ ಸುಂಕದ ಪ್ರಮಾಣವನ್ನು ಕಡಿತ ಮಾಡಿ ಆದೇಶ ಹೊರಡಿಸಿದೆ. ತೈಲ ಮತ್ತು ಆ ಸಂಬಂಧಿತ ಉತ್ಪನ್ನಗಳ ಪೂರೈಕೆ ಜಾಲದಲ್ಲಿ ಅಸ್ಯವ್ಯಸ್ತ ಸ್ಥಿತಿ…

Read More
error: Content is protected !!