Avatar

NAMMA MEDIA 24X7

2025 ಸಾಲಿನ ಮುಖ್ಯಮಂತ್ರಿಗಳ ಚಿನ್ನದ ಪದಕ ಪುರಸ್ಕಾರಕ್ಕೆ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಘಟಕದ ಎ.ಆರ್.ಎಸ್.ಐ ಅಗಿರುವ ತಿಲಕ್ ರಾಜ್ ಆಯ್ಕೆ

ಮಂಗಳೂರು : 2025 ಸಾಲಿನ ಮುಖ್ಯಮಂತ್ರಿಗಳ ಚಿನ್ನದ ಪದಕ ಪುರಸ್ಕಾರಕ್ಕೆ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಘಟಕದ ಎ.ಆರ್.ಎಸ್.ಐ ಅಗಿರುವ ತಿಲಕ್ ರಾಜ್ ಆಯ್ಕೆಯಾಗಿದ್ದಾರೆ. ಮಂಗಳೂರು ತಾಲೂಕಿನ ಕಾವೂರು ಗ್ರಾಮದ ದಯಾನಂದ ಪೂಜಾರಿ ಮತ್ತು ವೇದಾವತಿ ದಂಪತಿಗಳ ಪುತ್ರರಾದ ತಿಲಕ್ ರಾಜ್ ಇವರು 2008 ರಲ್ಲಿ ಜಿಲ್ಲಾ ಪೊಲೀಸ್ ಡಿ.ಎ.ಆರ್ ಘಟಕಕ್ಕೆ ಸೇರ್ಪಡೆಯಾಗಿ ವಿವಿಧ ವಿಭಾಗಗಳಲ್ಲಿ ಒಟ್ಟು 18 ವರ್ಷ ಕರ್ತವ್ಯ ನಿರ್ವಹಿಸಿರುವುದಲ್ಲದೆ, ಇವರು ಭಯೋತ್ಪಾದನಾ ನಿಗ್ರಹ ದಳ ಕೂಡ್ಲು ಬೆಂಗಳೂರಿನಲ್ಲಿ ನಡೆಸುವ ಕೌಂಟರ್ ಟೆರರಿಸಂ ಕೋರ್ಸನ್ನು…

Read More

ಒಡ್ಡೂರು ಫಾರ್ಮ್‌ನಲ್ಲಿ ರೋಮಾಂಚಕ ಆಫ್‌ರೋಡ್ ಮೋಟಾರ್ ಸ್ಪರ್ಧೆ ಇಂದು–ನಾಳೆ

ಮಂಗಳೂರು: ಸಾಮಾನ್ಯವಾಗಿ ರಸ್ತೆಯಲ್ಲಿ ಸಾಗುವ, ಇಂಜಿನ್ ಅಷ್ಟೊಂದು ಶಬ್ದ ಮಾಡದ ನಾಲ್ಕು ಚಕ್ರದ ವಾಹನಗಳು ಮಾರ್ಚ್ 28 ಮತ್ತು 29ರಂದು ಮಂಗಳೂರಿಗೆ ಸಮೀಪದ ಒಡ್ಡೂರು ಫಾರ್ಮ್ ನಲ್ಲಿ ಆರ್ಭಟ ಮಾಡುತ್ತ ತಮ್ಮ ಹೊಸ ಅವತಾರದ ಪ್ರದರ್ಶನ ಮಾಡಲಿವೆ.ಇವು ನಶೆಯಲ್ಲಿದ್ದಂತೆ ಉರುಳಿ ಬೀಳುತ್ತ, ನೆಲ ಬಿಟ್ಟು ಆಕಾಶದ ಗೆಳೆತನ ಮಾಡಲು ಮೇಲೆ ಕುಪ್ಪಳಿಸುತ್ತ ತೆಂಗಿನ ತೋಟ, ಅಡಿಕೆ ಮರ, ಬಾಳೆ ತೋಟ..ಇವುಗಳ ನಡುವೆ ಸಾಮಾನ್ಯವಾಗಿ ರಸ್ತೆಯೇ ಇಲ್ಲದ ಕಠಿಣ ಪಥದಲ್ಲಿ ಭಾರೀ ವೇಗದಿಂದ ಸಾಗಿ ರೋಮಾಂಚಕ ದೃಶ್ಯಗಳನ್ನು ಸೃಷ್ಟಿಸಲಿವೆ….

Read More

ಬಂಟ್ವಾಳ ಗುಪ್ತವಾರ್ತೆ ವಿಭಾಗದ ಇರ್ಷಾದ್‌ಗೆ ಮುಖ್ಯಮಂತ್ರಿ ಪದಕ ಗೌರವ

ಬಂಟ್ವಾಳ: 2025- 26 ನೇ ಸಾಲಿನ ಮುಖ್ಯಮಂತ್ರಿ ಪದಕ ಘೋಷಣೆಯಾಗಿದ್ದು, ಬಂಟ್ವಾಳ ನಗರ ಪೋಲೀಸ್ ಠಾಣೆಯ ಗುಪ್ತವಾರ್ತೆ ವಿಭಾಗದ ಇರ್ಷಾದ್ ಪಡಂಗಡಿ ಅವರು ಆಯ್ಕೆಯಾಗಿದ್ದಾರೆ. ಬೆಳ್ತಂಗಡಿ ತಾಲೂಕಿನ ಪಡಂಗಡಿ ನಿವಾಸಿಯಾಗಿರುವ ಇರ್ಷಾದ್ ಅವರು 2008 ರಲ್ಲಿ ಪೋಲೀಸ್ ಇಲಾಖೆಗೆ ಸೇರ್ಪಡೆಯಾಗಿದ್ದಾರೆ.ಬಳಿಕ ಮಂಗಳೂರು ವಿಶೇಷ ಘಟಕ, ಉಪ್ಪಿನಂಗಡಿ ಠಾಣೆ, ಬಂಟ್ವಾಳ ಪೋಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸಿದ ಇವರು ಅನೇಕ ಕೊಲೆ ಪ್ರಕರಣಗಳ ಪತ್ತೆ , ದರೋಡೆ ,ಮನೆಕಳ್ಳತನ,ಗಾಂಜಾ ಹಾಗೂ ಖೋಟಾ ನೋಟು ಪ್ರಕರಣಗಳ ಭೇದಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.ಪೋಲೀಸ್…

Read More

ಕೇಂದ್ರ ಟೀಕೆಯಲ್ಲೇ 3 ವರ್ಷ ವ್ಯರ್ಥ — ಪ್ರಧಾನಿ ನಿರ್ಧಾರಕ್ಕೆ ವಿಜಯೇಂದ್ರ ಅಭಿನಂದನೆ

ಬೆಂಗಳೂರು: ಪ್ರಧಾನಮಂತ್ರಿ ನರೇಂದ್ರ ಮೋದಿಜೀ ಅವರ ನಿರ್ಧಾರದಿಂದ ನಮ್ಮ ದೇಶದಲ್ಲಿ ಪೆಟ್ರೋಲ್- ಡೀಸೆಲ್ ಮೇಲೆ ಅಬಕಾರಿ ಸುಂಕ 10 ರೂ. ಕಡಿಮೆ ಮಾಡಿದ್ದಾರೆ. ಜನರ ಮೇಲೆ ಬೀಳುವ ಹೊರೆಯನ್ನು ಕೇಂದ್ರ ಸರಕಾರವೇ ಜವಾಬ್ದಾರಿ ತೆಗೆದುಕೊಳ್ಳುವ ಮೂಲಕ ನರೇಂದ್ರ ಮೋದಿಜೀ ಅವರು ದೇಶದ ಸಾಮಾನ್ಯ ಜನರ ಪರವಾಗಿ ದೃಢನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ವಿಶ್ಲೇಷಿಸಿದ್ದಾರೆ. ಮಾಧ್ಯಮ ಪ್ರತಿನಿಧಿಗಳ ಜೊತೆ ಇಂದು ಮಾತನಾಡಿದ ಅವರು, ಯುದ್ಧದ ಈ ಸಂದರ್ಭದಲ್ಲಿ ರಾಜ್ಯ- ದೇಶದ ಜನತೆ…

Read More

ಚಕ್ರಾ ನದಿಯಲ್ಲಿ ಸಿಕ್ಕ ಆಂಜನೇಯನ ಬಂಡೆ ಹಿಂದೆ ಅಚ್ಚರಿಯ ಕಥೆ!

ಉಡುಪಿ: ಆಜ್ರಿ ಗ್ರಾಪಂ ವ್ಯಾಪ್ತಿಯ ಬಾಂಡ್ಯದ ಚಕ್ರಾ ನದಿಯ ತಟದಲ್ಲಿರುವ ಪುರಾತನ ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನದ ಜೀರ್ಣೋದ್ದಾರ ಸಲುವಾಗಿ ಇತ್ತೀಚೆಗೆ ಆರೂಢ ಚಿಂತನಾ ಪ್ರಶ್ನೆ ಇಡಲಾಗಿತ್ತು. ಈ ವೇಳೆ ಅಲ್ಲಿಯೇ ಸಮೀಪದಲ್ಲಿ ಹರಿಯುವ ಚಕ್ರಾ ನದಿಯಲ್ಲಿ ಆಂಜನೇಯನ ಕೆತ್ತನೆಯಿರುವ ಬಂಡೆಯೊಂದು ಪತ್ತೆಯಾಗಿದ್ದು, ಅದರ ಹಿಂದೆ ಹತ್ತಾರು ಕಥೆಗಳಿರುವುದು ಬೆಳಕಿಗೆ ಬಂದಿದೆ.ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನ ಗೌಡ ಸಾರಸ್ವತ ಬ್ರಾಹ್ಮಣ ಸಮಾಜಕ್ಕೆ ಸೇರಿದ್ದು ನೂರಾರು ವರ್ಷಗಳ ಕಾಲ ಪೂಜೆ ನಡೆಯುತ್ತಿತ್ತು. ಈ ನಡುವೆ, ಕೆಲವು ವರ್ಷದ ಬಳಿಕ…

Read More

ಹುಣಸೂರು: ಕೋಟ್ಯಾಂತರ ರೂ ಬೆಲೆಬಾಳುವ ಸೆಂತೆಟಿಕ್ಸ್ ಡ್ರಗ್ಸ್‌ ಪತ್ತೆ

ಮೈಸೂರು ನಗರ ಆಯ್ತು ಈಗ ಹಳ್ಳಿಯಲ್ಲೂ ಡ್ರಗ್ಸ್. ಹುಣಸೂರು ತಾಲೂಕಿನ ರತ್ನಪುರಿ-ದಾಸನಪುರ ಮದ್ಯೆ ಇರುವ ತೋಟದ ಮನೆಯಲ್ಲಿ ಬಾರೀ ಪ್ರಮಾಣದ ಸಿಂತೆಟಿಕ್ಸ್ ಡ್ರಗ್ಸ್ ಪ್ಯಾಕೆಟ್ ಮಾಡುತ್ತಿದ್ದ ವೇಳೆಯೇ ಪೊಲೀಸರು ದಾಳಿ ನಡೆಸಿ ವಶಕ್ಕೆ ಪಡೆದಿರುವ ಘಟನೆ ನಡೆದಿದೆ.ಹುಣಸೂರು ನಗರದ ರಹಮತ್ ಮೊಹಲ್ಲಾದ ಇರ್ಫಾನ್ ಎಂಬುವವರಿಗೆ ಸೇರಿದ ತೋಟದಲ್ಲಿ ಕೃತ್ಯ ನಡೆದಿದ್ದು, ಸುಮಾರು 30 ಕೆ.ಜಿ.ಗೂ ಹೆಚ್ಚು ಸಿಂತೆಟಿಕ್ಸ್ ಡ್ರಗ್ಸ್ ವಶಪಡೆದಿದ್ದಾರೆ. ತೋಟದ ಮಾಲಿಕ ಹುಣಸೂರಿನ ಇರ್ಫಾನ್ ಮೈಸೂರಿನ ಇರ್ಫಾನ್ ಎಂಬಾತ ಸೇರಿಕೊಂಡು ಈ ಕೃತ್ಯ ನಡೆಸಿದ್ದಾರೆಂದು ತಿಳಿದು…

Read More

ಬಂಟ್ವಾಳ ಶಾಸಕರು ವಿಧಾನಸಭೆಯಲ್ಲಿ ಮಂಡಿಸಿರುವ ಹಕ್ಕು ಚ್ಯುತಿಯಿಂದ ಅಸಮಾಧಾನ: ರಮಾನಾಥ ರೈ ಕಿಡಿ

ಮಾಜಿ ಸಚಿವ ಹಾಗೂ ಶಾಸಕನಾಗಿ ಜಿಲ್ಲಾ ಉಸ್ತುವಾರಿ ಸಚಿವರ ಮೂಲಕ ಕ್ಷೇತ್ರದ ಅಭಿವೃದ್ಧಿ ಕಾರ್ಯ ಮಾಡುವುದು ಹೊಸತೇನು ಅಲ್ಲ. ಆದರೆ ಬಂಟ್ವಾಳ ಶಾಸಕರು ವಿಧಾನಸಭೆಯಲ್ಲಿ ಮಂಡಿಸಿರುವ ಹಕ್ಕು ಚ್ಯುತಿಯಿಂದ ನನಗೆ ನೋವಾಗಿದೆ ಎಂದು ಮಾಜಿ ಸಚಿವ ರಮಾನಾಥ ರೈ ಹೇಳಿದ್ದಾರೆ. ದ.ಕ. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಆಯಾ ಕ್ಷೇತ್ರದ ಜನರ ಬೇಡಿಕೆಗೆ ಅನುಗುಣವಾಗಿ ಸರ್ಕಾರದಿಂದ ಅನುದಾನ ಒದಗಿಸಲಾಗುತ್ತದೆ.ಪರಿಶಿಷ್ಟಕಾಲನಿಗಳಿಗೆ ಅನುದಾನ ತರಿಸಿರುವುದನ್ನೇ ಮುಂದಿಟ್ಟುಕೊಂಡು ಸದನದಲ್ಲಿ ಗಲಾಟೆ ಮಾಡಿ ಹಕ್ಕುಚ್ಯುತಿ ಮಂಡಿಸಿರುವುದು ಸಂಕುಚಿತ ಮನೋಭಾವವಾಗಿದೆ…

Read More

ಗ್ರಾಹಕರ ಸೋಗಿನಲ್ಲಿ ಬಂದು ಹೋಟೆಲ್ ಮಾಲೀಕನ ಮೊಬೈಲ್ ಎಗರಿಸಿದ ಕಳ್ಳರು

ಉಡುಪಿ: ಗ್ರಾಹಕರ ಸೋಗಿನಲ್ಲಿ ಬಂದ ಕಳ್ಳರಿಬ್ಬರು ಕ್ಯಾಶ್ ಟೇಬಲ್ ನಲ್ಲಿದ್ದ ಮಾಲೀಕನ ಮೊಬೈಲ್ ಎಗರಿಸಿಕೊಂಡು ಪರಾರಿಯಾದ ಘಟನೆ ಕೊಡಂಕೂರು ಮಹಾಲಕ್ಷ್ಮೀ ಹೋಟೆಲ್ ನಲ್ಲಿ ನಡೆದಿದೆ. ಖದೀಮರ ಕೈಚಳಕ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಬಿಲ್ ಕೊಡುವ ಸಂದರ್ಭದಲ್ಲಿ ಮಾಲೀಕನ ಗಮನ ಬೇರೆಡೆಗೆ ಸೆಳೆದು ಕ್ಯಾಶ್ ಟೇಬಲ್ ಮೇಲಿದ್ದ ಮೊಬೈಲ್ ಅನ್ನು ಎಗರಿಸಿಕೊಂಡು ಪರಾರಿಯಾಗಿದ್ದಾರೆ. ಮೊಬೈಲ್ ಕಾಣದಿದ್ದಾಗ ಮಾಲೀಕರು ಹೋಟೆಲ್ ನ ಸಿಸಿಟಿವಿ ಪರಿಶೀಲಿಸಿದ್ದು, ಆಗ ಇಬ್ಬರು ಖದೀಮ ಕಳ್ಳರ ಕೃತ್ಯ ಬೆಳಕಿಗೆ ಬಂದಿದೆ.

Read More

ಕುಂದಾಪುರ: ಹೆದ್ದಾರಿ ಮಧ್ಯೆ ನಾನಾ ಭಂಗಿಯಲ್ಲಿ ವೀಲಿಂಗ್ ಮಾಡಿದ ಪುಂಡ- ಪ್ರಕರಣ ದಾಖಲು

ಉಡುಪಿ: ಹೆಮ್ಮಾಡಿ-ಕುಂದಾಪುರ ರಾಷ್ಟ್ರೀಯ ಹೆದ್ದಾರಿಯ ನಡುವೆ ಚಲಿಸುತ್ತಿದ್ದ ದ್ವಿಚಕ್ರ ವಾಹನದ ಮೇಲೆಯೇ ನಾನಾ ಭಂಗಿಯಲ್ಲಿ ‘ಸರ್ಕಸ್’ ಮಾಡಿದ್ದ ಪುಂಡನ ವಿಡಿಯೋ ವೈರಲ್ ಆಗಿದ್ದು, ಇದೀಗ ವಿಡಿಯೋ ಪರಿಶೀಲಿಸಿದ ಕುಂದಾಪುರ ಸಂಚಾರ ಠಾಣೆ ಪೊಲೀಸರು ಸವಾರನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಮಾ.20ರಂದು ಸ್ಕೂಟರ್ ಅನ್ನು ಸವಾರ ವೀಲಿಂಗ್ ಮಾಡುತ್ತಾ, ಹೆಲ್ಮಟ್ ಧರಿಸದೇ, ಸಂಚಾರ ನಿಯಮ ಉಲ್ಲಂಘಿಸಿ, ಸಾರ್ವಜನಿಕ ರಸ್ತೆಯಲ್ಲಿ ದುಡುಕಿನಿಂದ ಮತ್ತು ಅಪಾಯಕಾರಿ ರೀತಿಯಲ್ಲಿ ವಾಹನ ಚಲಾಯಿಸಿ ಮಾನವ ಜೀವಕ್ಕೆ ಹಾಗೂ ಇತರರ ಸ್ವತ್ತಿಗೆ ಹಾನಿ ಉಂಟು ಮಾಡುವ…

Read More

ರಾಮ ಹನುಮ ಜ್ಯೋತಿ ರಥಯಾತ್ರೆ ಅಯೋಧ್ಯೆ ತಲುಪಿ ಪೂಜೆ ನೆರವೇರಿಕೆ

ಪುತ್ತೂರು : ಪುತ್ತೂರು ತಾಲೂಕಿನ ಈಶ್ವರಮಂಗಲ ಹನುಮಗಿರಿ ಶ್ರೀ ಕೋದಂಡರಾಮ ಪಂಚಮುಖಿ ಆಂಜನೇಯ ಕ್ಷೇತ್ರದಲ್ಲಿ ಅಷ್ಟಬಂಧ ಬ್ರಹ್ಮಕಲಶೋತ್ಸವ ಏ.9ರಿಂದ 12ರ ತನಕ ನಡೆಯಲಿದ್ದು, ಅಯೋಧ್ಯೆಯಿಂದ ಜ್ಯೋತಿ ಹಾಗೂ ಮೂಲ ಮೃತ್ತಿಕೆಯನ್ನು ತರಲು ಹನುಮಗಿರಿಯಿಂದ ರಾಮಹನುಮ ಜ್ಯೋತಿ ರಥಯಾತ್ರೆ ರಾಮ ಜನ್ಮಭೂಮಿ ಅಯೋಧ್ಯೆಗೆ ಹೊರಟಿದ್ದು, ಅಯೋಧ್ಯೆ ತಲುಪಿರುವ ರಥಯಾತ್ರೆಗೆ ಸಕಲ ಪೂಜಾ ಕೈಂಕರ್ಯ ನೆರವೇರಿದೆ. ಅಯೋಧ್ಯೆಯಿಂದ ಹೊರಟ ಜ್ಯೋತಿಯು ಶ್ರೀ ರಾಮನ ಪರಮ ಭಕ್ತ ಆಂಜನೇಯ ಹುಟ್ಟಿರುವ ಅಂಜನಾದ್ರಿಗೆ ಬಂದು ಅಲ್ಲಿನ ಜ್ಯೋತಿಯನ್ನು ಸ್ಪರ್ಶಿಸಿ ಆಗಮಿಸಲಿದೆ. ರಾಮ ದೀಕ್ಷೆಯನ್ನು…

Read More
error: Content is protected !!